ಶ್ರೀ ೧೦೦೮ ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ವಿಶ್ವೇಶ್ವರಾನಂದ ಗಿರಿ ಮಹಾರಾಜರ ಹಸ್ತಗಳಿಂದ ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣದಲ್ಲಿನ ‘ಕುಂಭಮೇಳ ಪೇಜ್’ ಲೋಕಾರ್ಪಣೆ !

‘ಕುಂಭಮೇಳ ಪೇಜ್’ ಅನ್ನು ಲೋಕಾರ್ಪಣೆ ಮಾಡುವಾಗ, ಶ್ರೀ ೧೦೦೮ ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ವಿಶ್ವೇಶ್ವರಾನಂದ ಗಿರಿ ಮಹಾರಾಜ್ ಮತ್ತು ಬಲಭಾಗದಲ್ಲಿ ಸದ್ಗುರು ಡಾ. ಚಾರುದತ್ತ ಪಿಂಗಳೆ

ಹರಿದ್ವಾರ, ಮಾರ್ಚ್ ೧೬ (ವಾರ್ತಾ.) – ಹಿಂದೂ ಜನಜಾಗೃತಿ ಸಮಿತಿಯ ಹಿಂದಿ ಜಾಲತಾಣದ ‘ಕುಂಭಮೇಳ ಪೇಜ್’ ಲೋಕಾರ್ಪಣೆಯನ್ನು ಸನ್ಯಾಸ ಆಶ್ರಮ ದೇವಸ್ಥಾನದ ಶ್ರೀ ೧೦೦೮ ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ವಿಶ್ವವೇಶ್ವರಾನಂದ ಗಿರಿ ಮಹಾರಾಜ್ ಇವರ ಹಸ್ತಗಳಿಂದ ಮಾಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಉಪಸ್ಥಿತರಿದ್ದರು.

ಸನಾತನ ಧರ್ಮ ವ್ಯಾಪಕವಾಗಿ ಪ್ರಸಾರವಗಲಿದೆ ! – ಶ್ರೀ ೧೦೦೮ ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ವಿಶ್ವೇಶ್ವರಾನಂದ ಗಿರಿ ಮಹಾರಾಜ್

ಶ್ರೀ ೧೦೦೮ ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ವಿಶ್ವೇಶ್ವರಾನಂದ ಗಿರಿ ಮಹಾರಾಜ್ ಈ ಸಂದರ್ಭದಲ್ಲಿ ಮಾತನಾಡುತ್ತ, ‘ಕುಂಭಮೇಳ ನಮ್ಮ ಪ್ರಾಚೀನ ಸಂಸ್ಕೃತಿಯಾಗಿದೆ. ಕುಂಭಮೇಳ ಮೂಲಕ ಧರ್ಮಪ್ರಸಾರ ಮಾಡಲಾಗುತ್ತದೆ. ಧರ್ಮ ಸಂರಕ್ಷಣೆಗಾಗಿ ಭಗವಾನ ಶಂಕರಾಚಾರ್ಯರು ನಾಗಾದಳವನ್ನು ಸ್ಥಾಪಿಸಿದರೆ, ಮಹಾಮಂಡಲೇಶ್ವರ, ಆಚಾರ್ಯರ ಮಾಧ್ಯಮದಿಂದ ಶಾಸ್ತ್ರ ತಿಳಿಸಿ ಸನಾತನ ಸಂಸ್ಕೃತಿಯನ್ನು ರಕ್ಷಿಸುವ ಪರಂಪರೆಯನ್ನು ಪ್ರಾರಂಭಿಸಿದರು. ಪ್ರಸ್ತುತ ಕುಂಭಮೇಳಕ್ಕೆ ಹಾಜರಾಗಲು ಸಾಧ್ಯವಾಗದ ಭಕ್ತರಿಗೆ ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣದ ಕುಂಭಮೇಳ ಪುಟದ ಮೂಲಕ ಮಾಹಿತಿ ಸಿಗಲಿದೆ. ಗಂಗಾ ನದಿಯ ಸನ್ನಿಧಾನದಲ್ಲಿ ಈ ಜಾಲತಾಣದ ಪುಟವನ್ನು ಲೋಕಾರ್ಪಣೆ ಮಾಡಿದ್ದರಿಂದ ಸನಾತನ ಧರ್ಮವು ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗಲಿದೆ. ಇದರಿಂದ ನಿಮಗೂ ಸಹ ಧರ್ಮಪ್ರಸಾರದ ಫಲ ಸಿಗಲಿ ಎಂಬುದು ನನ್ನ ಆಶೀರ್ವಾದವಾಗಿದೆ’ ಎಂದು ಹೇಳಿದರು.

ಇವು ಕುಂಭಮೇಳ ಪುಟದ ವೈಶಿಷ್ಟ್ಯಗಳು ?

ಕುಂಭಮೇಳದ ಸುದ್ದಿ, ಕುಂಭಮೇಳದ ಮಹಿಮೆ, ಕುಂಭ ಪರ್ವದ ವಿವಿಧ ಸ್ಥಳಗಳು ಮತ್ತು ಪ್ರಾಮುಖ್ಯತೆ, ಹರಿದ್ವಾರದ ಮಹತ್ವ, ಕುಂಭಮೇಳದ ಪಾವಿತ್ರ್ಯವನ್ನು ಹೇಗೆ ಕಾಪಾಡಿಕೊಳ್ಳುವುದು ? ಹರಿದ್ವಾರ ಕುಂಭಮೇಳದಿಂದ ಕೆಲವು ಮಾರ್ಗದರ್ಶಕ ವೀಡಿಯೊಗಳೇ ಈ ಪುಟದ ವೈಶಿಷ್ಟ್ಯ.

ಕುಂಭಮೇಳ ಪುಟಕ್ಕೆ ಲಿಂಕ್ :

ಹಿಂದಿ ಪುಟ https://www.hindujagruti.org/hindi/hinduism/kumbh-mela

ಆಂಗ್ಲ ಪುಟ https://www.hindujagruti.org/hinduism/kumbh-mela