ಕರ್ನಾಟಕದಲ್ಲಿ ಮತಾಂಧ ಮುಸಲ್ಮಾನರಿಂದ ದೇವಸ್ಥಾನದ ಪಾವಿತ್ರ್ಯ ಭಂಗಗೊಳಿಸಿದ ಘಟನೆ !
ಮುಂಬಯಿ – ಕರ್ನಾಟಕದ ಮಂಗಳೂರಿನ ಕೊರಗಜ್ಜ ದೇವಸ್ಥಾನದಲ್ಲಿ ಅತ್ಯಂತ ಖೇದಕರ ಘಟನೆಯು ಬೆಳಕಿಗೆ ಬಂದಿತ್ತು. ನವಾಜ (ಮೃತ), ಅಬ್ದುಲ್ ರಹೀಮ್ ಮತ್ತು ಅಬ್ದುಲ್ ತೌಫಿಕ ಎಂಬ ಮತಾಂಧ ಮುಸಲ್ಮಾನ ಯುವಕರು ಕೊರಗಜ್ಜ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಆಕ್ಷೇಪಾರ್ಹ ವಸ್ತುಗಳನ್ನು ಹಾಕಿ ದೇವಸ್ಥಾನದ ಪಾವಿತ್ರ್ಯವನ್ನು ಭಂಗಗೊಳಿಸಿದ್ದರಿಂದ ಮಂಗಳೂರಿನಲ್ಲಿ ಮಾತ್ರವಲ್ಲ, ದೇಶಾದ್ಯದಂತದ ಹಿಂದೂಗಳಲ್ಲಿ ಆಕ್ರೋಶದ ಅಲೆಯೆದ್ದಿದೆ. ಇದು ಇಂತಹ ಮೊದಲ ಘಟನೆಯಾಗಿರದೇ ಇಂತಹ ಅನೇಕ ಘಟನೆಗಳು ಕರ್ನಾಟಕ ರಾಜ್ಯದಲ್ಲಿ ಬೆಳಕಿಗೆ ಬಂದಿವೆ. ಇದರಿಂದ ಸಮಾಜದಲ್ಲಿ ದ್ವೇಷವನ್ನು ಹರಡಿಸುವ ಉದ್ದೇಶದಿಂದ ಇಂತಹ ಕೃತ್ಯಗಳನ್ನು ಮಾಡುವವರ ವಿರುದ್ಧ ಅತ್ಯಂತ ಕಠಿಣ ಕ್ರಮಕೈಗೊಳ್ಳದಿದ್ದರೆ ಆಡಳಿತವು ಹಿಂದೂಗಳ ರೋಷವನ್ನು ಎದುರಿಸಬೇಕಾಗುವುದು ಎಂದು ಹಿಂದೂ ಜನಜಾಗೃತಿ ಸಮಿತಿಯು ಎಚ್ಚರಿಕೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಪಾವಿತ್ರ್ಯದ ರಕ್ಷಣೆಯಾಗಬೇಕು ಮತ್ತು ಕೊರೊನಾ ಮಹಾಮಾರಿಯ ಆಪತ್ಕಾಲದಲ್ಲಿ ಕಾನೂನು-ಸುವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡ ಬರಬಾರದು ಎಂದು ದೇಶದಾದ್ಯಂತದ ಹಿಂದೂ ದೇವಸ್ಥಾನಗಳಲ್ಲಿ ‘ಹಿಂದೂಯೇತರರಿಗೆ ಮತ್ತು ದೇವರಲ್ಲಿ ಶ್ರದ್ಧೆ ಇಲ್ಲದವರಿಗೆ ಪ್ರವೇಶವನ್ನು ನಿರ್ಬಂಧಿಸಬೇಕು’, ಎಂದು ಹಿಂದೂ ಜನಜಾಗೃತಿ ಸಮಿತಿಯು ದೇವಸ್ಥಾನದ ವಿಶ್ವಸ್ಥರಿಗೆ ಕರೆ ನೀಡಿದೆ. ಸಮಿತಿಯ ವತಿಯಿಂದ ‘ರಾಷ್ಟ್ರಿಯ ಮಂದಿರ-ರಕ್ಷಣಾ ಅಭಿಯಾನ’ ಇದರ ಅಂತರ್ಗತ ಈ ವಿಷಯದಲ್ಲಿ ಅಭಿಯಾನವನ್ನು ನಡೆಸಲಾಗುತ್ತಿದ್ದು ಎಲ್ಲ ದೇವಸ್ಥಾನಗಳ ವಿಶ್ವಸ್ಥರು ಮತ್ತು ಭಕ್ತರು ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆಯವರು ಕರೆ ನೀಡಿದ್ದಾರೆ.
