ಸದ್ಯ ಬೇಸಿಗೆ ಆರಂಭವಾಗಿದೆ. ನಾವು ಎಲ್ಲೇ ಹೋದರೂ ನೀರಿನ ಬಾಟಲಿಯನ್ನು ನಮ್ಮೊಂದಿಗೆ ತೆಗೆದುಕೊಂಡು ಹೋಗುತ್ತೇವೆ. ಜನರು ಪುನಃ ಪುನಃ ಬಳಕೆ ಮಾಡಬಹುದಾದ ಬಾಟಲಿಗಳನ್ನು ಸುರಕ್ಷಿತವೆಂದು ನಂಬುತ್ತಾರೆ, ಆದುದರಿಂದ ಅವರು ಅದರಿಂದ ನೀರು ಕುಡಿಯುತ್ತಾರೆ ಮತ್ತು ಅವರು ಅದನ್ನು ಪ್ರತಿದಿನ ಸ್ವಚ್ಛಗೊಳಿಸುವುದೂ ಇಲ್ಲ. ಇದರಿಂದ ಬಾಟಲಿಯ ಒಳಗೆ ಜೀವಾಣುಗಳು (ಬ್ಯಾಕ್ಟೆರಿಯಾ) ಹೆಚ್ಚಾಗುತ್ತವೆ. ಆದುದರಿಂದ ನಾವು ಅನಾರೋಗ್ಯ ಪೀಡಿತರಾಗುತ್ತೇವೆ. ಅಮೇರಿಕದ ‘ವಾಟರ್‌ಫಿಲ್ಟರ್‌ಗುರು ಡಾಟ್ ಕಾಮ್’ನ ಸಂಶೋಧನೆಯಲ್ಲಿ, ‘ಮರುಬಳಕೆ ಮಾಡಲಾಗುವ ನೀರಿನ ಬಾಟಲಿಯಲ್ಲಿ ಶೌಚಾಲಯದ ಆಸನಕ್ಕಿಂತ (‘ಟಾಯಲೆಟ್ ಸೀಟ್’ಗಿಂತ) ೪೦ ಸಾವಿರ ಪಟ್ಟು ಹೆಚ್ಚು ಜೀವಾಣುಗಳು ಇರುತ್ತವೆ’, ಎಂದು ಗಮನಕ್ಕೆ ಬಂದಿದೆ. ಯಾರು ನೀರಿನ ಬಾಟಲಿಯನ್ನು ಒಂದೆರಡು-ಸಲ ಸ್ವಚ್ಛ ತೊಳೆದು ತುಂಬುತ್ತಾರೆಯೋ ಮತ್ತು ಯಾರಿಗೆ ‘ಬಾಟಲಿ ಸ್ವಚ್ಛ ಇದೆ’, ಎಂದು ಅನಿಸುತ್ತದೆಯೋ, ಅವರು ಈ ಲೇಖನದಲ್ಲಿ ಕೊಡಲಾದ ಅಂಶಗಳನ್ನು ಖಂಡಿತ ಗಮನಕೊಟ್ಟು ಓದಬೇಕು.
೧. ಬಾಟಲಿಯಲ್ಲಿ ಪಾತ್ರೆಗಳನ್ನು ತೊಳೆಯುವ ಸಿಂಕ್‌ಗಿಂತ ಎರಡು ಪಟ್ಟು ಬ್ಯಾಕ್ಟೇರಿಯಾಗಳು ಇರುತ್ತವೆ
ಅಮೇರಿಕದ ‘ವಾಟರ್‌ಫಿಲ್ಟರ್‌ಗುರು ಡಾಟ್ ಕಾಮ್’ನ ಸಂಶೋಧಕರ ದಳವು ಮರುಬಳಕೆಯ ನೀರಿನ ಬಾಟಲಿಗಳ ಸ್ವಚ್ಛತೆಯ ಪರೀಕ್ಷಣೆ ಮಾಡಿತು. ಅವರು ಬಾಟಲಿಯ ಎಲ್ಲ ಭಾಗ ಗಳ, ಅಂದರೆ ಅದರ ಮೇಲಿನ ಭಾಗ, ಮುಚ್ಚಳ ಮತ್ತು ಬಾಯಿ ಇವುಗಳನ್ನು ೩ ಬಾರಿ ಪರಿಶೀಲಿಸಿತು. ಈ ಸಂಶೋಧನೆಗನುಸಾರ ಬಾಟಲಿಯ ಮೇಲೆ ೨ ರೀತಿಯ ಜೀವಾಣುಗಳು ಕಂಡು ಬಂದವು, ಅದರಲ್ಲಿ ‘ಗ್ರೆಮ್-ನಕಾರಾತ್ಮಕ ಜೀವಾಣು’ (ಗ್ರೆಮ ನೆಗೆಟಿವ ಬ್ಯಾಕ್ಟೇರಿಯಾ) ಮತ್ತು ‘ಬ್ಯಸಿಲಸ್ ಬ್ಯಾಕ್ಟೇರಿಯಾ’ (ಸೂಕ್ಷ್ಮ ಜೀವಾಣು) ಇವುಗಳ ಸಮಾವೇಶವಿದೆ.
