ಮುಂಬರುವ ಭೀಕರ ಆಪತ್ಕಾಲದಲ್ಲಿ ಆರೋಗ್ಯರಕ್ಷಣೆಗಾಗಿ ಉಪಯುಕ್ತವಾದ ಔಷಧಿ ವನಸ್ಪತಿಗಳನ್ನು ಬೆಳೆಸಿರಿ !

ಮುಂಬರುವ ಕಾಲದಲ್ಲಿ ಮೂರನೇ ಮಹಾಯುದ್ಧವಾಗಿ ಅದರಲ್ಲಿ ಕೋಟ್ಯವಧಿ ಜನರು ಅಣುಸಂಹಾರದಿಂದಾಗಿ ಮೃತ್ಯುಪಡುವರು, ಹಾಗೆಯೇ ಭೀಕರ ನೈಸರ್ಗಿಕ ಆಪತ್ತು ಸಹ ಬರುವುದು, ಎಂದು ಸಂತರ ಭವಿಷ್ಯ ನುಡಿದಿದ್ದಾರೆ. ಆಪತ್ಕಾಲದಲ್ಲಿ ಸಾರಿಗೆ ಸಂಪರ್ಕದ ಸಾಧನಗಳು, ಡಾಕ್ಟರ್, ರೆಡಿಮೆಡ್(ತಯಾರಿ) ಔಷಧಗಳು ಇತ್ಯಾದಿ ಸಿಗುತ್ತದೆಂಬುದು ಖಚಿತವಿಲ್ಲ. ಪ್ರಸ್ತುತ ಕೊರೋನಾದಿಂದಾಗಿ ಈ ಸ್ಥಿತಿಯು ಎಲ್ಲೆಡೆಗೆ ಅನುಭವಿಸುತ್ತಿದ್ದೇವೆ. ಆಪತ್ಕಾಲದಲ್ಲಿ ಆಯುರ್ವೇದದ ಔಷಧಿಯ ವನಸ್ಪತಿಗಳನ್ನು ಬಳಸಿ ಆರೋಗ್ಯ ರಕ್ಷಣೆಯನ್ನು ಮಾಡಿಕೊಳ್ಳಬೇಕಾಗಿದೆ. ಯೋಗ್ಯ ಸಮಯದಲ್ಲಿ ಯೋಗ್ಯವಾದ ಔಷಧಿ ವನಸ್ಪತಿಗಳು ಸಿಗಬೇಕೆಂದು ಅವು ನಮ್ಮ ಸುತ್ತಮುತ್ತಲೂ ಇರುವುದು ಆವಶ್ಯಕವಿದೆ. ಇದಕ್ಕಾಗಿ ಇಂತಹ ಔಷಧಿ ವನಸ್ಪತಿಗಳ ಕೃಷಿಯನ್ನು ಈಗಲೇ ಮಾಡಿಡುವುದು ಕಾಲದ ಆವಶ್ಯಕತೆ ಇದೆ ಎಂಬುದನ್ನು ಗಮನಿಸಬೇಕಿದೆ. ನೈಸರ್ಗಿಕ, ಹಾಗೆಯೇ ಮಾನವನಿರ್ಮಿತ ವಿವಿಧ ಕಾರಣಗಳಿಂದಾಗಿ ಅನೇಕ ಔಷಧಿ ವನಸ್ಪತಿಗಳು ದುರ್ಲಭವಾಗಿವೆ. ಅವುಗಳ ಕೃಷಿಯಿಂದ ಅವುಗಳ ಸಂವರ್ಧನೆಯೊಂದಿಗೆ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿಯೂ ಸಹಾಯವಾಗಲಿದೆ. ಮುಂಬರುವ ಹಿಂದೂ ರಾಷ್ಟ್ರದಲ್ಲಿ ಆಯುರ್ವೇದವೇ ಮುಖ್ಯ ಚಿಕಿತ್ಸಾ ಪದ್ಧತಿಯಾಗಿರಲಿದೆ. ಈ ದೃಷ್ಟಿಯಿಂದಲೂ ಆಯುರ್ವೇದದ ಸಂವರ್ಧನೆಗಾಗಿ ವನೌಷಧಿಗಳ ಕೃಷಿಯನ್ನು ಮಾಡುವುದು ಆವಶ್ಯಕವಾಗಿದೆ. ಆಯುರ್ವೇದವು ಭಾರತೀಯ ಶಾಸ್ತ್ರವಾಗಿದೆ. ಅದರ ಸಂವರ್ಧನೆಗಾಗಿ ಔಷಧಿ ವನಸ್ಪತಿಗಳ ಕೃಷಿಯನ್ನು ಮಾಡುವುದು ಪ್ರತಿಯೊಬ್ಬ ರಾಷ್ಟ್ರಪ್ರೇಮಿ ನಾಗರಿಕರ ಕರ್ತವ್ಯವಾಗಿದೆ.

