ನವ ದೆಹಲಿ – ನೂತನ ಸಂಸತ್ತಿನ ಎರಡನೇ ದಿನದಂದು ಲೋಕಸಭೆಯ ಕಲಾಪ ಪ್ರಾರಂಭವಾದ ನಂತರ ಸದಸ್ಯರಿಗೆ ಸಂವಿಧಾನದ ಪ್ರತಿಗಳನ್ನು ಕೊಡಲಾಯಿತು ಈ ಪ್ರತಿಯಲ್ಲಿ “ಸಮಾಜವಾದ” ಮತ್ತು ‘ಜಾತ್ಯಾತೀತ’ ಶಬ್ದಗಳು ಇಲ್ಲವೆಂದು ಲೋಕಸಭೆಯ ಕಾಂಗ್ರೆಸ್ ನ ಸಂಸದ ಮತ್ತು ವಿರೋಧ ಪಕ್ಷದ ನಾಯಕ ಅಧೀರ ರಂಜನ ಚೌಧರಿಯವರು ಆರೋಪ ಮಾಡಿದ್ದಾರೆ. ‘ಇದು ಅತ್ಯಂತ ಕಳವಳಕಾರಿಯಾಗಿದೆ ಈ ವಿಷಯವನ್ನು ನಾನು ಸಂಸತ್ತಿನಲ್ಲಿ ಪದೇಪದೇ ಹೇಳಲು ಪ್ರಯತ್ನಿಸುತ್ತಿದ್ದೇನೆ; ಆದರೆ ನನಗೆ ಅವಕಾಶ ನೀಡಲಿಲ್ಲ’, ಎಂದು ಚೌಧರಿಯವರು ಆರೋಪಿಸಿದ್ದಾರೆ.
‘Secular’, ‘socialist’ missing from copies of Constitution given to lawmakers: Adhir Ranjan Chowdhury https://t.co/YYKUrzRGFQ
— The Times Of India (@timesofindia) September 20, 2023