ಹೇ ಮಹಾನುಭಾವರೇ, ವಿಶ್ವದಲ್ಲಿ ನಿಮ್ಮ ಕೃಪೆಯ ವೃಷ್ಟಿ ಬೇಗನೆ ಮತ್ತು ಪುನಃ ಪುನಃ ಆಗಲಿ. ವಿಶ್ವವು ಅಶಾಂತಿಯ ಅಗ್ನಿಯಲ್ಲಿ ದಹಿಸುತ್ತಿದೆ. ಅದನ್ನು ಯಾವುದೇ ಸರಕಾರ ಅಥವಾ ಕಾನೂನು ರಕ್ಷಿಸಲು ಸಾಧ್ಯವಿಲ್ಲ.
‘ಹೇ ಮಹಾಜ್ಞಾನಿ ಸದ್ಗುರುಗಳೇ ! ಹೇ ನಿರ್ಮಲ ನಾರಾಯಣಸ್ವರೂಪ ಸಂತರೆ ! ನಾವು ನಿಮ್ಮ ಕೃಪೆಯ ಆಕಾಂಕ್ಷಿಗಳಾಗಿದ್ದೇವೆ. ಬೇರೆ ಯಾವುದೇ ಉಪಾಯವಿಲ್ಲ. ಈಗ ನಮ್ಮ ಅಧಿಕಾರದಿಂದ ವಿಶ್ವದ ಅಶಾಂತಿ ದೂರವಾಗದು ಅಥವಾ ಜಾಣತನದಿಂದ ಮತ್ತು ಶಾಂತಿದೂತರ ಸಹಾಯದಿಂದ ಆಗದು. ಕೇವಲ ನಿಷ್ಕಲ್ಮಶ ನಿಮ್ಮ ಕೃಪೆಯ ವೃಷ್ಟಿ ಆಗಲಿ.
ಸಂತರ ಕೃಪೆಯನ್ನು ಸ್ವೀಕರಿಸಲು ಮಾನವನ ಸಿದ್ಧತೆ ಇರಬೇಕು
ಅವರ ಕೃಪೆಯಿಂದಲೇ ವೃಷ್ಟಿಯಂತೂ ಆಗುತ್ತಲೇ ಇದೆ. ನಾವೇನು ನೋಡ ಬೇಕೆಂದರೆ ‘ನಾವು ನನ್ನ ಹೃದಯರೂಪಿ ಪಾತ್ರೆಯನ್ನು ಎಷ್ಟು ತೆರೆದಿಡುತ್ತೇವೆ ? ನಾವು ಆ ಕೃಪೆಯನ್ನು ಪ್ರಾಪ್ತ ಮಾಡಿಕೊಳ್ಳಲು ಎಷ್ಟು ಉತ್ಸುಕತೆಯನ್ನು ತೋರಿಸುತ್ತೇವೆ ?’ಯಾವ ರೀತಿ ಕತ್ತೆಯು ಚಂದನದ ಭಾರವನ್ನು ಹೊತ್ತೊಯ್ದರೂ ಅದರ ಸುವಾಸನೆಯಿಂದ ವಂಚಿತವಾಗಿರುತ್ತದೆಯೋ, ಅದೇ ರೀತಿ ನಾವು ಮನುಷ್ಯತ್ವದ ಭಾರವನ್ನಂತೂ ಒಯ್ಯುತ್ತೇವೆ; ಆದರೆ ಮಾನವತತೆಗೆ ಸಿಗಬೇಕಾದ ಸುಖದಿಂದ ನಾವು ವಂಚಿತರಾಗಿದ್ದೇವೆ.’ (ಆಧಾರ : ಗ್ರಂಥ ‘ಸದಾ ದಿವಾಳಿ’)