ನಮ್ಮ ಕುಟುಂಬವ್ಯವಸ್ಥೆ ಸುರಕ್ಷಿತವಾಗಿರಲು ಯಾವ ಕಾಳಜಿ ತೆಗೆದುಕೊಳ್ಳಬೇಕು ? 

ಪ.ಪೂ. ಸ್ವಾಮಿ ವರದಾನಂದ ಭಾರತಿಯವರ ಧರ್ಮದ ವಿಷಯದಲ್ಲಿ ಅಮೂಲ್ಯ ಮಾರ್ಗದರ್ಶನ

ಪ.ಪೂ. ಸ್ವಾಮಿ ವರದಾನಂದ ಭಾರತಿ

ಯಾವ ಪ್ರಶ್ನೆಗಳು ಸಮಷ್ಟಿ ಜೀವನ ದಲ್ಲಿ ನಿರ್ಮಾಣವಾದವೋ, ಅದೇ ಮಾನಸಿಕತೆ ವ್ಯಕ್ತಿ ಜೀವನದಲ್ಲಿ ಬಂದರೆ, ಆ ಕುಟುಂಬದ ಸ್ವಾಸ್ಥ್ಯ-ಸುರಕ್ಷೆ ಕೆಡುತ್ತದೆ. ಕುಟುಂಬವ್ಯವಸ್ಥೆ ನಾಶವಾದರೆ, ವ್ಯಕ್ತಿ ಜೀವನದಿಂದ ಹಿಡಿದು ಸಮಾಜ-ರಾಷ್ಟ್ರಜೀವನವು ಅಸಮಾಧಾನಿ, ಅಸುರಕ್ಷಿತವಾಗುತ್ತಾ ಹೋಗುತ್ತದೆ. ಈಗ ವಿದೇಶದಲ್ಲಿನ ಕೆಲವು ಸಮೃದ್ಧ ಸಮಾಜದಲ್ಲಿ ಇದರ ಅರಿವಾಗುತ್ತಿದೆ.

೧. ಸ್ತ್ರೀಯರ ಮೇಲೆ ಕುಟುಂಬದ ಆರೋಗ್ಯದ ರಕ್ಷಣೆಯ ಹೊಣೆ

ನಮ್ಮ ಧರ್ಮದಲ್ಲಿ ಕುಟುಂಬದ ಎಲ್ಲ ಪ್ರಕಾರದ ವ್ಯವಸ್ಥೆಯ ಜವಾಬ್ದಾರಿಯು ಮುಖ್ಯವಾಗಿ ಕುಟುಂಬದ ಗೃಹಿಣಿಯ ಮೇಲಿದೆ. ಇಂದು ಸ್ತ್ರೀಮುಕ್ತಿಯ ಭ್ರಮೆಯನ್ನುಂಟು ಮಾಡುವ ವಿಚಾರಗಳ ಸುಳಿಯಲ್ಲಿ ಇದನ್ನು ತಿಳಿದುಕೊಳ್ಳುವುದು ಕಷ್ಟ ಹಾಗೂ ಒಂದು ರೀತಿಯಲ್ಲಿ ಅಸಾಧ್ಯವೆನಿಸುತ್ತಿರಬಹುದು; ಆದರೆ ‘ಗೃಹಂತು ಗೃಹಿಣೀಹೀನಂ ಕಾಂತಾರಾದತಿರಿಚ್ಯತೆ |’ ಅಂದರೆ ‘ಗೃಹಿಣಿಯಿಲ್ಲದ ಮನೆ ವನಕ್ಕೆ ಸಮಾನವಾಗಿರುತ್ತದೆ’ ಹೀಗೇಕೆ ಹೇಳಲಾಗಿದೆ ? ಇದನ್ನು ಗಮನಿಸಬೇಕು. ಸ್ತ್ರೀ ಜೀವನದ ಹಾಗೂ ಸ್ತ್ರೀಗೆ ಪತಿವ್ರತಾ ಧರ್ಮವೆಂದು ಹೇಳಿದ ಧರ್ಮದ ಉಪಯುಕ್ತತೆಯು ಕುಟುಂಬದ ಸ್ವಾಸ್ಥ್ಯ, ಸಮಾಧಾನ ಮತ್ತು ಆಂತರಿಕ ಸಂರಕ್ಷಣೆಗಾಗಿಯೇ ಇದೆ.

