ಸಂಸತ್ತಿನಲ್ಲಿ ನಿರಂತರ ಗದ್ದಲದ ನಂತರ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರ ನಿರ್ಧಾರ !
ನವದೆಹಲಿ – ಕಳೆದ 9 ದಿನಗಳಿಂದ ಸಂಸತ್ತಿನಲ್ಲಿ ಮಣಿಪುರ ಹಿಂಸಾಚಾರದ ಕುರಿತು ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದಾಗ 10ನೇ ದಿನದಂದು ಲೋಕಸಭೆಯ ಕಾರ್ಯಕಲಾಗಳನ್ನು ನಡೆಸಲು ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಅವರು ನಿರಾಕರಿಸಿದರು. ‘ಎಲ್ಲಿಯವರೆಗೆ ಸದಸ್ಯರು ಸಂಸತ್ತಿನ ಗೌರವದ ಅನುಸಾರ ವರ್ತಿಸುವುದಿಲ್ಲವೋ ಅಲ್ಲಿಯತನಕ ಲೋಕಸಭೆಯ ಕಾರ್ಯಕಲಾಪ ನಡೆಸಲಾಗುವುದಿಲ್ಲ’ ಎಂದು ಎಚ್ಚರಿಸಿದ್ದಾರೆ. ಸಂಸತ್ತನ್ನು ಗೌರವಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಕೆಲ ಸದಸ್ಯರ ವರ್ತನೆ ಸಂಪ್ರದಾಯದ ವಿರುದ್ಧವಾಗಿದೆ. ಸಂಸತ್ತಿನ ಕಾರ್ಯಕಲಾಪ ಆಗಸ್ಟ್ 2 ರಂದು ಬೆಳಿಗ್ಗೆ ಆರಂಭವಾದ ತಕ್ಷಣ ಗದ್ದಲ ಪ್ರಾರಂಭವಾಗಿರುವುದರಿಂದ 15 ನಿಮಿಷಗಳಲ್ಲೇ ಕಾರ್ಯಕಲಾಪವನ್ನು ಮಧ್ಯಾಹ್ನ 2 ಗಂಟೆಯ ತನಕ ಸ್ಥಗಿತಗೊಳಿಸಲಾಯಿತು.
#BreakingNews: विपक्ष के हंगामे से स्पीकर ओम बिरला नाराज़, लोकसभा में अध्यक्षता नहीं करेंगे#MonsoonSession #INDIA @thakur_shivangi @JournoPranay pic.twitter.com/fau710tx7T
— Zee News (@ZeeNews) August 2, 2023
ಸಂಪಾದಕೀಯ ನಿಲುವುಅಂತಹ ನಿರ್ಧಾರಗಳಿಂದ ಗದ್ದಲವೆಬ್ಬಿಸುವ ಸದಸ್ಯರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದರ ಬದಲು ಲೋಕಸಭೆಯ ಅಧ್ಯಕ್ಷರು ತಮ್ಮ ಅಧಿಕಾರದಿಂದ ಗದ್ದಲ ಮಾಡುವ ಸದಸ್ಯರನ್ನು ಸಂಸತನಿಂದ ಹೊರಗೆ ಹಾಕುವುದು, ಅಮಾನತುಗೊಳಿಸುವುದು ಇತ್ಯಾದಿ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ತರಗತಿಯಲ್ಲಿ ಮಕ್ಕಳು ಗಲಾಟೆ ಮಾಡಲು ಪ್ರಾರಂಭಿಸಿದರೆ, ಶಿಕ್ಷಕರು ಅವರನ್ನು ತರಗತಿಯಿಂದ ಹೊರಗೆ ನಿಲ್ಲಿಸುತ್ತಾರೆ, ಶಿಸ್ತು ಕಲಿಸಲು ಪ್ರಯತ್ನಿಸುತ್ತಾರೆ ! ಅಧ್ಯಕ್ಷರು ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ನಾಗರಿಕರ ಅಭಿಪ್ರಾಯ ! |