ಕಾಶ್ಮೀರ ಕ್ಕೆ ಹೋಗಿ ವಾಸಿಸುತ್ತೇನೆ ಮತ್ತು ಬಳಿಕ ಹಿಂದೂ ಗಳನ್ನು ಅಲ್ಲಿ ವಾಸ್ತವ್ಯವಿರುವಂತೆ ಮಾಡುತ್ತೇನೆ – ಜಿತೇಂದ್ರ ತ್ಯಾಗಿಯವರ ಘೋಷಣೆ.

ಉತ್ತರ ಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ನ ಮಾಜಿ ಅಧ್ಯಕ್ಷ ಜಿತೇಂದ್ರ ನಾರಾಯಣ ತ್ಯಾಗಿ

ನವದೆಹಲಿ– ಉತ್ತರ ಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ನ ಮಾಜಿ ಅಧ್ಯಕ್ಷ ಜಿತೇಂದ್ರ ನಾರಾಯಣ ತ್ಯಾಗಿ(ಮೊದಲಿನ ವಸೀಮ ರಿಜ್ವಿ)ಇವರು ಕಾಶ್ಮೀರದಲ್ಲಿ ವಾಸಿಸುವ ಮತ್ತು ಬಳಿಕ ಅಲ್ಲಿ ಹಿಂದೂ ಗಳನ್ನು ವಾಸ್ತವ್ಯ ಇರುವಂತೆ ಮಾಡುವುದಾಗಿ ಒಂದು ವ್ಹಿಡಿಯೋ ಮುಖಾಂತರ ಘೋಷಣೆ ಮಾಡಿದ್ದಾರೆ.

೧. ಜಿತೇಂದ್ರ ತ್ಯಾಗಿ ಯವರು ಮಾತನಾಡುತ್ತಾ, ಕೆಲವು ಜಿಹಾದಿ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ಸಹಾಯದಿಂದ ಕಾಶ್ಮೀರದಲ್ಲಿ ಹಿಂದೂ ಗಳನ್ನು ಹೆದರಿಸಲು ಪ್ರಯತ್ನ ಮಾಡುತ್ತಿದೆ. ನನ್ನ ಕೆಲವು ವಿಚಾರ ವಂತ ಮತ್ತು ಹಿಂದೂ ಸಂಘಟನೆಗಳೊಂದಿಗೆ ಚರ್ಚೆ ನಡೆಯುತ್ತಿದೆ. ನಾವು ಸರಕಾರದ ಸಹಾಯ ದಿಂದ ಕಾಶ್ಮೀರದಲ್ಲಿ ಆದಷ್ಟು ಬೇಗನೆ ಹಿಂದೂ ಗಳನ್ನು ಅಲ್ಲಿ ವಾಸಿಸುವಂತೆ ಮಾಡುವ ಪ್ರಯತ್ನ ಮಾಡಲಿದ್ದೇವೆ. ಮೊದಲಿಗೆ ನಾನು ಅಲ್ಲಿ ಸ್ವತಃ ವಾಸಿಸುವ ಪ್ರಯತ್ನ ಮಾಡುವವನಿದ್ದೇನೆ. ಈ ಯೋಜನೆ ಮೇಲೆ ಕಾರ್ಯ ಮುಂದುವರಿದಿದೆ.

೨. ಒಂದು ಸುದ್ದಿ ಸಂಕೇತ ಸ್ಥಳ ಕ್ಕೆ ನೀಡಿದ ಸಂದರ್ಶನದಲ್ಲಿ ತ್ಯಾಗಿಯವರು ಮಾತನಾಡುತ್ತಾ ಯಾವುದೇ ರಾಜ್ಯ ದಿಂದ ಹಿಂದೂ ಗಳನ್ನು ಹೊರಗೆ ಕಳಿಸಲು ಸಾಧ್ಯವಿಲ್ಲ. ಯಾರಿಗಾದರೂ ಈ ಅಪಾಯ ವನ್ನು ಎದುರಿಸಿ ಕಾಶ್ಮೀರದಲ್ಲಿ ಹೋಗಿ ಇರಬೇಕಾಗುತ್ತದೆ.

೩. ‘ದಿ ಕಾಶ್ಮೀರ ಫಾಯಿಲ್ಸ’ ಚಲನಚಿತ್ರ ದ ವಿಷಯದ ಬಗ್ಗೆ ಅವರು ಮಾತನಾಡುತ್ತಾ ಚಲನಚಿತ್ರ ದಲ್ಲಿ ಏನು ತೋರಿಸಲಾಗಿದೆ ಯೋ ಅದು ಬಹಳ ಕಡಿಮೆ ಇದೆ. ಕಾಶ್ಮಿರಿ ಹಿಂದೂ ಗಳು ಏನು ಅತ್ಯಾಚಾರ ಸಹಿಸಿದ್ಧಾರೆಯೋ ಅದರ ಕಾಲು ಭಾಗವೂ ಚಲನಚಿತ್ರ ದಲ್ಲಿ ಇಲ್ಲ. ಈ ವಿಷಯ ದ ಮೇಲೆ ನಾನು ಕೂಡ ಒಂದು ಚಲನಚಿತ್ರ ಮಾಡಿದ್ದೇನೆ. ಆದರೆ ಕೆಲವು ಕಾರಣ ದಿಂದ ಅದು ಪ್ರ ದರ್ಶನಗೊಳ್ಳುತ್ತಿಲ್ಲ.