ತಮ್ಮ ರಕ್ಷಣೆಗಾಗಿ ಕಾಶ್ಮೀರಿ ಹಿಂದೂಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿ !

ಭಯೋತ್ಪಾದನೆ ವಿರುದ್ಧ ಹೋರಾಡಲು ಕಾಶ್ಮೀರ ಕಣಿವೆಯಲ್ಲಿರುವ ಹಿಂದೂ ಅಲ್ಪಸಂಖ್ಯಾತರಿಗೆ ತಮ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸಬೇಕು, ಎಂದು ಜಮ್ಮು ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್.ಪಿ. ವೇದ ಇವರು ಆಂಗ್ಲ ಸುದ್ದಿವಾಹಿನಿಯೊಂದರಲ್ಲಿ ಮಾತನಾಡುತ್ತಾ ಹೇಳಿದರು. ಕಾಶ್ಮೀರಿ ಹಿಂದೂಗಳಾದ ಪಂಚಾಯತಿ ಅಧ್ಯಕ್ಷ ಅಜಯ ಪಂಡಿತಾ ಅವರನ್ನು ಜಿಹಾದಿ ಉಗ್ರರು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಅವರು ಈ ಸಲಹೆ ನೀಡಿದರು.

‘ಐ ಕಾಂಟ್ ಬ್ರೀಥ್’

ಇಂದು ಜಗತ್ತು ಕೊರೋನಾ ಪಿಡುಗಿನಿಂದ ತತ್ತರಿಸಿದೆ. ಕೊರೋನಾದ ಲಕ್ಷಣಗಳಲ್ಲಿ ಉಸಿರಡಲು ತೊಂದರೆಯಾಗುವುದು ಸಹ ಒಂದು ಪ್ರಮುಖ ಲಕ್ಷಣವಾಗಿದೆ. ಇದೂ ಕೂಡ ಒಂದು ರೀತಿಯಲ್ಲಿ ‘ಐ ಕಾಂಟ್ ಬ್ರೀಥ್ ಎಂದೇ ಹೇಳಬೇಕಾಗುವುದು ಮತ್ತು ಕಪ್ಪು ವರ್ಣೀಯರ ಕತ್ತು ಹಿಸುಕುವ ಅಮೇರಿಕವನ್ನು ಅದೇ(ಕೊರೋನಾ) ಕುತ್ತಿಗೆ ಹಿಸುಕಿದೆ.

ದೇವಸ್ಥಾನ ಸರಕಾರೀಕರಣ : ದೇವಸ್ಥಾನದ ನಿಧಿಯನ್ನು ಕೊಳ್ಳೆ ಹೊಡೆಯುವ ಹಿಂದೂದ್ವೇಷಿ ವ್ಯವಸ್ಥೆ !

ಆಂಧ್ರಪ್ರದೇಶದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಕೃಷ್ಣದೇವರಾಯರು ಕಟ್ಟಿಸಿದ ೫೦೦ ವರ್ಷಗಳಷ್ಟು ಪುರಾತನ ಶ್ರೀ ಕಾಳಾಹಸ್ತಿ ದೇವಸ್ಥಾನವನ್ನು ಮೇ ೨೦೧೦ ರಲ್ಲಿ ಸದ್ದಿಲ್ಲದೆ ಧ್ವಂಸ ಮಾಡಲಾಯಿತು; ಏಕೆಂದರೆ ಅನೇಕ ವರ್ಷಗಳಿಂದ ಈ ದೇವಸ್ಥಾನದ ನಿರ್ವಹಣೆಯಲ್ಲಿ ದುರ್ಲಕ್ಷ್ಯವಾಗುತ್ತಿತ್ತು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ರಾಜಕಾರಣಿ, ಬುದ್ಧಿಜೀವಿ ಅಥವಾ ವಿಜ್ಞಾನಿಗಳಿಂದಾಗಿ ವಿದೇಶಿಗರು ಭಾರತಕ್ಕೆ ಬರುವುದಿಲ್ಲ ಅವರು ಸಂತರಿಂದ ಹಾಗೆಯೇ ಅಧ್ಯಾತ್ಮ ಮತ್ತು ಸಾಧನೆಯನ್ನು ಕಲಿಯಲು ಬರುತ್ತಾರೆ, ಹಾಗಿದ್ದರೂ ಹಿಂದೂಗಳಿಗೆ ಸಂತರು ಮತ್ತು ಅಧ್ಯಾತ್ಮದ ಮೌಲ್ಯ ಇನ್ನೂ ತಿಳಿದಿಲ್ಲ.

