ಪಂಜಾಬ್ ನ ಕಾಂಗ್ರೆಸ್ ಸಂಸದ ರವನೀತ ಸಿಂಗ ಬಿಟ್ಟು ಇವರ ಆರೋಪ !
ನವ ದೆಹಲಿ – ಹರದೀಪ ಸಿಂಗ ನಿಜ್ಜರ ಮತ್ತು ಅವರ ಗುಂಪು ಕೆನಡಾದ ಗುರುದ್ವಾರಗಳ ಮೇಲೆ ಹಿಡಿತ ಸಾಧಿಸಿದದ್ದರು. ಆ ಗುರುದ್ವಾರಗಳಿಂದ ಸಿಗುವ ಎಲ್ಲಾ ಹಣವು ಪ್ರಧಾನಿ ಜಸ್ಟೀನ ಟ್ರುಡೋ ಅವರ ಪಕ್ಷಕ್ಕೆ ಹೊಗುತ್ತಿತ್ತು, ಎಂದು ಪಂಜಾಬ್ ನ ಕಾಂಗ್ರೆಸ್ ನ ಸಂಸದ ರವನೀತ ಸಿಂಗ ಬಿಟ್ಟು ಆರೋಪ ಮಾಡಿದ್ದಾರೆ.
Trudeau gets donations from gurdwaras ‘controlled’ by Khalistani elements: Congress MP #Congress #Controlled #Delhi #Gurdwaras #Hari https://t.co/bhVg6SHeJf
— TeluguStop.com (@telugustop) September 21, 2023
ಸಂಸದ ಬಿಟ್ಟುರವರು, ಹರದೀಪ ಸಿಂಗ ನಿಜ್ಜಾರ ನನ್ನ ಅಜ್ಜನನ್ನುಕೊಂದ ಹಂತಕರ ಬಲಗೈ ಬಂಟನಾಗಿದ್ದ ಎಂದು ಹೇಳಿದ್ದಾರೆ. ೧೯೯೩ ರಲ್ಲಿ ಕೆನಡಾಕ್ಕೆ ಹೋಗಿ ಅಲ್ಲಿಯ ಪೌರತ್ವ ಸಿಕ್ಕಿತು. ನಿಜ್ಜರ ಜೊತೆಗೆ ೧೦ ದೊಡ್ಡ ಗೂಂಡಾಗಳು ಮತ್ತು ಮಾದಕವಸ್ತುಗಳ ಕಳ್ಳ ಸಾಗಾಣೆದಾರರು ಇದ್ದಾರೆ. ಅವರಲ್ಲಿ ೮ ಜನರು ಕೆನಡಾದಲ್ಲಿ ಅಡಗಿಕೊಂಡಿದ್ದಾರೆ. ಪಾಕಿಸ್ತಾನದ ಚಿತ್ರಣದಂತೆ ಈಗ ಕೆನಡಾದು ಆಗಿದೆ. ನಿಜ್ಜರನಂತಹ ಜನರು ಪಂಜಾಬ್ ನ ಜನರಿಗೆ ಮಾದಕ ಪದಾರ್ಥಗಳ ವ್ಯಸನಕ್ಕೆ ಒಳಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.