ಗ್ರ್ಯಾಮ-ನಕಾರಾತ್ಮಕ (ಗ್ರ್ಯಾಮ-ನೆಗೆಟಿವ್) ಜೀವಾಣುಗಳು ವಿವಿಧ ರೋಗಗಳಿಗೆ ಕಾರಣವಾಗುತ್ತವೆ, ಮತ್ತು ‘ಬ್ಯಸಿಲಸ್ ಬ್ಯಾಕ್ಟೇರಿಯಾ’ದಿಂದ ‘ಗ್ಯಾಸ್ಟ್ರೋಯಿಂಟೆಸ್ಟಾಯಿನಲ್’ನಿಂದಾಗಿ (ಜಠರ ಮತ್ತು ಕರುಳು ಇವುಗಳಿಗೆ ಸಂಬಂಧಿಸಿದ) ಸಮಸ್ಯೆಗಳು ಉದ್ಭವಿಸಬಹುದು. ಸಂಶೋಧನೆಯಲ್ಲಿ ಬಾಟಲಿಯನ್ನು ಅಡುಗೆ ಮನೆಯಲ್ಲಿನ ಇತರ ವಸ್ತುಗಳೊಂದಿಗೆ ತುಲನೆ ಮಾಡಿದಾಗ, ಬಾಟಲಿಗಳಲ್ಲಿ ಪಾತ್ರೆ ತೊಳೆಯುವ ಸಿಂಕ್‌ಗಿಂತ ಎರಡು ಪಟ್ಟು ಜಂತು(ಬ್ಯಾಕ್ಟೇರಿಯಾ)ಗಳಿರುತ್ತವೆ, ಎಂಬುದು ಕಂಡು ಬಂದಿತು.
೨. ನೀರಿನ ಬಾಟಲಿಯನ್ನು ಪ್ರತಿದಿನ ತೊಳೆಯಬೇಕೇ ?
ನಾವು ಮನೆಯಲ್ಲಿ ಯಾವ ರೀತಿಯಲ್ಲಿ ಇತರ ಪಾತ್ರೆಗಳನ್ನು ಬಳಸುತ್ತೇವೆಯೋ, ಅದೇ ಪದ್ಧತಿಯಲ್ಲಿ ಬಾಟಲಿಯನ್ನು ಬಳಸಬೇಕು. ಬೇಸಿಗೆಯಲ್ಲಿ ಬ್ಯಾಕ್ಟೇರಿಯಾ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ; ಆದರೆ ಇದರ ಅರ್ಥ ಬೇಸಿಗೆಯಲ್ಲಿಯೇ ಮಾತ್ರ ಹೆಚ್ಚಾಗುತ್ತವೆ ಎಂದಲ್ಲ, ಆದರೆ ಯಾವುದೇ ಋತುವಿನಲ್ಲಿ ನಾವು ನೀರಿನ ಬಾಟಲಿಯನ್ನು ಬಳಸಿದರೂ ಅದನ್ನು ಸ್ವಚ್ಛ ಮಾಡಲೇ ಬೇಕು. ಸಾಧ್ಯವಿದ್ದರೆ ಕೆಲವೊಮ್ಮೆ ಬೇಸಿಗೆಯಲ್ಲಿ ಬಿಸಿಲಿನಲ್ಲಿ ಒಣಗಲು ಇಡಬೇಕು, ಅದರಿಂದಾಗಿ ಅದರಿಂದ ಬರುವ ವಾಸನೆ ದೂರವಾಗುತ್ತದೆ ಮತ್ತು ಅದರಲ್ಲಿರುವ ಜೀವಾಣುಗಳು ನಾಶವಾಗುತ್ತವೆ. ಅಮೇರಿಕದಲ್ಲಾದ ಸಂಶೋಧನೆಯಲ್ಲಿ, ನೀರಿನ ಬಾಟಲಿಯನ್ನು ದಿನದಲ್ಲಿ ಕನಿಷ್ಠ ಒಂದು ಬಾರಿ ಸಾಬೂನಿನಿಂದ, ಬಿಸಿ ನೀರಿನಿಂದ ಅಥವಾ ವಾರದಲ್ಲಿ ಒಂದು ಬಾರಿಯಾದರೂ ಸ್ವಚ್ಛ ಮಾಡುವುದು ಆವಶ್ಯಕ’, ಎಂದು ಸೂಚಿಸಲಾಗಿದೆ.
