೧. ಹೊಟ್ಟೆ ಸ್ವಚ್ಛವಾಗುವ ಮೊದಲು ಹಲ್ಲುಜ್ಜುವುದು
ಮಲವನ್ನು ಹೊರಗೆ ಹಾಕಲು ಅಪಾನ ಕ್ಷೇತ್ರದಲ್ಲಿನ ಕೆಳಗಿನ ದಿಶೆಯಲ್ಲಿ ವೇಗ ಆವಶ್ಯಕ. ಮೊದಲು ಮಲವಿಸರ್ಜನೆಯನ್ನು ಮಾಡಿ ನಂತರ ಹಲ್ಲುಜ್ಜಬೇಕು.
೨. ಊಟದ ನಂತರ ಮಲಗುವುದು
ರಾತ್ರಿ ಜಾಗರಣೆಯಾಗಿದ್ದರೆ ಊಟದ ಮೊದಲು, ಅದೂ ಜಾಗರಣೆಯಾಗಿರುವ ಅರ್ಧ ಸಮಯದಷ್ಟು ಮಲಗಬೇಕು. ಬಹಳ ನಿದ್ರೆ ಬರುತ್ತಿದ್ದರೆ ಕುಳಿತುಕೊಂಡು ಸ್ವಲ್ಪ ಸಮಯ ಮಲಗಬೇಕು, ಅಂದರೆ ಮೈಯಲ್ಲಿ ಜಡತ್ವ ಬರುವುದಿಲ್ಲ.
೩. ಬೆಳಗ್ಗೆ ಬಿಸಿ ನೀರಿನಲ್ಲಿ ಜೇನುತುಪ್ಪ ಹಾಕಿ ಕುಡಿಯುವುದು
ಜೇನುತುಪ್ಪವನ್ನು ಸಾಮಾನ್ಯ ತಾಪಮಾನದ ನೀರಿನಲ್ಲಿ ಮತ್ತು ಅದನ್ನೂ ಸಹ ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು. ಬಿಸಿ ನೀರಿನಲ್ಲಿ ಜೇನುತುಪ್ಪವನ್ನು ತೆಗೆದುಕೊಂಡರೆ ಜೇನುತುಪ್ಪವು ಅತ್ಯಂತ ಜಡ ಮತ್ತು ಜೀರ್ಣಿಸಲು ವಿಷಕ್ಕೆ ಸಮಾನವಾಗುತ್ತದೆ.
೪. ರಾತ್ರಿ ನಿಯಮಿತವಾಗಿ ಮೊಸರು ಅಥವಾ ಮೊಸರನ್ನ ತಿನ್ನುವುದು
ರಾತ್ರಿ ಸಮಯದಲ್ಲಿ ಮೊಸರು ಸೇವಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ರಾತ್ರಿ ನಿಯಮಿತವಾಗಿ ಮೊಸರು ಸೇವಿಸಿದರೆ ದೀರ್ಘಕಾಲ ಆಮ್ಲಪಿತ್ತ, ಕಫದ ರೋಗಗಳು, ಚರ್ಮರೋಗ, ಪಿತ್ತದ ರೋಗಗಳು ಉದ್ಭವಿಸುತ್ತವೆ.
೫. ಬೆಳಗ್ಗೆ ಜೇನುತುಪ್ಪ, ನಿಂಬೆನೀರನ್ನು ಕುಡಿಯುವುದು
ನಿಂಬೆಹಣ್ಣು ‘ಅಲ್ಕಾಲೈನ್’ (ಕ್ಷಾರೀಯ) ವಾಗಿದೆ; ಆದರೆ ಅದನ್ನು ದೀರ್ಘಕಾಲದವರೆಗೆ ಸೇವಿಸಿದರೆ ‘ಕ್ಷಾರೀಯ’ ರಸದಿಂದ ಕೂದಲುದುರುವಿಕೆ, ಕೂದಲು ಬಿಳಿಯಾಗುವುದು, ಚರ್ಮರೋಗ, ದೀರ್ಘಕಾಲದ ಶೀತ ಈ ರೋಗಗಳು ಕಂಡುಬರುತ್ತವೆ.
