ವಿಶ್ವವ್ಯಾಪಿ ಕೊರೊನಾ ಆವರಿಸಿದ ವೇಳೆ ಮನುಷ್ಯನಿಗೆ ಸಂಜೀವಿನಿಯಾದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ‘ಆನ್‌ಲೈನ್ ಸತ್ಸಂಗ ಮಾಲಿಕೆ

ಶ್ರೀ. ಪ್ರದೀಪ ವಾಡಕರ

೧.‘ಆನ್‌ಲೈನ್ ಸತ್ಸಂಗ ಮಾಲಿಕೆಗಳು ಆರಂಭದ ಹಿನ್ನೆಲೆ !

ಸದ್ಯ ಸಂಪೂರ್ಣ ಜಗತ್ತಿನಲ್ಲಿ ಕೊರೋನಾ ಮಹಾಮಾರಿಯ ಹಾಹಾಕಾರವಿದೆ. ಸಂಚಾರ ನಿಷೇಧ ಕಾರಣದಿಂದ ಜನರು ತಮ್ಮ ಮನೆಯ ಒಳಗೆ ಇದ್ದಾರೆ. ಇದರಿಂದ ಜನರ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂಬುದು ವಾಸ್ತವಿಕ ಸಮೀಕ್ಷೆಗಳಿಂದ ತಿಳಿದು ಬಂದಿದೆ. ಜನರು ಮನೆಯಲ್ಲಿಯೇ ಇರುವುದರಿಂದ ‘ಕೆಲವು ಸ್ಥಳಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚುತ್ತಿವೆ, ಇನ್ನು ಕೆಲವು ಸ್ಥಳಗಳಲ್ಲಿ ‘ವಿವಾಹ ವಿಚ್ಛೇದನೆ ಪ್ರಮಾಣವೂ ಹೆಚ್ಚಾಗುತ್ತಿದೆ, ಎನ್ನುವಂತಹ ಸುದ್ದಿಗಳು ಕೇಳಿಬರುತ್ತಿವೆ. ಸಾಧನೆ, ಹಾಗೆಯೇ ಒತ್ತಡ ಮುಕ್ತಿಗಾಗಿ ಸಾಧನೆಯ ಆವಶ್ಯಕತೆಯಿದೆ, ಈ ವಿಷಯದಲ್ಲಿ ಮನುಷ್ಯನಿಗೆ ಮಾಹಿತಿ ದೊರಕಬೇಕು ಹಾಗೂ ಈ ಪಿಡುಗಿನ ಕಠಿಣ ಪರಿಸ್ಥಿತಿಯಲ್ಲಿಯೂ ಈಶ್ವರನ ಭಕ್ತಿ ಮತ್ತು ಅಧ್ಯಾತ್ಮದ ಸಂಸ್ಕಾರವನ್ನು ಸಮಾಜ ಮನದಲ್ಲಿ ಬಿಂಬಿಸಲು ‘ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆಯ ಮಾಧ್ಯಮದಿಂದ ನಾವು ಏನಾದರೂ ಮಾಡಬೇಕು, ಎನ್ನುವ ಪ್ರೇರಣೆ ಮತ್ತು ಸಂತರ ಮಾರ್ಗದರ್ಶನದ ಮಾಧ್ಯಮದಿಂದ ೨೯ ಮಾರ್ಚ ರಂದು ‘ಆನ್‌ಲೈನ್ ಸತ್ಸಂಗ ಸರಣಿಗಳನ್ನು ಪ್ರಾರಂಭಿಸಲಾಯಿತು. ಈಗ ಇದಕ್ಕೆ ೨ ತಿಂಗಳು ಪೂರ್ಣವಾಗಿದೆ.

ಈ ‘ಆನ್‌ಲೈನ್ ಸತ್ಸಂಗವನ್ನು ಹಿಂದಿ ಭಾಷೆಯಲ್ಲಿ ಪ್ರಾರಂಭಿಸಲಾಗಿದೆ. ತದನಂತರ ಇತರ ಭಾಷೆಗಳಲ್ಲಿಯೂ ವರ್ಗಗಳನ್ನು ಪ್ರಾರಂಭಿಸುವಂತೆ ಅನೇಕರಿಂದ ಬೇಡಿಕೆಗಳು ಬರತೊಡಗಿತು. ಆ ಕಾರಣದಿಂದ ಕನ್ನಡ, ತಮಿಳು, ಮಲಯಾಳಂ, ತೆಲುಗು ಈ ಭಾಷೆಗಳಲ್ಲಿಯೂ ಸತ್ಸಂಗಗಳನ್ನು ಪ್ರಾರಂಭಿಸಲಾಯಿತು. ಅವುಗಳಿಗೂ ಉತ್ತಮ ಸ್ಪಂದನ ದೊರಕುತ್ತಿದೆ. ಈಗ ಇನ್ನೂ ಬೇರೆ ಬೇರೆ ಭಾಷೆಗಳಲ್ಲಿಯೂ ಸತ್ಸಂಗದ ಬೇಡಿಕೆ ಬರುತ್ತಿದೆ.