ಜೂನ್ ಹಾಗೂ ಜುಲೈ ತಿಂಗಳುಗಳಲ್ಲಿನ ೩ ಗ್ರಹಣಗಳ ಪೈಕಿ ಕೇವಲ ೨೧.೬.೨೦೨೦ ರ ಸೂರ್ಯಗ್ರಹಣವು ಮಾತ್ರ ಭಾರತದಲ್ಲಿ ಗೋಚರಿಸುವುದರಿಂದ ಗರ್ಭಿಣಿಯರು ಹಾಗೂ ಎಲ್ಲ ಜನರು ಈ ಗ್ರಹಣದ ವೇಧಾದಿ ನಿಯಮಗಳನ್ನಷ್ಟೇ ಪಾಲಿಸಬೇಕು !

೨೧.೬.೨೦೨೦ ರ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಗರ್ಭವತಿ ಸ್ತ್ರೀಯರು ಹಾಗೂ ಎಲ್ಲ ಜನರು ಈ ಗ್ರಹಣದ ವೇಧಾದಿ ನಿಯಮಗಳನ್ನು ಪಾಲಿಸಬೇಕು.’

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಅಧ್ಯಾತ್ಮದ ಜಿಜ್ಞಾಸುಗಳು, ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆ ಮಾಡುವ ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಮಾರ್ಗದರ್ಶನವಾಗಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬುದಕ್ಕಾಗಿ ಸನಾತನವು ಆಚಾರಧರ್ಮ, ಧಾರ್ಮಿಕ ಕೃತಿ, ದೇವತೆಗಳು, ಸಾಧನೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ಗ್ರಂಥ ಮತ್ತು ಕಿರುಗ್ರಂಥಗಳನ್ನು ಪ್ರಕಾಶಿಸಿದೆ.

ಮುಂಬರುವ ಭೀಕರ ಆಪತ್ಕಾಲದಲ್ಲಿ ಆರೋಗ್ಯರಕ್ಷಣೆಗಾಗಿ ಉಪಯುಕ್ತವಾದ ಔಷಧಿ ವನಸ್ಪತಿಗಳನ್ನು ಬೆಳೆಸಿರಿ !

ಹಳ್ಳಿಗಳಲ್ಲಿ, ಹಾಗೆಯೇ ಅವುಗಳ ಹತ್ತಿರದ ಅರಣ್ಯಗಳಲ್ಲಿ ಬಹಳಷ್ಟು ಔಷಧಿ ಸಸ್ಯಗಳು ದೊರೆಯುತ್ತವೆ. ಅಲ್ಲಿನ ವಯಸ್ಕರ ಜನರಿಗೆ ಈ ಸಸ್ಯಗಳ ಬಗ್ಗೆ ಗೊತ್ತಿರುತ್ತದೆ. ನಗರಗಳಲ್ಲಿರುವ ಹೆಚ್ಚಿನ ಜನರು ರಜೆಯ ನಿಮಿತ್ತ ತಮ್ಮ ಹಳ್ಳಿಗಳಿಗೆ (ಊರಿಗೆ) ಹೋಗುತ್ತಿರುತ್ತಾರೆ. ಇಂತಹ ಸಮಯದಲ್ಲಿ ತಮಗೆ ಬೇಕಾದ ಸಸ್ಯಗಳ ಬೀಜ ಅಥವಾ ಸಸಿಗಳನ್ನು ತಮ್ಮ ಊರಿನಿಂದ ತರಬಹುದು.

