‘ಜೀರ್ಣವಾಗಲು ಹಗುರವಾಗಿರುತ್ತದೆ, ಆದುದರಿಂದ ಕೇವಲ ಅನ್ನವನ್ನೇ ತಿನ್ನಿರಿ….’ ಎಂಬ ಸಲಹೆಯನ್ನು ನೀವು ಎಂದಾದರು ಯಾರಿಂದಾದರು ಕೇಳಿರಬಹುದು. ಅನ್ನದ ಪರಿಕಲ್ಪನೆಯು ವಿಶೇಷವಾಗಿ ಭಾರತೀಯರಾದ ನಮಗೆ ತುಂಬಾ ಪ್ರಿಯವಾಗಿದೆ. ಒಗ್ಗರಣೆ ಅನ್ನ, ಖಿಚಡಿ ಅನ್ನ, ಸಿಹಿ ಅನ್ನ, ಪುಲಾವ್ ಈ ಎಲ್ಲವುಗಳ ಜೊತೆಗೆ ಅತ್ಯಧಿಕ ಇಷ್ಟವಾದ ಬಿಸಿ ಬಿಸಿ ಅನ್ನ, ತವ್ವೆ ಮತ್ತು ತುಪ್ಪ !
ಪಥ್ಯದ ಊಟಕ್ಕೆಂದು ಅಥವಾ ಪ್ರವಾಸದಿಂದ ಬಂದ ನಂತರ ಮಾಡಲು ಸುಲಭವೆಂದು ‘೨ ನಿಮಿಷಗಳಲ್ಲಿ ಕುಕ್ಕರ್ ಇಡುತ್ತೇನೆ…’, ಈ ಸೌಲಭ್ಯವು ಗೃಹಿಣಿಯರಿಗೆ ಒಳ್ಳೆಯದೆನಿಸುತ್ತದೆ. ಆಯುರ್ವೇದದಲ್ಲಿ ಅಕ್ಕಿಯನ್ನು ಬೇಯಿಸಿ ನಾವು ಯಾವ ಅನ್ನವನ್ನು ಮಾಡುತ್ತೇವೆಯೋ, ಅದಕ್ಕೆ ‘ಭಕ್ತ’ ಅಥವಾ ‘ಓದನ್’ ಎನ್ನುತ್ತಾರೆ. ಅನ್ನವನ್ನು ಮಾಡುವಾಗ ಕನಿಷ್ಟ ಒಂದು ವರ್ಷ ಹಳೆಯ ಅಕ್ಕಿಯನ್ನು ತೊಳೆದು, ಬೇಯಿಸಿ, ಅದರಲ್ಲಿನ ನೀರನ್ನು (ಗಂಜಿ) ತೆಗೆದು ಮಾಡಿದ ಅನ್ನವು ಅಪೇಕ್ಷಿತವಾಗಿದ್ದು ಅದು ಗುಣದಿಂದ ಹಗುರ ಇರುತ್ತದೆ. ನೀರನ್ನು ತೆಗೆದಿರುವುದರಿಂದ ಅದರಲ್ಲಿನ ಪಿಷ್ಟಮಯ ಪದಾರ್ಥ ಕಡಿಮೆಯಾಗುತ್ತದೆ ಮತ್ತು ಅದು ಜೀರ್ಣವಾಗಲು ಹಗುರವಾಗುತ್ತದೆ.
