ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮೇ ೧೦ ರಿಂದ ಮೇ ೧೪ ರ ವರೆಗೆ ಬೆಂಗಳೂರು, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಕ್ಷಯ ತದಿಗೆಯ ನಿಮಿತ್ತ ಧರ್ಮಪ್ರೇಮಿಗಳ ಆನ್‌ಲೈನ್ ಸಂಪರ್ಕ ಅಭಿಯಾನವನ್ನು ನಡೆಸಲಾಗಿತ್ತು. ಇದರಲ್ಲಿ ಸಮಿತಿಯ ಸಂಪರ್ಕದಲ್ಲಿರುವ ಧರ್ಮಪ್ರೇಮಿಗಳನ್ನು ಸಂಪರ್ಕಿಸಿ ಅವರೊಂದಿಗೆ ಅನೌಪಚಾರಿಕವಾಗಿ ಮಾತನಾಡುವುದು, ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಅವರಿಗೆ ಆಧ್ಯಾತ್ಮಿಕ ಉಪಾಯ, ಜಪ, ಸಾಧನೆಯ ಬಗ್ಗೆ ಹೇಳುವುದು, ಅವರಿಗೆ ಅಕ್ಷಯ ತದಿಗೆಯಂದು ದಾನ ಮಾಡುವುದರ ಮಹತ್ವವನ್ನು ತಿಳಿಸುವುದು, ಸನಾತನ ಪ್ರಭಾತದ ಆನ್‌ಲೈನ್ ಚಂದಾ ಮಾಡಿಸುವುದು, ಗ್ರಂಥಗಳ ಆನ್‌ಲೈನ್ ವಿತರಣೆ ಮಾಡುವುದು ಹೀಗೆ ಆಯೋಜನೆ ಮಾಡಲಾಯಿತು.
ಸಾಧಕರಲ್ಲಿ ಸ್ಫೂರ್ತಿ ತುಂಬಿಸಿದುದರಿಂದ ವಾತಾವರಣವು ಅನುಕೂಲವಾಗಿ ಸಾಧನೆಗೆ ಬಲ ಸಿಗುವುದು
ಅಭಿಯಾನವನ್ನು ಪ್ರಾರಂಭಿಸುವ ಮೊದಲು ಈ ೩ ಜಿಲ್ಲೆಗಳು ಸೇರಿ ಆನ್‌ಲೈನ್‌ನಲ್ಲಿ ಸಭೆ ಮಾಡಿದ್ದವು. ಇದರಲ್ಲಿ, ಅಭಿಯಾನದ ಉದ್ದೇಶವನ್ನು ಅಂದರೆ ಅಕ್ಷಯ ತದಿಗೆಯು ಎಷ್ಟು ಮಹತ್ವಪೂರ್ಣ ದಿನವಾಗಿದೆ. ಇದು ಮೂರುವರೆ ಮುಹೂರ್ತಗಳಲ್ಲಿ ಒಂದಾಗಿರುವುದರಿಂದ ಇಡೀ ದಿನದಲ್ಲಿ ಯಾವುದೇ ಶುಭಕಾರ್ಯವನ್ನು ಮಾಡಬಹುದು ಹಾಗೂ ಆ ದಿನ ಮಾಡಿದ ದಾನದ ಮಹತ್ವ ಇವುಗಳ ಬಗ್ಗೆ ವಿವರವಾಗಿ ಸಾಧಕರ ಮನಸ್ಸಿನಲ್ಲಿ ಬಿಂಬಿಸಿದಾಗ ಅವರಿಗೆ ತಾವು ಅದರ ಬಗ್ಗೆ ಪ್ರಯತ್ನಿಸಿ ಸಾಧನೆಯನ್ನು ಮಾಡಬೇಕೆಂಬ ಉತ್ಸಾಹ ಮೂಡಿತು. ಅದರ ಜೊತೆಗೆ ಸಂಪರ್ಕ ಮಾಡುವ ಪದ್ಧತಿ, ವಿಷಯಗಳನ್ನು ಮಂಡಿಸುವ ಪದ್ಧತಿ, ಅದಕ್ಕೆ ಅಧ್ಯಾತ್ಮಿಕ ಸ್ತರದ ಪ್ರಯತ್ನಗಳನ್ನು ಹೇಗೆ ಜೋಡಿಸಬೇಕು ? ಗುರುಸೇವೆ ಎಂಬ ಭಾವವನ್ನಿರಿಸಿ ಸೇವೆಯನ್ನು ಮಾಡುವುದರಿಂದಾ ಗುವ ಲಾಭಗಳು ಹಾಗೂ ಅದರ ವರದಿಯನ್ನು ನೀಡುವ ಪದ್ಧತಿಯನ್ನು ಹೇಳಿಕೊಡಲಾಯಿತು. ಇದರಿಂದ ಸಾಧಕರಿಗೆ ಸಂಪೂರ್ಣ ಆತ್ಮವಿಶ್ವಾಸ ಮೂಡಿದುದರಿಂದ ಉತ್ತಮ ರೀತಿಯಲ್ಲಿ ಕೃತಿಯ ಸ್ತರದ ಪ್ರಯತ್ನಗಳಾದವು.
