ದೇವತೆಯ ವ್ಯಾಪಕರೂಪದ ಉಪಾಸನೆಯನ್ನು ಮಾಡುವುದು ಕಠಿಣವಿರುವುದರಿಂದ ಅವಳ ಪ್ರಚಲಿತ ರೂಪದ ಉಪಾಸನೆಯನ್ನೇ ಮಾಡಬೇಕು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಯಾವುದಾದರೊಂದು ದೇವತೆಯ ವಿಶ್ವವ್ಯಾಪಕ, ಸಹಸ್ರಮುಖ, ಸಹಸ್ರಹಸ್ತ ಇವುಗಳಂತಹ ವ್ಯಾಪಕ ರೂಪದ ವರ್ಣನೆಯನ್ನು ಓದಿದಾಗ, ನಾವು ಅವಳ ಇಂತಹ ರೂಪದ ಉಪಾಸನೆಯನ್ನು ಮಾಡಬೇಕು, ಎಂದು ಕೆಲವರಿಗೆ ಅನಿಸುತ್ತದೆ; ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಮಗೆ ಈ ರೂಪದ ಕಲ್ಪನೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಕಲ್ಪನೆಯನ್ನು ಮಾಡಿದರೂ ನಮಗೆ ಆ ರೂಪದ ಶಕ್ತಿಯನ್ನು ಸಹಿಸಲು ಆಗುವುದಿಲ್ಲ. ಆದ್ದರಿಂದ ದೇವತೆಗಳ ಇಂತಹ ವ್ಯಾಪಕ ಸ್ತರದ ರೂಪದ ಉಪಾಸನೆಯನ್ನು ಮಾಡುವುದು ಕಠಿಣವಾಗುತ್ತದೆ. ಆದುದರಿಂದ ದೇವತೆಗಳ ಉಪಾಸನೆಯನ್ನು ಮಾಡುವಾಗ ಅವರ ಪ್ರಚಲಿತ (ಸದ್ಯದ) ಸಗುಣ ರೂಪದ ಉಪಾಸನೆಯನ್ನು ಮಾಡಬೇಕು. ಉಪಾಸನೆಯ ಸಮಯದಲ್ಲಿ ಸಂಬಂಧಪಟ್ಟ ದೇವತೆಯು ನಮಗೆ ಹತ್ತಿರದವಳೆಂದು ಅನಿಸುತ್ತಾಳೆ ಹಾಗೂ ಅದರಿಂದ ಭಾವಜಾಗೃತಿಯೂ ಕೂಡಲೇ ಆಗುತ್ತದೆ.’

– (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ (೨೭.೩.೨೦೨೨)

ದೇವರ ಉಪಾಸನೆ ಮಾಡುವ ಮೊದಲು ಅವರ ಗುಣವೈಶಿಷ್ಟ್ಯ ತಿಳಿದುಕೊಳ್ಳಿ !

ಯಾರಾದರೊಬ್ಬ ವ್ಯಕ್ತಿಯೊಂದಿಗೆ ಮಾತನಾಡುವ ಮೊದಲು ಅವನ ಗುಣವೈಶಿಷ್ಟ್ಯಗಳೇನು, ಅವನು ಇತರರಿಗೆ ಹೇಗೆ ಸಹಾಯ ಮಾಡುತ್ತಾನೆ ಇದು ನಮಗೆ ತಿಳಿದರೆ ನಮಗೆ ಅವನ ಬಗ್ಗೆ ಆತ್ಮೀಯತೆ ಮೂಡಿ ಅವನೊಂದಿಗೆ ಸಹಜವಾಗಿ ಮಾತನಾಡಬಲ್ಲೆವು. ಆ ವ್ಯಕ್ತಿಯ ಬಗ್ಗೆ ಏನೂ ಮಾಹಿತಿ ಇಲ್ಲದಿದ್ದಲ್ಲಿ ಆ ಮಾತಿನಲ್ಲಿ ಆತ್ಮೀಯತೆ ಇರುವುದಿಲ್ಲ. ಇದೇ ವಿಷಯ ದೇವತೆಗಳ ಉಪಾಸನೆ ಮಾಡುವಾಗಲೂ ಆಗುತ್ತದೆ. ಯಾವುದಾದರೊಂದು ದೇವರ ಉಪಾಸನೆ ಮಾಡುವ ಮೊದಲು ಆ ದೇವರ ಗುಣವೈಶಿಷ್ಟ್ಯಗಳನ್ನು ಅರಿತುಕೊಂಡರೆ ಉಪಾಸನೆ ಮಾಡುವಾಗ ಅದಕ್ಕನುಸಾರ ನಮ್ಮಿಂದ ಪ್ರಾರ್ಥನೆ ಮತ್ತು ಕೃತಜ್ಞತೆಯಾಗುತ್ತದೆ ಮತ್ತು ಅದರಲ್ಲಿ ಆ ಪ್ರಮಾಣದಲ್ಲಿ ಭಾವ ಬರುತ್ತದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೭.೩.೨೦೨೨)