ಇರಾನ್ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸದಿದ್ದರೆ ೧೦ ವರ್ಷಗಳ ಜೈಲು ಶಿಕ್ಷೆ

ತೆಹರಾನ್ (ಇರಾನ್) – ಇರಾನ್ ನ ಸಂಸತ್ತಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸಲು ನಿರಾಕರಿಸುವವರನ್ನು ಮತ್ತು ಅವರನ್ನು ಬೆಂಬಲಿಸುವ ಮಹಿಳೆಯರಿಗೆ ಶಿಕ್ಷೆಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ಅಂಗೀಕರಿಸಿದೆ. ಹಿಜಾಬ್ ಧರಿಸಲು ನಿರಾಕರಿಸುವ ಮಹಿಳೆ, ಅವಳಿಗೆ ಬೆಂಬಲ ನೀಡುವ ಮತ್ತು ಇಂತಹ ಮಹಿಳೆಯರಿಗೆ ಕೆಲಸ ನೀಡುವ ಕಂಪನಿಗಳ ಮಾಲೀಕರನ್ನು ಶಿಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಈ ಅಪರಾಧವು ಯಾವುದಾದರೊಂದು ಸಂಘಟನೆಯಿಂದಾದರೆ, ಕಾನೂನನ್ನು ಉಲ್ಲಂಘಿಸುವವರನ್ನು ೧೦ ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಲಾಗುವುದು. ಇರಾನ್ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸುವುದು ಕಾನೂನಿಗನುಸಾರ ಅನಿವಾರ್ಯವಾಗಿದೆ. ಇದರ ಬಗ್ಗೆ ಕಳೆ ಒಂದು ವರ್ಷಗಳಿಂದ ಇರಾನಿ ಮಹಿಳೆಯರಿಂದ ವಿರೋಧಿಸಲಾಗುತ್ತಿತ್ತು. ಈ ವಿರೋಧದ ಪ್ರತಿಭಟನೆಯಲ್ಲಿ ಅನೇಕರು ಸಾವನ್ನಪ್ಪಿದ್ದರೆ, ನೂರಾರು ಜನರನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ.