ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ೨೦೧೨ ರಿಂದ ೨೦೨೩ ರ ಅವಧಿಯಲ್ಲಿ ಹನ್ನೊಂದು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವಗಳನ್ನು (ಈ ಮೊದಲು ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಈ ಹೆಸರಿನಿಂದ ಆಯೋಜಿಸಲಾಗುತ್ತಿತ್ತು.) ಯಶಸ್ವಿ ರೀತಿಯಲ್ಲಿ ಆಯೋಜಿಸಲಾಗಿತ್ತು. ಈ ವರ್ಷ ೨೪ ರಿಂದ ೩೦ ಜೂನ್ ೨೦೨೪ ರ ಅವಧಿಯಲ್ಲಿ ರಾಮನಾಥಿ, ಗೋವಾದಲ್ಲಿ ‘ದ್ವಾದಶ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ (ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ)ದ ಆಯೋಜನೆ ಮಾಡಲಾಗಿದೆ. ಗೋವಾದಲ್ಲಿ ನಡೆಯುವ ಈ ಮಹೋತ್ಸವದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯ ನಿರತರಾಗಿರುವ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು, ಉದ್ಯಮಿಗಳು, ಲೇಖಕರು ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಅಧಿವೇಶನದಲ್ಲಿ ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಸಿಂಗಾಪುರ, ಬ್ಯಾಂಕಾಕ್. ಅಮೇರಿಕಾ, ಫಿಜಿ, ಆಸ್ಟ್ರೇಲಿಯಾ, ಹಾಂಗ್‌ಕಾಂಗ್, ಇಂಗ್ಲೆಂಡ್, ಮಲೇಷ್ಯಾ ಇತ್ಯಾದಿ ದೇಶ-ವಿದೇಶಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಮಹೋತ್ಸವದ ಆಯೋಜನೆಗಾಗಿ ಧರ್ಮದಾನ ಮಾಡಲು ವಿನಂತಿ !
ಈ ಮಹೋತ್ಸವದ ಆಯೋಜನೆಗಾಗಿ ಧರ್ಮಪ್ರೇಮಿಗಳು ದಾನಿಗಳು ಉದಾರವಾಗಿ ದಾನ ಮಾಡಬೇಕು, ಎಂದು ಸವಿನಯವಾಗಿ ವಿನಂತಿಸುತ್ತೇವೆ. ಈ ಧರ್ಮದಾನಕ್ಕೆ ‘೮೦ ಜಿ (೫) ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಬಹುದು. ‘ಹಿಂದೂ ಜನಜಾಗೃತಿ ಸಮಿತಿ (Hindu Janajagruti Samiti) ಯ ಹೆಸರಿನಲ್ಲಿ ಚೆಕ್‌ಗಳನ್ನು ಸ್ವೀಕರಿಸಲಾಗುವುದು.
ತಾವು ಕೆಳಗಿನ ಲಿಂಕ್‌ದ ಮೂಲಕವೂ ಈ ಮಹೋತ್ಸವಕ್ಕಾಗಿ ಅರ್ಪಣೆ ಮಾಡಬಹುದು.
ಸಂಪರ್ಕ ಸಂಖ್ಯೆ : ೯೫೭೯೨೮೮೦೧೦