೨. ಧರ್ಮಶಿಕ್ಷಣ ನೀಡುವುದು ಮತ್ತು ಧರ್ಮಾಚರಣೆಯನ್ನು ಮಾಡಿಸಿಕೊಳ್ಳುವುದೇ ಈ ಸರಣಿಯ ಮುಖ್ಯ ಉದ್ದೇಶವಾಗಿದೆ

ಸಂಪೂರ್ಣ ಹಿಂದೂ ಸಮಾಜಕ್ಕೆ ಸಂಚಾರ ನಿಷೇಧದ (ಲಾಕ್‌ಡೌನ್) ಸಮಯದಲ್ಲಿ ಧರ್ಮದ ವಿಷಯದ ಮಾಹಿತಿ ದೊರೆಯಬೇಕು, ಅಲ್ಲದೇ ಧರ್ಮಶಿಕ್ಷಣವನ್ನು ಪಡೆದು ಆಚರಣೆಯಲ್ಲಿ ಹೇಗೆ ತರಬೇಕು ? ಇಂದಿನ ಕಠಿಣ ಕಾಲದಲ್ಲಿಯೂ ಸಂಪೂರ್ಣ ಜಗತ್ತಿಗೆ ಹಿಂದೂ ಧರ್ಮದ ಶ್ರೇಷ್ಠತೆ ಅರಿವಾಗಿ ಹಿಂದೂಗಳ ಆಚಾರಧರ್ಮವನ್ನು ಎಲ್ಲೆಡೆ ಸ್ವಾಗತ ಮಾಡಲಾಗುತ್ತಿದೆ. ಇಂತಹ ಮಹಾನ್ ಹಿಂದೂ ಧರ್ಮದ ಮಹತ್ವ ಎಲ್ಲರಿಗೂ ಮನೆಯಲ್ಲಿ ಕುಳಿತೇ ಸಿಗುವಂತಾಗಬೇಕು, ಎನ್ನುವುದು ಈ ಮಾಲಿಕೆಯ ಮುಖ್ಯ ಉದ್ದೇಶವಾಗಿದೆ. ಸಾಧನೆ ಮಾಡುವುದು ಇದೊಂದೇ ಕೊರೋನಾ ತಂದಿಟ್ಟಿರುವ ಆಪತ್ಕಾಲದಲ್ಲಿ ಉತ್ಪನ್ನವಾಗಿರುವ ಒತ್ತಡದ ಸ್ಥಿತಿಗೆ ಪರಿಹಾರೋಪಾಯವಾಗಿದೆ ಈ ಆವಶ್ಯಕತೆ ಜನರಿಗೆ ಅರಿವಾಗಬೇಕು. ‘ಈಶ್ವರನು ಯಾವಾಗಲೂ ತನ್ನ ಭಕ್ತರ ರಕ್ಷಣೆಯನ್ನು ಮಾಡುತ್ತಾನೆ ಎನ್ನುವುದನ್ನು ಗಮನದಲ್ಲಿರಿಸಿ ಮುಂಬಲಿರುವ ಆಪತ್ಕಾಲದಲ್ಲಿ ಈಶ್ವರ ಭಕ್ತಿಯನ್ನು ಹೆಚ್ಚಿಸಲು ನಾವು ಏನು ಮಾಡಬೇಕು ? ಇದರ ಬಗ್ಗೆ  ಜಿಜ್ಞಾಸುಗಳಿಗೆ ಸರಳ ಸುಲಭವಾದ ಭಾಷೆಯಲ್ಲಿ ಮಾರ್ಗದರ್ಶನ ಸಿಗಬೇಕು, ಎನ್ನುವ ವ್ಯಾಪಕ ದೃಷ್ಟಿಕೋನ ಈ ಮಾಧ್ಯಮದಿಂದ ಎಲ್ಲ ಸಾಧಕರಿಗೆ ದೊರಕಿತು.

೩. ವಿಶೇಷ ತಾಂತ್ರಿಕ ಸಿದ್ಧತೆ ಇಲ್ಲದೆಯೂ ಈಶ್ವರನ ಸಂಕಲ್ಪದಿಂದ ಸತ್ಸಂಗದ ಆಗುವುದು !