೧. ಕುಕ್ಕರನಲ್ಲಿನ ಅನ್ನವು ಜೀರ್ಣವಾಗಲು ಜಡ
ಕುಕ್ಕರನಲ್ಲಿನ ಅನ್ನವು ಜೀರ್ಣವಾಗಲು ಜಡವಾಗಿರುತ್ತದೆ, ಅದು ಕಫವನ್ನು ಹೆಚ್ಚಿಸುತ್ತದೆ. ತಿಂಗಳ ದಿನಸಿಗಳಲ್ಲಿ ತರಲಾಗುವ ಮನೆಗಳಲ್ಲಿ ಹೊಸ ಅಕ್ಕಿಯ ಅನ್ನವನ್ನು ಮಾಡಲಾಗುತ್ತದೆ, ಅದೂ ಸಹ ಜಡವಾಗಿರುತ್ತದೆ ! ಅದರಲ್ಲಿ ಸ್ನಿಗ್ಧತೆ ಹೆಚ್ಚು ಇರುತ್ತದೆ, ಹಾಗೆಯೇ ಅದು ಜೀರ್ಣವಾಗಲು ಜಡವಾಗಿರುತ್ತದೆ. ೧೫ ನಿಮಿಷ ತೊಳೆದು ಇಟ್ಟಿರುವ ಅಕ್ಕಿಯನ್ನು ಇಬ್ಬರಿಗೆ ಸಾಕಾಗುವಷ್ಟು ಪಾತ್ರೆಯಲ್ಲಿಟ್ಟು ಬೇಯಿಸಲು ಹೆಚ್ಚೆಂದರೆ ೧೫ ನಿಮಿಷಗಳು ಬೇಕಾಗುತ್ತವೆ. ಆದ್ದರಿಂದ ಇಷ್ಟು ಸಮಯ ಬಹಳವೇನಲ್ಲ.
೨. ಹಳೆಯ ಅನ್ನದ ಗಂಜಿಯನ್ನು ಯಾವಾಗ ಸೇವಿಸಬೇಕು ?
ಜ್ವರ ಬಂದಾಗ ‘ಕೇವಲ ಗಂಜಿಯನ್ನು ಕುಡಿ’, ಎಂದು ಮನೆಮನೆಗಳಲ್ಲಿ ಹೇಳಲಾಗುತ್ತದೆ; ಆದರೆ ಕಫದ ರೋಗಿಗಳಿದ್ದರೆ, ಅವರಿಗೆ ಹಸಿ ಕೆಮ್ಮು, ಜಡತ್ವ, ತಲೆಯಲ್ಲಿ ಕಫ ತುಂಬಿದಂತೆ ಅನಿಸುತ್ತಿದ್ದರೆ, ಅವರಿಗೆ ಸಾಮಾನ್ಯವಾಗಿ ಅನ್ನದ ಗಂಜಿಯನ್ನು ಕೊಡಬಾರದು. ಸಂಕ್ಷಿಪ್ತವಾಗಿ ಹೇಳುವುದಾದರೆ ಕನಿಷ್ಟ ಒಂದು ವರ್ಷ ಹಳೆಯ ಅಕ್ಕಿಯನ್ನು, ತೊಳೆದು, ಪಾತ್ರೆಯಲ್ಲಿ ಬೇಯಿಸಿದ, ಗಂಜಿಯನ್ನು ತೆಗೆದ, ಅನ್ನವನ್ನು ಕೊಡಬೇಕು. ನಾವು ವ್ಯಾಯಾಮವನ್ನು ಮಾಡದಿದ್ದರೆ ಕುಕ್ಕರಿನ ಅನ್ನವು ಅನೇಕ ಸ್ತರಗಳಲ್ಲಿ ತೊಂದರೆಯನ್ನುಂಟು ಮಾಡುವುದರಿಂದ ಅದನ್ನು ತಿನ್ನಬಾರದು.
೩. ತಂಗಳು ಅನ್ನವನ್ನು ತಿನ್ನುವುದು ಪಿತ್ತಕರ !
