ದೇವತೆಯ ವ್ಯಾಪಕರೂಪದ ಉಪಾಸನೆಯನ್ನು ಮಾಡುವುದು ಕಠಿಣವಿರುವುದರಿಂದ ಅವಳ ಪ್ರಚಲಿತ ರೂಪದ ಉಪಾಸನೆಯನ್ನೇ ಮಾಡಬೇಕು !
ದೇವತೆಗಳ ಉಪಾಸನೆಯನ್ನು ಮಾಡುವಾಗ ಅವರ ಪ್ರಚಲಿತ (ಸದ್ಯದ) ಸಗುಣ ರೂಪದ ಉಪಾಸನೆಯನ್ನು ಮಾಡಬೇಕು. ಉಪಾಸನೆಯ ಸಮಯದಲ್ಲಿ ಸಂಬಂಧಪಟ್ಟ ದೇವತೆಯು ನಮಗೆ ಹತ್ತಿರದವಳೆಂದು ಅನಿಸುತ್ತಾಳೆ ಹಾಗೂ ಅದರಿಂದ ಭಾವಜಾಗೃತಿಯೂ ಕೂಡಲೇ ಆಗುತ್ತದೆ.’