‘ಜಾತ್ಯತೀತ ಶಿಕ್ಷಣವೋ ಹಿಂದೂ ವಿರೋಧಿ ಪ್ರಚಾರತಂತ್ರವೋ’ ಈ ಕುರಿತು ವಿಶೇಷ ಆನ್‍ಲೈನ್ ಚರ್ಚಾಕೂಟ !
ಸ್ವಾತಂತ್ರ್ಯದ ನಂತರ ಸೋವಿಯತ್ ಕಮ್ಯುನಿಸ್ಟರ ಪ್ರಭಾವದಿಂದಾಗಿ, ದೇಶದ ಶಿಕ್ಷಣದಲ್ಲಿ ಹಿಂದೂ ಧರ್ಮವನ್ನು ಕೀಳಾಗಿ ಪರಿಗಣಿಸಲಾಯಿತು. ಗಾಂಧಿ-ನೆಹರೂರವರ ಕಾಲದಿಂದಲೂ ತಪ್ಪಾದ ಇತಿಹಾಸವನ್ನು ಬರೆಯಲಾಗಿದೆ. ಇದರ ಪರಿಣಾಮವಾಗಿ ಎಡಪಂಥೀಯ ಸಿದ್ಧಾಂತ, ಅಂದರೆ ಹಿಂದೂ ವಿರೋಧಿ ಸಿದ್ಧಾಂತವು ಜನರ ಮೇಲೆ ಹೇರಲಾಯಿತು. ಹಿಂದೂ ವಿರೋಧಿ ಇತಿಹಾಸವನ್ನು ಅನೇಕ ದಶಕಗಳಿಂದ ಕಲಿಸಲಾಗುತ್ತಿದೆ.