ಅದೇ ರೀತಿಯಲ್ಲಿ ಎಲ್ಲ ಸಾಧಕರಿಂದ ಪ್ರಯತ್ನಗಲಾದವು. ಪ್ರಯತ್ನದಲ್ಲಿ ಸಾತತ್ಯ ಬರಲು ಮಧ್ಯದಲ್ಲಿ ಅದರ ಫಲನಿಷ್ಪತ್ತಿ, ಅಡಚಣೆಗಳನ್ನು ಕೇಳಿ ಅವರಿಗೆ ಕೇಂದ್ರವಾರು ಸಹ ಎಲ್ಲ ಸಾಧಕರನ್ನು ಸೇರಿಸಿ ಸಭೆ ಮಾಡಿ ಭಾವಪೂರ್ಣ ರೀತಿಯಲ್ಲಿ ಸೇವೆ ಮಾಡಲು ಪ್ರೇರಣೆ ನೀಡಲಾಯಿತು. ಇದರಿಂದ ತುಂಬಾ ಸಾಧಕರು ಉತ್ಸಾಹ ಮತ್ತು ತಳಮಳದಿಂದ, ಭಾವದ ಸ್ತರದಲ್ಲಿ ಪ್ರಯತ್ನಿಸಿ ಗುರುದೇವರ ಸಂಕಲ್ಪರೂಪಿ ಅಭಿಯಾನದ ಅನುಭೂತಿ ಪಡೆದರು.
ಸೇವೆಯ ಫಲಶೃತಿ
ಅಭಿಯಾನದ ಅಂತರ್ಗತ ಒಟ್ಟು ೧೭೨೨ ಧರ್ಮಪ್ರೇಮಿಗಳನ್ನು ಸಂಪರ್ಕಿಸಲಾಗಿತ್ತು. ಈ ವೇಳೆ ಸನಾತನ ನಿರ್ಮಿತ ಗ್ರಂಥಗಳು ಹಾಗೂ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಸಹ ಆನ್‌ಲೈನ್ ಮೂಲಕ ವಿತರಿಸಲಾಗಿತ್ತು. ಸನಾತನ ಪ್ರಭಾತ ಪತ್ರಿಕೆಗೆ ಒಟ್ಟು ೧೩೬ ಜನರು ಚಂದಾದಾರರಾದರು.
ಸನಾತನದ ಚೈತನ್ಯವಾಣಿ ಆಪ್‌ನಲ್ಲಿರುವ ಹಿಂದೂ ಸಂಸ್ಕೃತಿಯ ಸ್ತೋತ್ರ, ಶ್ಲೋಕಗಳು, ನಾಮಜಪ ಇತ್ಯಾದಿಗಳ ವೈಶಿಷ್ಟ್ಯವನ್ನು ತಿಳಿಸಿದುದರಿಂದ ೫೦೦ ಹೆಚ್ಚು ಮಂದಿ ಚೈತನ್ಯವಾಣಿಯ ಆಪ್ ಡೌನ್‌ಲೋಡ್ ಮಾಡುವ ಉತ್ಸಾಹ ತೋರಿಸಿದರು.
