ಚಿಂತೆ ಅಥವಾ ಭಯ (Anxiety/Fear/Panic) ಇವುಗಳಿಗೆ ಹೋಮಿಯೋಪಥಿ ಔಷಧಗಳ ಮಾಹಿತಿ
ಚಿಂತೆ ಮತ್ತು ಭಯ ಇವು ಮಾನವನ ಸಾಮಾನ್ಯ ಭಾವನೆಗಳಾಗಿವೆ; ಆದರೆ ಯಾವಾಗ ಜೀವನದಲ್ಲಿನ ಸಾಮಾನ್ಯ ಪರಿಸ್ಥಿತಿಯಲ್ಲಿಯೂ ಸತತವಾಗಿ ಹಾಗೂ ತುಂಬಾ ಚಿಂತೆ ಅಥವಾ ಭಯ ಆಗುತ್ತಿದ್ದರೆ ಹಾಗೂ ಅದರಿಂದ ಎದೆ ಬಡಿತ, ಬೆವರು ಬರುವುದು, ಉಸಿರಾಟದ ವೇಗ ಹೆಚ್ಚಾಗುವುದು, ಇಂತಹ ಲಕ್ಷಣಗಳು ಕಾಣಿಸುತ್ತಿದ್ದರೆ, ಅದಕ್ಕೆ ಉಪಚಾರ ಮಾಡುವ ಅವಶ್ಯಕತೆಯಿದೆ.