‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ ಉಪಚಾರ !’ (ಲೇಖನಮಾಲೆ ೨೫)
ಇಂದಿನ ಒತ್ತಡಮಯ ಜೀವನದಲ್ಲಿ ಯಾರಿಗೂ ಯಾವತ್ತೂ ಸೋಂಕಿನ ಕಾಯಿಲೆ ಅಥವಾ ಇನ್ಯಾವುದೊ, ವಿಕಾರವನ್ನು ಎದುರಿಸಬೇಕಾಗಬಹುದು. ಇಂತಹ ಪ್ರಸಂಗಗಳಲ್ಲಿ ತಕ್ಷಣ ತಜ್ಞ ವೈದ್ಯಕೀಯ ಸಲಹೆ ಸಿಗ ಬಹುದೆಂದು ಹೇಳಲು ಸಾಧ್ಯವಿಲ್ಲ. ನೆಗಡಿ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲೇರಿಯಾ, ಮಲಬದ್ಧತೆ, ಅಮ್ಲಪಿತ್ತ(ಎಸಿಡಿಟಿ) ಇತ್ಯಾದಿ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೆ ಉಪಚಾರ ಮಾಡಲು ಸಾಧ್ಯವಾಗಬೇಕೆಂಬ ದೃಷ್ಟಿಯಲ್ಲಿ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯು ಸಾಮಾನ್ಯ ಜನರಿಗೆ ಬಹಳಷ್ಟು ಉಪಯೋಗವಾಗ ಬಹುದು. ಈ ಉಪಾಯಪದ್ಧತಿಯನ್ನು ಮನೆಯಲ್ಲಿಯೆ ಹೇಗೆ ಅವಲಂಬಿಸಬಹುದು ? ಹೋಮಿಯೋಪಥಿ ಔಷಧಗಳನ್ನು ಹೇಗೆ ತಯಾರಿಸಬೇಕು ? ಅವುಗಳನ್ನು ಹೇಗೆ ಜೋಪಾನ ಮಾಡಬೇಕು ? ಇತ್ಯಾದಿ ಅನೇಕ ವಿಷಯಗಳ ಮಾಹಿತಿಯನ್ನು ಈ ಲೇಖನದ ಮೂಲಕ ನಿಮ್ಮ ಮುಂದಿಡುತ್ತಿದ್ದೇವೆ.
೨೯ ಸಪ್ಟೆಂಬರ್ ೨೦೨೩ ರಿಂದ ನಾವು ಪ್ರತ್ಯಕ್ಷ ಕಾಯಿಲೆಗಳಿಗೆ ಸ್ವಉಪಚಾರವನ್ನು ತಿಳಿದುಕೊಳ್ಳುತ್ತಿದ್ದೇವೆ. ಅದರ ಅಡಿಯಲ್ಲಿ ೨೫/೩೩ ರಲ್ಲಿ ನಾವು ‘ಋತುಸ್ರಾವಕ್ಕೆ ಸಂಬಂಧಿಸಿದ ಸಮಸ್ಯೆ’ಗಳಿಗೆ ಔಷಧಿಗಳ ಮಾಹಿತಿಯನ್ನು ನೀಡಿದ್ದೇವು. ಈ ವಾರ ಅದರ ಮುಂದಿನ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.
ಕಾಯಿಲೆಗಳಿಗೆ ನೇರವಾಗಿ ಸ್ವಯಂಚಿಕಿತ್ಸೆ ಮಾಡುವ ಮೊದಲು ೨೫/೧, ೨೫/೨ ಮತ್ತು ೨೫/೩ ನೇ ‘ಸನಾತನ ಪ್ರಭಾತ’ ಪತ್ರಿಕೆಯಲ್ಲಿ ಪ್ರಕಾಶಿಸಲಾದ ಲೇಖನಗಳಲ್ಲಿನ ‘ಹೋಮಿಯೋಪತಿ ಸ್ವಯಂಚಿಕಿತ್ಸೆಯ ಬಗ್ಗೆ ಇರುವ ಮಾರ್ಗದರ್ಶನದ ಅಂಶಗಳು ಮತ್ತು ಪ್ರತ್ಯಕ್ಷ ಔಷಧಿಗಳನ್ನು ಹೇಗೆ ಆಯ್ಕೆ ಮಾಡಬೇಕು ?’, ಎಂಬುದರ ಮಾಹಿತಿಯನ್ನು ವಾಚಕರು ಈ ಮೊದಲು ಓದಬೇಕೆಂದು ವಿನಂತಿ !
ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/114285.html |
ಚಿಂತೆ ಮತ್ತು ಭಯ ಇವು ಮಾನವನ ಸಾಮಾನ್ಯ ಭಾವನೆಗಳಾಗಿವೆ; ಆದರೆ ಯಾವಾಗ ಜೀವನದಲ್ಲಿನ ಸಾಮಾನ್ಯ ಪರಿಸ್ಥಿತಿಯಲ್ಲಿಯೂ ಸತತವಾಗಿ ಹಾಗೂ ತುಂಬಾ ಚಿಂತೆ ಅಥವಾ ಭಯ ಆಗುತ್ತಿದ್ದರೆ ಹಾಗೂ ಅದರಿಂದ ಎದೆ ಬಡಿತ, ಬೆವರು ಬರುವುದು, ಉಸಿರಾಟದ ವೇಗ ಹೆಚ್ಚಾಗುವುದು, ಇಂತಹ ಲಕ್ಷಣಗಳು ಕಾಣಿಸುತ್ತಿದ್ದರೆ, ಅದಕ್ಕೆ ಉಪಚಾರ ಮಾಡುವ ಅವಶ್ಯಕತೆಯಿದೆ. ಹಾಗೆಯೇ ಉದ್ವೇಗವನ್ನು (ಟೆನ್ಶನ್) ಹುಟ್ಟಿಸುವ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿ ಚಿಂತೆ / ಅಥವಾ ಭಯವಾಗುವುದು ಸ್ವಾಭಾವಿಕವಾಗಿರುತ್ತದೆ. ಆದರೆ ಅದು ಯಾವಾಗ ಸತತವಾಗಿ ಮತ್ತು ಪ್ರಮಾಣಕ್ಕಿಂತ ಹೆಚ್ಚಿರುತ್ತದೆಯೋ ಆಗ ಉಪಚಾರ ಪಡೆಯುವುದು ಆವಶ್ಯಕವಾಗಿರುತ್ತದೆ. ವಿಪರೀತ ಚಿಂತೆ / ಭಯವನ್ನು ಕಡಿಮೆಗೊಳಿಸಲು ನಿಯಮಿತ ಯೋಗಾಸನ, ಪ್ರಾಣಾಯಾಮ, ಧ್ಯಾನ ಹಾಗೂ ಸ್ವಯಂಸೂಚನೆಗಳನ್ನು ನೀಡುವುದು ಲಾಭದಾಯಕವಾಗಿದೆ. ಇದರ ಹೊರತು ಮುಂದೆ ಕೊಟ್ಟಿರುವ ಔಷಧಗಳಲ್ಲಿನ ಉಪಯುಕ್ತ ಔಷಧಗಳನ್ನು ತೆಗೆದುಕೊಳ್ಳಬೇಕು. ಔಷಧಗಳ ಹೆಸರಿನ ಮುಂದೆ ಯಾವ ಲಕ್ಷಣಗಳಿದ್ದರೆ ಯಾವ ಔಷಧ ತೆಗೆದುಕೊಳ್ಳಬೇಕು, ಎಂಬುದನ್ನು ಹೇಳಲಾಗಿದೆ.
