ಸಂಸತ್ತಿನಲ್ಲಿ ರಾಜಕೀಯ ವಿರೋಧಿಗಳ ಬಗ್ಗೆ ಅವಮಾನಿಸುವಂತಹ ಹೇಳಿಕೆ ನೀಡುವುದು ಇದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ಸ್ಪಷ್ಟನೆ

ನವ ದೆಹಲಿ – ಸಂಸತ್ತಿನಲ್ಲಿ ರಾಜಕೀಯ ವಿರೋಧಿಗಳ ಬಗ್ಗೆ ಅವಮಾನಿಸುವಂತಹ ಹೇಳಿಕೆ ನೀಡುವುದು, ಇದು ಅಪರಾಧವಲ್ಲ, ಎಂದು ಸರ್ವೋಚ್ಚ ನ್ಯಾಯಾಲಯವು ಒಂದು ಅರ್ಜಿಯ ವಿಚಾರಣೆಯ ಸಮಯದಲ್ಲಿ ಸ್ಪಷ್ಟಪಡಿಸಿತು. ಜಾರ್ಖಂಡ ಮುಕ್ತಿ ಮೋರ್ಚಾದ ಸಂಸದ ಸೀತಾ ಸೋರೆನ ಇವರ ವಿರುದ್ಧ, ‘ಮತಗಳ ಬದಲು ಲಂಚ’ ಪಡೆಯುವ ಆರೋಪಕ್ಕೆ ಸಂಬಂಧಿಸಿದ ಮೊಕ್ಕದಮೆಯ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಈ ಟಿಪ್ಪಣಿ ನೀಡಿದೆ. ಏಳು ನ್ಯಾಯಮೂರ್ತಿಗಳ ಖಂಡ ಪೀಠದ ಎದುರು ಈ ಪ್ರಕರಣದ ವಿಚಾರಣೆ ಮುಂದುವರೆದಿತ್ತು. ಎರಡು ದಿನದ ವಿಚಾರಣೆಯ ನಂತರ ನ್ಯಾಯಾಲಯವು ಈ ಪ್ರಕರಣದ ತೀರ್ಪು ಕಾದಿರಿಸಿದೆ.

೧. ಸೀತಾ ಸೋರೆನ್ ಇವರ ಪಕ್ಷ ಮಂಡಿಸಿರುವ ಹಿರಿಯ ನ್ಯಾಯವಾದಿ ರಾಜು ರಾಮಚಂದ್ರನ್ ಇವರು ಲೋಕಸಭೆಯಲ್ಲಿ ಭಾಜಪದ ಸಂಸದ ರಮೇಶ್ ಬಿದೋರಿ ಇವರು ಬಸಪಾದ ಸಂಸದ ದಾನಿಶ ಅಲಿ ಇವರ ವಿರುದ್ಧ ಇತ್ತೀಚಿಗೆ ನೀಡಿರುವ ಅವಮಾನಕಾರಿ ಹೇಳಿಕೆಯ ಸಂದರ್ಭ ನೀಡುತ್ತಾ, ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮತದಾನ ಅಥವಾ ಭಾಷಣಕ್ಕೆ ಸಂಬಂಧಿತ ಯಾವುದೇ ವಿಷಯ, ಅದು ಲಂಚ ಆಗಿರಲಿ ಅಥವಾ ಷಡ್ಯಂತ್ರ ಆಗಿರಲಿ ಅದು ಕಾರ್ಯಾಚರಣೆಯಿಂದ ಮುಕ್ತವಾಗಿದೆ ಎಂದು ಹೇಳಿದರು.

೨. ಈ ಬಗ್ಗೆ ಅಟಾರ್ನಿ ಜನರಲ್ ಆರ್. ವೆಂಕಟರಾಮನಿ ಇವರು, ರಾಜ್ಯಸಭೆಯ ಚುನಾವಣೆಯ ಮತದಾನದ ಸಭಾ ಗೃಹದ ಕಾರ್ಯಕಲಾಪದ ಜೊತೆಗೆ ಸಂಬಂಧವಿಲ್ಲ. ಆದ್ದರಿಂದ ಸೀತಾ ಸೋರೆನ ಇವರು ರಾಜ್ಯಸಭೆಯ ಚುನಾವಣೆಯಲ್ಲಿ ಮತದಾನಕ್ಕಾಗಿ ಲಂಚ ಪಡೆದಿರುವ ಪ್ರಕರಣ ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ.

೩. ಸಾಲಿಸಿಟರ್ ಜನರಲ್ ತುಷಾರ ಮೆಹತಾ ಇವರು, ಯುಕ್ತಿವಾದದಲ್ಲಿ, ಲಂಚಗುಳಿತನಕ್ಕೆ ಎಂದಿಗೂ ರಿಯಾಯಿತಿ ನೀಡಲು ಸಾಧ್ಯವಿಲ್ಲ. ಯಾವುದಾದರೂ ಅಪರಾಧ ಅದು ಸಂಸತ್ತು ಮತ್ತು ವಿಧಾನ ಸಭೆಯ ಭಾಷಣ ಅಥವಾ ಮತದಾನಕ್ಕೆ ಸಂಬಂಧಪಟ್ಟಿದ್ದಾಗಿದ್ದರೂ ಅದು ಸದನದ ಹೊರಗೆ ಮಾಡಲಾಗುತ್ತದೆ ಎಂದು ಹೇಳಿದರು.

ಸಂಸದರಿಗೆ ಮತ್ತು ಶಾಸಕರಿಗೆ ಸಾಧನದಲ್ಲಿ ಮಾತನಾಡುವ ಸಂಪೂರ್ಣ ಸ್ವಾತಂತ್ರ್ಯ !

ಸರ್ವೋಚ್ಚ ನ್ಯಾಯಾಲಯದ ಅರ್ಜಿಯ ಮೂಲಕ ‘ಸಂಸತ್ತಿನಲ್ಲಿ ಮತ್ತು ವಿಧಾನಸಭೆಯಲ್ಲಿನ ಅವಮಾನಿಸುವ ಹೇಳಿಕೆಯ ಜೊತೆಗೆ ಪ್ರತಿಯೊಂದು ರೀತಿಯ ಕೆಲಸಕ್ಕೆ ಕಾನೂನಿನಿಂದ ರಿಯಾಯಿತಿ ನೀಡಬಾರದು. ಇದರಿಂದ ಅಪರಾಧಿ ಷಡ್ಯಂತ್ರದ ಅಡಿಯಲ್ಲಿ ಹೀಗೆ ಮಾಡುವವರ ಮೇಲೆ ದಂಡಾತ್ಮಕ ಕಾನೂನು ಜಾರಿಗೊಳಿಸಬಹುದು ಎಂದು ಹೇಳಿತ್ತು. ಈ ಬಗ್ಗೆ ನ್ಯಾಯಾಲಯವು, ಸದನದಲ್ಲಿ ಏನನ್ನಾದರೂ ಮಾತನಾಡಿದ ನಂತರ ಸಂಸದರು ಮತ್ತು ಶಾಸಕರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದಿಲ್ಲ. ಸಂಸತ್ತು ಮತ್ತು ವಿಧಾನಸಭೆಯ ಸದಸ್ಯರಿಗೆ ಸದನದಲ್ಲಿ ಮಾತನಾಡುವ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಹೇಳಿದೆ.