ನಿರಂತರ ಧರ್ಮಕಾರ್ಯ ಮಾಡುವ ಪ್ರವಚನಕಾರರು, ಧರ್ಮಭೂಷಣ ಮತ್ತು ಭಾರತಾಚಾರ್ಯ ಪ್ರಾ. ಸು.ಗ. ಶೇವಡೆ (ವಯಸ್ಸು ೮೯ ವರ್ಷ) ಇವರು ಸಂತಪದವಿಯಲ್ಲಿ ವಿರಾಜಮಾನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಂದಾದ ಆನಂದದಾಯಕ ಘೋಷಣೆ

ಉಪಸ್ಥಿತರೊಂದಿಗೆ ಸಂವಾದ ನಡೆಸುತ್ತಿರುವ ಭಾರತಾಚಾರ್ಯರಾದ ಪ್ರಾ. ಸುರೇಶ ಗಜಾನನ ಶೇವಡೆ, ಮಧ್ಯಭಾಗದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಪಕ್ಕದಲ್ಲಿ ಡಾ. (ಸೌ.) ಕುಂದಾ ಜಯಂತ ಆಠವಲೆ
ಪೂ. ಭಾರತಾಚಾರ್ಯ ಪ್ರಾ. ಸು.ಗ. ಶೇವಡೆ

ರಾಮನಾಥಿ – ನಿರಂತರ ಧರ್ಮಕಾರ್ಯವನ್ನು ಮಾಡುವ ಜಗತ್ಪ್ರಸಿದ್ಧ ಪ್ರವಚನಕಾರರು, ಧರ್ಮಭೂಷಣ ಮತ್ತು ಭಾರತಾಚಾರ್ಯರಾದ ಪ್ರಾ. ಸುರೇಶ ಗಜಾನನ ಶೇವಡೆ (ವಯಸ್ಸು ೮೯ ವರ್ಷ) ಇವರು ೧೧ ಜೂನ್ ೨೦೨೪ ರಂದು ಸಂತಪದವಿಯಲ್ಲಿ ವಿರಾಜಮಾನರಾದರು. ಅವರು ಮೂಲತಃ ಮುಂಬೈಯ ಚೆಂಬೂರಿನವರು. ಭಾರತಾಚಾರ್ಯ ಪ್ರಾ. ಸು. ಗ. ಶೇವಡೆಯವರು ಮೇ ೧೯ ರಿಂದ ರಾಮನಾಥಿ (ಗೋವಾ) ಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ನೆಲೆಸಿದ್ದಾರೆ. ೧೧ ಜೂನ್ ರಂದು ಆಶ್ರಮದಲ್ಲಿನ ಕೆಲವು ಸಾಧಕರಿಗಾಗಿ ಭಾರತಾಚಾರ್ಯ ಪ್ರಾ. ಸು. ಗ. ಶೇವಡೆ ಇವರ ಪ್ರವಚನಗಳ ಕಾರ್ಯಕ್ರಮದ ಆಯೋಜನೆಯನ್ನು ಮಾಡಲಾಗಿತ್ತು. ಅನಂತರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವರು ಸಂತರಾಗಿರುವ ಆನಂದವಾರ್ತೆಯನ್ನು ಘೋಷಿಸಿದರು. ಸನಾತನದ ಪೂ. ಪೃಥ್ವಿರಾಜ ಹಜಾರೆ ಇವರು ಶಾಲು, ಶ್ರೀಫಲ ಮತ್ತು ಉಡುಗೊರೆಯನ್ನು ನೀಡಿ ಅವರನ್ನು ಸನ್ಮಾನಿಸಿದರು. ಈ ಸಮಯದಲ್ಲಿ ಡಾ. (ಸೌ.) ಕುಂದಾ ಜಯಂತ ಆಠವಲೆಯವರ ವಂದನೀಯ ಉಪಸ್ಥಿತಿ ಲಭಿಸಿತು. ಪೂ. ಭಾರತಾಚಾರ್ಯ ಪ್ರಾ. ಸು. ಗ. ಶೇವಡೆಯವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲೆ ಅಪಾರ ಶ್ರದ್ಧೆಯಿದೆ. ಈ ಸಮಯದಲ್ಲಿ ಕೆಲವು ಸಾಧಕರು ಮತ್ತು ಅವರ ಜೊತೆಯಲ್ಲಿ ಸೇವೆ ಮಾಡುವ ಸಾಧಕರು ತಮಗೆ ಕಲಿಯಲು ಸಿಕ್ಕಿದ ಅಂಶಗಳನ್ನು ಮತ್ತು ಅನುಭೂತಿಗಳನ್ನು ಹೇಳಿದರು.


ಕಾರ್ಯಕ್ರಮದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವ್ಯಕ್ತಪಡಿಸಿದ ಮನೋಗತ

ಧರ್ಮಕಾರ್ಯ ಮಾಡಿ ಸಂತಪದವಿಯಲ್ಲಿ ವಿರಾಜಮಾನರಾದ ಜಗತ್ಪ್ರಸಿದ್ಧ ಪ್ರವಚನಕಾರರು, ಧರ್ಮಭೂಷಣ ಮತ್ತು ಪೂ. ಭಾರತಾಚಾರ್ಯ ಪ್ರಾ.ಸು.ಗ. ಶೇವಡೆ !

ಇಂದು ಇಲ್ಲಿ ಉಪಸ್ಥಿತರಿರುವ ಜಗತ್ಪ್ರಸಿದ್ಧ ಪ್ರವಚನಕಾರರು, ಧರ್ಮಭೂಷಣ ಮತ್ತು ಭಾರತಾಚಾರ್ಯ ಪ್ರಾ. ಸು.ಗ. ಶೇವಡೆ ಇವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು !

ಅವರ ಬಿರುದುಗಳಿಂದಲೇ ಅವರ ವಿಶಾಲ ಕಾರ್ಯದ ಬಗ್ಗೆ ಕಲ್ಪನೆಯು ಬರಬಹುದು.

೧. ಅವರು ಇದುವರೆಗೆ ಜಗತ್ತಿನದ್ಯಂತ ೧೩ ಸಾವಿರ ೫೦೦ ಕ್ಕಿಂತಲೂ ಹೆಚ್ಚು ಪ್ರವಚನಗಳನ್ನು ಮಾಡಿದ್ದಾರೆ.

೨. ಅವರು ಅಮೇರಿಕಾದಲ್ಲಿ ೫೫೦ ಪ್ರವಚನಗಳನ್ನು ಮಾಡಿದ್ದಾರೆ.

೩. ೨೦೧೬-೧೭ ರಲ್ಲಿ ಬ್ರಿಟನ್‌ನಲ್ಲಿನ ‘ಹೌಸ್ ಆಫ್ ಕಾಮನ್ಸನಲ್ಲಿ ಅಂದರೆ, ಅಲ್ಲಿನ ಸಂಸತ್ತಿನಲ್ಲಿ ಮಾತನಾಡುವಾಗ ಅವರು ಛತ್ರಪತಿ ಶಿವಾಜಿ ಮಹಾರಾಜರ ಮಾಹಿತಿಯನ್ನು ನೀಡಿದರು.

೪. ಛತ್ರಪತಿ ಸಂಭಾಜಿ ಮಹಾರಾಜರ ಬಗ್ಗೆ ಕಳೆದ ಅನೇಕ ದಶಮಾನಗಳಿಂದಾಗುವ ಅಪಪ್ರಚಾರವನ್ನು ಪ್ರಾ. ಸು.ಗ. ಶೇವಡೆ ಇವರು ‘ಶಂಭೂರಾಜೆ’ ಎಂಬ ಪುಸ್ತಕವನ್ನು ಬರೆದು ಸಾಕ್ಷಿ ಸಮೇತ ಖಂಡಿಸಿದರು. ಈ ವಿಷಯದ ಮೇಲೆ ಅವರು ಅನೇಕ ಲೇಖನಗಳನ್ನೂ ಬರೆದರು ಮತ್ತು ಪ್ರವಚನವನ್ನೂ ಮಾಡಿದರು. ಆದ್ದರಿಂದ ಮುಂದೆ ಛತ್ರಪತಿ ಸಂಭಾಜಿ ಮಹಾರಾಜರ ಬಗ್ಗೆ ನಡೆಯುವ ಅಪಪ್ರಚಾರವು ನಿಂತಿತು. ಸಂಕ್ಷಿಪ್ತವಾಗಿ ಹೇಳುವುದಾದರೆ ಅವರು ಧರ್ಮದ ಮೇಲಿನ ಆಕ್ರಮಣಗಳನ್ನು ತಡೆಯಲು ಪ್ರಯತ್ನಿಸುತ್ತಿರುವ ಮಹಾನ ಯೋಧರಾಗಿದ್ದಾರೆ.

೫. ಅವರು ೧೯೯೧ ರಲ್ಲಿ ಶೇಗಾವ್‌ದಲ್ಲಿನ ಶ್ರೀ ಗಜಾನನ ಮಹಾರಾಜರ ‘ಶ್ರೀ ಗಜಾನನ ಬಾವನಿ’ ಎಂಬ ಗ್ರಂಥವನ್ನು ಬರೆದರು. ಅದು ಇದುವರೆಗೆ ೩ ಕೋಟಿಗಳಿಂತಲೂ ಹೆಚ್ಚು ಪ್ರತಿಗಳು ವಿತರಣೆಯಾಗಿದೆ. ಇಂತಹ ಏಕೈಕ ಆಧ್ಯಾತ್ಮಿಕ ಲೇಖಕರಾಗಿದ್ದಾರೆ.

೬. ಅವರು ಇದುವರೆಗೆ ರಾಷ್ಟ್ರ ಮತ್ತು ಧರ್ಮಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಮೇಲೆ ೧೪ ಗ್ರಂಥಗಳನ್ನು ಬರೆದಿದ್ದಾರೆ.

ಈಗ ಅವರ ಗ್ರಂಥಗಳ ವೈಶಿಷ್ಟ್ಯಗಳನ್ನು ಹೇಳುತ್ತೇನೆ. ಇದುವರೆಗೆ ನಾನು ಅಧ್ಯಾತ್ಮದಲ್ಲಿನ ವಿವಿಧ ವಿಷಯಗಳ ಮೇಲೆ ೨೭೭ ಗ್ರಂಥಗಳನ್ನು ಬರೆದಿದ್ದೇನೆ. ಮಾರ್ಚ್ ೨೦೨೪ ರವರೆಗೆ ಅವುಗಳ ೮೮ ಲಕ್ಷ ೨೮ ಸಾವಿರ ಪ್ರತಿಗಳು ಪ್ರಕಾಶಿತವಾಗಿವೆ. ಈ ಗ್ರಂಥಗಳಲ್ಲಿ ನನಗೆ ಸೂಕ್ಷ್ಮದಿಂದ ಲಭಿಸಿದ ಜ್ಞಾನ ಮತ್ತು ಇತರ ಗ್ರಂಥಗಳಲ್ಲಿ ಓದಿದ ಜ್ಞಾನ, ಹೀಗೆ ವಿಷಯಗಳಿವೆ. ಇತರ ಲೇಖಕರ ಒಂದೊಂದು ಗ್ರಂಥದಲ್ಲಿ ‘ಹೊಸ ಜ್ಞಾನವೆಂದು ಕೇವಲ ೪-೫ ಪುಟಗಳಲ್ಲಿ ಗುರುತು ಮಾಡುತ್ತೇನೆ. ಆ ಜ್ಞಾನವನ್ನು ವಾಚಕರಿಗೆ ಓದಲು ಸಿಗಬೇಕೆಂದು, ನಮ್ಮ ಗ್ರಂಥಗಳ ಮುಂದಿನ ಆವೃತ್ತಿಯಲ್ಲಿ ಕೊಡುತ್ತೇನೆ; ಆದರೆ ಶೇವಡೆಯವರ ಗ್ರಂಥಗಳಲ್ಲಿ ಪ್ರತಿಯೊಂದು ಪುಟದಲ್ಲಿ ‘ಹೊಸ ಜ್ಞಾನ’ವೆಂದು ನಾನು ಗುರುತು ಮಾಡುತ್ತೇನೆ. ಅವರ ಒಂದೊಂದು ಗ್ರಂಥದಲ್ಲಿ ತುಂಬಾ ಜ್ಞಾನವಿದೆ. ನಾಳೆಯಿಂದ ಅವುಗಳ ಕುರಿತಾದ ಲೇಖನಮಾಲಿಕೆಯನ್ನು ದೈನಿಕ ಸನಾತನ ಪ್ರಭಾತದಲ್ಲಿ ಪ್ರತಿದಿನ ಪ್ರಕಟಿಸಲಿದ್ದೇವೆ.

೭. ಅವರ ಕಾರ್ಯದ ಪರಿಚಯವನ್ನು ಕೇವಲ ಕೆಲವು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅದರ ಮೇಲೆ ಪ್ರತ್ಯೇಕ ಒಂದು ಗ್ರಂಥವಾಗುವುದು, ಅವರ ಕಾರ್ಯವು ಅಷ್ಟು ವ್ಯಾಪಕವಾಗಿದೆ.

ಇದು ಅವರ ಐಹಿಕ ಕಾರ್ಯದ ಪರಿಚಯವಾಯಿತು.

ಈಗ ಅವರ ಆಧ್ಯಾತ್ಮಿಕ, ಅಂದರೇ ಅವರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗ್ಗೆ ಪರಿಚಯ ಮಾಡಿಕೊಳ್ಳೋಣ.

೧. ಅವರು ತಮ್ಮ ಒಂಭತ್ತನೇ ವಯಸ್ಸಿನಿಂದ ಯಜ್ಞೋಪವಿತ ಸಂಸ್ಕಾರ ಆದಾಗಿನಿಂದ ಇದುವರೆಗೆ, ಅಂದರೆ ೮೯ ನೇ ವಯಸ್ಸಿನವರೆಗೂ ಪ್ರತಿದಿನ, ಅಂದರೇ ಕಳೆದ ೮೦ ವರ್ಷಗಳಿಂದ ಸಂಧ್ಯಾವಂದನೆ ಮಾಡುತ್ತಿದ್ದಾರೆ.

೨. ೧೯೮೬ ರಲ್ಲಿ ಅವರು ಇಂದೂರಿನ ಮಹಾನ ಸಂತರಾದ ಪ.ಪೂ. ನಾನಾ ಮಹಾರಾಜ ತರಾಣೆಕರ ಇವರ ಅನುಗ್ರಹವನ್ನು ಪಡೆದರು.

೩. ಅದೇ ವರ್ಷದಲ್ಲಿ ಗುರುಗಳ ಆಜ್ಞೆಯಿಂದ ಶ್ರೀ. ಶೇವಡೆ ಇವರು ಶಾಲೆಯಲ್ಲಿನ ನೌಕರಿಗೆ ರಾಜೀನಾಮೆ ನೀಡಿ ಪ್ರವಚನ ಗಳ ಮಾಧ್ಯಮದಿಂದ ಧರ್ಮಪ್ರಸಾರದ ಕಾರ್ಯದಲ್ಲಿ ತೊಡಗಿಸಿ ಕೊಂಡರು. ಅವರ ಈ ೫೦ ವರ್ಷಗಳ ಧರ್ಮಸೇವೆಯ ನಂತರ ಈ ೮೯ ನೇ ವಯಸ್ಸಿನಲ್ಲಿಯೂ ಅವರು ಧರ್ಮಪ್ರಸಾರದ ಕಾರ್ಯವನ್ನು ಅಷ್ಟೇ ಉತ್ಸಾಹದಿಂದ ಮಾಡುತ್ತಿದ್ದಾರೆ.

೪. ೧೯೮೫ ರಲ್ಲಿ ಅವರು ಆಯೋಜಿಸಿದ ಬದ್ರಿನಾಥ-ಕೇದಾರನಾಥ ಈ ಯಾತ್ರೆಯಲ್ಲಿ ನಾನು ಭಾಗವಹಿಸಿದ್ದೆನು. ಆ ಸಮಯದಲ್ಲಿ ನಮ್ಮ ಮೊದಲನೇ ಭೇಟಿ ಆಯಿತು. ಆ ಸಮಯದಲ್ಲಿ ಸಂಪೂರ್ಣ ಯಾತ್ರೆಯಲ್ಲಿ ಅವರೊಂದಿಗೆ ಮಾಡಿದ ಚರ್ಚೆಯಿಂದ ನನಗೆ ಅವರಿಂದ ಅಧ್ಯಾತ್ಮದಲ್ಲಿನ ಅನೇಕ ವಿಧದ ಅಂಶಗಳು ಕಲಿಯಲು ಸಿಕ್ಕಿದವು.

