ಋತುಸ್ರಾವಕ್ಕೆ (ಮುಟ್ಟಿಗೆ) ಸಂಬಂಧಿಸಿದ ಸಮಸ್ಯೆಗಳಿಗೆ (Ailments related to menses) ಹೋಮಿಯೋಪಥಿ ಔಷಧಿಗಳ ಮಾಹಿತಿ

‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ ಉಪಚಾರ !’ (ಲೇಖನಮಾಲೆ ೨೪)

ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ. ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿಯೇ ಈ ಚಿಕಿತ್ಸೆಯನ್ನು ಹೇಗೆ ಮಾಡಬಹುದು ? ಹೋಮಿಯೋಪಥಿ ಔಷಧಿಗಳನ್ನು ಯಾವ ರೀತಿ ತಯಾರಿಸಬೇಕು ? ಅವುಗಳನ್ನು ಹೇಗೆ ಸಂಗ್ರಹಿಸಬೇಕು ? ಇಂತಹ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇವೆ.

ಸಂಚಿಕೆ ೨೫/೯ ರಿಂದ ನಾವು ಪ್ರತ್ಯಕ್ಷ ರೋಗಗಳಿಗೆ ಸ್ವಯಂಚಿಕಿತ್ಸೆ ಪದ್ಧತಿಯನ್ನು ತಿಳಿದುಕೊಳ್ಳುತ್ತಿದ್ದೇವೆ. ಅದರ ಅಡಿಯಲ್ಲಿ ಅದರ ಅಂತರ್ಗತ ೨೫/೨೬ ರಿಂದ ನಾವು ‘ಋತುಸ್ರಾವಕ್ಕೆ ಸಂಬಂಧಿಸಿದ ಸಮಸ್ಯೆ’ಗಳಿಗೆ ಔಷಧಿಗಳ ಮಾಹಿತಿಯನ್ನು ನೀಡುತ್ತಿದ್ದೇವೆ. ೨೫/೩೦ ರಲ್ಲಿ ಇದರ ಅಂತರ್ಗತ ‘ಋತುಸ್ರಾವದ ಮೊದಲು ಇರುವ ಸಮಸ್ಯೆಗಳು, ಋತುಸ್ರಾವ ನಡೆದಿರುವಾಗ ಇರುವ ಸಮಸ್ಯೆಗಳು ಮತ್ತು ಋತುಸ್ರಾವದ ಮೊದಲು ಅಥವಾ ಎರಡು ಸರದಿಗಳ ನಡುವಿನ ಕಾಲಾವಧಿಯಲ್ಲಿ ಮಹಿಳೆಯರ ಹೊಟ್ಟೆಯಲ್ಲಿ ನೋವಾಗುವುದು ಮತ್ತು ಮಾಸಿಕ ಋತುಸ್ರಾವವು ಹೆಚ್ಚಿರುವುದು’, ಈ ಬಗ್ಗೆ ಮಾಹಿತಿಯನ್ನು ಓದಿದೆವು. ಈ ವಾರ ಅದರ ಮುಂದಿನ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.

ಕಾಯಿಲೆಗಳಿಗೆ ನೇರವಾಗಿ ಸ್ವಯಂಚಿಕಿತ್ಸೆ ಮಾಡುವ ಮೊದಲು ೨೫/೧, ೨೫/೨ ಮತ್ತು ೨೫/೩ ನೇ ‘ಸನಾತನ ಪ್ರಭಾತ’ ಪತ್ರಿಕೆಯಲ್ಲಿ ಪ್ರಕಾಶಿಸಲಾದ ಲೇಖನಗಳಲ್ಲಿನ ‘ಹೋಮಿಯೋಪತಿ ಸ್ವಯಂಚಿಕಿತ್ಸೆಯ ಬಗ್ಗೆ ಇರುವ ಮಾರ್ಗದರ್ಶನದ ಅಂಶಗಳು ಮತ್ತು ಪ್ರತ್ಯಕ್ಷ ಔಷಧಿಗಳನ್ನು ಹೇಗೆ ಆಯ್ಕೆ ಮಾಡಬೇಕು ?’, ಎಂಬುದರ ಮಾಹಿತಿಯನ್ನು ವಾಚಕರು ಈ ಮೊದಲು ಓದಬೇಕೆಂದು ವಿನಂತಿ !