ವೈಶಿಷ್ಟ್ಯ ಪೂರ್ಣ ಘಟನೆಗಳು
೧. ಒಬ್ಬರಿಗೆ ಕೊರೊನಾ ಸೋಂಕಾಗಿರುವಾಗ ಅವರಿಗೆ ಕೊರೋನಾ ಪ್ರತಿಬಂಧಕ ನಾಮಜಪವನ್ನು ಹೇಳಿ, ಅದರ ಆಡಿಯೋ ಕಳಿಸಿದಾಗ ಅವರಿಗೆ ತುಂಬಾ ಕೃತಜ್ಞತೆ ಅನಿಸಿತು.
೨. ಹೆಚ್ಚಿನ ಜನರಿಗೆ ಅಕ್ಷಯ ತದಿಗೆಯ ನಿಮಿತ್ತ ದೂರವಾಣಿ ಕರೆ ಮಾಡಿದಾಗ ಅವರಿಗೆ ತುಂಬಾ ಕೃತಜ್ಞತೆ ಅನಿಸಿತು. ಎಲ್ಲರೂ ಜಪ ಮಾಡುತ್ತೇವೆ ಹೇಳಿದರು.
೩. ಒಬ್ಬರು ಒಂದು ವರ್ಷದ ಹಿಂದೆ ಒಂದು ಗ್ರಂಥ ಖರೀದಿಸಿ ಓದಿದ್ದರು. ಅವರು ನಾನು ಏನು ಮಾಡಲು ಆಗಲ್ಲ, ಮಲಗಿ ಇರುತ್ತೇನೆ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದಾಗ ಸಾಧಕರು ಅವರಿಗೆ ಸಾಧನೆಯ ಬಗ್ಗೆ ಹೇಳಿ, ಚಿಂತೆ ಮಾಡಬೇಡಿ, ಭಗವಂತನು ನಿಮ್ಮ ಜೊತೆಗೆ ಇದ್ದಾನೆ ಎಂದು ಪ್ರೋತ್ಸಾಹ ನೀಡಿದಾಗ ಅವರಿಗೆ ಭಾವಜಾಗೃತಿಯಾಯಿತು. ಅವರು ನೀವು ನಮ್ಮ ಕುಟುಂಬದವರಿಗಿಂತ ಹೆಚ್ಚು ಆಧಾರ ನೀಡಿದಿರಿ. ನೀವು ನಾನು ಒಂದು ವರ್ಷದಿಂದ ತುಂಬಾ ಕಳೆದುಕೊಂಡೆನು, ಮುಂದೆ ನಾನು ಸಾಧನೆಯ ಸತ್ಸಂಗದಲ್ಲಿ ಭಾಗವಹಿಸುವೆನು ಎಂದು ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು.
೪. ಓರ್ವ ಸಾಧಕರು ಉತ್ಸಾಹದಿಂದ ಅಭಿಯಾನದಲ್ಲಿ ಸಹಭಾಗಿಯಾದರು. ಅವರು ಅವರ ಕುಟುಂಬದ ಮತ್ತು ಧರ್ಮಪ್ರೇಮಿ, ಸ್ನೇಹಿತರು ೫೦ ಜನರಿಗೆ ಸಾಧನೆ, ಉಪಾಯದ ಬಗ್ಗೆ ಹೇಳಿದಾಗ ೫೦ ಜನರು ಸನಾತನ ಚೈತನ್ಯವಾಣಿ ಡೌನ್‌ಲೋಡ್ ಮಾಡಿದರು
೫. ೧೦ ವರ್ಷದ ಮೊದಲು ಸನಾತನ ಪ್ರಭಾತ ವಾಚಕರಾಗಿದ್ದ ಒಬ್ಬ ಧರ್ಮಪ್ರೇಮಿಯು ಆಗ ಪರಾತ್ಪರ ಗುರು ಡಾ. ಆಠವಲೆಯವರು ಸಂಕಟ ಕಾಲದ ಬಗ್ಗೆ ಬರೆದಿದ್ದ ಲೇಖನವನ್ನು ಓದಿದ ಬಗ್ಗೆ ತಿಳಿಸಿ ಅವರು ೧೦ ವರ್ಷದ ಮೊದಲೇ ಹೇಳಿದ್ದು ಈಗ ಸತ್ಯವಾಗಿದೆ ಎಂದರು. ಅವರು ಸಾಧನೆ, ಜಪ, ಜಾಲತಾಣ ಮುಂತಾದ ಮಾಹಿತಿಯನ್ನು ಆಸಕ್ತಿಯಿಂದ ಕೇಳಿದರು. ಕೂಡಲೇ ಅವರು ಆನ್‌ಲೈನ್ ಸನಾತನ ಪ್ರಭಾತ ಚಂದಾದಾರರಾದರು. ಇನ್ನು ಮುಂದೆ ಅವರು ನಿಯಮಿತವಾಗಿ ಸತ್ಸಂಗಕ್ಕೆ ಬರುತ್ತೇನೆ ಹೇಳಿದರು.