೨. ಕುಟುಂಬದ ಸದಸ್ಯರು ತಮ್ಮ ತಮ್ಮ ಧರ್ಮವನ್ನು ಪಾಲಿಸುವುದು ಮಹತ್ವದ್ದಾಗಿದೆ 

ಕರ್ತಾಪುರುಷನು ಸನ್ಮಾರ್ಗದಿಂದ ಧನಪ್ರಾಪ್ತಿಗೆ, ಬಾಹ್ಯ ಸಂರಕ್ಷಣೆಗೆ ಜವಾಬ್ದಾರನಾಗಿದ್ದಾನೆ. ಅಂದರೆ ‘ಕೇವಲ ಗೃಹಿಣಿಯರ ಮೇಲೆಯೇ ಅಥವಾ ಸ್ತ್ರೀಯರ ಮೇಲೆಯೇ ಎಲ್ಲ ಜವಾಬ್ದಾರಿ ಇರುತ್ತದೆ’, ಎಂಬುದು ಇದರ ಅರ್ಥವಲ್ಲ. ಕುಟುಂಬದ ಎಲ್ಲ ಸದಸ್ಯರು ತಮ್ಮ ತಮ್ಮ ಧರ್ಮ, ಪಿತಾ ಧರ್ಮ, ಮಾತಾ ಧರ್ಮ, ಪುತ್ರ ಧರ್ಮ, ಪುತ್ರಿ ಧರ್ಮ, ಭ್ರಾತೃ ಧರ್ಮ, ಗೃಹಸ್ಥ ಧರ್ಮ, ವೃದ್ಧ ಹಿರಿಯರು ವಾನಪ್ರಸ್ಥ ಧರ್ಮವನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸಬೇಕು ಹಾಗೂ ಮೊದಲು ಅದನ್ನು ಚೆನ್ನಾಗಿ ತಿಳಿದುಕೊಳ್ಳಬೇಕು.

೩. ಭಾರತೀಯ ಕುಟುಂಬವ್ಯವಸ್ಥೆಯಲ್ಲಿ ಕುಟುಂಬದವರು ಇಟ್ಟುಕೊಳ್ಳಬೇಕಾದ ಅರಿವು 

ನಮ್ಮಲ್ಲಿ ಈ ಹಿಂದಿನ ಕುಟುಂಬವ್ಯವಸ್ಥೆಯಲ್ಲಿ ಹಿರಿಯ ವೃದ್ಧ ಸದಸ್ಯರು (ಅಜ್ಜ, ಅಜ್ಜಿ ಇತ್ಯಾದಿ) ತಮ್ಮ ಅನುಭವದಿಂದ ಪ್ರತಿಯೊಂದು ಘಟಕಕ್ಕೆ ಅವರವರ ಆಚಾರಧರ್ಮವನ್ನು ಕಲಿಸುತ್ತಿದ್ದರು. ಒಂದು ವೇಳೆ ಯಾರಾದರೂ ತಪ್ಪು ಮಾಡಿದರೆ, ವಾತ್ಸಲ್ಯ ಭಾವದಿಂದ ಕ್ಷಮಾಶೀಲತೆಯಿಂದ ಅರ್ಥ ಮಾಡಿಕೊಳ್ಳುತ್ತಿದ್ದರು ಹಾಗೂ ‘ಪುನಃ ಹಾಗೆ ಆಗದಂತೆ’, ಕಾಳಜಿ ವಹಿಸಲು ಹೇಳುತ್ತಿದ್ದರು. ನಿಜವಾಗಿ ಎಲ್ಲಿ ತಪ್ಪಾಗಿದೆ ? ಎಂಬುದನ್ನೂ ಸ್ಪಷ್ಟಪಡಿಸುತ್ತಿದ್ದರು. ಇಂದು ನಾವು ಪಾಶ್ಚಾತ್ಯ ಜೀವನಪದ್ಧತಿಯ ಭ್ರಾಮಕ ಆಕರ್ಷಣೆ ಯಿಂದ ಈ ವ್ಯವಸ್ಥೆಯನ್ನು ಮರೆತಿರುವ ಹಾಗಿದೆ. ಕೆಲವು ತಪ್ಪು ತರ್ಕಗಳು ಕುಟುಂಬವನ್ನು ಆರೋಗ್ಯದಿಂದ ದೂರ ಒಯ್ಯುತ್ತವೆ. ಅದಕ್ಕಾಗಿ ಧರ್ಮದ ‘ವಿಶೇಷ ಅಧಿಕಾರ ಮತ್ತು ಜವಾಬ್ದಾರಿ’ ಈ ಎರಡು ಅಂಗಗಳ ಸಹಿತ ‘ಕರ್ತವ್ಯ ಮತ್ತು ಧಾರ್ಮಿಕತೆ’ ಈ ಎರಡು ವಿಷಯಗಳನ್ನು ತಿಳಿದುಕೊಂಡರೆ, ಯಾವುದು ಯೋಗ್ಯ, ಯಾವುದು ಅಯೋಗ್ಯ ? ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಅದರಿಂದ ಕುಟುಂಬ ಸಮಾಧಾನಿ ಆಗಿರುತ್ತದೆ ಹಾಗೂ ಆರೋಗ್ಯಕರವಾಗಿರುತ್ತದೆ. ದುಃಖದಿಂದ ಮನುಷ್ಯನ ಸಮಾಧಾನ ಕಡಿಮೆಯಾಗುತ್ತದೆ, ಇದರಲ್ಲಿ ಆಶ್ಚರ್ಯವೇನಿಲ್ಲ; ಆದರೆ ವಿಚಾರ ಮಾಡಿದರೆ, ಕೇವಲ ಸುಖದಿಂದ ಮನುಷ್ಯನಿಗೆ ನೆಮ್ಮದಿ ಸಿಗುವುದಿಲ್ಲ, ಇದು ಗಮನಕ್ಕೆ ಬರುತ್ತದೆ. ಹೇಗೆ ಸುಖ ಸಿಗುತ್ತಾ ಹೋಗುವುದೊ, ಹಾಗೆಯೆ ಮನುಷ್ಯನ ಆಸಕ್ತಿ, ಅಭಿಲಾಷೆ ಹೆಚ್ಚಾಗುತ್ತಾ ಹೋಗುತ್ತದೆ ಹಾಗೂ ಅದರ ಪರಿಣಾಮದಿಂದ ಅವನು ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಆರೋಗ್ಯ-ಆನಂದ ಕಳೆದುಕೊಳ್ಳುತ್ತಾನೆ. ಮನುಷ್ಯ ತನ್ನ ಎಲ್ಲ ವ್ಯವಹಾರಗಳನ್ನು ಮಾಡುತ್ತಾನೆ, ಅದೆಲ್ಲವೂ ನೆಮ್ಮದಿಗಾಗಿಯೆ. ಅದನ್ನೇ ಅವನು ಸುಖವೆಂದು ತಿಳಿಯುತ್ತಾನೆ. ಎಲ್ಲರ ಅನುಭವ ಹೇಗಿದೆಯೆಂದರೆ, ಮನುಷ್ಯನಿಗೆ ವ್ಯವಹಾರದಿಂದ ಎಲ್ಲವೂ ಸಿಗುತ್ತದೆ; ಆದರೆ ಸಮಾಧಾನ ಸಿಗುವುದಿಲ್ಲ.