ಈ ಲೇಖನದಲ್ಲಿ ನೀಡಿದ ಮಾಹಿತಿಯು ಸನಾತನದ ಗ್ರಂಥ ‘ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ’ ಈ ಗ್ರಂಥದಿಂದ ಸಂಕಲನ ಮಾಡಲಾಗಿದೆ. ಸವಿಸ್ತಾರ ಮಾಹಿತಿಗಾಗಿ ವಾಚಕರು ಈ ಗ್ರಂಥವನ್ನು ಅವಶ್ಯವಾಗಿ ಓದಿರಿ.

೧.  ಔಷಧೀಯ ಸಸ್ಯಗಳನ್ನು ನೆಡುವ ಮೊದಲು ಗಮನಿಸಬೇಕಾದ ಅಂಶಗಳು

ಅ. ಔಷಧೀಯ ಸಸ್ಯಗಳ ಸಾಗುವಳಿಯನ್ನು ಮಳೆಗಾಲದ ಆರಂಭದಲ್ಲಿ, ಅಂದರೆ ೧೫ ಜೂನ್ ನಿಂದ ೧೫ ಜುಲೈ ಈ ಕಾಲಾವಧಿಯಲ್ಲಿ ಮಾಡಿದರೆ ಅವುಗಳ ಬೆಳವಣಿಗೆಯು ಒಳ್ಳೆಯ ರೀತಿಯಲ್ಲಾಗುತ್ತದೆ.

ಆ. ಔಷಧೀಯ ಸಸ್ಯಗಳನ್ನು ನೆಡುವುದಕ್ಕಿಂತ ಮೊದಲು ಬೀಜ, ಸಸಿ, ಕುಂಡ ಇತ್ಯಾದಿ ವಸ್ತುಗಳನ್ನು ಸಂಗ್ರಹಿಸುವುದು, ಗುಂಡಿಗಳನ್ನು ತೋಡುವುದು ಇವೆಲ್ಲ ಪೂರ್ವಸಿದ್ಧತೆಯನ್ನು ಮಾಡಬೇಕಾಗುತ್ತದೆ.

ಇ. ಯಾವುದಾದರೊಂದು ಸಸ್ಯವನ್ನು ಎಷ್ಟು ಸಂಖ್ಯೆಯಲ್ಲಿ ನೆಡಬೇಕು, ಎಂಬುದನ್ನು ಪ್ರತಿಯೊಬ್ಬರೂ ತಮ್ಮ ಆವಶ್ಯಕತೆಗನುಸಾರ ತಾರತಮ್ಯದಿಂದ ನಿರ್ಧರಿಸಬೇಕು.

ಈ. ವಾಚಕರು ಆವಶ್ಯಕತೆಗನುಸಾರ ತಾರತಮ್ಯದಿಂದ ಸ್ಥಳೀಯ ತಜ್ಞರು ಅಥವಾ ವೈದ್ಯರೊಂದಿಗೆ ವಿಚಾರ ವಿನಿಮಯ ಮಾಡಿ ಗಿಡಗಳನ್ನು ನೆಡಬಹುದು.

ಉ. ಕುಟುಂಬದ ಇತರ ಸದಸ್ಯರಿಗೂ ಔಷಧೀಯ ಸಸ್ಯಗಳ ಪರಿಚಯ ಮಾಡಿಕೊಡಬೇಕು. ಔಷಧೀಯ ಸಸ್ಯಗಳ ಸ್ಥಳದಲ್ಲಿ ಅವುಗಳ ಹೆಸರಿನ ಫಲಕವನ್ನೂ ಹಾಕಬೇಕು. ಇದರಿಂದ ಎಲ್ಲರಿಗೂ ಆ ಸಸ್ಯದ ಪರಿಚಯವಾಗುವುದು.