೬. ಪ್ರತಿದಿನ ಮಜ್ಜಿಗೆಯಲ್ಲಿ ಉಪ್ಪು ಹಾಕಿ ಕುಡಿಯುವುದು
ಮಜ್ಜಿಗೆಯಲ್ಲಿ ಸೈಂಧವವನ್ನು ಹಾಕಿ ಕುಡಿಯಬೇಕು. ಪ್ರತಿ ದಿನ ಹೆಚ್ಚು ಪ್ರಮಾಣದಲ್ಲಿ ಉಪ್ಪನ್ನು ಸೇವಿಸಿದರೆ ಕೂದಲು ಬಿಳಿಯಾಗುವುದು, ಮೈಯಲ್ಲಿನ ಉಷ್ಣತೆ ಹೆಚ್ಚಾಗುವುದು, ತುರಿಕೆ ಬರುವುದು, ಬಾಯಾರಿಕೆ ಈ ಲಕ್ಷಣಗಳು ಕಂಡುಬರುತ್ತವೆ.
೭. ಬಹಳ ಹೊತ್ತು ಜೋರಾಗಿ ಹಲ್ಲುಜ್ಜುವುದು
‘ಟೂಥಪೇಸ್ಟ್’ನಿಂದ ಹೆಚ್ಚು ಸಮಯ ಮತ್ತು ಅನೇಕ ಬಾರಿ ಹಲ್ಲುಜ್ಜುವುದರಿಂದ ಹಲ್ಲುಗಳ ಮೇಲಿನ ಪದರು ಕಳಚಿ ಹೋಗುತ್ತದೆ ಮತ್ತು ಹಲ್ಲುಗಳು ‘ಸೆನ್ಸಿಟಿವ್’ (ಸಂವೇದನಾಶೀಲ)ವಾಗುತ್ತವೆ. ಅಲ್ಲದೇ ಬೇಗ ಸವೆಯುವುದು, ತಿನ್ನುವಾಗ ತೊಂದರೆ, ಬೇಗ ಬೀಳುವುದು. ಈ ತೊಂದರೆಗಳಾಗುತ್ತವೆ.
೮. ಪ್ರತಿದಿನ ದೇಹದ ಕ್ಷಮತೆಗಿಂತ ಹೆಚ್ಚು ವ್ಯಾಯಾಮ ಮಾಡುವುದು
ಕೀಲುಗಳ ನೋವು, ಸ್ನಾಯುಗಳ ನೋವು, ಪಿತ್ತದ ತೊಂದರೆ, ಜ್ವರದ ಪೂರ್ವ ಲಕ್ಷಣಗಳು ಕಂಡುಬರುತ್ತವೆ.
೯. ಬಾಯಾರಿಕೆ ಆಗದಿದ್ದರೂ ನೀರು ಕುಡಿಯುವುದು ಮತ್ತು ಹಸಿವು ಇಲ್ಲದಿದ್ದರೂ ತಿನ್ನುವುದು
ಒಂದು ಪ್ರಮಾಣ ನೀರು ಮತ್ತು ಒಂದು ರೀತಿಯ ಆಹಾರ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಪ್ರಕೃತಿ, ವಯಸ್ಸು, ದೇಹದ ಚಲನವಲನ, ಕಾಯಿಲೆ, ಅಗ್ನಿ ಇವುಗಳ ಮೇಲೆ ಅದರ ಪ್ರಮಾಣ ಬದಲಾಗುತ್ತದೆ. ಅಗ್ನಿ ಮಂದವಾಗುವುದು, ಹೊಟ್ಟೆ ಉಬ್ಬಿದಂತಾಗುವುದು ಈ ಲಕ್ಷಣಗಳು ಕಂಡುಬರುತ್ತವೆ.
೧೦. ಹಸಿ ತರಕಾರಿ ಮತ್ತು ಮೊಳಕೆ ಬಂದಿರುವ ಬೇಳೆಕಾಳುಗಳನ್ನು ತಿನ್ನುವುದರಿಂದ ಶುಷ್ಕತೆ
ಹೆಚ್ಚಾಗಿ ಅವು ವಾತವನ್ನು ಹೆಚ್ಚಿಸುತ್ತವೆ. ತಮ್ಮ ಉತ್ತಮ ಆರೋಗ್ಯಕ್ಕಾಗಿ ಮೇಲೆ ಹೇಳಿದ ಸಾಮಾನ್ಯ ಅಭ್ಯಾಸಗಳನ್ನು ಕಡಿಮೆ ಮಾಡಬೇಕು.
– ವೈದ್ಯೆ ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