೩. ಯಾವ ಬಾಟಲಿಯಲ್ಲಿ ನೀರನ್ನು ಸಂಗ್ರಹಿಸಿಡಬೇಕು ?
ನೀರಿನ ಬಾಟಲಿಗಳ ಬಗ್ಗೆ ಮಾಡಿದ ಸಂಶೋಧನೆಯಲ್ಲಿ, ‘ಗಾಜಿನ ಬಾಟಲಿಗಳು ಹೆಚ್ಚು ಸುರಕ್ಷಿತವಾಗಿವೆ; ಆದರೆ ಅವುಗಳನ್ನು ಜೊತೆಗೆ ಇಟ್ಟುಕೊಳ್ಳುವುದು ಅಷ್ಟು ಸುಲಭವಲ್ಲ ಎಂದು ಕಂಡು ಬಂದಿದೆ. ಆದುದರಿಂದ ನೀರು ಕುಡಿಯಲು ಪ್ರತ್ಯೇಕ ಲೋಟ (ಗ್ಲಾಸ್) ಇರುವಂತಹ ನೀರಿನ ಬಾಟಲಿ ತೆಗೆದುಕೊಳ್ಳಬೇಕು, ಅಥವಾ ಅದಕ್ಕೆ ನೀರು ಕುಡಿಯಲು ಬಾಯಿ ಇರಬಾರದು.
೪. ನೀರಿನ ಬಾಟಲಿಯಲ್ಲಿರುವ ಜೀವಾಣುಗಳ ಪ್ರಭಾವ ಅಪಾಯಕಾರಿ
ನೀರಿನ ಬಾಟಲಿಯಲ್ಲಿರುವ ಜೀವಾಣುಗಳ ಪ್ರಭಾವ ಅಪಾಯಕಾರಿಯಾಗಿರುತ್ತದೆ.
ಅ. ಸೂಕ್ಷ್ಮಜೀವನಾಶಕ (ಎಂಟಿಬಯಾಟಿಕ್) ತೆಗೆದುಕೊಳ್ಳುವವರ ಮೇಲೆ ಔಷಧದ ಪರಿಣಾಮವಾಗುವುದಿಲ್ಲ.
ಆ. ಹೊಟ್ಟೆನೋವು, ಪಿತ್ತ (ಯಾಸಿಡಿಟಿ) ಹೆಚ್ಚಳ, ಭೇದಿ.
ಇ. ರಕ್ತದೊತ್ತಡ ಹೆಚ್ಚು ಅಥವಾ ಕಡಿಮೆ ಆಗಬಹುದು.
ಈ. ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ.
ಉ. ವಾಂತಿ, ಹೊಟ್ಟೆ ತೊಳೆಸುವುದು ಇವುಗಳಂತಹ ಸಮಸ್ಯೆಗಳು.
ಊ. ಚಿಕ್ಕ ಹುಡುಗಿಯರಲ್ಲಿ ಸಂಪ್ರೇರಕಗಳಲ್ಲಿ (‘ಹಾರ್ಮೋನ್ಸ್’ ಗಳಲ್ಲಿ) ಅಕಾಲಿಕ ಬದಲಾವಣೆಯಾಗಬಹುದು.
