ಇಂತಹವರು ಇಸ್ಲಾಮಿಕ್ ದೇಶಗಳಿಗೆ ಹೋಗಬೇಕು !

ಶೌಕತ್ ಅಲಿ

ಎಂ.ಐ.ಎಂ.ನ ಉತ್ತರ ಪ್ರದೇಶದ ಅಧ್ಯಕ್ಷ ಶೌಕತ್ ಅಲಿ ಅವರು, ‘ಹಿಂದೂಗಳು ಕಾವಡ ಯಾತ್ರೆ ಕೈಗೊಂಡು ಸಂಚಾರ ತಡೆ ಉಂಟು ಮಾಡಬಹುದಾದರೆ, ನಾವೇಕೆ ಬೀದಿಗಳಲ್ಲಿ ನಮಾಜು ಪಠಣ ಮಾಡಬಾರದು ?’ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

೨. ಖಲಿಸ್ತಾನದ ಕಾಟ ಹತ್ತಿಕ್ಕುವುದು ಯಾವಾಗ ?

ಜಮಶೇದಪುರದ (ಜಾರ್ಖಂಡ್) ಮಾನಗೊ ಗುರುದ್ವಾರದಲ್ಲಿ ಅಂಟಿಸಿದ ಭಿತ್ತಿಪತ್ರದಲ್ಲಿ ಭಾರತೀಯ ಸೇನೆಯನ್ನು ‘ಹಿಂದುತ್ವ ಉಗ್ರರು’ ಎಂದು ಸಂಬೋಧಿಸಲಾಗಿದೆ ಮತ್ತು ಅದರ ಮೇಲೆ ಖಲಿಸ್ತಾನಿ ಭಯೋತ್ಪಾದಕರ ಛಾಯಾಚಿತ್ರಗಳೂ ಇರುತ್ತವೆ.

೩. ಮದ್ಯಪಾನ ನಿಷೇಧದ ನಾಟಕವನ್ನು ತಿಳಿಯಿರಿ !

ಮದ್ಯಪಾನ ನಿಷೇಧ ಮಾಡಿರುವ ಬಿಹಾರದಲ್ಲಿ ಪುನಃ ಮದ್ಯ ಸೇವಿಸಿ ೧೨ ಮಂದಿ ಸಾವನ್ನಪ್ಪಿದ್ದು ೧೩ ಮಂದಿಯ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು.

೪. ‘ಪಠಾಣ’ ಚಲನಚಿತ್ರದ ಮೇಲೆ ಕ್ರಮ ಯಾವಾಗ ತೆಗೆದುಕೊಳ್ಳುವಿರಿ?

ನಟ ಶಾಹರುಖ್ ಖಾನ್ ಇವರ ಮುಖ್ಯ ಅಭಿನಯದ ಮುಂಬರುವ ‘ಪಠಾಣ’ ಚಿತ್ರದ ‘ಬೇಶರಮ್ ರಂಗ್’ ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಒಳ ಉಡುಪು ಧರಿಸಿ ಕೇಸರಿ ಬಣ್ಣವನ್ನು ಅವಮಾನಿಸಿದ್ದಾರೆ.

೫. ದೇವಾಲಯಗಳ ಸರಕಾರೀಕರಣವನ್ನು ರದ್ದುಗೊಳಿಸಿರಿ !

ತಮಿಳುನಾಡಿನ ೩೮ ಸಾವಿರ ದೇವಸ್ಥಾನಗಳ ನಿಯಂತ್ರಣ ತಮಿಳುನಾಡಿನ ಡಿ.ಎಂ.ಕೆ. ಸರಕಾರ ವಶಪಡಿಸಿಕೊಂಡಿರುವ  ಹಿನ್ನೆಲೆಯಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆಗೆ ಸರ್ವೋಚ್ಚ ನ್ಯಾಯಾಲಯ ಸರ್ಕಾರಕ್ಕೆ ನೋಟಿಸ್ ಕಳುಹಿಸಿದ್ದು, ಸರಕಾರ ದೇವಾಲಯಗಳನ್ನು ಏಕೆ ವಶಪಡಿಸಿಕೊಂಡಿದೆ ? ಅದಕ್ಕೆ ಉತ್ತರ ನೀಡುವಂತೆ ಹೇಳಿದೆ.

೬. ಹೀಗೆ ಎಲ್ಲ ಮುಸಲ್ಮಾನ ನಾಯಕರೂ ಏಕೆ ಹೇಳಲ್ಲ ?

ಅಜಮೇರ ದರ್ಗಾದ ಮುಖ್ಯ ಉತ್ತರಾಧಿಕಾರಿ ಹಜರತ್ ಸೈಯದ್ ನಾಸಿರುದ್ದೀನ್ ಚಿಶ್ತಿ ಅವರು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವರನ್ನು ಛೀಮಾರಿ ಹಾಕುತ್ತಾ, ‘ಪಾಕಿಸ್ತಾನದಲ್ಲಿರುವ ಮುಸಲ್ಮಾನರಿಗಿಂತ ಭಾರತೀಯ ಮುಸಲ್ಮಾನರು ಸುರಕ್ಷಿತ ಮತ್ತು ಉತ್ತಮ ಸ್ಥಿತಿಯಲ್ಲಿದ್ದಾರೆ’ ಎಂದರು.

೭. ಭಾರತವು ಬಾಂಗ್ಲಾದೇಶಿ ಹಿಂದೂಗಳಿಗೆ ಸಹಾಯ ಮಾಡಬೇಕು

‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮತಾಂತರವನ್ನು ತಡೆಯಲು ನಮಗೆ ಸಹಾಯ ಮಾಡಿ’, ಎಂದು ‘ವಾಯಿಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಸಂಘಟನೆಯು ಟ್ವೀಟ್ ಮಾಡಿ ಕರೆ ನೀಡಿದೆ.