೧. ಎಕೋನಾಯಿಟ್ ನ್ಯಾಪೆಲಸ್ (Aconite Napellus)
೧ ಅ. ಅನಿರೀಕ್ಷಿತವಾಗಿ ಭಯ ಉಂಟಾಗುವುದು, ಅಸ್ವಸ್ಥ ಅನಿಸುವುದು, ಚಿಂತೆಯೆನಿಸುವುದು
೧ ಆ. ಪ್ರತಿಯೊಂದು ಕೃತಿಯನ್ನು ಅವಸರದಿಂದ ಮಾಡುವುದು
೧ ಇ. ಶರೀರದ ಸ್ಥಿತಿ ಸತತವಾಗಿ ಬದಲಾಗುವುದು
೧ ಈ. ಮರಣದ ತೀವ್ರ ಭಯವಾಗುವುದು, ಮರಣದ ನಿರ್ದಿಷ್ಟ ಸಮಯವನ್ನು ಹೇಳುವುದು
೧ ಉ. ಜನಸಂದಣಿಯಲ್ಲಿ ಹೋಗಲು ಭಯವಾಗುವುದು
೧ ಊ. ಕೋಣೆಯ ಬಾಗಿಲು ಮುಚ್ಚಿಕೊಂಡು ಒಳಗಿರಲು ಭಯವೆನಿಸುವುದು (Claustraphobia)
೨. ಅರ್ಜೆಂಟಮ್ ನಾಯಟ್ರಿಕಮ್ ( Argentum Nitricum)
೨ ಅ. ಏನಾದರೂ ಕೆಟ್ಟದಾಗಬಹುದು, ಎಂಬುದರ ಚಿಂತೆಯಾಗುವುದು
೨ ಆ. ಸಂದರ್ಶನ ಅಥವಾ ಯಾವುದಾದರೊಂದು ಕಾರ್ಯಕ್ರಮಕ್ಕೆ ಹೋಗುವಾಗ, ಮುಂದೆ ಘಟಿಸಲಿರುವ ಪ್ರಸಂಗದ ವಿಷಯದಲ್ಲಿ ಅಥವಾ ಪ್ರವಾಸದ ವಿಷಯದಲ್ಲಿ ಚಿಂತೆಯಾಗುವುದು
೨ ಇ. ವಿಮಾನದಲ್ಲಿ ಪ್ರವಾಸ ಮಾಡಲು, ಎತ್ತರದ ಭಯವಾಗುವುದು (fear of heights)
೨ ಈ. ಯಾವಾಗಲೂ ಅವಸರದಲ್ಲಿರುವುದು
೩. ಜಲ್ಸೇಮಿಯಮ್ ಸೆಮ್ಪರ್ವಿರೆನ್ಸ್
(Gelsemium Sempervirens)
೩ ಅ. ಪರೀಕ್ಷೆಯ, ವೈಫಲ್ಯದ ಮತ್ತು ವೇದಿಕೆಯಿಂದ ಮಾತನಾಡಲು ಭಯ ಅನಿಸುವುದು
೩ ಆ. ಭಯದಿಂದ ಮೈನಡುಗುವುದು, ಭೇದಿಯಾಗುವುದು, ನಿತ್ರಾಣ
೩ ಇ. ಸತತವಾಗಿ ಚಲನವಲನವಿಲ್ಲದಿದ್ದರೆ, ಹೃದಯದ ಕ್ರಿಯೆ ನಿಂತು ಹೋಗಬಹುದು ಎಂಬ ಭಯ ಅನಿಸುವುದು
೪. ಆರ್ಸೆನಿಕಮ್ ಆಲ್ಬಮ್ ( Arsenicum Album)
೪ ಅ. ರಾತ್ರಿ ಚಿಂತೆಯಿಂದ ಅಸ್ವಸ್ಥ ಅನಿಸಿ ನಿದ್ರೆ ಬಾರದಿರುವುದು
೪ ಆ. ಮರಣದ ಚಿಂತೆ ಹಾಗೂ ಭಯವೆನಿಸುವುದು
೪ ಇ. ‘ಔಷಧದಿಂದ ಏನೂ ಉಪಯೋಗವಿಲ್ಲ, ಔಷಧಗಳು ಏನೂ ಮಾಡಲಾರವು. ನನ್ನ ಕಾಯಿಲೆ ಗುಣವಾಗಲು ಸಾಧ್ಯವೇ ಇಲ್ಲ, ನಾನು ನಿಜವಾಗಿಯೂ ಸಾಯುವೆನು, ಇಂತಹ ವಿಚಾರ ಮಾಡುವುದು
೪ ಈ. ಮನಸ್ಸಿನ ಸ್ತರದಲ್ಲಿ ಅಸ್ವಸ್ಥರಾಗಿರುವುದು; ಆದರೆ ಶಾರೀರಿಕ ಸ್ತರದ ತೀವ್ರ ನಿತ್ರಾಣದಿಂದ ಚಲನವಲನ ಮಾಡಲು ಬರದಿರುವುದು
