೧. ಗುರುಗಳು ಸದ್ವರ್ತನೆಯಿಂದ ನಡೆಯಲು ಕಲಿಸುತ್ತಾರೆ !
ಒಬ್ಬ ಮನುಷ್ಯನು ಮರುಭೂಮಿಯಲ್ಲಿ ನಡೆದುಕೊಂಡು ಮನೆಗೆ ಬರುವಾಗ ದಾರಿ ತಪ್ಪುತ್ತಾನೆ. ಆಹಾರ-ನೀರು ಇಲ್ಲದೆ ಅವನು ಹಗಲೂ ರಾತ್ರಿ ನಡೆಯುತ್ತಿರುತ್ತಾನೆ. ಅದೃಷ್ಟವಶಾತ್ ಒಬ್ಬ ಮನುಷ್ಯನು ಅವನನ್ನು ನೋಡಿ ಅವನಿಗೆ ಮನೆಗೆ ಹೋಗಲು ಸುಲಭವಾದ ದಾರಿಯನ್ನು ತೋರಿಸುತ್ತಾನೆ. ಅದರಂತೆ ಮಾಯೆಯಲ್ಲಿರುವ ಈ ದೋಷಗಳೆಂಬ ಮರುಭೂಮಿಯಿಂದ ಸದಾಚಾರದ ಕಡೆಗೆ ಹೋಗುವುದಕ್ಕಾಗಿ ಮಾರ್ಗದರ್ಶನವನ್ನು ಮಾಡುವ ಗುರುಗಳ ಅವಶ್ಯಕತೆಯು ನಮಗೆ ಬಹಳ ಇರುತ್ತದೆ.
೨. ಗುರುಗಳು ದೀಪದಂತಿರುತ್ತಾರೆ !
ಅ. ಮನುಷ್ಯನು ಕತ್ತಲಲ್ಲಿ ನಡೆಯುವಾಗ ಮುಗ್ಗರಿಸಿ ಬೀಳಬಹುದು; ಆದರೆ ತನ್ನೊಂದಿಗೆ ಬ್ಯಾಟರೀ ದೀಪವನ್ನು ಇಟ್ಟುಕೊಂಡರೆ ಅದರಿಂದ ದಾರಿ ಉದ್ದಕ್ಕೂ ಬೆಳಕು ಬಿದ್ದು ಅವನಿಗೆ ಸ್ಪಷ್ಟವಾಗಿ ದಾರಿ ಕಾಣಿಸುತ್ತದೆ. ಗುರುಗಳು ಬ್ಯಾಟರಿಯಂತೆ ಇರುತ್ತಾರೆ. ಅವರು ಜನರಿಗೆ ಅಜ್ಞಾನದ ಕತ್ತಲೆಯಿಂದ ಮುಂದೆ ಹೋಗಲು ಮಾರ್ಗದರ್ಶನವನ್ನು ಮಾಡುತ್ತಾರೆ.
ಆ. ರಸ್ತೆಯ ಬದಿಯ ದೀಪವು ದಾರಿಹೋಕರಿಗೆ ಬೆಳಕು ನೀಡುತ್ತದೆ, ಆದರೆ ಭಕ್ತರಿಗೆ ಆಧ್ಯಾತ್ಮಿಕ ಜ್ಞಾನರೂಪಿ ಪ್ರಕಾಶವನ್ನು ನೀಡುವುದಕ್ಕಾಗಿ ಗುರುಗಳು ಪ್ರಯತ್ನಿಸುತ್ತಿರುತ್ತಾರೆ.
೩. ಗುರುವಿಲ್ಲದೆ ಈಶ್ವರನ ದರ್ಶನ ಅಸಾಧ್ಯ !
ಅ. ಗಾಳಿಯು ಕಣ್ಣಿಗೆ ಕಾಣುವುದಿಲ್ಲ; ಆದರೆ ಫ್ಯಾನ್ ತಿರುಗಿದಾಗ ಚರ್ಮಕ್ಕೆ ಅದರ ಸ್ಪಶವಾಗುತ್ತದೆ.
ಆ. ಸೂಕ್ಷ್ಮ ಅಣುವನ್ನು ನಾವು ಕಣ್ಣಿನಿಂದ ನೋಡಲು ಸಾಧ್ಯವಿಲ್ಲ; ಆದರೆ ಸೂಕ್ಷ್ಮದರ್ಶಕ ಯಂತ್ರದಿಂದ ಅದನ್ನು ನೋಡಬಹುದು.
ಇ. ಅತಿ ಅಜ್ಞಾನದಿಂದ ಮನುಷ್ಯನು ಕುರುಡನಾಗುತ್ತಾನೆ; ಆದರೆ ಗುರುಗಳು ಅಜ್ಞಾನವನ್ನು ದೂರ ಮಾಡಿ ದೇವರ ದರ್ಶನವನ್ನು ಮಾಡಿಸುತ್ತಾರೆ.
ಈ. ಅದರಂತೆ ಅತ್ಯುಚ್ಚ ಚೈತನ್ಯಶಕ್ತಿಯನ್ನು ನಾವು ಅನುಭವಿಸಲು ಸಾಧ್ಯವಿಲ್ಲ; ಆದರೆ ಗುರುಗಳಿಂದ ಅದನ್ನು ಅನುಭವಿಸಬಹುದು.
(ಸಂದರ್ಭ : ಸನಾತನದ ಗ್ರಂಥ – ‘ಸುಗಮ ಅಧ್ಯಾತ್ಮ’)
ಆಂತರಿಕ ಜ್ಞಾನಗಂಗೆ ಉಗಮವಾಗುತ್ತದೆ, ಆ ಕಡೆಗೆ ಸಾಧಕರ ಭ್ರಮಣವಾಗಬೇಕು, ಹಾಗೆ ವೇಗ ನೀಡುವವರು ಸದ್ಗುರುಗಳು !ಸಹಜಪ್ರಾಪ್ತ ಜ್ಞಾನವನ್ನು ಸದ್ಗುರುಗಳು ಸಕ್ರಿಯಗೊಳಿಸುತ್ತಾರೆ, ಅದಲ್ಲದೆ ಅದೇ ಜ್ಞಾನದ ಮೇಲೆ ಆರೂಢನಾಗಿ ಎಲ್ಲಿಂದ ಮೂಲ ಆಂತರಿಕ ಜ್ಞಾನಗಂಗೆಯ ಉಗಮವಾಗುತ್ತದೆ, ಆ ಕಡೆಗೆ ಸಾಧಕರ ಭ್ರಮಣವಾಗಬೇಕು, ಆ ರೀತಿ ವೇಗ ನೀಡುತ್ತಾರೆ. ಸದ್ಗುರುಗಳು ಒಂದು ರೀತಿ ಉಲ್ಟಾ ಪ್ರಯಾಣವನ್ನು ಆರಂಭಿಸುತ್ತಾರೆ. – ಸ್ವಾಮಿ ವಿದ್ಯಾನಂದ (ಆಧಾರ : ಗ್ರಂಥ ಚಿಂತನಧಾರಾ) |