ದೇಶದಲ್ಲಿ ಸಂಚಾರ ನಿಷೇಧ ಘೋಷಿಸಿದ ಬಳಿಕ ‘ಆನ್‌ಲೈನ್ ಸತ್ಸಂಗದ ಮಾಧ್ಯಮದಿಂದ ಜನರಿಗೆ ಮಾಹಿತಿಯನ್ನು ನೀಡಬೇಕು ಎನ್ನುವ ದೃಷ್ಟಿಯಿಂದ ಆಯೋಜನೆ ಮಾಡಲಾಯಿತು. ಆ ಸಮಯದಲ್ಲಿ ಜಿಲ್ಲೆಗಳಲ್ಲಿ ತಾಂತ್ರಿಕ ಸಿದ್ಧತೆಗಳು ಇರಲಿಲ್ಲ, ಅಲ್ಲದೇ ಬೇರೆ ಬೇರೆ ವಿಷಯಗಳ ಮೇಲೆ ‘ಆನ್‌ಲೈನ್ ಸತ್ಸಂಗದ ಪ್ರಸಾರವನ್ನು ಮಾಡಲು ಸಾಧ್ಯ ವಾಗುವಂತಹ ಪೂರ್ವಸಿದ್ಧತೆಗಳೂ ಇರಲಿಲ್ಲ; ಆದರೆ ಸಂತರ ಮಾರ್ಗದರ್ಶನದಿಂದ ಸತ್ಸಂಗ ಪ್ರಾರಂಭವಾದ ಬಳಿಕ ಸಾಧಕರ ಅಪಾರ ಪ್ರಯತ್ನ ಮತ್ತು ಗುರುದೇವರ ಸಂಕಲ್ಪಶಕ್ತಿಯಿಂದ ತಾಂತ್ರಿಕ ಅಡಚಣೆಗಳು ದೂರವಾದವು. ಆಯಾ ಸಮಯದಲ್ಲಿ ಸಹಾಯ ದೊರೆತಿದ್ದರಿಂದ ಜಿಲ್ಲೆಯ ಸಾಧಕರು ತಾಂತ್ರಿಕ ಸೇವೆಯನ್ನು ಮಾಡಲು ಸಿದ್ಧರಾದರು ಮತ್ತು ನಿಜವಾದ ಅರ್ಥದಿಂದ ಸೇವೆಗೆ ಚಾಲನೆ ದೊರೆಯಿತು.

ಸತ್ಸಂಗಕ್ಕಾಗಿ ಬೇಕಾಗುವ ತಾಂತ್ರಿಕ ಉಪಕರಣಗಳು, ಅಲ್ಲದೇ ಇತರ ಸೌಲಭ್ಯಗಳು ಗುರುಕೃಪೆಯಿಂದ ಲಭ್ಯವಾಗತೊಡಗಿತು ಮತ್ತು ಸತ್ಸಂಗದ ಪ್ರಸಾರ ಪ್ರಾರಂಭವಾಯಿತು. ಸಂಚಾರ ನಿಷೇಧವಿರುವಾಗ ಗುರುದೇವರ ಕೃಪೆಯಿಂದ ‘ಆನ್‌ಲೈನ್ ಸತ್ಸಂಗದ ಪ್ರಸಾರ ಕಳೆದ ೨ ತಿಂಗಳಿನಿಂದ ಪ್ರತಿದಿನ ನಡೆಯುತ್ತಿರುವುದು ದೈವಿ ಅನುಭೂತಿಯೇ ಆಗಿದೆ ಮತ್ತು ಗುರುಗಳ ಸಂಕಲ್ಪಶಕ್ತಿಯ ಉದಾಹರಣೆಯಾಗಿದೆ.

೪. ಸತ್ಸಂಗಕ್ಕೆ ದೊರೆಯುತ್ತಿರುವ ಪ್ರತಿಕ್ರಿಯೆ ಮತ್ತು ಸಿಕ್ಕಿದ ವೈಶಿಷ್ಯ್ಯಪೂರ್ಣ ಅಭಿಪ್ರಾಯಗಳು

ಸತ್ಸಂಗ ಪ್ರಾರಂಭವಾದ ಬಳಿಕ ಸತ್ಸಂಗದ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತ ಹೋಯಿತು; ಆದರೆ ಅದರೊಂದಿಗೆ ಸತ್ಸಂಗದ ಕುರಿತು ಅಭಿಪ್ರಾಯವನ್ನು ನೀಡುವವರ ಪ್ರಮಾಣವೂ ಹೆಚ್ಚಾಯಿತು.