ಸ್ತ್ರೀಯರಿಗೆ ಋತುಸ್ರಾವಕ್ಕೆ ಸಂಬಂಧಿಸಿದ ವಿವಿಧ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿನ ಕೆಲವು ಪ್ರಮುಖ ತೊಂದರೆಗಳ ಮೇಲಿನ ಉಪಚಾರದ ಮಾಹಿತಿಯನ್ನು ಮುಂದೆ ನೀಡಲಾಗಿದೆ. ಯಾವ ವೈಶಿಷ್ಟ್ಯಪೂರ್ಣ ಲಕ್ಷಣಗಳಿದ್ದರೆ ಆ ಔಷಧಿಯನ್ನು ತೆಗೆದುಕೊಳ್ಳಬೇಕು ಎಂಬುದನ್ನು ಔಷಧಗಳ ಹೆಸರಿನ ಮುಂದೆ ಕೊಡಲಾಗಿದೆ.

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/112857.html

೬. ಋತುಸ್ರಾವ ತಡವಾಗಿ ಬರುವುದು ಮತ್ತು ಅಲ್ಪ ರಕ್ತಸ್ರಾವವಾಗುವುದು (Menses Delayed and scanty)

೬ ಅ. ಪಲ್ಸೆಟಿಲಾ ನಿಗ್ರಿಕನ್ಸ್ (Pulsatilla Nigricans)

೬ ಅ ೧. ಋತುಸ್ರಾವ (ಮುಟ್ಟು) ತಡವಾಗಿ ಬರುವುದು, ದೋಷಯುಕ್ತ (defective) ಮತ್ತು ಅನಿಯಮಿತವಾಗಿರುವುದು

೬ ಅ ೨. ರೋಗಿಯು ನಿಸ್ತೇಜ (pale) ಮತ್ತು ನಿರುತ್ಸಾಹಿ ಆಗಿರುವುದು

೬ ಅ ೩. ಚಳಿಯಾಗುವುದು, ತಲೆನೋಯುವುದು

೬ ಆ. ಸಲ್ಫರ್‌ (Sulphur)

೬ ಆ ೧. ಮುಟ್ಟು ಯಾವಾಗಲೂ ತಡವಾಗಿ ಬರುವುದು

೬ ಆ ೨. ಮಲಬದ್ಧತೆ

೬ ಆ ೩. ಚರ್ಮದ ಮೇಲೆ ಗುಳ್ಳೆಗಳು ಬರುವ ಪ್ರವೃತ್ತಿ, ಹಾಗೆಯೇ ಚರ್ಮವು ಕೆಂಪಾಗುವುದು (flushings)

೬ ಆ ೪. ಮಧ್ಯಾಹ್ನ ಹಸಿವಾಗಿ ನಿ:ಶಕ್ತಿ ಅನಿಸುವುದು

೬ ಇ. ಗ್ರಾಫೈಟಿಸ್‌ (Graphites)

೬ ಇ ೧. ಮಾಸಿಕ ಸರದಿ ತಡವಾಗಿ ಬರುವುದು

೬ ಇ ೨. ಮಾಸಿಕ ಸರದಿಯು ಬರುವ ಮೊದಲು ಯೋನಿಮಾರ್ಗದಲ್ಲಿ ತುರಿಸುವುದು

೬ ಈ. ನೆಟ್ರಮ್‌ ಮ್ಯುರಿಯಾಟಿಕಮ್‌ (Natrum Muriaticum)

೬ ಈ ೧. ಋತುಸ್ರಾವವು ಕಡಿಮೆಯಾಗುವುದು

೬ ಈ ೨. ಮಲಬದ್ಧತೆ

೬ ಉ. ಮ್ಯಾಗ್ನೇಶಿಯಮ್‌ ಕಾರ್ಬೋನಿಕಮ್‌ (Magnesium Carbonicum)

