ಜೂನ್ ಹಾಗೂ ಜುಲೈ ತಿಂಗಳುಗಳಲ್ಲಿನ ೩ ಗ್ರಹಣಗಳ ಪೈಕಿ ಕೇವಲ ೨೧.೬.೨೦೨೦ ರ ಸೂರ್ಯಗ್ರಹಣವು ಮಾತ್ರ ಭಾರತದಲ್ಲಿ ಗೋಚರಿಸುವುದರಿಂದ ಗರ್ಭಿಣಿಯರು ಹಾಗೂ ಎಲ್ಲ ಜನರು ಈ ಗ್ರಹಣದ ವೇಧಾದಿ ನಿಯಮಗಳನ್ನಷ್ಟೇ ಪಾಲಿಸಬೇಕು !

ಸೌ. ಪ್ರಾಜಕ್ತಾ ಜೋಶಿ

‘ಪ್ರಸ್ತುತ ಪ್ರಸಾರಮಾಧ್ಯಮಗಳ ಮೂಲಕ ‘ಜೂನ್ ಹಾಗೂ ಜುಲೈ ತಿಂಗಳುಗಳಲ್ಲಿ ೩ ಗ್ರಹಣಗಳು (೫.೬.೨೦೨೦, ೨೧.೬.೨೦೨೦ ಹಾಗೂ ೫.೭.೨೦೨೦ ಈ ದಿನದಂದು) ಬರುವುದರಿಂದ ನೈಸರ್ಗಿಕ ಆಪತ್ತು ಬರುವುದು. ಎಚ್ಚರದಿಂದಿರಿ’, ಎಂಬಂತಹ ಸಂದೇಶಗಳು ಪ್ರಸಾರವಾಗುತ್ತಿವೆ. ಆದುದರಿಂದ ಅನೇಕ ಜನರಲ್ಲಿ ಗೊಂದಲ ಹಾಗೂ ಭಯದ ವಾತಾವರಣವು ಉಂಟಾಗುತ್ತಿದೆ.

೧. ವಸ್ತುಸ್ಥಿತಿ

ಅ. ಈ ೩ ಗ್ರಹಣಗಳ ಪೈಕಿ ಕೇವಲ ಜ್ಯೇಷ್ಠ ಅಮಾವಾಸ್ಯೆ, ರವಿವಾರ ೨೧.೬.೨೦೨೦ ರಂದು ಇರಲಿರುವ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸಲಿದೆ.

ಆ. ೫.೬.೨೦೨೦ ಈ ದಿನದಂದು ಇರುವ ಚಂದ್ರಗ್ರಹಣವು ‘ಛಾಯಾ ಕಲ್ಪ’ವಾಗಿದೆ. ಛಾಯಾಕಲ್ಪ ಚಂದ್ರಗ್ರಹಣದಲ್ಲಿ ಚಂದ್ರಬಿಂಬಕ್ಕೆ ಪ್ರತ್ಯಕ್ಷ ಗ್ರಹಣ ತಗಲುವುದಿಲ್ಲ. ಚಂದ್ರಬಿಂಬವು ಪೃಥ್ವಿಯ ಮಸುಕಾದ ಹಾಗೂ ಅಸ್ಪಷ್ಟ ಛಾಯೆಯನ್ನು ಪ್ರವೇಶಿಸುತ್ತದೆ. ಛಾಯಕಲ್ಪ ಗ್ರಹಣದ ಯಾವುದೇ ವೇಧಾದಿ ನಿಯಮಗಳನ್ನು ಪಾಲಿಸಬಾರದು’, ಎಂದಿರುವುದರಿಂದ ಈ ಗ್ರಹಣಗಳ ನೈಸರ್ಗಿಕ ಹಾಗೂ ಜನ್ಮರಾಶಿ ಇತ್ಯಾದಿಗನುಸಾರವಿರುವ ಪರಿಣಾಮಗಳನ್ನು ಪರಿಗಣಿಸಬೇಕಾಗಿಲ್ಲ.

ಇ. ಆಷಾಢ ಶುಕ್ಲಪಕ್ಷ ಹುಣ್ಣಿಮೆ, ಅಂದರೆ ಗುರುಪೂರ್ಣಿಮೆ, ರವಿವಾರ ೫.೭.೨೦೨೦ ರಂದು ಇರಲಿರುವ ಕುಮಾರಿ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಇದರಿಂದ ಈ ಗ್ರಹಣದ ವೇಧಾದಿ ಯಾವುದೇ ನಿಯಮಗಳನ್ನು ಪಾಲಿಸಬಾರದು.

ಈ. ಗರ್ಭವತಿ ಸ್ತ್ರೀಯರೂ ೫.೬.೨೦೨೦ ಹಾಗೂ ೫.೭.೨೦೨೦ ಈ ದಿನದಂದು ಇರಲಿರುವ ಚಂದ್ರಗ್ರಹಣಗಳ ಯಾವುದೇ ವೇಧಾದಿ ನಿಯಮಗಳನ್ನು ಪಾಲಿಸಬಾರದು.

ಉ. ೨೧.೬.೨೦೨೦ ರ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಗರ್ಭವತಿ ಸ್ತ್ರೀಯರು ಹಾಗೂ ಎಲ್ಲ ಜನರು ಈ ಗ್ರಹಣದ ವೇಧಾದಿ ನಿಯಮಗಳನ್ನು ಪಾಲಿಸಬೇಕು.’

– ಸೌ. ಪ್ರಾಜಕ್ತಾ ಜೋಶಿ, ‘ಜ್ಯೋತಿಷ ಫಲಿತ ವಿಶಾರದ’, ಜ್ಯೋತಿಷ್ಯ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ (೩೦.೫.೨೦೨೦)