ಕೆಲವು ವೈಶಿಷ್ಟ್ಯಪೂರ್ಣ ಅಭಿಪ್ರಾಯಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ಅ. ‘ಅನ್‌ಲೈನ್ ಸತ್ಸಂಗ ಬಹಳ ಚೆನ್ನಾಗಿದೆ. ಇಲ್ಲಿ ತಿಳಿಸುವ ಮಾಹಿತಿ ಉಚ್ಚಮಟ್ಟದ್ದಾಗಿದೆ. ನಾನು ಬೆಳಗ್ಗೆ ಮನೆಯ ಎಲ್ಲ ಕೆಲಸಗಳನ್ನು ‘ಆನ್‌ಲೈನ್ ಸತ್ಸಂಗ ಪ್ರಾರಂಭವಾಗುವ ಮೊದಲೇ ಪೂರ್ಣಗೊಳಿಸುತ್ತೇನೆ. ಇದರಿಂದ ನನಗೆ ಪ್ರತಿದಿನ ಸತ್ಸಂಗದ ಲಾಭ ಪಡೆಯಲು ಸಾಧ್ಯವಾಗುತ್ತಿದೆ. – ಓರ್ವ ಗೃಹಿಣಿ.

ಆ. ‘ಧರ್ಮದ ವಿಷಯದಲ್ಲಿ ತಿಳಿಯದಿರುವ ಮಾಹಿತಿ ನಮಗೆ ಸತ್ಸಂಗದಿಂದ ತಿಳಿಯಿತು. ಅದಕ್ಕಾಗಿ ನಾವು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಗೆ ಕೃತಜ್ಞರಾಗಿದ್ದೇವೆ – ಅನೇಕ ಜಿಜ್ಞಾಸುಗಳು.

ಇಂತಹ ಅನೇಕ ಅಭಿಪ್ರಾಯಗಳಿಂದ ನಮಗೆ ಈ ಸತ್ಸಂಗದ ಮಾಧ್ಯಮದಿಂದ ಸಾಧಿಸಿರುವ ಪರಿಣಾಮವು ಗಮನಕ್ಕೆ ಬರುತ್ತದೆ. ಅನೇಕ ವೈಶಿಷ್ಟ್ಯಪೂರ್ಣ ಅಭಿಪ್ರಾಯಗಳು ಬಂದ ಬಳಿಕ ಪರಾತ್ಪರ ಗುರು ಡಾ. ಆಠವಲೆಯವರು ಸಮಾಜಕ್ಕೆ ಈ ಸತ್ಸಂಗದ ಮಾಧ್ಯಮದಿಂದ ನೀಡುತ್ತಿರುವ ಅಮೂಲ್ಯ ಜ್ಞಾನದ ಅಸಾಧಾರಣ ಮಹತ್ವದ ಅರಿವಾಯಿತು. (ಈ ವಿಷಯಕ್ಕೆ ಸಂಬಂಧಿಸಿದ ಹೆಚ್ಚಿನ ಅಭಿಪ್ರಾಯಗಳನ್ನು ಪ್ರತ್ಯೇಕ ಲೇಖನದಿಂದ ಪ್ರಸಾರ ಮಾಡುತ್ತಿದ್ದೇವೆ) ಸಮಾಜದ ಮನಸ್ಸಿನಿಂದ ಬರುವ ಸ್ಪೂರ್ತಿದಾಯಕ ಪ್ರತಿ ಸ್ಪಂದನ ಮತ್ತು ಅನುಭೂತಿಯನ್ನು ನೋಡಿದಾಗ ಆ ಮಾಧ್ಯಮದಿಂದ ಪರಾತ್ಪರ ಗುರು ಡಾ. ಆಠವಲೆಯವರ ಅಲೌಕಿಕ ಕಾರ್ಯ ಮತ್ತು ಅವರ ದೂರದೃಷ್ಟಿಯ ಅನುಭವದ ಅರಿವಾಗುತ್ತದೆ.

೫.ಕೃತಜ್ಞತೆ

ಇಂದು ಕೊರೋನಾ ಕಾರಣದಿಂದ ಸಂಪೂರ್ಣ ಜಗತ್ತು ಒತ್ತಡದಲ್ಲಿರುವಾಗ ‘ಆನ್‌ಲೈನ್ ಸತ್ಸಂಗದ ಮಾಧ್ಯಮದಿಂದ ಪರಾತ್ಪರ ಗುರು ದೇವರು ಕೇವಲ ಸಾಧಕರಿಗಷ್ಟೇ ಅಲ್ಲ, ಸಮಾಜದ ಜಿಜ್ಞಾಸುಗಳ ಕಾಳಜಿಯನ್ನೂ ತೆಗೆದು ಕೊಳ್ಳುತ್ತಿದ್ದಾರೆ ಮತ್ತು ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇದಕ್ಕ್ಕಾಗಿ ಅವರ ಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಗಳು !

– ಶ್ರೀ. ಪ್ರದೀಪ ವಾಡಕರ, ದೆಹಲಿ