ಯೋಗಋಷಿ ರಾಮದೇವಬಾಬಾ ಇವರ ಹೇಳಿಕೆಯ ಮೇರೆಗೆ ನಿರ್ಮಾಣವಾದ ವಾದದ ನಂತರ ಈಗ ಬಾಬಾರವರು ಕ್ಷಮೆಯನ್ನು ಕೇಳಿದ್ದಾರೆ; ಆದರೆ ಆಯುರ್ವೇದವನ್ನು ಸತತವಾಗಿ ಟೀಕಿಸುವ, ಕೊರೊನಾದ ಕಾಲದಲ್ಲಿಯೂ ಕ್ರೈಸ್ತ ಮತಾಂತರದ ಕಾರ್ಯಕಲಾಪವನ್ನು ನಡೆಸುವ ‘ಇಂಡಿಯನ್ ಮೆಡಿಕಲ್ ಅಸೋಸಿಯೆಶನ್ (IMA)’ನ ಪ್ರಸ್ತುತ ಅಧ್ಯಕ್ಷರಾದ ಡಾ. ಜಾನ್‌ರೋಜ್ ಆಸ್ಟೀನ್ ಜಯಲಾಲ ಇವರು ಭಾರತೀಯರಲ್ಲಿ ಕ್ಷಮೆಯನ್ನು ಯಾವಾಗ ಕೇಳುವರು ? ನಾವು ‘ಅಲೋಪಥಿ’ಯನ್ನು ವಿರೋಧಿಸುವುದಿಲ್ಲ; ಅಥವಾ ‘ಇಂಡಿಯನ್ ಮೆಡಿಕಲ್ ಅಸೋಸಿಯೆಶನ್’ನ ವಿರುದ್ಧವೂ ಇಲ್ಲ; ಆದರೆ ಡಾ. ಜಯಲಾಲ ಇವರ ಹಿಂದೂವಿರೋಧಿ ಮತ್ತು ಕ್ರೈಸ್ತ ಮತಾಂತರಕ್ಕೆ ಪೂರಕವಾಗಿರುವ ನಿಲುವನ್ನು ತಳೆಯುವುದರ ಬಗ್ಗೆ ಖಂಡಿತವಾಗಿಯೂ ವಿರೋಧಿಸುತ್ತೇವೆ. ಡಾ. ಜಯಲಾಲ ಇವರು ಒಂದು ಸಂದರ್ಶನದಲ್ಲಿ ಕೊರೊನಾ ಸೋಂಕಿನ ಪ್ರಕೋಪವು ಕಡಿಮೆಯಾಗುತ್ತಾ ನಡೆದಿದೆ, ಆದರೆ ಇದರ ಶ್ರೇಯಸ್ಸನ್ನು ವೈದ್ಯಕೀಯ ಸೌಲಭ್ಯ, ಡಾಕ್ಟರುಗಳು, ಕೊವಿಡ್ ಯೋಧರಿಗೆ ನೀಡದೇ ಜಿಸಸ್‌ಗೆ ನೀಡಿದರು. ಇದು ಕೊರೊನಾ ಸೋಂಕಿನಲ್ಲಿ ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡಿ ಕೆಲಸವನ್ನು ಮಾಡಿದವರಿಗೆ ಮಾಡಿದಂತಹ ಅಪಮಾನವಾಗಿದೆ. ಈ ಪ್ರಕರಣದಲ್ಲಿ ಡಾ. ಜಯಲಾಲ ಇವರು ಕ್ಷಮೆಯನ್ನು ಕೇಳಲೇ ಬೇಕು ಇಲ್ಲದಿದ್ದರೆ ತಮ್ಮನ್ನು ‘ಕ್ರೈಸ್ತ ಧರ್ಮಪ್ರಸಾರಕರು’ ಎಂದು ಘೋಷಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ಬೇಡಿಕೆಯನ್ನಿಟ್ಟಿದೆ. ಹಾಗೆಯೇ ಡಾ. ಜಯಲಾಲ ಇವರು ಕ್ಷಮೆ ಕೇಳದಿದ್ದರೆ ಕೇಂದ್ರೀಯ ಮಂತ್ರಿ ಡಾ. ಹರ್ಷವರ್ಧನ ಇವರು ಡಾ. ಜಯಲಾಲ ಇವರಿಗೆ ಕ್ಷಮೆ ಕೇಳುವಂತೆ ಬೆಂಬೆತ್ತಬೇಕು, ಎಂಬ ಕರೆಯನ್ನೂ ಸಮಿತಿಯು ನೀಡಿದೆ.
