Pune Saudi Arabia Flag Display : ಪುಣೆಯ ಕೊಂಡ್ವಾ ಪ್ರದೇಶದಲ್ಲಿ ಸೌದಿ ಅರೇಬಿಯಾದ ಧ್ವಜ ಹಾರಾಟ!

‘ಸುದರ್ಶನ ಮರಾಠಿ’ಯ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್!

ಪುಣೆ – “ಕೊಂಡ್ವಾದಲ್ಲಿ ಸೌದಿ ಅರೇಬಿಯಾದ ಧ್ವಜ ಪ್ರದರ್ಶನ ! ಕೊಂಡ್ವಾ ಜಿಹಾದಿಗಳ ಕೇಂದ್ರವಾಗುತ್ತಿದೆಯೇ?” ಎಂಬ ಬರಹವು ಸುದರ್ಶನ ಮರಾಠಿಯ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪ್ರಸಾರವಾಗಿದೆ. ಇದರಲ್ಲಿ ಕೊಂಡ್ವಾದಲ್ಲಿ ಸೌದಿ ಅರೇಬಿಯಾದ ಧ್ವಜ ಹಾರಾಡುತ್ತಿರುವುದು ಕಂಡುಬರುತ್ತದೆ. ಕೊಂಡ್ವಾದ ಪರಿಸ್ಥಿತಿ ಗಂಭೀರವಾಗಿದೆ. ಸಾಮಾಜಿಕ ಮಾಧ್ಯಮದ ಕೆಲವು ಬಳಕೆದಾರರು ಈ ಘಟನೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಕೊಂಡ್ವಾ ‘ಮಿನಿ ಪಾಕಿಸ್ತಾನ’ ಎಂದು ಹೇಳಿದ್ದಾರೆ. ಪುಣೆಯ ನಾಗರಿಕರು ಕೊಂಡ್ವಾವನ್ನು ‘ಮಿನಿ ಪಾಕಿಸ್ತಾನ’ ಎಂದು ಕರೆಯುತ್ತಾರೆ, ಇದು ವಾಸ್ತವ ಸಂಗತಿಯಾಗಿದೆ. ಇಲ್ಲಿ ಭಯೋತ್ಪಾದಕರ ‘ಸ್ಲೀಪರ್ ಸೆಲ್’ (ಸ್ಲೀಪರ್ ಸೆಲ್ ಎಂದರೆ ನಾಗರಿಕರೊಂದಿಗೆ ವಾಸಿಸುತ್ತಾ ಭಯೋತ್ಪಾದಕರಿಗೆ ಸಹಾಯ ಮಾಡುವ ಜನರ ಗುಂಪನ್ನು ರಚಿಸುವುದು) ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆಯ ವರದಿಯಾಗಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಕೊಂಡ್ವಾ ಕೇಂದ್ರಸ್ಥಾನವಾಗಿದೆ.

ಸಂಪಾದಕೀಯ ನಿಲುವು

ಈ ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಪೊಲೀಸರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರನ್ನು ಸೌದಿ ಅರೇಬಿಯಾಕ್ಕೆ ಗಡಿಪಾರು ಮಾಡಬೇಕು!