ಎ. ಪದೇಪದೇ ಮೂತ್ರಮಾರ್ಗದ ಸೋಂಕಿನ (ಇನಫೆಕ್ಷನ್) ಅಪಾಯ.
೫. ಶೀತಕಪಾಟಿನಲ್ಲಿ ಇಟ್ಟ ಬಾಟಲಿಗಳಲ್ಲಿಯೂ ಜೀವಾಣುಗಳು ಇರುತ್ತವೆಯೇ ?
ಬಹಳಷ್ಟು ಜನರು ಶೀತಕಪಾಟಿನಲ್ಲಿ ನೀರು ಇಡಲು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುತ್ತಾರೆ. ಅದರಲ್ಲಿ ಹೆಚ್ಚು ಜೀವಾಣುಗಳು ಇರುತ್ತವೆ, ಅವು ನಿಮ್ಮನ್ನು ಅಸ್ವಸ್ಥಗೊಳಿಸಬಹುದು. ಆದುದರಿಂದ ಅಗ್ಗದ ಪ್ಲಾಸ್ಟಿಕ್‌ನ ಬಾಟಲಿಗಳನ್ನು ಬಳಸಬೇಡಿ. ಪ್ರತಿ ೨ ರಿಂದ ೩ ದಿನಗಳಿಗೊಮ್ಮೆ ಉತ್ತಮ ಗುಣಮಟ್ಟದ ಬಾಟಲಿಗಳನ್ನು ಸ್ವಚ್ಛಗೊಳಿಸಿದ ಬಗ್ಗೆ ಖಚಿತಪಡಿಸಿಕೊಳ್ಳಿ.
೬. ಮಾರುಕಟ್ಟೆಯಲ್ಲಿ ಲಭ್ಯವಿರುವ ಬಾಟಲಿಬಂದ್ ನೀರಿನಲ್ಲಿ ಜೀವಾಣುಗಳು ಇರುವುದಿಲ್ಲವೇ ?
ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಲಾಸ್ಟಿಕ್ ನೀರಿನ ಬಾಟಲಿಗಳಲ್ಲಿಯೂ ಜೀವಾಣುಗಳು ಇರುತ್ತವೆ; ಆದರೆ ಅವು ಪ್ಲಾಸ್ಟಿಕ್ ಬಾಟಲಿಗಳಿಂದ ಬಂದಿರುತ್ತವೆ. ‘ಲೈವ್ ಸಾಯನ್ಸ್’ನ ವರದಿ ಗನುಸಾರ ನೀರು ಎಂದಿಗೂ ಹಾಳಾಗುವುದಿಲ್ಲ. ‘ಮಾರುಕಟ್ಟೆಯಲ್ಲಿ ದೊರಕುವ ನೀರಿನ ಬಾಟಲಿಯ ಮೇಲೆ ‘ಎಕ್ಸಪಾಯರಿ ಡೆಟ್’ (ಗಡುವು ಮುಗಿಯುವ ದಿನಾಂಕ) ಬರೆಯಲಾಗುತ್ತದೆ, ಹೀಗೇಕೆ ?’ ಎಂದು ಯಾರು ಸಹ ಕೇಳಬಹುದು. ವಾಸ್ತವದಲ್ಲಿ ಅಲ್ಲಿ ಬರೆದ ದಿನಾಂಕ ಪ್ಲಾಸ್ಟಿಕ್ ಬಾಟಲಿಯದ್ದಾಗಿರುತ್ತದೆ. ನಿಶ್ಚಿತ ಸಮಯದ ನಂತರ ಪ್ಲಾಸ್ಟಿಕ್ ನೀರಿನಲ್ಲಿ ಕರಗತೊಡಗುತ್ತದೆ. ಆದುದರಿಂದ ನೀರಿನ ರುಚಿ ಬದಲಾಗಿ ನೀರು ಕುಡಿಯುವವರಿಗೆ ಅಪಾಯ ವಾಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಬಾಟಲಿ ಬಂದ್ ನೀರಿನ ಬಾಟಲಿಗಳು ಒಂದೇ ಬಾರಿ ಬಳಸಬಹುದಾದ ಪ್ಲಾಸ್ಟಿಕ್‌ನದಾಗಿರುತ್ತವೆ. ನಾವು ಆ ಬಾಟಲಿಗಳ ಮರು ಬಳಸುವಂತಹ ತಪ್ಪು ಮಾಡಿ ಅನಾರೋಗ್ಯಕ್ಕೆ ಗುರಿಯಾಗುತ್ತೇವೆ.
