ಆಯುರ್ವೇದದ ವ್ಯಾಪಕ ತಿಳುವಳಿಕೆಯ ಮಹತ್ವ !

ಮೆದುಳು, ಮೂತ್ರಪಿಂಡ ಮತ್ತು ಹೃದಯ ಇವುಗಳಲ್ಲಿ ಪರಸ್ಪರ ಹತ್ತಿರದ ಸಂಬಂಧವಿರುತ್ತದೆ. ಒಂದು ಹಾಳಾದರೆ ಉಳಿದ ಎರಡು ಹಾಳಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಮೂತ್ರಪಿಂಡ ಹಾಳಾದರೆ ಹೃದಯದ ಮೇಲಿನ ಪದರದಲ್ಲಿ ನೀರು ತುಂಬುವುದು, ಹೃದಯದ ಮೇಲೆ ಒತ್ತಡ ಬರುವಂತಹ ಲಕ್ಷಣಗಳು ಕಾಣಿಸುತ್ತವೆ. ಆಯುರ್ವೇದದಲ್ಲಿ ಇದರ ಆಳವಾದ ಅಧ್ಯಯನ ಮಾಡುತ್ತಾ ‘ತ್ರೀಮರ್ಮಿಯ ಚಿಕಿತ್ಸೆ’, ‘ಸಿದ್ಧಿ’ ಇವುಗಳಂತಹ ಅಧ್ಯಾಯಗಳೇ ಬಂದಿವೆ. ಆದುದರಿಂದಲೇ ರಕ್ತದೊತ್ತಡ ಹೆಚ್ಚಾದರೆ ಮೂತ್ರಪಿಂಡ ನಿಷ್ಕ್ರೀಯವಾಗುವ ಅಪಾಯ ಹೆಚ್ಚಾಗುತ್ತದೆ, ಇದನ್ನು  ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಪರೀಕ್ಷೆಗಳನ್ನು ಸಕಾಲದಲ್ಲಿ ಮಾಡಿಸಿಕೊಳ್ಳುವುದು ಮತ್ತು ಇಂದು ಅವು ಬಹಳ ಸಾಮಾನ್ಯ ಎಂದು ಕಂಡು ಬಂದರೂ ಮುಂದೆ ಅವು ಅಪಾಯವನ್ನುಂಟು ಮಾಡಬಾರದೆಂದು ಮೊದಲ ದಿನದಿಂದಲೇ ಔಷಧಿ ಮತ್ತು ಪಥ್ಯ ಈ ಬಗ್ಗೆ ಕಾಳಜಿ ವಹಿಸುವಲ್ಲಿ ಆಯುರ್ವೇದವು ತನ್ನ ಕೆಲಸವನ್ನು ಮಾಡುತ್ತದೆ.