೪. ಅಧ್ಯಾತ್ಮಜ್ಞಾನದ ಮಹತ್ವ

ಅಧ್ಯಾತ್ಮಜ್ಞಾನವು ಸುಖ-ದುಃಖಗಳಿಂದ ‘ಆಸಕ್ತಿ (ಹರ್ಷ-ಮೋಹ) – ಶೋಕ’ ಇವುಗಳ ಮೇಲೆ ಪರಿಣಾಮವಾಗಲು ಬಿಡುವುದಿಲ್ಲ. ಇದರಿಂದ ಮನುಷ್ಯನ ಮಾನಸಿಕ ನೆಮ್ಮದಿ ಅವಸ್ಥೆ ಉಳಿದುಕೊಳ್ಳುತ್ತದೆ. ಯಾವನು ಅಧ್ಯಾತ್ಮದ ಚಿಂತನೆಯನ್ನು ಮಾಡಿದ್ದಾನೆಯೋ ಮತ್ತು ಕೆಲವೊಂದು ಅಂಶ ಅದು ಅವನಿಗೆ ಸಾಧ್ಯವಾಗಿದೆಯೋ, ಅವನ ಜೀವನ ನಿತ್ಯವೂ ಸಮಾಧಾನಿ ಇರುತ್ತದೆ. ಅನೇಕ ಸಂತಮಹಾತ್ಮರ ಚರಿತ್ರೆಗಳು ಇದಕ್ಕೆ ಸಾಕ್ಷಿಯಾಗಿರುತ್ತವೆ. ಅಧ್ಯಾತ್ಮ ಜ್ಞಾನವು ಜೀವನದ ಎಲ್ಲ ದುಃಖಗಳನ್ನು ಶೋಕವಾಗಿ ಪರಿವರ್ತನೆಯಾಗಲು ಬಿಡುವುದಿಲ್ಲ. ಹೇಗೆ ಒಂದು ವಾಹನದಲ್ಲಿನ ಉತ್ತಮವಾದ ಶಾಕ್ ಎಬ್ಸರ್ಬರ‍್ಸ್ ಅದರಲ್ಲಿನ ಪ್ರವಾಸಿಗಳಿಗೆ ರಸ್ತೆಯ ಏರುತಗ್ಗುಗಳ ಅನುಭವ ಆಗಲು ಬಿಡುವುದಿಲ್ಲವೊ, ಹಾಗೆಯೆ ಅಧ್ಯಾತ್ಮವು ಜೀವನದಲ್ಲಿನ ಏರಿಳಿತ, ಸುಖ-ದುಃಖಗಳ ಅನುಭವ ಮನುಷ್ಯನ ಮನಸ್ಸಿನ ಮೇಲಾಗಲು ಬಿಡುವುದಿಲ್ಲ. ಅವನು ಸದಾ ಒಂದು ದಿವ್ಯ ಆನಂದ ಹಾಗೂ ಸಮಾಧಾನದಲ್ಲಿರುತ್ತಾನೆ.

– ಪ.ಪೂ. ಸ್ವಾಮಿ ವರದಾನಂದ ಭಾರತಿ (೧೯೯೮)  (ಆಧಾರ : ಗ್ರಂಥ ‘ಜಿಜ್ಞಾಸಾ’, ಶ್ರೀವರದಾನಂದ ಪ್ರತಿಷ್ಠಾನ, ಶ್ರೀ ಕ್ಷೇತ್ರ ಪಂಢರಾಪುರ)