೬ ಉ ೧. ಮಾಸಿಕ ಸರದಿ ತಡವಾಗಿ ಬರುವುದು

೬ ಉ ೨. ಮಾಸಿಕ ಸ್ರಾವ ಕಡಿಮೆ ಮತ್ತು ಡಾಂಬರದಂತಿರುವುದು

೭. ಮುಟ್ಟು ಬರದಿರುವುದು (Amenorrhoea)

(ರಜೋನಿವೃತ್ತಿಯ ((Menopause) ನ) ಮೊದಲು ಮತ್ತು ಗರ್ಭಿಣಿ ಇಲ್ಲದಿದ್ದಾಗ) ‘ಗರ್ಭಿಣಿಯಿದ್ದಾಗ, ಮಗುವಿಗೆ ಸ್ತನಪಾನ ಮಾಡುವಾಗ ಮತ್ತು ರಜೋನಿವೃತ್ತಿಯ ನಂತರ’ ಋತುಸ್ರಾವ ನಿಲ್ಲುವುದು ನೈಸರ್ಗಿಕ ಮತ್ತು ಅಪೇಕ್ಷಿತವಿರುತ್ತದೆ. ಇದರ ಹೊರತು ಒಂದು ತಿಂಗಳಿಗಿಂತ ಹೆಚ್ಚು ಋತುಸ್ರಾವ ಬರದಿರುವುದು, ಅನೈಸರ್ಗಿಕವಾಗಿದೆ ಮತ್ತು ಇದರ ಬಗ್ಗೆ ಜಾಗರೂಕತೆಯಿಂದಿರುವುದು ಆವಶ್ಯಕವಾಗಿರುತ್ತದೆ. ಒಂದು ವೇಳೆ ೧೫ ನೇ ವರ್ಷಗಳ ವರೆಗೆ ಮಾಸಿಕ ಸರದಿ ಬರದೇ ಇದ್ದರೆ, ಅದರ ಕಾರಣ ಹಾರ್ಮೋನ್‌ ಅಸಮತೋಲನವಾಗಬಹುದು (hormonal imbalance). ಇದರ ಬಗ್ಗೆ ತಜ್ಞ ವೈದ್ಯರ ಸಲಹೆಯಿಂದ ಚಿಕಿತ್ಸೆಯನ್ನು ಪಡೆಯುವುದು ಆವಶ್ಯಕವಾಗಿದೆ. ಮಾಸಿಕ ಸರದಿಯು ನಿಯಮಿತವಾದ ನಂತರ (ಮೇಲೆ ತಿಳಿಸಲಾದ ಗರ್ಭಾವಸ್ಥೆ, ಸ್ತನಪಾನ, ರಜೋನಿವೃತ್ತಿ ಹೊರತುಪಡಿಸಿದರೆ) ೩ ಅಥವಾ ಹೆಚ್ಚು ತಿಂಗಳು ಮಾಸಿಕ ಸರದಿ ಬರದಿದ್ದರೆ ಅದರ ಕಾರಣಗಳು – ಒತ್ತಡದಿಂದ ನಿರ್ಮಾಣವಾಗಿರುವ ಹಾರ್ಮೊನ್‌ ಅಸಮತೋಲನ, ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದು, ಉದಾಸೀನತೆಗಾಗಿ ಔಷಧಗಳನ್ನು ತೆಗೆದುಕೊಳ್ಳುವುದು, ಗರ್ಭಾಶಯದಲ್ಲಿನ ರಚನೆಯು ಹಾಳಾಗಿರುವುದು structural problem) ಇತ್ಯಾದಿ ಕಾರಣಗಳಿರುತ್ತವೆ. ಮುಟ್ಟು ನಿಂತರೆ ಮಹಿಳೆಗೆ ಮಾನಸಿಕ ಒತ್ತಡ, ಸ್ತನದಿಂದ ವಿನಾಕಾರಣ ಹಾಲು ಸೋರುವುದು, ಕೂದಲು ಉದುರುವುದು, ಮುಖದ ಮೇಲೆ ತಾರುಣ್ಯದ ಮೊಡವೆಗಳಾಗುವುದು (acne), ತಲೆನೋವು, ಮೂಳೆಗಳು ಪೊಳ್ಳಾಗುವುದು, ಗರ್ಭಿಣಿ ಆಗದಿರುವುದು, ಈ ಲಕ್ಷಣಗಳು ಕಂಡುಬರುತ್ತವೆ.