೫. ನನ್ನ ಸಾಧನೆ ಮತ್ತು ಅವರಲ್ಲಿ ಅಧ್ಯಾತ್ಮದ ಬಗ್ಗೆ ಅಧ್ಯಯನವಿರುವುದರಿಂದ ನನಗೆ ಅವರಿಂದ ದಿನಾಲೂ ಅಧ್ಯಾತ್ಮದ ಬಗ್ಗೆ ಏನಾದರು ಹೊಸ ವಿಷಯವನ್ನು ಕಲಿಯಲು ಸಿಗುತ್ತಿದೆ. ಅವರು ನನಗಾಗಿ ಜ್ಞಾನದ ದೊಡ್ಡ ಉಗಮಸ್ಥಾನವಾಗಿದ್ದಾರೆ. ರಾಷ್ಟ್ರ, ಧರ್ಮ ಮತ್ತು ಹಿಂದೂ ಸಂಸ್ಕೃತಿಗಳ ಬಗ್ಗೆ ನನ್ನಲ್ಲಿ ಜಿಜ್ಞಾಸೆ ಇತ್ತು, ಅದು ಇವರಿಂದ ಪೂರ್ತಿಯಾಗುತ್ತಿದೆ.

೬. ಅವರಿಗೆ ತಮ್ಮ ಕಾರ್ಯದ ಬಗ್ಗೆ ಮತ್ತು ಅನುಭವಗಳ ಬಗ್ಗೆ ಸ್ವಲ್ಪವೂ ಗರ್ವ, ಅಂದರೆ ಅಹಂ ಇಲ್ಲ.

೭. ಇಷ್ಟೊಂದು ಅನುಭವಿ, ಜ್ಞಾನಿ ಮತ್ತು ನನಗಿಂತ ವಯಸ್ಸಿನಲ್ಲಿ ೭ ವರ್ಷ ದೊಡ್ಡವರಾಗಿದ್ದರೂ ಈ ವಯಸ್ಸಿನಲ್ಲಿ ಅವರು ನನ್ನನ್ನು ಭೇಟಿಯಾದಾಗ ಬಾಗಿ ನಮಸ್ಕರಿಸುತ್ತಾರೆ. ಇದರಿಂದ ಅವರಲ್ಲಿ ನಮ್ರತೆ, ಲೀನತೆ ಎಷ್ಟಿದೆ, ಎಂಬುದು ಗಮನಕ್ಕೆ ಬರುತ್ತದೆ.

೮. ಅವರ ಮಾತುಗಳು ಸದಾ ಆಧ್ಯಾತ್ಮಿಕ ಸ್ತರದಲ್ಲಿರುತ್ತವೆ. ಅವರ ಮಾತಿನಲ್ಲಿ ಮನಮುಕ್ತತೆ ಇದೆ. ಅವರಿಂದ ಅಪಶಬ್ದಗಳು ಎಂದೂ ಬರುವುದಿಲ್ಲ. ಅವರು ಸತತ ಕಲಿಯುವ ಸ್ಥಿತಿಯಲ್ಲಿರುತ್ತಾರೆ. ಇವರ ಈ ಎಲ್ಲ ಗುಣಗಳು ನಿಜವಾಗಿಯೂ ಅವರ ಸಂತತ್ವದ ಲಕ್ಷಣಗಳಾಗಿವೆ. ಆದ್ದರಿಂದ ಇಂದು ಈ ಕಾರ್ಯಕ್ರಮದ ಮಾಧ್ಯಮ

ದಿಂದ ಹೇಳಲು ಬಯಸುತ್ತೇನೆ, ಅವರು ತಮ್ಮ ಧರ್ಮಸೇವೆಯ ಮಾಧ್ಯಮದಿಂದ ಶೇ. ೭೧ ರಷ್ಟು ಆಧ್ಯಾತ್ಮಿಕ ಸ್ತರವನ್ನು ತಲುಪಿದ್ದಾರೆ. ಆದ್ದರಿಂದ ನಮ್ಮ ಶ್ರೀ. ಸು.ಗ. ಶೇವಡೆಯವರು ‘ಪೂಜನೀಯ ಸು.ಗ. ಶೇವಡೆ ಆಗಿದ್ದಾರೆ. ಇದನ್ನು ಹೇಳಲು ತುಂಬಾ ಆನಂದವಾಗುತ್ತಿದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ 