ಕಳೆದ ವರ್ಷ ಡಿಸೆಂಬರ್ 2020 ರಲ್ಲಿ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದಾಗ ಡಾ. ಜಯಲಾಲ ಇವರ ‘ಕ್ರಿಶ್ಚಿಯಾನಿಟಿ ಟುಡೆ’ಗೆ ನೀಡಿದ ಸಂದರ್ಶನವು ಮಾರ್ಚ್ 30, 2021 ರಂದು ಮುದ್ರಿತವಾಗಿದೆ. ಈ ಸಂದರ್ಶನದಲ್ಲಿ ಅನೇಕ ಆಘಾತಕಾರಿ ಹೇಳಿಕೆಗಳನ್ನು ನೀಡಲಾಗಿದೆ. ಇದರಿಂದ ಅವರು ವೈದ್ಯಕೀಯವನ್ನು ವಿದ್ಯಾರ್ಥಿಗಳು, ವೈದ್ಯರು ಮತ್ತು ರೋಗಿಗಳನ್ನು ಮತಾಂತರಗೊಳಿಸುವ ಅವಕಾಶವೆಂದು ನೋಡುತ್ತಾರೆ ಎಂದು ಕಂಡುಬರುತ್ತದೆ. ಅವರು ಹೇಳುತ್ತಾರೆ, ಎಲ್ಲರಿಗೂ ಜೀಸಸ್ ಪ್ರೀತಿಯನ್ನು ನೀಡಿ ಮತ್ತು ‘ಜೀಸಸ್ ನಿಮ್ಮನ್ನು ರಕ್ಷಿಸುತ್ತಾನೆ’ ಎಂಬ ವಿಶ್ವಾಸವನ್ನು ಎಲ್ಲರಿಗೆ ನೀಡಿ ! ಚರ್ಚ್ ಮತ್ತು ಕ್ರೈಸ್ತರ ಸಹಾನುಭೂತಿಯಿಂದಾಗಿಯೇ ವಿಶ್ವದಲ್ಲಿ ಈ ಹಿಂದೆ ಬಂದಿದ್ದ ಅನೇಕ ಸಾಂಕ್ರಾಮಿಕ ಮತ್ತು ರೋಗಗಳಿಗೆ ಚಿಕಿತ್ಸೆ ಸಿಕ್ಕಿತ್ತು ! ಅವರು ಐಎಂಎಯ ಅಧ್ಯಕ್ಷೀಯ ಭಾಷಣದಲ್ಲಿ ‘ಸರ್ವಶಕ್ತಿವಂತ ಈಶ್ವರನು ಆ ಜೀಸಸ್ ಕ್ರೈಸ್ತನು ನೀಡಿರುವ ನೀಡಿದ ಉಡುಗೊರೆಯಾಗಿದ್ದಾನೆ ಮತ್ತು ನಾಳೆ ಏನಾಗುತ್ತದೆಯೋ ಅದು ಸಹ ಅವನದ್ದೇ ಉಡುಗೊರೆಯಾಗಿರುತ್ತದೆ’ ಎಂದು ಹೇಳಿದರು. ಮತ್ತೊಂದು ಸಂದರ್ಶನದಲ್ಲಿ, ಜಾಗತಿಕ ಸಾಂಕ್ರಾಮಿಕ ಹರಡಿದರೂ ಕ್ರೈಸ್ತ ಧರ್ಮವು ಬೆಳೆಯುತ್ತಲೇ ಇದೆ ಎಂದು ಹೇಳಿದರು. ಈ ಹೇಳಿಕೆಯು ಮತಾಂತರಕ್ಕೆ ಅವರ ಬೆಂಬಲವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದೇ ರೀತಿ ಅವರು ‘ಹಗ್ಗೈ ಇಂಟರ್ನ್ಯಾಷನಲ್’ನಲ್ಲಿಯೂ ಸಂದರ್ಶನ ನೀಡಿದ್ದರು.
ಈ ಸಂದರ್ಶನದಲ್ಲಿ ಆಯುರ್ವೇದ ಮತ್ತು ಕೇಂದ್ರ ಸರಕಾರವನ್ನು ಟೀಕಿಸುವಾಗ ಡಾ. ಜಯಲಾಲ ಅವರು, ಮೋದಿ ಸರಕಾರದ ಸಾಂಸ್ಕೃತಿಕ ಮೌಲ್ಯಗಳು ಮತ್ತು ಸಾಂಪ್ರದಾಯಿಕ ನಂಬಿಕೆಗಳು ಹಿಂದುತ್ವವನ್ನು ಆಧರಿಸಿವೆ ಆದ್ದರಿಂದ ಮೋದಿ ಸರಕಾರವು ಆಯುರ್ವೇದವನ್ನು ನಂಬುತ್ತದೆ. ಆಯುರ್ವೇದದ ಮೂಲವು ಸಂಸ್ಕೃತದಲ್ಲಿದೆ ಮತ್ತು ಸಂಸ್ಕೃತವು ಹಿಂದುತ್ವದ ಭಾಷೆಯಾಗಿದೆ. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಡಾ. ಜಯಲಾಲ್ ತಮ್ಮ ಹಿಂದುದ್ವೇಷ ಮತ್ತು ಸಂಸ್ಕೃತ ದ್ವೇಷವನ್ನು ತೋರಿಸಿದ್ದಾರೆ. ಇಂತಹ ಧಾರ್ಮಿಕ ದ್ವೇಷ ಹೊಂದಿರುವ ವ್ಯಕ್ತಿಗೆ ಪ್ರಜಾಪ್ರಭುತ್ವ ದೇಶದಲ್ಲಿ ಇಷ್ಟು ದೊಡ್ಡ ಸಂಸ್ಥೆಯ ಅಧ್ಯಕ್ಷರಾಗಲು ಯಾವುದೇ ಹಕ್ಕಿಲ್ಲ. ಕ್ರೈಸ್ತ ಧರ್ಮಪ್ರಚಾರಕ ಡಾ. ಜಯಲಾಲ ಅವರನ್ನು ತಕ್ಷಣವೇ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿ ಮತ್ತು ಮತಾಂತರದ ಪಿತೂರಿಯನ್ನು ಹಿಮ್ಮೆಟ್ಟಿಸಿ ಎಂದು ‘ಐಎಮ್‌ಎ’ಯ ಎಲ್ಲಾ ವೈದ್ಯರಿಗೆ ಸಮಿತಿಯು ಕರೆ ನೀಡಿದೆ.