೭. ನೀರು ಕುಡಿಯಲು ಯಾವ ಬಾಟಲಿ ಉತ್ತಮ ?
‘ಬಿಪಿಎ’ (ಬಿಸ್ಫೆನಾಲ್ ಎ) ಮುಕ್ತ ಅಥವಾ ಗಾಜಿನ ಅಥವಾ ಸ್ಟೀಲ್ ಬಾಟಲಿಗಳನ್ನು ಬಳಸುವುದು ಉತ್ತಮ.
೮. ಶಾಲೆಗೆ ಹೋಗುವ ಮಕ್ಕಳಿಗೆ ನೀರನ್ನು ನೀಡಲು ಯಾವ ಬಾಟಲಿಗಳನ್ನು ಕೊಡಬೇಕು ?
ಮಕ್ಕಳಿಗೆ ಶಾಲೆಗೆ ತೆಗೆದುಕೊಂಡು ಹೋಗಲು ಸ್ಟೀಲ್ ಅಥವಾ ಉತ್ತಮ ಪ್ಲಾಸ್ಟಿಕ್ ಬಾಟಲಿಯನ್ನು ಕೊಡಬೇಕು. ಅವುಗಳನ್ನೂ ಪ್ರತಿದಿನ ಸ್ವಚ್ಛ ಮಾಡಬೇಕು; ಏಕೆಂದರೆ ಚಿಕ್ಕ ಮಕ್ಕಳು ಬಾಟಲಿಗೆ ಬಾಯಿ ಹಚ್ಚಿ ನೀರು ಕುಡಿಯುತ್ತಾರೆ. ಅದನ್ನು ಬೇಗನೆ ಸ್ವಚ್ಛ ಮಾಡದಿದ್ದರೆ ಬಾಯಿ ಹಚ್ಚಿದಾಗ ಬಾಟಲಿಯ ಮೇಲಿನ ಲಾಲಾರಸವು (ಜೊಲ್ಲು) ಗಾಳಿಯ ಸಂಪರ್ಕಕ್ಕೆ ಬರುತ್ತದೆ ಮತ್ತು ಅದರಿಂದ ಅನೇಕ ಜಂತುಗಳು ಆ ಸ್ಥಳಕ್ಕೆ ಬರುತ್ತವೆ.
೯. ನೀರಿನ ಬಾಟಲಿಗಳಲ್ಲಿ ಜೀವಾಣುಗಳು ಹೇಗೆ ಹೆಚ್ಚಾಗುತ್ತವೆ ?
ಅ. ‘ಇ-ಕೊಲಾಯಿ’ಯಂತಹ ಎಲ್ಲ ಜೀವಾಣುಗಳು ವಿವಿಧ ಕಾರಣಗಳಿಂದ ನೀರಿನ ಬಾಟಲಿಗಳಲ್ಲಿ ಹೆಚ್ಚಾಗುತ್ತವೆ. ಉದಾ.
ಆ. ಎಂಜಲು ಕೈಗಳಿಂದ ಬಾಟಲಿಯನ್ನು ಸ್ಪರ್ಶಿಸುವುದು.
ಇ. ಬಾಯಿಗೆ ಸ್ಪರ್ಶಿಸಿ ನೀರು ಕುಡಿದಾಗ ಜೊಲ್ಲು ತಗಲುವುದು.
ಉ. ಕೆಮ್ಮು ಮತ್ತು ಶೀತವಾದರೆ ಅದೇ ಕೈಗಳಿಂದ ಬಾಟಲಿಯನ್ನು ಹಿಡಿಯುವುದು.
ಊ. ತುಂಬಾ ದಿನ ಬಾಟಲಿಯಲ್ಲಿ ನೀರು ತುಂಬಿರುತ್ತದೆ ಆಗ
ಎ. ಸ್ವಚ್ಛತೆಯ ಕೆಲಸ ಮಾಡುವಾಗ ಹೊಲಸು ಕೈಗಳಿಂದ ಬಾಟಲಿಯನ್ನು ಹಿಡಿದು ನೀರು ಕುಡಿಯುವುದು.