ಪೂ. ಸು.ಗ. ಶೆವಡೆ ಇವರು ಆಶ್ರಮದಲ್ಲಿ ಇರಲು ಬಂದಿದ್ದು, ಇದು ಈಶ್ವರೀ ಯೋಗವಾಗಿದೆ ! – ಡಾ. (ಸೌ.) ಕುಂದಾ ಜಯಂತ ಆಠವಲೆ

 ಡಾ. (ಸೌ.) ಕುಂದಾ ಜಯಂತ ಆಠವಲೆ

ಕೊರೊನಾ ಮಹಾಮಾರಿಯ ಮೊದಲು ಪ.ಪೂ. ಭಕ್ತರಾಜ ಮಹಾರಾಜರ ಜನ್ಮಶತಾಬ್ದಿ ಮಹೋತ್ಸವದ ಅಂತರ್ಗತ ಮಹಾರಾಷ್ಟ್ರದ ಪನವೇಲನಲ್ಲಿ ಕಾರ್ಯಕ್ರಮದ ಆಯೋಜನೆ ನಡೆದಿತ್ತು. ಆ ಸಂದರ್ಭದಲ್ಲಿ ಪ್ರವಚನ ಮಾಡುವ ದೃಷ್ಟಿಯಿಂದ ನಾವು ಪೂ. ಆಬಾ (ಪೂ. ಸು.ಗ. ಶೇವಡೆ) ಇವರನ್ನು ಭೇಟಿಯಾಗಿ ಆಮಂತ್ರಣ ನೀಡಿದೆವು ಮತ್ತು ಅವರು ಅದನ್ನು ಸ್ವೀಕರಿಸಿ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡರು. ಮುಂದೆ ಅವರ ಮತ್ತು ನನ್ನ ಭೇಟಿ ಶ್ರೀ. ಅನಂತ ಕುಲಕರ್ಣಿ ಇವರ ಮಗನ ಮದುವೆಯ ಸಮಯದಲ್ಲಾಯಿತು. ಇದರ ನಂತರ ಮೂರನೇ ಬಾರಿ ನನ್ನ ಅವರೊಂದಿಗೆ ಸಂಪರ್ಕ ಸಂಚಾರವಾಣಿ ಕರೆಯಲ್ಲಿ, ಅವರ ಧರ್ಮಪತ್ನಿ ಸೌ. ಸುಮಂಗಲಾ ಇವರ ನಿಧನವಾದ ಸಮಯದಲ್ಲಾಯಿತು. ಆ ಸಮಯದಲ್ಲಿ ಪ.ಪೂ. ಡಾಕ್ಟರರು ಅವರಿಗೆ ಪತ್ರ ಬರೆದರು, ಅದು ಅವರಿಗೆ ಬಹಳ ಹಿಡಿಸಿತು. ಕೆಲವು ದಿನಗಳ ಹಿಂದೆ ಶ್ರೀ. ಅನಂತ ಕುಲಕರ್ಣಿ ಇವರು ಸಂಚಾರವಾಣಿ ಕರೆ ಮಾಡಿ, ‘ಆಬಾ ಇವರು ಸನಾತನದ ಆಶ್ರಮಕ್ಕೆ ಬರಬೇಕೆಂಬ ವಿಚಾರವಿದೆ’, ಎಂದು ಹೇಳಿದರು ಮತ್ತು ಅದರ ಹಿಂದಿನ ದಿನವೇ ಪ.ಪೂ. ಡಾಕ್ಟರರು ನನಗೆ, “ಶೆವಡೆಗುರುಜಿಯವರ ಗ್ರಂಥಗಳು ಎಷ್ಟು ಸಹಜ ಮತ್ತು ಸುಲಭವಾಗಿವೆ. ನಾವು ಅವರನ್ನು ಇಲ್ಲಿಗೆ ಕರೆಯೋಣ”, ಎಂದರು. ‘ಪೂ. ಆಬಾ ಇವರು ಸನಾತನದ ಆಶ್ರಮಕ್ಕೆ ಇರಲು ಬರುವುದು, ಇದು ಈಶ್ವರೀ ಯೋಗವಾಗಿದೆ’, ಎಂದು ಇದರಿಂದ ನಮ್ಮ ಗಮನಕ್ಕೆ ಬರುತ್ತದೆ.

– ಡಾ. (ಸೌ.) ಕುಂದಾ ಜಯಂತ ಆಠವಲೆ