ವೈದ್ಯ ಪರೀಕ್ಷಿತ ಶೆವಡೆ

ಇನ್ನೊಂದೆಡೆ ಯಾವುದೇ ಕಾರಣದಿಂದ ಮೂತ್ರಪಿಂಡಗಳ ಕಾರ್ಯಕ್ಷಮತೆ ಕಡಿಮೆಯಾಗಿರುವುದು ಗಮನಕ್ಕೆ ಬರುತ್ತಲೇ (Chronic Renal Disease) ಕೇವಲ ಮೂತ್ರವನ್ನು ಹೆಚ್ಚಿಸುವ ಔಷಧಗಳನ್ನು (Diuretics) ನೀಡುವ ವಿಚಾರ ಮಾಡದೇ ಹೃದಯಕ್ಕೆ ಶಕ್ತಿಯನ್ನು ನೀಡುವ ಔಷಧಿಗಳನ್ನೂ ಆಯುರ್ವೇದಕ್ಕನುಸಾರ ಆರಂಭಿಸಲಾಗುತ್ತದೆ. ಪರಿಸ್ಥಿತಿ ಕೊನೆಯ ಹಂತದಲ್ಲಿರುವಾಗ ಮೂತ್ರಪಿಂಡ ‘ಟ್ರಾನ್ಸ್‌ಪ್ಲಾಂಟ್’ (ಬೇರೆಯವರ ಮೂತ್ರಪಿಂಡವನ್ನು ಅಳವಡಿಸುವುದು) ಮಾಡಲು ಹೇಳಲಾಗುತ್ತದೆ. ಅದನ್ನು ಮಾಡಿದರೆ, ನಮ್ಮ ಸಮಸ್ಯೆ ಮುಗಿಯಿತು’, ಎಂಬಂತಹ ತಪ್ಪುತಿಳುವಳಿಕೆ ಕೆಲವು ರೋಗಿಗಳಲ್ಲಿ ಇರುತ್ತದೆ; ಆದರೆ ವಾಸ್ತವದಲ್ಲಿ ಹೀಗಾಗುವುದಿಲ್ಲ. ಸ್ವಲ್ಪ ಸಮಯದ ನಂತರ ಆ ಮೂತ್ರಪಿಂಡದ ಕೆಲಸವೂ ಮಂದವಾಗುತ್ತಿರುವುದು ಪ್ರತ್ಯಕ್ಷದಲ್ಲಿ ನೋಡಲು ಸಿಗುತ್ತದೆ. ಇಂತಹ ಸಂದರ್ಭಗಳಲ್ಲಿಯೂ ಈ ಸ್ಥಿತಿ ಬರಲೇಬಾರದೆಂದು ಆಯುರ್ವೇದವು ಉತ್ತಮ ಕೆಲಸವನ್ನು ಮಾಡುತ್ತದೆ. ಇದಕ್ಕೆ ಕಾರಣ ಆಯುರ್ವೇದದ ‘ಮರ್ಮ’ ಮತ್ತು ‘ವಿಷ’ ಎಂಬ ಪರಿಕಲ್ಪನೆಯ ಸಮಗ್ರ ತಿಳುವಳಿಕೆಯಾಗಿದೆ. ರೋಗಿಯು ಸಾಧ್ಯವಿದ್ದಷ್ಟು ‘ಡಯಾಲಿಸಿಸ್‌’ಗೆ (ರಕ್ತ ಶುದ್ಧಿಕರಣದ ಪ್ರಕ್ರಿಯೆ) ಹೋಗುವುದನ್ನು ತಡೆಯಲು ಮತ್ತು ಡಯಾಲಿಸಿಸ್‌ ನಡೆದಿರುವಾಗಲೂ ಆಯುರ್ವೇದವು ಉಪಯೋಗಕ್ಕೆ ಬರುತ್ತದೆ. ಮೇಲಿನ ಎರಡು ಪರಿಕಲ್ಪನೆಗಳೇ ಇದಕ್ಕೇ ಕಾರಣವಾಗಿವೆ. ಸಾಮಾನ್ಯ ವಾಚಕರಿಗೆ ಸಾಧಾರಣ ಕಲ್ಪನೆ ಬರಲೆಂದು ತೀರಾ ಸರಳ ಭಾಷೆಯಲ್ಲಿ ತಿಳಿಸಲು ಪ್ರಯತ್ನಿಸಲಾಗಿದೆ. ವಾಸ್ತವದಲ್ಲಿ ಆಯುರ್ವೇದದಲ್ಲಿ ಈ ಪರಿಕಲ್ಪನೆಗಳು ಮತ್ತು ಅವುಗಳ ಸಂಬಂಧಗಳು ಬಹಳ ವಿಸ್ತಾರವಾಗಿದ್ದು, ಕ್ಲಿಷ್ಟಕರವಾಗಿವೆ; ಆದರೆ ಅತ್ಯಂತ ಆಸಕ್ತಿಮಯ(ರೋಚಕ) ಮತ್ತು ವೈದ್ಯಕೀಯ ದೃಷ್ಟಿಯಿಂದ ಉಪಯುಕ್ತವಾಗಿವೆ.

ಆಯುರ್ವೇದದ ಒಂದೊಂದು ಸಂಕಲ್ಪನೆಯು ಸದ್ಯದ ಕಾಲದಲ್ಲಿ ಬಹಳ ಸಮಂಜಸ ಮತ್ತು ಮುಂಬರುವ ಕಾಲದಲ್ಲಿ ಹೆಚ್ಚು ಸಮಂಜಸವಾಗುತ್ತಾ ಹೋಗಲಿದೆ. ವೈದ್ಯರು ತಮ್ಮನ್ನು ತಾವು ನವೀಕೃತಗೊಳಿಸಿದರೆ ಮತ್ತು ರೋಗಿಗಳು ಸಕಾಲದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸಿದರೆ ಚಿತ್ರಣವು ಬಹಳಷ್ಟು ಬದಲಾಗ ಬಹುದು. ಶರೀರವು ಜಟಿಲ ಯಂತ್ರವಾಗಿದೆ ಇಲ್ಲಿ ಅನೇಕ ಅವಯವಗಳು ಪರಸ್ಪರರನ್ನು ಅವಲಂಬಿಸಿ ಕೆಲಸ ಮಾಡುತ್ತಿರುತ್ತವೆ, ಆಯುರ್ವೇದಕ್ಕೆ ಇದರ ಸಂಪೂರ್ಣ ಜ್ಞಾನವಿದೆ. ೧೦ ಸಮಸ್ಯೆಗಳಿಗೆ ೧೦ ಮಾತ್ರೆಗಳನ್ನು ನೀಡುವುದಕ್ಕಿಂತ, ಆಯುರ್ವೇದವು ಅವುಗಳ ನಡುವಿನ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಕನಿಷ್ಠ ಔಷಧಿ ಯೋಜನೆಯನ್ನು ಮಾಡಬಹುದು, ಆಯುರ್ವೇದವು ಇಷ್ಟು ದೊಡ್ಡ ವ್ಯಾಪ್ತಿಯನ್ನು ಹೊಂದಿದೆ !

– ವೈದ್ಯ ಪರೀಕ್ಷಿತ ಶೆವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಲಿ. (೧೩.೨.೨೦೨೪)