ಏ. ಹೊಸ ‘ಟೂಥಬ್ರಶ್’ ಅಥವಾ ‘ಬ್ರಶ್’ನ ಸಹಾಯದಿಂದ ಬಾಟಲಿಯನ್ನು ಸಂಪೂರ್ಣ ಸ್ವಚ್ಛ ಮಾಡುವುದು ಆವಶ್ಯಕವಾಗಿದೆ.
– ಡಾ. ಸಾಯಮನ್ ಕ್ಲಾರ್ಕ್, ಸೂಕ್ಷ್ಮಜೀವಶಾಸ್ತ್ರಜ್ಞರು, ಅಮೇರಿಕಾ ಮತ್ತು ಡಾ. ಬಾಲಕೃಷ್ಣ, ಪ್ರಥಮೋಪಚಾರ ಕೇಂದ್ರ, ಭೋಪಾಳ, ಮಧ್ಯಪ್ರದೇಶ. (ಆಧಾರ : ದೈನಿಕ ‘ದಿವ್ಯ ಮರಾಠಿ’)
ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವುದು ಏಕೆ ಸುರಕ್ಷಿತವಾಗಿಲ್ಲ ?ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಎನ್‌ವಿರಾನಮೆಂಟಲ್ ಹೆಲ್ಥ್ ಸೈಯನ್ಸ್’ ಇವರ ಅಭಿಪ್ರಾಯಕ್ಕನುಸಾರ ಪ್ಲಾಸ್ಟಿಕ್ ಬಾಟಲಿಗಳನ್ನು ತಯಾರಿಸಲು ‘ಬಿಪಿಎ’ (ಬಿಸ್ಫೆನಾಲ್ ಎ) ಹೆಸರಿನ ರಾಸಾಯನಿಕವನ್ನು ಬಳಸಲಾಗುತ್ತದೆ. ಈ ರಾಸಾಯನಿಕವನ್ನು ಮೊದಲು ೧೮೯೦ ರಲ್ಲಿ ಕಂಡು ಹಿಡಿಯಲಾಯಿತು; ಆದರೆ ೧೯೫೦ ರ ದಶಕದಲ್ಲಿ, ಈ ರಾಸಾಯನಿಕವನ್ನು ಗಟ್ಟಿ ಮತ್ತು ಮಿದುವಾದ(ಸ್ಥಿತಿಸ್ಥಾಪಕ) ‘ಪಾಲಿಕಾರ್ಬೋನೆಟ ಪ್ಲಾಸ್ಟಿಕ್’ ತಯಾರಿಸಲು ಬಳಸಬಹುದಾಗಿದೆ’, ಎಂಬುದು ಗಮನಕ್ಕೆ ಬಂದಿತು. ಅದರ ಬಳಕೆಯಿಂದಾಗುವ ಪರಿಣಾಮಗಳು ಮುಂದೆ ಬಂದಾಗ ಉತ್ಪಾದಕರು ‘ಬಿಪಿಎ’ಮುಕ್ತ ಉತ್ಪಾದನೆಗಳನ್ನು ತಯಾರಿಸಲು ಆರಂಭಿಸಿದರು. ಪ್ಲಾಸ್ಟಿಕ್ ಬಾಟಲಿಗಳಿಂದಾಗುವ ಹಾನಿಪ್ಲಾಸ್ಟಿಕ್ ಬಾಟಲಿಗಳಿಂದ ರಕ್ತದೊತ್ತಡ, ‘ಟೈಪ್-೨ ಮಧುಮೇಹ’, ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ. ಪುರುಷರ ವೀರ್ಯಗಳ ಗುಣಮಟ್ಟವನ್ನು ಹಾಳು ಮಾಡುತ್ತದೆ. ಹಾರ್ಮೋನುಗಳಿಂದ ಮಹಿಳೆಯರಲ್ಲಿ ಅಸಮತೋಲನ ಉಂಟಾಗುತ್ತ್ತದೆ. (ಆಧಾರ : ದೈನಿಕ ‘ದಿವ್ಯ ಮರಾಠಿ’) |