ಊ. ಕಾಲವು ಯಾರಿಗಾಗಿಯೂ ನಿಲ್ಲುವುದಿಲ್ಲ, ಎಂಬುದನ್ನು ಅರಿತು ಸಮಯ ಕಳೆಯದೇ ಆದಷ್ಟು ಬೇಗ ತಮ್ಮ ಕ್ಷಮತೆಗನುಸಾರ ಔಷಧೀಯ ಸಸ್ಯಗಳನ್ನು ನೆಡುವ ಆಯೋಜನೆಯನ್ನು ಪೂರ್ಣಗೊಳಿಸಿರಿ.

೨. ಪ್ರಸ್ತುತ ಲೇಖನವನ್ನು ಓದುವಾಗ ಗಮನದಲ್ಲಿಡಬೇಕಾದ ಕೆಲವು ಅಂಶಗಳು

ಅ. ಈ ಲೇಖನದಲ್ಲಿ ಭಾರತದ ಬಹುತೇಕ ಭಾಗಗಳಲ್ಲಿ ಸಹಜವಾಗಿ ಬೆಳೆಯಬಲ್ಲ ಆಯ್ದ ಸಸ್ಯಗಳ ಮಾಹಿತಿಯನ್ನು ನೀಡಲಾಗಿದೆ.

ಆ. ಔಷಧಿ ಸಸ್ಯಗಳ ಹೆಸರುಗಳು ಪ್ರದೇಶಗಳಿಗನುಸಾರ ಬದಲಾಗಬಹುದು, ಇದನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಸಸ್ಯದ ಲ್ಯಾಟಿನ್ ಹೆಸರನ್ನೂ ನೀಡಲಾಗಿದೆ.

ಈ ಆಧಾರದಲ್ಲಿ ‘ಇಂಟರ್‌ನೆಟ್ನಿಂದ ಸಸ್ಯಗಳ ಛಾಯಾಚಿತ್ರಗಳು, ಹಾಗೆಯೇ ಇತರ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇ. ಕೆಲವು ಔಷಧಿ ಸಸ್ಯಗಳನ್ನು ಗುರುತಿಸಲಾಗದಿದ್ದಲ್ಲಿ ಅವುಗಳ ಬಗ್ಗೆಯೂ ಸ್ಥಳೀಯ ತಜ್ಞರು ಅಥವಾ ವೈದ್ಯರಲ್ಲಿ ಕೇಳಿಕೊಳ್ಳಬೇಕು.

ಈ. ಈ ಲೇಖನದಲ್ಲಿ ನಮೂದಿಸಲಾದ ಔಷಧಿ ಸಸ್ಯಗಳ ಹೊರತು ಪಡಿಸಿ ಇತರ ಔಷಧಿ ಸಸ್ಯಗಳನ್ನೂ ಬೆಳೆಸಬಹುದು.

೩. ಪ್ರತಿಯೊಬ್ಬರಿಗೂ ಮನೆಯ ಮೊಗಸಾಲೆಯಲ್ಲಿಯೂ (ಬಾಲ್ಕನಿ) ನೆಡಲು ಸಾಧ್ಯವಾಗಬಲ್ಲ ಆಯ್ದ ಔಷಧಿ ಸಸ್ಯಗಳು

