ಈಶ್ವರನ ಪ್ರಾಪ್ತಿಗಾಗಿ ಗುರುಗಳ ಅವಶ್ಯಕತೆ !

‘ಜ್ಞಾನಿಗಳ ರಾಜ ಗುರು ಮಹಾರಾಜ’ ಹೀಗೆ ಸಂತ ಶ್ರೇಷ್ಟರಾದ ಜ್ಞಾನದೇವರು ಹೇಳಿದ್ದಾರೆ. ಜ್ಞಾನ ಕೊಡುವವರು ಗುರುಗಳು ! ಶಿಲೆಯಿಂದ ಶಿಲ್ಪ ನಿರ್ಮಾಣವಾಗುತ್ತದೆ; ಆದರೆ ಆದಕ್ಕಾಗಿ ಶಿಲ್ಪಿಯುಬೇಕು. ಅದರಂತೆ ಸಾಧಕ ಮತ್ತು ಶಿಷ್ಯನು ಈಶ್ವರನ ಪ್ರಾಪ್ತಿ ಮಾಡಿಕೊಳ್ಳಬಹುದು; ಆದರೆ ಅದಕ್ಕಾಗಿ ಗುರುಗಳ ಅವಶ್ಯಕತೆ ಇರುತ್ತದೆ. ಗುರುಗಳು ತಮ್ಮ ಬೋಧಾಮೃತದಿಂದ ಸಾಧಕ ಮತ್ತು ಶಿಷ್ಯನ ಅಜ್ಞಾನವನ್ನು ದೂರ ಮಾಡಿದ ಮೇಲೆ ಅವರಿಗೆ ಈಶ್ವರನ ಪ್ರಾಪ್ತಿಯಾಗುತ್ತದೆ.

ನಮ್ಮನ್ನು ಎಚ್ಚರಿಸುವ, ಮತ್ತು ಹಕ್ಕಿನಿಂದ ಸಿಟ್ಟು ಮಾಡಿ ಸುಧಾರಿಸುವಂತಹ ಸಂತರ ಚರಣಗಳ ಬಳಿಗೆ ಹೋಗಬೇಕು !

ನಮ್ಮನ್ನು ಎಚ್ಚರಿಸುವ ಮತ್ತು ಹಕ್ಕಿನಿಂದ ಸಿಟ್ಟು ಮಾಡಿ ಸುಧಾರಿಸುವಂತಹ ಸಂತರ ಚರಣಗಳ ಬಳಿಗೆ ಹೋಗಬೇಕು. ಸ್ತುತಿ ಮಾಡುವವರು, ಬಹಳಷ್ಟು ಸಿಗುತ್ತಾರೆ; ಆದರೆ ‘ನೀವು ಮಹಾನರಾಗಬೇಕು,’ ಈ ಉದ್ದೇಶದಿಂದ ಸತ್ಯವನ್ನು ಆಲಿಸಿ  ಪರಮಾತ್ಮನ ಕಡೆಗೆ ಆಕರ್ಷಿಸುವ ಮತ್ತು ಈಶ್ವರನ ಸಾಕ್ಷಾತ್ಕಾರದ ಮಾರ್ಗದಲ್ಲಿ ಕರೆದೊಯ್ಯುವ ಮಹಾಪುರುಷರು ಬಹಳ ಕಡಿಮೆ ಇರುತ್ತಾರೆ. ಇಂತಹ ಮಹಾಪುರುಷರ ಸಹವಾಸವನ್ನು ಗೌರವದಿಂದ ಮತ್ತು ಪ್ರಯತ್ನಪೂರ್ವಕ ಮಾಡಬೇಕು.’

(ಆಧಾರ : ‘ಗ್ರಂಥ ‘ಸದಾ ದಿವಾಳಿ’)