ಅನ್ನವನ್ನು ಪದೇಪದೇ ಬಿಸಿ ಮಾಡಿ ತಿನ್ನಬಾರದು. ಅಕ್ಕಿಯಲ್ಲಿ ಒಂದು ವಿಶೇಷ ಪ್ರಕಾರದ ‘ಬ್ಯಾಕ್ಟೇರಿಯಾ ಸ್ಪೋರ್’ (ಜೀವಾಣು ಬೀಜಾಣು)ಗಳಿರುತ್ತವೆ, ಅವು ಮೊದಲಬಾರಿ ಅನ್ನವನ್ನು ಬೇಯಿಸುವಾಗ ಒಡೆಯುವುದಿಲ್ಲ. ನೀವು ಯಾವಾಗ ಬೇಯಿಸಿದ ಅನ್ನವನ್ನು ಹಾಗೆಯೇ ಕೋಣೆಯ ತಾಪಮಾನದಲ್ಲಿ ಇಟ್ಟು ಬಿಸಿ ಮಾಡುತ್ತಿರೋ, ಆಗ ಈ ಜೀವಾಣುಗಳು ಹೊರಗೆ ಬಂದು ತಮ್ಮ ಕೆಲಸವನ್ನು ಮಾಡತೊಡಗುತ್ತವೆ. ನೀವು ಮಾಡಿದ ಅನ್ನವನ್ನು ರಾತ್ರಿ ಊಟ ಮಾಡದಿದ್ದರೆ ಮತ್ತು ಶೀತಕಪಾಟಿನಲ್ಲಿ (ಫ್ರಿಜ್‌ನಲ್ಲಿ) ಇಟ್ಟು ಮರುದಿನ ಬಿಸಿ ಮಾಡಿದರೂ ಮತ್ತೇ ಹೀಗೆಯೇ ಆಗುತ್ತದೆ. ನಮ್ಮ ಮೂಗಿಗೆ ಅದರ ವಾಸನೆ ಬರದಿದ್ದರೂ ಅದರಲ್ಲಿನ ರಾಸಾಯನಿಕ ಬದಲಾವಣೆಗಳಿಂದ ಅದರಲ್ಲಿ ಆಮ್ಲತೆ ಬಂದು ಅದು ಪಿತ್ತವನ್ನು ಹೆಚ್ಚಿಸುತ್ತದೆ. ಒಗ್ಗರಣೆ ಅನ್ನ, ಪುಲಾವ್, ಉಪಹಾರಗೃಹಗಳಲ್ಲಿ ದೊರಕುವ ಬಿಸಿ ಮಾಡಿದ ಅನ್ನ, ಇಡೀರಾತ್ರಿ ಹೊರಗೆ ಇಟ್ಟು ಬೆಳಗ್ಗೆ ಬಿಸಿ ಮಾಡಿ ತಿಂದ ಅನ್ನವು ತೊಂದರೆದಾಯಕವೇ ಆಗಿದೆ ! ಯಾವುದೇ ತಂಗಳು ಪದಾರ್ಥಗಳಲ್ಲಿ ಇದೇ ಗುಣ ಪ್ರಾಪ್ತವಾಗುತ್ತದೆ ಮತ್ತು ಅದರಲ್ಲಿಯೂ ಅನ್ನದ ಬಗ್ಗೆ ಅದು ತಂಗಳು ಅಥವಾ ಮತ್ತೇ ಬಿಸಿ ಮಾಡಿದ ಅನ್ನವನ್ನು ತಿನ್ನುವುದು, ಇದು ಹೊಟ್ಟೆಯ ತಕರಾರುಗಳಿಗೆ ಕರೆ ನೀಡಿದಂತಾಗುತ್ತದೆ.
‘ಡಾಕ್ಟರ್ ಈ ತೊಂದರೆಯು ಒಮ್ಮಿಂದೊಮ್ಮೆಲೆ ಹೇಗೆ ಪ್ರಾರಂಭವಾಯಿತು ?’, ಈ ಪ್ರಶ್ನೆಗೆ ಉತ್ತರ ವರ್ಷಾನುಗಟ್ಟಲೆ ನಮಗೆ ತಿಳಿಯದೇ ಇರುವ ಕೆಲವು ರೂಢಿಗಳಲ್ಲಿ ಇರುತ್ತದೆ. ಶರೀರದಲ್ಲಿ ದಾಹವನ್ನು ಹೆಚ್ಚಿಸುವ ಆಹಾರ-ವಿಹಾರ, ಆಕಸ್ಮಿಕವಾಗಿ ಉಂಟಾಗುವ ಅಲರ್ಜಿ, ಚರ್ಮದ ಕಾಯಿಲೆ ಅಥವಾ ದೀರ್ಘಕಾಲದ ಅರ್ಬುದ ರೋಗದಂತಹ ದೊಡ್ಡ ಕಾಯಿಲೆಗಳಿಗೆ ಆಮಂತ್ರಣವಾಗಿರುತ್ತವೆ.’
– ವೈದ್ಯೆ ಸ್ವರಾಲಿ ಶೇಂಡ್ಯೆ, ಯಶಪ್ರಭಾ ಆಯುರ್ವೇದ
(ಆಧಾರ : ವೈದ್ಯೆ ಸ್ವರಾಲಿ ಶೇಂಡ್ಯೆ ಇವರ ಫೇಸಬುಕ್‌ನಿಂದ)