ಮುಂದಿನ ಕೋಷ್ಟಕದಲ್ಲಿ ಎಲ್ಲೆಡೆ ಬೆಳೆಯ ಬಹುದಾದ ಹಾಗೂ ಅತಿ ಮಹತ್ವದ ೧೬ ಔಷಧೀಯ ವನಸ್ಪತಿಗಳ ಹೆಸರುಗಳನ್ನು ಕೊಡಲಾಗಿದೆ. ಪ್ರತಿ ಯೊಬ್ಬರು ಕಡಿಮೆಪಕ್ಷ ಇಷ್ಟಾದರೂ ವನಸ್ಪತಿಗಳನ್ನು ತಮ್ಮ ಮನೆಯ ಸುತ್ತಲೂ ನೆಡಬೇಕು. ಕೋಷ್ಟಕದಲ್ಲಿನ ವನಸ್ಪತಿಗಳ ಹೆಸರುಗಳನ್ನು ಪ್ರಾಧಾನ್ಯಕ್ರಮಕ್ಕನುಸಾರ ಕೊಡಲಾಗಿದೆ, ಅಂದರೆ ೧೬ ನೇ ಕ್ರಮಾಂಕದ ವನಸ್ಪತಿಗಿಂತ ೧೫ ನೇ ಕ್ರಮಾಂಕದ ವನಸ್ಪತಿಯು ಹೆಚ್ಚು ಪ್ರಾಧಾನ್ಯತೆಯದಾಗಿದೆ. ಈ ಕ್ರಮದಿಂದ ಮೊದಲನೇ ಕ್ರಮಾಂಕದ ವನಸ್ಪತಿಯು ಅತ್ಯಧಿಕ ಪ್ರಾಧಾನ್ಯತೆಯದಾಗಿದೆ. ಆದುದರಿಂದ ೧೬ ವನಸ್ಪತಿಗಳನ್ನು ಬೆಳೆಸುವುದು ಸಾಧ್ಯವಿಲ್ಲದಿದ್ದರೆ ಪ್ರಾಧಾನ್ಯ ಕ್ರಮಕ್ಕನುಸಾರ ಸಾಧ್ಯವಿದ್ದಷ್ಟು ವನಸ್ಪತಿಗಳನ್ನು ನೆಡಬೇಕು. ಈ ವನಸ್ಪತಿಗಳ ಸವಿಸ್ತಾರ ಔಷಧೀಯ ಉಪಯೋಗವನ್ನು ಸನಾತನದ ಗ್ರಂಥ ‘ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ ಈ ಗ್ರಂಥದಲ್ಲಿ ಕೊಡಲಾಗಿದೆ.