ಅರ್ಪಣೆದಾರರೇ, ಗುರುಪೂರ್ಣಿಮೆಯ ನಿಮಿತ್ತ ಧರ್ಮಕಾರ್ಯಕ್ಕಾಗಿ ಧನವನ್ನು ಅರ್ಪಿಸಿ ಗುರುತತ್ತ್ವದ ಲಾಭವನ್ನು ಪಡೆದುಕೊಳ್ಳಿ !

ಪ್ರಸ್ತುತ ಧರ್ಮಗ್ಲಾನಿಯ ಕಾಲವಿರುವುದರಿಂದ, ‘ಧರ್ಮಪ್ರಸಾರದ ಕಾರ್ಯ ಮಾಡುವುದು’, ಅತ್ಯುತ್ತಮ ಅರ್ಪಣೆಯಾಗಿದೆ. ಆದ್ದರಿಂದ, ಧರ್ಮ ಪ್ರಸಾರದ ಕಾರ್ಯ ಮಾಡುವ ಸಂತರು, ಸಂಸ್ಥೆಗಳು ಅಥವಾ ಸಂಘಟನೆಗಳ ಕಾರ್ಯಕ್ಕೆ ಧನದ ದಾನವನ್ನು ಮಾಡುವುದು ಕಾಲಾನುಸಾರ ಅವಶ್ಯಕವಿದೆ.

ವಿಶ್ವವ್ಯಾಪಿ ಕೊರೊನಾ ಆವರಿಸಿದ ವೇಳೆ ಮನುಷ್ಯನಿಗೆ ಸಂಜೀವಿನಿಯಾದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ‘ಆನ್‌ಲೈನ್ ಸತ್ಸಂಗ ಮಾಲಿಕೆ

ಇಂತಹ ಅನೇಕ ಅಭಿಪ್ರಾಯಗಳಿಂದ ನಮಗೆ ಈ ಸತ್ಸಂಗದ ಮಾಧ್ಯಮದಿಂದ ಸಾಧಿಸಿರುವ ಪರಿಣಾಮವು ಗಮನಕ್ಕೆ ಬರುತ್ತದೆ. ಅನೇಕ ವೈಶಿಷ್ಟ್ಯಪೂರ್ಣ ಅಭಿಪ್ರಾಯಗಳು ಬಂದ ಬಳಿಕ ಪರಾತ್ಪರ ಗುರು ಡಾ. ಆಠವಲೆಯವರು ಸಮಾಜಕ್ಕೆ ಈ ಸತ್ಸಂಗದ ಮಾಧ್ಯಮದಿಂದ ನೀಡುತ್ತಿರುವ ಅಮೂಲ್ಯ ಜ್ಞಾನದ ಅಸಾಧಾರಣ ಮಹತ್ವದ ಅರಿವಾಯಿತು.

ವಿವಿಧ ವಿಷಯಗಳ ಬಗ್ಗೆ ಆರಂಭವಾದ ‘ಆನ್‌ಲೈನ್ ಸತ್ಸಂಗಗಳು

ಈಶ್ವರನ ಕುರಿತು ಭಕ್ತಿಯನ್ನು ಹೆಚ್ಚಿಸುವ ಈ ಭಾವಸತ್ಸಂಗವನ್ನು ಎಲ್ಲರೂ ಇಷ್ಟಪಟ್ಟು ನೋಡುತ್ತಾರೆ. ಅಲ್ಲದೇ ಈ ವಿಷಯದಲ್ಲಿ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಚಿಕ್ಕ ಚಿಕ್ಕ ಕೃತಿಯಿಂದ ಭಾವಜಾಗೃತಿಗಾಗಿ ಹೇಗೆ ಪ್ರಯತ್ನಿಸಬೇಕು ? ಎನ್ನುವ ಮಾರ್ಗದರ್ಶನ ಈ ಸತ್ಸಂಗದಿಂದ ಸಿಗುತ್ತಿರುವುದರಿಂದ ಸಮಾಜದ ಎಲ್ಲ ಸ್ತರಗಳಿಂದ ಈ ಸತ್ಸಂಗಕ್ಕೆ ಒಳ್ಳೆಯ ಪ್ರತಿಸ್ಪಂದನ ಲಭಿಸುತ್ತಿದೆ.