೫. ಇಗ್ನೇಶಿಯಾ ಅಮಾರಾ (Ignatia Amara)
೫ ಅ. ಸತತವಾಗಿ ದುಃಖದ ವಿಚಾರದಲ್ಲಿರುವುದು, ಅಳುವುದು
೫ ಆ. ದುಃಖದಿಂದ ನರಳುವುದು, ನಿಟ್ಟುಸಿರು ಬಿಡುವುದು
೫ ಇ. ಸತತವಾಗಿ ಏನಾದರೂ ಮಾಡಬೇಕು ಎಂಬ ಚಿಂತೆಯಲ್ಲಿರುವುದು
೫ ಈ. ಕೆಲವೊಮ್ಮೆ ಆನಂದಿ, ಆಟವಾಡುವ ಸ್ಥಿತಿಯಲ್ಲಿ, ಕೆಲವೊಮ್ಮೆ ಒಮ್ಮೆಲೆ ಚಿಂತಿತನಾಗಿ ಅಳುವುದು
೫ ಉ. ಹೆದರಿಕೆ, ಸಣ್ಣ ಸಣ್ಣ ಕಾರಣಗಳಿಂದ ಭಯಪಟ್ಟು ಹೃದಯದ ಬಡಿತ ಹೆಚ್ಚಾಗುವುದು
೫ ಊ. ‘ನಾನು ಗುಣಮುಖನಾಗುವುದಿಲ್ಲ’, ಎನ್ನುವ ವಿಚಾರದಿಂದ ನಿರಾಶೆಯಾಗುವುದು
೫ ಎ. ರಾತ್ರಿ ಕಳ್ಳರ ಭಯವಾಗುವುದು
೫ ಏ. ಸಮೀಪದ ವ್ಯಕ್ತಿಯ ಮರಣದ ನಂತರ ಚಿಂತೆಯ ಲಕ್ಷಣಗಳು ಕಾಣಿಸುವುದು
೬. ಕಲ್ಕೇರಿಯಾ ಕಾರ್ಬೋನಿಕಾ (Calcarea Carbonica)
೬ ಅ. ಸಾರಾಸಾರ ವಿಚಾರ ಮಾಡಲು ಬರದಿರುವುದು, ಸೋಂಕು ರೋಗ ಬರುವ, ಆರ್ಥಿಕ ಹಾನಿ ಇತ್ಯಾದಿ ದುರದೃಷ್ಟ ಬರಬಹುದೆಂಬ ಭಯ ಅನಿಸುವುದು
೬ ಆ. ಭಯಹುಟ್ಟಿಸುವ ವಿಷಯ ಕೇಳಿದ್ದರಿಂದ ಅಥವಾ ಕಾಳಜಿಯಿಂದ ಮಾನಸಿಕ ಯಾತನೆಗಳಾಗಿ ಹೃದಯದ ಬಡಿತ ಹೆಚ್ಚಾಗುವುದು, ಅದರಿಂದ ಸ್ವಸ್ಥತೆ ಇಲ್ಲದಿರುವುದು, ವಿಶ್ರಾಂತಿ ಸಿಗದಿರುವುದು
೬ ಇ. ಮುಸ್ಸಂಜೆ ಅಥವಾ ರಾತ್ರಿ ಭಯವಾಗಿ ಮೈ ನಡುಗುವುದು
೬ ಈ. ಕಲ್ಪನೆ ಅಥವಾ ಭಯಹುಟ್ಟಿಸುವ ಕಥೆಯಿಂದ ಉದ್ವಿಗ್ನನಾಗುವುದು
೬ ಉ. ರೋಗ, ದುರ್ಘಟನೆ, ದುಃಖಮಯ ಅಪಘಾತ, ಮರಣ ಇತ್ಯಾದಿ ವಿಷಯಗಳ ಬಗ್ಗೆ ಹೆದರಿಕೆ ಆಗುವುದು
೭. ಫಾಸ್ಫೋರಮ್ ಎಸಿಡಮ್ (Phosphorum Acidum)
೭ ಅ. ತುಂಬಾ ನಿರುತ್ಸಾಹ ಇರುವುದು – ಶಾರೀರಿಕ ಹಾಗೂ ಮಾನಸಿಕ ಕೆಲಸಗಳನ್ನು ಮಾಡುವ ಇಚ್ಛೆಯೇ ಇಲ್ಲವಾಗುವುದು
೭ ಆ. ಸಣ್ಣ ವಿಷಯಕ್ಕೂ ಬೇಸರಪಡುವುದು
೭ ಇ. ಮೂಲೆ ಇತ್ಯಾದಿಗಳಿಂದ ತನ್ನತ್ತ ಏನೋ ಹರಿದಾಡುತ್ತಾ ಬರುತ್ತಿದೆ ಎಂದು ಭಯಭೀತರಾಗಿರುವುದು
೭ ಈ. ಬೆಳಕು, ಗಂಧ, ಧ್ವನಿ, ಸ್ಪರ್ಶ ಇವುಗಳ ಬಗ್ಗೆ ಅತೀಸಂವೇದನಶೀಲತೆ ಇರುವುದು ಅಥವಾ ಅವುಗಳಿಗೆ ಒಮ್ಮೆಲೆ ಹೆದರಿಕೊಳ್ಳುವುದು