ಗುರುಗಳು ಏಕೆ ಅವಶ್ಯಕ ?
ಮನುಷ್ಯನು ಕತ್ತಲಲ್ಲಿ ನಡೆಯುವಾಗ ಮುಗ್ಗರಿಸಿ ಬೀಳಬಹುದು; ಆದರೆ ತನ್ನೊಂದಿಗೆ ಬ್ಯಾಟರೀ ದೀಪವನ್ನು ಇಟ್ಟುಕೊಂಡರೆ ಅದರಿಂದ ದಾರಿ ಉದ್ದಕ್ಕೂ ಬೆಳಕು ಬಿದ್ದು ಅವನಿಗೆ ಸ್ಪಷ್ಟವಾಗಿ ದಾರಿ ಕಾಣಿಸುತ್ತದೆ. ಗುರುಗಳು ಬ್ಯಾಟರಿಯಂತೆ ಇರುತ್ತಾರೆ. ಅವರು ಜನರಿಗೆ ಅಜ್ಞಾನದ ಕತ್ತಲೆಯಿಂದ ಮುಂದೆ ಹೋಗಲು ಮಾರ್ಗದರ್ಶನವನ್ನು ಮಾಡುತ್ತಾರೆ.