ಮಜ್ಜಿಗೆ ತಂಪು ಮತ್ತು ಆರೋಗ್ಯಕ್ಕೆ ಒಳ್ಳೆಯದೆಂದು ಅದನ್ನು ಬೇಸಿಗೆಯಲ್ಲಿ ನಿರಂತರವಾಗಿ ಕುಡಿಯಬೇಡಿ !

”ಡಾಕ್ಟರ್‌ ನೀವು ನನಗೆ ಮಜ್ಜಿಗೆಯನ್ನು ಒಮ್ಮೆಲೆ ಕಡಿಮೆ ಮಾಡಲು ಹೇಳಿದ್ದೀರಿ ಮತ್ತು ಅದರಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಹುಳಿದ್ರವ ಗಂಟಲಿನಲ್ಲಿ ಬರುವುದು ಮತ್ತು ಉರಿಯುವುದು ಈ ದೂರುಗಳು ಸಂಪೂರ್ಣವಾಗಿ ನಿಂತು ಹೋಗಿದೆ. ಮಜ್ಜಿಗೆಯಿಂದಲೂ ತೊಂದರೆಯಾಗುತ್ತದೆ, ಎಂದು ತಿಳಿದಿರಲಿಲ್ಲ. ಇದು ಆರೋಗ್ಯಕ್ಕೆ ಒಳ್ಳೆಯದು, ಉತ್ತಮ ‘ಪ್ರೊ-ಬಾಯೋಟಿಕ್ಸ’ (ಮನುಷ್ಯನ ದೇಹಕ್ಕೆ ಪ್ರಯೋಜನಕಾರಿಯಾದ ಸೂಕ್ಷ್ಮಜೀವಿಗಳಿಗೆ ‘ಪ್ರೋ-ಬಯೋಟಿಕ್ಸ’ ಎಂದು ಹೇಳುತ್ತಾರೆ.) ಇದೆ. ಹಾಗಾಗಿ ನಿತ್ಯವೂ ಹೆಚ್ಚು ಕುಡಿಯಬೇಕು, ಎಂದು ಓದಿದ್ದೆ’’, ಎಂದು ರೋಗಿಯೊಬ್ಬರು ಹೇಳಿದರು.

ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ

ಅದರ ಬಗ್ಗೆ ಅವರಿಗೆ ಹೇಳಿದೆ, ”ವಾಸ್ತವದಲ್ಲಿ ಮಜ್ಜಿಗೆ ಸ್ವಭಾವತಃ ಉಷ್ಣವಾಗಿದೆ. ಮಜ್ಜಿಗೆಯನ್ನು ಯಾವಾಗ ಕುಡಿಯಬಾರದು’, ಎಂದು ಸ್ಪಷ್ಟವಾಗಿ ಉಲ್ಲೇಖವಿದೆ. ಉಷ್ಣ ಕಾಲದಲ್ಲಿ, ದಾಹಕತೆ ಇರುವಾಗ, ದೇಹದಲ್ಲಿ ಉರಿಯಾಗುತ್ತಿರುವಾಗ ಮಜ್ಜಿಗೆಯನ್ನು ಕುಡಿಯಬಾರದು. ಇದನ್ನು ‘ಪ್ರೋ-ಬಯೊಟಿಕ್’ ಎಂದು ನೀವು ಭಾವಿಸಿದರೆ, ಇದು ಎಲ್ಲಾ ಹುಳಿ ಪದಾರ್ಥಗಳಲ್ಲಿಯೂ ಒಳಗೊಂಡಿರುತ್ತದೆ. ಇವುಗಳಲ್ಲಿ ಯಾವುದಾದರೂ ಒಂದು ಹೆಚ್ಚಾದರೆ ಅಥವಾ ನಿರಂತರತೆಯಿಂದಾಗಿ ವಿಶೇಷವಾಗಿ ಶುಷ್ಕ ಪ್ರದೇಶಗಳಲ್ಲಿನ ಜನರಿಗೆ ತೊಂದರೆದಾಯಕವಾಗುತ್ತದೆ. ಈ ಎಲ್ಲಾ ಪದಾರ್ಥಗಳ ಒಂದು ಸ್ವಭಾವವನ್ನು ನೋಡಿದರೆ ಅವು ಪಿತ್ತಕರವಾಗಿವೆ. ಊಟದೊಂದಿಗೆ ಅಥವಾ ಅದಕ್ಕನುಸಾರ ಸ್ವಲ್ಪ ಪ್ರಮಾಣದಲ್ಲಿ ಕುಡಿಯುವುದು ಸೂಕ್ತವಾಗಿದೆ. ಇದು ಸ್ಪರ್ಶಕ್ಕೆ ತಂಪು ಮತ್ತು ರುಚಿಯಲ್ಲಿ ಉತ್ತಮವಾಗಿರುವುದರಿಂದ ಬೇಸಿಗೆಯಲ್ಲಿ ಅಥವಾ ಉಷ್ಣ ಪ್ರಕೃತಿ ಅಥವಾ ಪಿತ್ತದ ಸಮಸ್ಯೆ ಇರುವಾಗ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಮಜ್ಜಿಗೆ ಕುಡಿಯುವುದರಿಂದ ಖಂಡಿತವಾಗಿಯೂ ದೇಹದಲ್ಲಿ ಪಿತ್ತವನ್ನು ಹೆಚ್ಚಿಸುತ್ತದೆ! ವ್ಯಕ್ತಿ, ಪದಾರ್ಥಗಳು ಮತ್ತು ಪ್ರಮಾಣಗಳ ನಡುವೆ ಸರಿಯಾದ ಸಮತೋಲನವಿದ್ದರೆ, ಆ ಪದಾರ್ಥ ಶರೀರಕ್ಕೆ ಒಗ್ಗುತ್ತದೆ.

ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ‘ಬೇಸಿಗೆ ಶುರುವಾಗಿದೆ. ಮಜ್ಜಿಗೆ ತಂಪು ಇರುತ್ತದೆ ಮತ್ತು ಆರೋಗ್ಯಕ್ಕೆ ಒಳ್ಳೆಯದೆಂದು ನಿರಂತರವಾಗಿ ಮಜ್ಜಿಗೆಯನ್ನು ಕುಡಿಯಬೇಡಿ.’

 – ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೆದ, ಪುಣೆ (೨೬.೩.೨೦೨೪)ರಾಲಿ