ಕಲಿಯಲು ಸಿಕ್ಕಿದ ಅಂಶಗಳು
೧. ಈಗ ಗುರುತತ್ತ್ವವು ತುಂಬಾ ಕಾರ್ಯನಿರತವಾಗಿದೆ. ಸಾಧಕರು ಭಾವದ ಸ್ತರದಲ್ಲಿ ಸೇವೆ ಮಾಡಿದಾಗ ಸಮಾಜದಿಂದಲೂ ಉತ್ತಮ ಸ್ಪಂದನ ಸಿಗುತ್ತದೆ ಎಂದರಿವಾಗಿ ಸೇವೆಯನ್ನು ಮಾಡಲು ಸಾಧಕರಿಗೆ ತುಂಬಾ ಉತ್ಸಾಹ ಅನಿಸಿತು.
೨. ಕೊರೊನಾ ಮಹಾಮಾರಿಯ ಸಂಕಟದಿಂದ ಪಾರಾಗಲು ಮಾಡಬೇಕಾದ ದುರ್ಗಾದೇವಿ ಜಪದ ಬಗ್ಗೆ ಮತ್ತು ನಾಮಜಪದ ಬಗ್ಗೆ ಹೇಳುವಾಗ ಎಲ್ಲ ಧರ್ಮಪ್ರೇಮಿಗಳು ನಮ್ರತೆಯಿಂದ ಕೇಳಿಸಿಕೊಂಡರು ಮತ್ತು ಅದನ್ನು ಮಾಡುವುದಾಗಿ ಹೇಳಿದರು.
೩. ಅನೇಕ ಧರ್ಮಪ್ರೇಮಿಗಳಿಗೆ ಸಂಸ್ಥೆಯ ಬಗ್ಗೆ ಆಪಾರ ಶ್ರದ್ದೆ ಮತ್ತು ಸಂಸ್ಥೆಯ ಕಾರ್ಯಗಳಲ್ಲಿ ನಂಬಿಕೆ ಇರುವುದು ಗಮನಕ್ಕೆ ಬಂದಿತು.
೪. ಬೇರೆ ಬೇರೆ ಮಾರ್ಗಗಳ ಮೂಲಕ ಸತ್ಸೇವೆ ಮಾಡುತ್ತಿರುವ ಧರ್ಮಪ್ರೇಮಿಗಳು, ನಮಗೆ ದೀರ್ಘಕಾಲದಿಂದ ಅವರ ಪರಿಚಯ ಇದೆ ಎನ್ನುವಂತೆ ತುಂಬಾ ಆತ್ಮೀಯತೆಯಿಂದ ಮಾತನಾಡಿದರು.ಅವರಲ್ಲಿ ಗುರುಗಳ ಬಗ್ಗೆ ಇರುವ ಪ್ರೇಮಭಾವವು ವ್ಯಕ್ತವಾಗುತ್ತಿತ್ತು.
೪. ಧರ್ಮಪ್ರೇಮಿಗಳೊಂದಿಗೆ ಮಾತನಾಡುವಾಗ, ನಮಗೆ ತುಂಬಾ ಚೈತನ್ಯ, ಆನಂದದ ಅನುಭವವಾಗುತ್ತಿತ್ತು ಮತ್ತು ಯಾವುದೇ ಅಡಚಣೆ ಅನಿಸಲಿಲ್ಲ.
ಇಷ್ಟು ಕಡಿಮೆ ಅವಧಿಯಲ್ಲಿ ಇದೆಲ್ಲವನ್ನು ಗುರುಗಳೇ ಮಾಡಿಸಿ ಕೊಂಡರು ಎನ್ನುವ ಪ್ರತ್ಯಕ್ಷ ಅನುಭವವಾಯಿತು.
– ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.