ಮನೆಯ ಸುತ್ತಲೂ ಸಾಕಷ್ಟು ಜಾಗವಿಲ್ಲದಿದ್ದರೆ ಮುಂದಿನ ಸಸ್ಯಗಳನ್ನು ಕುಂಡಗಳಲ್ಲಿ ಅಥವಾ ಪ್ಲಾಸ್ಟಿಕ್‌ನ ಚೀಲಗಳಲ್ಲಿ ನೆಟ್ಟು ಬಾಲ್ಕನಿಯಲ್ಲಿ ಅಥವಾ ಟೆರೇಸಿನಲ್ಲಿ ಇಡಬಹುದು. ಇವುಗಳ ಪೈಕಿ ಅಮೃತ ಬಳ್ಳಿ, ಜಾಜಿ, ವೀಳ್ಯದೆಲೆಯ ಬಳ್ಳಿ ಮತ್ತು ಸಂದುವಳ್ಳಿಯಂತಹ ಸಸ್ಯಗಳನ್ನು ಬೆಳೆಯಲು ಆಧಾರದ ಆವಶ್ಯಕತೆ ಇರುತ್ತದೆ. ನೆಕ್ಕಿ, ಆಡುಸೋಗೆ ಮತ್ತು ದಾಸವಾಳ ಈ ಸಸ್ಯಗಳನ್ನು ೩ ವರ್ಷಗಳವರೆಗೆ ಕುಂಡಗಳಲ್ಲಿ ಇಡಬಹುದು. ಈ ಸಸ್ಯಗಳ ಬೆಳವಣಿಗೆಯು ಹೆಚ್ಚಿರುವುದರಿಂದ ಅನಂತರ ಅವುಗಳನ್ನು ಭೂಮಿಯಲ್ಲಿ ನೆಡಬೇಕಾಗುತ್ತದೆ; ಆದರೆ ನಿಯಮಿತವಾಗಿ ಕತ್ತರಿಸಿ ಅವುಗಳ ಬೆಳವಣಿಗೆಯನ್ನು ಮಿತಿಯಲ್ಲಿಟ್ಟರೆ ಅವುಗಳನ್ನು ಕುಂಡಗಳಲ್ಲಿಯೇ ಇಡಬಹುದು. ಈ ಸಸ್ಯಗಳು ಹೆಚ್ಚಿನ ರೋಗಗಳಲ್ಲಿ ಉಪಯುಕ್ತವಾಗಿರುವುದರಿಂದ ಪ್ರತಿಯೊಬ್ಬರೂ ಈ ಸಸ್ಯಗಳನ್ನು ತಮಗೆ ಸಾಧ್ಯವಿದ್ದಲ್ಲಿ ನೆಡಬೇಕು. ಜಾಗ ಉಳಿದರೆ ಇವುಗಳ ಹೊರತು ಇತರ ಸಸ್ಯಗಳನ್ನೂ ನೆಡಬಹುದು. ಜಾಗವು ಕಡಿಮೆಯಿದ್ದರೆ ಒಂದು ಮರದ ರ‍್ಯಾಕ್‌ನಲ್ಲಿ ಸಸ್ಯಗಳ ಕುಂಡಗಳನ್ನು ಒಂದರ ಮೇಲೆ ಒಂದರಂತೆ ಇಡಬಹುದು. ಈ ರ‍್ಯಾಕ್ನಲ್ಲಿನ ಎಲ್ಲ ಸಸ್ಯಗಳಿಗೆ ದಿನದಲ್ಲಿ ಕಡಿಮೆ ಅಂದರೆ ೩-೪ ಗಂಟೆ ಬಿಸಿಲು ತಾಗುವಂತೆ ಬಾಲ್ಕನಿ ಅಥವಾ ಟೆರೇಸಿನಲ್ಲಿ ಇಡಬೇಕು. ಯಾರ ಮನೆಯ ಸುತ್ತಲೂ ಜಾಗವಿದೆಯೋ ಅವರು ಇಂತಹ ಸಸ್ಯಗಳನ್ನು ಮನೆಯ ಸುತ್ತಲೂ ಬೆಳೆಸಬೇಕು. ಇವುಗಳಲ್ಲಿನ ಬಳ್ಳಿಗಳನ್ನು ದೊಡ್ಡ ಗಿಡಗಳ (ಸಾಧ್ಯವಿದ್ದರೆ ಬೇವಿನ) ಬಳಿ ಅಥವಾ ಬೇಲಿಯಲ್ಲಿ ನೆಡಬೇಕು.

ಟಿಪ್ಪಣಿ – ವನಸ್ಪತಿಗಳ ಲ್ಯಾಟಿನ್ ಹೆಸರಿನ ಕೆಳಗೆ ಅಧೋರೇಖೆ ಮಾಡುವುದು ಅಂತಾರಾಷ್ಟ್ರೀಯ ಪದ್ಧತಿಯಾಗಿರುವುದರಿಂದ ಇಲ್ಲಿ ಲ್ಯಾಟಿನ್ ಹೆಸರಿನ ಕೆಳಗೆ ಅಧೋರೇಖೆ ಮಾಡಲಾಗಿದೆ.

 


ಟಿಪ್ಪಣಿ – ‘ಪಂಚ ಅಂದರೆ ‘ಐದು ಮತ್ತು ‘ಅಂಗ ಅಂದರೆ ‘ಸಸ್ಯದ ಭಾಗಗಳು. ಸಸ್ಯದ ಬೇರು, ಕಾಂಡ, ಎಲೆ, ಹೂವು ಮತ್ತು ಹಣ್ಣು ಈ ಐದೂ ಭಾಗಗಳನ್ನು ಒಟ್ಟಿಗೆ ‘ಪಂಚಾಂಗ ಎಂದು ಹೇಳುತ್ತಾರೆ. ಚಿಕ್ಕ ಔಷಧಿ ಸಸ್ಯಗಳ ಸಂದರ್ಭದಲ್ಲಿ ‘ಪಂಚಾಂಗ ಅಂದರೆ ‘ಬೇರಿನೊಂದಿಗೆ ಸಂಪೂರ್ಣ ಸಸ್ಯ.