೭ ಅ. ಪಲ್ಸೇಟಿಲಾ ನಿಗ್ರಿಕನ್ಸ್ (Pulsatilla Nigrican)

೭ ಅ ೧. ಶಾರೀರಿಕ ಅಥವಾ ಸಂತಾನೋತ್ಪತ್ತಿಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಇಲ್ಲದಿರುವಾಗ ಯೌವನ ಅವಸ್ಥೆ ಬಂದನಂತರ (puberty ಸಮಯದಲ್ಲಿ) ಮಾಸಿಕ ಸರದಿಯು ಪ್ರಾರಂಭವಾಗದಿರುವುದು

೭ ಅ ೨. ಕೋಮಲ ಸ್ವಭಾವದ, ಆಜ್ಞಾಧಾರಕ, ಇತರರ ವಿಚಾರಗಳಿಂದ ಬೇಗನೇ ಪ್ರಭಾವಿತರಾಗುವ ಸ್ತ್ರೀಯರಿಗೆ ಈ ಔಷಧವು ಉಪಯುಕ್ತವಾಗುತ್ತದೆ

೭ ಅ ೩. ಸ್ವಚ್ಛಂದ ವಾತಾವರಣದಲ್ಲಿ ಒಳ್ಳೆಯದೆನಿಸುವುದು

೭ ಆ. ಸೈಕ್ಲಮೆನ್‌ (Cyclamen)

೭ ಆ ೧. ಸ್ವಚ್ಛಂದ ಹವಾಮಾನದಲ್ಲಿ ಒಳ್ಳೆಯದೆನಿಸುವುದು

೭ ಆ ೨. ತಲೆ ಸುತ್ತುವುದು, ತಲೆನೋವು, ಹಾಗೆಯೇ ದೃಷ್ಟಿಯ ಸಂಬಂಧಿಸಿದ ಸಮಸ್ಯೆ ಇರುವುದು

೭ ಇ. ಸಲ್ಫರ್‌ (Sulphur)

೭ ಇ ೧. ಋತುಸ್ರಾವ ಅಪೇಕ್ಷಿತವಿರುವ ಸಮಯದಲ್ಲಿ ಆಗದಿದ್ದರೆ ಬೆಳಗ್ಗೆ ೧೧ ಗಂಟೆಗೆ ‘ಹೊಟ್ಟೆಗೆ ತಗ್ಗು ಬೀಳುವುದು, (ಹೊಟ್ಟೆ ಒಳಗೆ ಹೋಗುವುದು) (sinking sensation)

೭ ಇ ೨. ಮೈಉರಿದು ತಲೆ ಬಿಸಿಯಾಗುವುದು, ಕೈಕಾಲುಗಳು ತಣ್ಣಗಾಗುವುದು

೭ ಈ. ನೆಟ್ರಮ್‌ ಮ್ಯುರಿಯಾಟಿಕಮ್‌ (Natrum Muriaticum)

೭ ಈ ೧. ಋತುಸ್ರಾವ ಬರದಿರುವುದು ಮತ್ತು ಬೆಳಗ್ಗೆ ಎದ್ದನಂತರ ತಲೆನೋವು ಪ್ರಾರಂಭವಾಗುವುದು

೭ ಈ ೨. ಚಳಿಯಾಗುವುದು, ಉದಾಸೀನತೆ, ಮಲಬದ್ಧತೆ ಇರುವುದು

(ಮುಂದುವರಿಯುವುದು)