ಪುದುಚೆರಿಯಲ್ಲಿ ಭಾಜಪದ ೨ ಶಾಸಕರು ಕಬಳಿಸಿದ್ದ ದೇವಸ್ಥಾನದ ಜಮೀನು ಹಿಂತಿರುಗಿಸಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯ

ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶ

ಎ. ಜಾನ್ ಕುಮಾರ ಮತ್ತು ವಿವಿಲಿಯಂ ರಿಚರ್ಡ್ಸ್ ಸಂಸದರ ಹೆಸರುಗಳಾಗಿವೆ

ಚೆನ್ನೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯವು ಪುದುಚೇರಿಯಲ್ಲಿನ ಭಾಜಪದ ಇಬ್ಬರು ಸಂಸದರು ಕಬಳಿಸಿದ್ದ ಅಲ್ಲಿಯ ಶ್ರೀ ಕಾಮಚಿ ಅಮ್ಮನ ದೇವಸ್ಥಾನದ ಎರಡು ಎಕರೆ ಜಮೀನು ಹಿಂತಿರುಗಿಸುವಂತೆ ಆದೇಶ ನೀಡಿದೆ. ಈ ಜಮೀನು ಕಾನೂನ ಬಾಹಿರವಾಗಿ ಹಸ್ತಾಂತರಿಸಲಾಗಿತ್ತು. ನ್ಯಾಯಾಲಯವು ಈ ಕುರಿತು ರಾಜ್ಯದ ತನಿಖಾ ಇಲಾಖೆಯಿಂದ ಈ ಪ್ರಕರಣದ ಮತ್ತು ಇದರಲ್ಲಿ ಸಹಭಾಗಿಯಾಗಿರುವ ಜನಪ್ರತಿನಿಧಿಗಳ ಭ್ರಷ್ಟಾಚಾರ ನಿರ್ಮೂಲನೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶ ಕೂಡ ನೀಡಿದೆ. ಎ. ಜಾನ್ ಕುಮಾರ ಮತ್ತು ವಿವಿಲಿಯನ್ ರಿಚಾರ್ಡ್ಸ್ ಎಂದು ಈ ಭಾಜಪದ ಸಂಸದ ಹೆಸರುಗಳಾಗಿವೆ. ಇವರ ವಿರುದ್ಧ ದೇವಸ್ಥಾನಂ ಮತ್ತು ದೇವಸ್ಥಾನದ ಓರ್ವ ಭಕ್ತ ವಿ. ವೇಲಮುರುಗನ್ ಇವರು ಅರ್ಜಿ ದಾಖಲಿಸಿದ್ದರು.

ನ್ಯಾಯಾಲಯವು ಈ ಸಮಯದಲ್ಲಿ, ಸಂಸದರು ನಿಜವಾದ ಮತ್ತು ವಿಶ್ವಾಸನಿಯ ಜನಪ್ರತಿನಿಧಿಗಳಾಗಿರುವ ಅಪೇಕ್ಷೆ ವ್ಯಕ್ತಪಡಿಸಲಾಗುತ್ತಿದೆ, ಅವರು ಜನರ ಉನ್ನತಿಗಾಗಿ ಪ್ರಯತ್ನ ಮಾಡುತ್ತಿರುತ್ತಾರೆ. (ಪ್ರತ್ಯಕ್ಷದಲ್ಲಿ ಮಾತ್ರ ಬಹಳಷ್ಟು ಜನಪ್ರತಿನಿಧಿಗಳು ವಿಶ್ವಾಸ ಘಾತಕರು ಮತ್ತು ಸುಳ್ಳುಗಾರರಾಗಿರುವುದು ಕಂಡು ಬರುತ್ತದೆ, ಇದೇ ಇದರಿಂದ ಸ್ಪಷ್ಟವಾಗುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಹಿಂದೂಗಳ ದೇವಸ್ಥಾನದ ಜಮೀನು ಕ್ರೈಸ್ತ ಜನಪ್ರತಿನಿಧಿಗಳು ಕಬಳಿಸುತ್ತಾರೆ, ಇದನ್ನು ತಿಳಿದುಕೊಳ್ಳಿ. ಇಂತಹವರ ಮೇಲೆ ಕೂಡಲೇ ಆರೋಪ ದಾಖಲಿಸಿ ಅವರನ್ನು ಜೈಲಿಗಟ್ಟುವುದು ಆವಶ್ಯಕವಾಗಿದೆ.