ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅನೀ ಆಖಾಡಾಗಳ ಪೇಶವಾಯಿಗಳ ಸ್ವಾಗತವನ್ನು ಮಾಡಲಾಯಿತು !

ಪೇಶವಾಯಿಗಳ ಸ್ವಾಗತಕ್ಕಾಗಿ ಹಾಕಲಾದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಬಟ್ಟೆಯ ಫಲಕಗಳು

ಹರಿದ್ವಾರ – ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅನೀ ಆಖಾಡಾಗಳ ಎಲ್ಲ ಪೇಶವಾಯಿಗಳನ್ನು ಸ್ವಾಗತಿಸಲಾಯಿತು. ಅದೇ ರೀತಿ ಈ ಆಖಾಡಾಗಳ ಸಾಧು ಸಂತರಿಗೆ ಪುಷ್ಪಹಾರವನ್ನು ಅರ್ಪಿಸಿ ಸನ್ಮಾನಿಸಲಾಯಿತು. ಈ ಪೇಶವಾಯಿಯಲ್ಲಿ ಮಹಾಮಂಡಲೇಶ್ವರ ಮಹಂತರು ಮತ್ತು ನೂರಾರು ಭಕ್ತರು ಪಾಲ್ಗೊಂಡಿದ್ದರು. ಅಖಿಲ ಭಾರತೀಯ ಶ್ರೀ ಪಂಚ ನಿರ್ವಾಣಿ, ನಿರ್ಮೋಹಿ ಮತ್ತು ದಿಗಂಬರ ಆಖಾಡಾಗಳ ಪೇಶವಾಯಿಗಳ ಆರಂಭ ಭೂಪತವಾಲಾ ದುರ್ಗಾದಾಸ ಆಶ್ರಮದಿಂದ ಪ್ರಾರಂಭವಾಗಿ ಬೈರಾಗಿ ಆಖಾಡಾದ ಸ್ಥಳದಲ್ಲಿ ಕೊನೆಗೊಂಡಿತು.