ಶ್ರೀ. ರಮೇಶ ಶಿಂದೆಯವರು ಪತ್ರಿಕಾ ಪ್ರಕಟಣೆಯಲ್ಲಿ ಹೀಗೆಂದರು,
೧. ಮಂಗಳೂರಿನಲ್ಲಿ ಮತಾಂಧರು ದೇವಸ್ಥಾನದಲ್ಲಿ ಎಸಗಿರುವ ಕೃತ್ಯವು ಹಿಂದೂಗಳ ಶ್ರದ್ಧಾಸ್ಥಾನಗಳ ಉದ್ದೇಶಪೂರ್ವಕ ವಿಡಂಬನೆಯಾಗಿದೆ. ಇಂತಹ ಘಟನೆಗಳು ಮುಸಲ್ಮಾನರ ಪ್ರಾರ್ಥನಾಸ್ಥಳಗಳ ಬಗ್ಗೆ ಘಟಿಸಿದ್ದಲ್ಲಿ ಇಷ್ಟರಲ್ಲಿ ದೇಶವೇ ಭುಗಿಲೇಳುತ್ತಿತ್ತು. ಆದರೆ ಹಿಂದೂಗಳು ಸಹಿಷ್ಣುಗಳಾಗಿರುವುದರಿಂದ ಇಲ್ಲಿನ ವಾತಾವರಣವು ಶಾಂತವಾಗಿದೆ. ಈಗ ಮಾತ್ರ ಇಂತಹ ಹಿಂದೂದ್ವೇಷಿ ಕೃತ್ಯಗಳಿಂದ ಅವರಿಗೆ ದೇವಸ್ಥಾನ ಪ್ರವೇಶದ ಮೇಲೆ ನಿರ್ಬಂಧ ಹೇರಬೇಕು.
೨. ನಾವು ಎಲ್ಲ ದೇವಸ್ಥಾನಗಳ ವಿಶ್ವಸ್ಥರಿಗೆ ಕರೆ ನೀಡುವುದೇನೆಂದರೆ ಹಿಂದೂ ದೇವಸ್ಥಾನಗಳ ಹೊರಗೆ ‘ಹಿಂದೂಯೇತರರಿಗೆ ಹಾಗೂ ಶ್ರದ್ಧಾರಹಿತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ’ ಎಂದು ದೊಡ್ಡ ಅಕ್ಷರಗಳಲ್ಲಿ ಫಲಕವನ್ನು ಹಾಕಬೇಕು ಹಾಗೂ ಅದನ್ನು ಬಲವಂತವಾಗಿ ಉಲ್ಲಂಘಿಸುವವರ ವಿರುದ್ಧ ಪೊಲೀಸರಲ್ಲಿ ದೂರನ್ನು ದಾಖಲಿಸಬೇಕು’. ಸಮಿತಿಯು ಈ ಸಂದರ್ಭದಲ್ಲಿ ದೇವಸ್ಥಾನ ವಿಶ್ವಸ್ಥರ ಸಭೆ ನಡೆಸಿ ದೇಶಾದ್ಯಂತ ಜನಜಾಗೃತಿಯನ್ನು ಮಾಡಲಿದೆ.
ಕೊರಗಜ್ಜ ಕ್ಷೇತ್ರದಲ್ಲಿ ಏನಾಗಿತ್ತು !
ಕೊರಗಜ್ಜ ದೇವಸ್ಥಾನಕ್ಕೆ ಕೆಲವು ದಿನಗಳ ಹಿಂದೆ ನವಾಜ, ಅಬ್ದುಲ ಮತ್ತು ತೌಫಿಕ ಎಂಬ ೩ ಜನರು ಹೋಗಿದ್ದರು. ಅವರು ದೇವಸ್ಥಾನದ ಕಾಣಿಕೆಹುಂಡಿಯಲ್ಲಿ ಗರ್ಭನಿರೋಧಕಗಳನ್ನು ಹಾಕಿದ್ದರು. ಹಾಗೆಯೇ ಮೃತ್ಯುವಿನ ಮೊದಲು ನವಾಜ ಎಂಬ ಮತಾಂಧನು ಅನೇಕ ಸಲ ಈ ದೇವಸ್ಥಾನದೊಳಗೆ ಮಲಮೂತ್ರ ವಿಸರ್ಜಿಸಿದ್ದನು. ಅನಂತರ ಕೆಲವೇ ದಿನಗಳಲ್ಲಿ ನವಾಜನು ರಕ್ತವಾಂತಿಯಾಗಿ ಮರಣ ಹೊಂದಿದನು. ಸಾಯುವ ಮೊದಲು ಆತ ‘ಭಗವಾನ ಕೋರಗಜ್ಜನ ಶಾಪವಾಗಿದೆ’, ಎಂದು ಹೇಳಿದ್ದನು. ಅನಂತರ ತೌಫಿಕನಿಗೂ ರಕ್ತ ವಾಂತಿ ಆಗತೊಡಗಿತು. ಸಾವಿನ ಭಯದಿಂದ ಅಬ್ದುಲ್ ಮತ್ತು ತೌಫಿಕ ಇವರು ಅರ್ಚಕರ ಬಳಿಗೆ ಹೋಗಿ ತಪ್ಪೊಪ್ಪಿಕೊಂಡರು. ಅನಂತರ ಅರ್ಚಕರು ಇದನ್ನು ಖಾತ್ರಿ ಮಾಡಿಕೊಂಡು ಪೊಲೀಸರನ್ನು ಕರೆಸಿ ಮತಾಂಧರನ್ನು ಪೊಲೀಸರ ವಶಕ್ಕೊಪ್ಪಿಸಿದರು. ಈ ಬಗ್ಗೆ ಸರ್ವಧರ್ಮಸಮಭಾವದ ಬಾಂಗ್ ನೀಡುವ ಒಬ್ಬನೇ ಒಬ್ಬ ಮುಸಲ್ಮಾನ ನೇತಾರನು ಕಿಂಚಿತ್ತೂ ಖೇದವನ್ನು ವ್ಯಕ್ತಪಡಿಸಲಿಲ್ಲ ಎಂಬುದರತ್ತ ಶ್ರೀ. ಶಿಂದೆಯವರು ಗಮನ ಸೆಳೆದರು.