೪. ಮೇಲಿನ ವನಸ್ಪತಿಗಳ ಕೃಷಿ ಮಾಡಿ ಉಳಿದ ಜಾಗದಲ್ಲಿ ನೆಡಬಹುದಾದ ಔಷಧಿ ವನಸ್ಪತಿಗಳ ಆಕಾರ ಮುಂತಾದ ಕ್ರಮಕ್ಕನುಸಾರ ಹೆಸರುಗಳು

ಇದರಲ್ಲಿನ ಕೆಲವು ವನಸ್ಪತಿಗಳ ಸವಿಸ್ತಾರ ಔಷಧಿ ಉಪಯೋಗವನ್ನು ಸನಾತನದ ಮರಾಠಿ ಗ್ರಂಥ ‘೧೧೬ ವನಸ್ಪತಿಗಳ ಔಷಧಿ ಗುಣಧರ್ಮ ಮತ್ತು ‘೯೫ ವನಸ್ಪತಿಗಳ ಔಷಧಿ ಗುಣಧರ್ಮ ಇದರಲ್ಲಿ ನೀಡಲಾಗಿದೆ

೪ ಅ. ಚಿಕ್ಕ ಸಸ್ಯಗಳು (೧ ರಿಂದ ೨ ಅಡಿ ಬೆಳೆಯುವ ಗಿಡ)

ಆ. ಬಳ್ಳಿಗಳು

೪ ಇ. ಗಿಡ (೨ ಅಡಿಗಿಂತ ಹೆಚ್ಚು ಬೆಳೆಯುವ ಗಿಡಗಳು)

೪ ಈ. ಮರಗಳು

೫.ಕೃಷಿಗಾಗಿ ಔಷಧಿ ಸಸ್ಯಗಳ ಬೀಜ, ಸಸಿ ಇತ್ಯಾದಿಗಳು ಎಲ್ಲಿ ದೊರೆಯುತ್ತವೆ ?

೫ ಅ. ಔಷಧಿ ಸಸ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಸಸಿಗಳು ದೊರೆಯುವ ಸ್ಥಳಗಳು

೫ ಅ ೧. ಸ್ಥಳೀಯ ಆರೋಗ್ಯ ಪರಂಪರೆಗಳ ಪುನರುತ್ಥಾನ ಪ್ರತಿಷ್ಠಾನ, ಬೆಂಗಳೂರು. ದೂ. (080) 28568000

ಅ ೨. ಕರ್ನಾಟಕ ರಾಜ್ಯ ಗಿಡಮೂಲಿಕೆ ಔಷಧಿ ಪ್ರಾಧಿಕಾರ, ಬೆಂಗಳೂರು. ದೂ. (080) 23464089. ವಿಳಾಸ : ನಂ. 401, 4ನೇ ಮಹಡಿ, ವನ ವಿಕಾಸ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು – 03.

ಅ ೩. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ. ದೂ. (080) 23086100

೫. ಆ. ಇತರ ರಾಜ್ಯಗಳಲ್ಲಿನ ಮಹತ್ವದ ಸರಕಾರಿ ಸಂಸ್ಥೆಗಳು

ಅ. ಸಿಎಸ್‌ಐಆರ್ – ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಸಿನಲ್ ಆಂಡ್  ಅರೋಮ್ಯಾಟಿಕ್ ಪ್ಲ್ಯಾಂಟ್ಸ್ (ಸೀಮ್ಯಾಪ್), ಲಖ್ನೌ, ಉತ್ತರಪ್ರದೇಶ (0522-2718629)

ಆ. ಡೈರೆಕ್ಟೊರೇಟ್ ಆಫ್ ಮೆಡಿಸಿನಲ್ ಆಂಡ್ ಅರೋಮ್ಯಾಟಿಕ್ ಪ್ಲ್ಯಾಂಟ್ಸ್ ರಿಸರ್ಚ್, ಬೋರಿಯಾವಿ, ಗುಜರಾತ. (02692- 271602)

ಇ. ಜವಾಹರಲಾಲ ನೆಹರು ಕೃಷಿ ವಿಶ್ವವಿದ್ಯಾಲಯ, ಜಬಲಪುರ, ಮಧ್ಯಪ್ರದೇಶ (0761-2681706)

