ತಮ್ಮ ರಕ್ಷಣೆಗಾಗಿ ಕಾಶ್ಮೀರಿ ಹಿಂದೂಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿ !

ಜಮ್ಮು – ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್.ಪಿ. ವೇದ ಇವರ ಸಲಹೆ

  • ಹಿರಿಯ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಇಂತಹ ಸಲಹೆಗಳನ್ನು ನೀಡುತ್ತಾರೆ, ಇದು ಇಂದಿನವರೆಗಿನ ಸರಕಾರಗಳು, ಪೊಲೀಸ್ ಮತ್ತು ಆಡಳಿತದ ವೈಫಲ್ಯವೇ ಆಗಿದೆ !

  • ಬೆರಳೆಣಿಕೆಯಷ್ಟು ಜಿಹಾದಿ ಭಯೋತ್ಪಾದಕರನ್ನು ಮಟ್ಟಹಾಕಲು ಸಾಧ್ಯವಾಗದ ಹಿಂದಿನ ಎಲ್ಲ ಸರಕಾರಗಳಿಗೆ ನಾಚಿಕೆಯ ವಿಷಯವಾಗಿದೆ ! ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !

ಶ್ರೀನಗರ: ಭಯೋತ್ಪಾದನೆ ವಿರುದ್ಧ ಹೋರಾಡಲು ಕಾಶ್ಮೀರ ಕಣಿವೆಯಲ್ಲಿರುವ ಹಿಂದೂ ಅಲ್ಪಸಂಖ್ಯಾತರಿಗೆ ತಮ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸಬೇಕು, ಎಂದು ಜಮ್ಮು ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್.ಪಿ. ವೇದ ಇವರು ಆಂಗ್ಲ ಸುದ್ದಿವಾಹಿನಿಯೊಂದರಲ್ಲಿ ಮಾತನಾಡುತ್ತಾ ಹೇಳಿದರು. ಕಾಶ್ಮೀರಿ ಹಿಂದೂಗಳಾದ ಪಂಚಾಯತಿ ಅಧ್ಯಕ್ಷ ಅಜಯ ಪಂಡಿತಾ ಅವರನ್ನು ಜಿಹಾದಿ ಉಗ್ರರು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಅವರು ಈ ಸಲಹೆ ನೀಡಿದರು. ಕಾಶ್ಮೀರ ಕಣಿವೆಯಲ್ಲಿರುವ ಅಸುರಕ್ಷಿತ ಮುಸಲ್ಮಾನರಿಗೂ ಶಸ್ತ್ರಾಸ್ತ್ರಗಳನ್ನು ನೀಡಬೇಕು ಎಂದರು.

ವೇದ ಅವರು ಮುಂದೆ ಮಾತನಾಡುತ್ತಾ, “ಕಾಶ್ಮೀರ ಕಣಿವೆಯಲ್ಲಿರುವ ಹಿಂದೂ ಅಲ್ಪಸಂಖ್ಯಾತರಿಗೆ ಶಸ್ತ್ರಾಸ್ತ್ರಗಳನ್ನು ನೀಡಬೇಕು ಮತ್ತು ಅವುಗಳನ್ನು ಭಯೋತ್ಪಾದನೆ ವಿರುದ್ಧ ಹೋರಾಡಲು ಸಾಧ್ಯವಾಗುವಂತೆ ಅವುಗಳನ್ನು ನಿರ್ವಹಿಸಲು ತರಬೇತಿ ನೀಡಬೇಕು” ಎಂದು ವೇದರವರು ಹೇಳಿದರು. ಜಮ್ಮುವಿನ ಚೆನಾಬ್ ಕಣಿವೆಯಲ್ಲಿ ಹಿಂದೂಗಳಿಗೆ ಅವರ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ನೀಡಲಾಗಿತ್ತು. ಆದ್ದರಿಂದ ೯೦ ರ ದಶಕದಲ್ಲಿ ಈ ಪ್ರದೇಶದಿಂದ ಹಿಂದೂಗಳ ವಲಸೆಯನ್ನು ಹೋಗುವುದನ್ನು ತಡೆಯಲು ಇದು ಸಹಾಯವಾಗಿತ್ತು. ಇಸ್ರೇಲ್‌ನಂತೆ ಕಾಶ್ಮೀರ ಕಣಿವೆಯಲ್ಲಿ ದುರ್ಬಲರಿಗೆ ವಿಶೇಷ ನಿಯಮಗಳು ನೀಡುವ ಅಗತ್ಯವಿದೆ. ಅಲ್ಪಸಂಖ್ಯಾತ ಕಾಶ್ಮೀರಿ ಹಿಂದೂಗಳಲ್ಲಿ ಸುರಕ್ಷಿತತತೆಯ ಭಾವನೆ ಮೂಡಿಸಲು ಎಲ್ಲ ರೀತಿಯಲ್ಲಿ ಪ್ರಯತ್ನಗಳನ್ನು ಮಾಡಬೇಕು. ಕಾಶ್ಮೀರ ಕಣಿವೆಯಲ್ಲಿ ‘ಗ್ರಾಮ ಭದ್ರತಾ ಸಮಿತಿ’ ರಚಿಸುವುದು ಅವಶ್ಯಕವಾಗಿದೆ. ಇದಕ್ಕೆ ಆಳವಾದ ಯೋಜನೆ ಅಗತ್ಯವಿದೆ. ಇದು ಕಠಿಣ ಕೆಲಸವಿದ್ದರೂ ಅಸಾಧ್ಯವೇನಲ್ಲ” ಎಂದು ಹೇಳಿದರು.