ಕರ್ನಾಟಕದ ಕಲಬುರ್ಗಿ ರೈಲ್ ನಿಲ್ದಾಣ ಹಸಿರು ಬಣ್ಣ ಹಚ್ಚಲಾಗಿದೆ ಎಂದು ಹಿಂದೂ ಸಂಘಟನೆಗಳ ವಿರೋಧ !

ಹಿಂದೂಗಳ ವಿರೋಧದ ನಂತರ ರೈಲು ನಿಲ್ದಾಣದ ಬಣ್ಣ ಬದಲಾಯಿಸಲು ಸರಕಾರದ ನಿರ್ಧಾರ

ಕಲಬುರ್ಗಿ (ಕರ್ನಾಟಕ) – ಕರ್ನಾಟಕದಲ್ಲಿನ ಕಲಬುರ್ಗಿ ರೈಲು ನಿಲ್ದಾಣದ ಕಟ್ಟಡಕ್ಕೆ ಹಸಿರು ಬಣ್ಣ ಹಚ್ಚಿರುವುದರಿಂದ ವಿವಾದ ನಿರ್ಮಾಣ ವಾಗಿದೆ. ಕಲಬುರ್ಗಿ ರೈಲು ನಿಲ್ದಾಣದ ಈ ಹಸಿರು ಬಣ್ಣದ ಬಗ್ಗೆ ಸಂಘಟಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಾ ಅದರ ವಿರುದ್ಧ ಪ್ರತಿಭಟನೆ ನಡೆಸಿದರು.

ಕಲಬುರ್ಗಿ ರೈಲು ನಿಲ್ದಾಣಕ್ಕೆ ಹಸಿರು ಬಣ್ಣ ಹಚ್ಚಿರುವುದರಿಂದ ಅದು ಮಸೀದಿಯಂತೆ ಕಾಣುವುದು ಎಂದು ಹೇಳುತ್ತಾ ಹಿಂದೂ ಜಾಗೃತಿ ಸೇನೆ ಮತ್ತು ಇತರ ಹಿಂದೂ ಸಂಘಟನೆಗಳು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಹಿಂದೂ ಸಂಘಟನೆಗಳ ವಿರೋಧದ ಬಳಿಕ ರೈಲ್ವೆ ಇಲಾಖೆಯು ರೈಲು ನಿಲ್ದಾಣದ ಕಟ್ಟಡದ ಬಣ್ಣ ಬದಲಾಯಿಸಲು ನಿರ್ಣಯಿಸಿದೆ. (ರೈಲ್ವೆ ನಿಲ್ದಾಣಕ್ಕೆ ಬಣ್ಣ ಹಚ್ಚುವಾಗ ಅದರಿಂದ ಯಾರದಾದರೂ ಧಾರ್ಮಿಕ ಭಾವನೆಗೆ ನೋಯಿಸಲ್ಪಡುವುದೇ? ಎನ್ನುವ ಯೋಚನೆ ರೈಲ್ವೆ ಇಲಾಖೆ ಮಾಡಬೇಕಾಗಿತ್ತು. ರೈಲ್ವೆ ಇಲಾಖೆಯು ಈ ಪ್ರಕರಣದ ತನಿಖೆ ನಡೆಸಿ ಮುಂದೆ ಈ ರೀತಿಯ ಘಟನೆಗಳು ಜರುಗದಂತೆ
ಜವಾಬ್ದಾರಿಯುತ ಅಧಿಕಾರಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು – ಸಂಪಾದಕರು) ಪ್ರಸಾರ ಮಾಧ್ಯಮಗಳ ಮೂಲಕ ಈಗ ಕಲಬುರ್ಗಿ ರೈಲು ನಿಲ್ದಾಣದ ಕಟ್ಟಡದ ಹಸಿರು ಬಣ್ಣ ಬದಲಾಯಿಸಿ ಬಿಳಿಯ ಬಣ್ಣ ಹಚ್ಚಲಾಗುತ್ತಿದೆ ಎಂದು ತಿಳಿದು ಬಂದಿದೆ.