ಹಳೆಯ ಸಂಸತ್ತಿಗೆ ಸಂಸದರಿಂದ ವಿದಾಯ !

ನವ ದೆಹಲಿ – ಹಳೆಯ ಸಂಸತ್ತಿನ ಭವನದಿಂದ ಹೊಸ ಸಂಸತ್ ಭವನಕ್ಕೆ ಹೋಗುವ ಮುನ್ನ ಎಲ್ಲಾ ಸಂಸದರು ಹಳೆ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಒಂದೆಡೆ ಸೇರಿ ವಿದಾಯ ಹೇಳಿದರು. ಆ ನಂತರ ಪ್ರಧಾನಿ ಮೋದಿಯವರು ಎಲ್ಲಾ ಸಂಸದರನ್ನು ಸಂಸತ್ ಭವನದ ಹೊಸ ಕಟ್ಟಡಕ್ಕೆ ಕರೆದೊಯ್ದರು. ಇದಕ್ಕೂ ಮುನ್ನ ಮಾತನಾಡುತ್ತಾ ಅವರು, ಈ ಘಟನೆ ನಮ್ಮನ್ನು ಭಾವುಕರನ್ನಾಗಿ ಮಾಡುವುದು ಮತ್ತು ಕರ್ತವ್ಯಕ್ಕೆ ಪ್ರೇರೇಪಿಸುವುದು ಸ್ವಾತಂತ್ಯ್ರದ ಮೊದಲು ಈ ಭವನವನ್ನು ಒಂದು ರೀತಿಯ ಗ್ರಂಥಾಲಯವಾಗಿ ಬಳಸಲಾಗುತಿತ್ತು. ನಂತರ ಸಂವಿಧಾನ ಸಭೆ ಪ್ರಾರಂಭವಾಯಿತು ಮತ್ತು ಇಲ್ಲಿ ನಮ್ಮ ಸಂವಿಧಾನವನ್ನು ರಚಿಸಲಾಯಿತು. ೧೯೪೭ ರಲ್ಲಿ ಇಲ್ಲಿಗೆ ಬ್ರಿಟಿಷ್ ಸರಕಾರ ಅಧಿಕಾರವನ್ನು ಹಸ್ತಾಂತರಿಸಿತು. ಆ ಪ್ರಕ್ರಿಯಗೆ ಈ ಸದನ ಸಾಕ್ಷಿಯಗಿದೆ ಎಂದು ಹೇಳಿದರು.