೫. ಇ. ಇತರ ಸ್ಥಳಗಳು

೧. ಹಳ್ಳಿಗಳಲ್ಲಿ, ಹಾಗೆಯೇ ಅವುಗಳ ಹತ್ತಿರದ ಅರಣ್ಯಗಳಲ್ಲಿ ಬಹಳಷ್ಟು ಔಷಧಿ ಸಸ್ಯಗಳು ದೊರೆಯುತ್ತವೆ. ಅಲ್ಲಿನ ವಯಸ್ಕರ ಜನರಿಗೆ ಈ ಸಸ್ಯಗಳ ಬಗ್ಗೆ ಗೊತ್ತಿರುತ್ತದೆ. ನಗರಗಳಲ್ಲಿರುವ ಹೆಚ್ಚಿನ ಜನರು ರಜೆಯ ನಿಮಿತ್ತ ತಮ್ಮ ಹಳ್ಳಿಗಳಿಗೆ (ಊರಿಗೆ) ಹೋಗುತ್ತಿರುತ್ತಾರೆ. ಇಂತಹ ಸಮಯದಲ್ಲಿ ತಮಗೆ ಬೇಕಾದ ಸಸ್ಯಗಳ ಬೀಜ ಅಥವಾ ಸಸಿಗಳನ್ನು ತಮ್ಮ ಊರಿನಿಂದ ತರಬಹುದು.

೨. ಪ್ರತಿಯೊಂದು ರಾಜ್ಯದ ತೋಟಗಾರಿಕೆ ಇಲಾಖೆಯಲ್ಲಿ, ಹಾಗೆಯೇ ಅರಣ್ಯ ಇಲಾಖೆಯಲ್ಲಿ ಔಷಧಿ ಸಸ್ಯಗಳು ಅಥವಾ ಆ ಸಸ್ಯಗಳು ಎಲ್ಲಿ ದೊರೆಯುತ್ತವೆ, ಎಂಬುದರ ಮಾಹಿತಿ ದೊರೆಯುತ್ತದೆ.

೩. ಬಹಳಷ್ಟು ಆಯುರ್ವೇದೀಯ ಮಹಾವಿದ್ಯಾಲಯಗಳಲ್ಲಿ ಸಸ್ಯಪಾಲನ ಕ್ಷೇತ್ರಗಳಿರುತ್ತವೆ. ಸ್ಥಳೀಯ ಆಯುರ್ವೇದೀಯ ಮಹಾವಿದ್ಯಾಲಯಗಳನ್ನು ಸಂಪರ್ಕಿಸಿ ಔಷಧಿ ಸಸ್ಯಗಳನ್ನು ಪಡೆಯಬಹುದು.

(ಆಧಾರ : ಸನಾತನ ಗ್ರಂಥ ‘ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ)

ಆಪತ್ಕಾಲದ ದೃಷ್ಟಿಯಿಂದ ಮಣ್ಣಿನ ಕುಂಡಗಳಿಗಿಂತ ಇತರ ಪರ್ಯಾಯಗಳನ್ನು ಉಪಯೋಗಿಸುವುದು ಹೆಚ್ಚು ಒಳ್ಳೆಯದು

‘ಮಣ್ಣಿನ ಕುಂಡಗಳಲ್ಲಿ ಗಿಡಗಳನ್ನು ನೆಡುವುದು ಗಿಡಗಳ ಬೆಳವಣಿಗೆ ದೃಷ್ಟಿಯಿಂದ ಆದರ್ಶವಾಗಿದೆ; ಆದರೆ ಮಣ್ಣಿನ ಕುಂಡಗಳನ್ನು ಎತ್ತಿಡುವಾಗ ಒಡೆಯಬಹುದು. ಆಪತ್ಕಾಲದಲ್ಲಿ ಏನಾಗಬಹುದು ಎಂದು ಹೇಳಲಾಗುವುದಿಲ್ಲ. ಆದ್ದರಿಂದ ಕುಂಡಗಳು ಒಡೆದು ಆಗುವ ಹಾನಿಯನ್ನು ತಡೆಯಲು ಈ ಅವಧಿಯಲ್ಲಿ ಮಣ್ಣಿನ ಕುಂಡಗಳಿಗಿಂತ ತಗಡಿನ ಪಿಪಾಯಿ, ಎಣ್ಣೆಯ ತಗಡಿನ ಡಬ್ಬಿಗಳು, ಪ್ಲಾಸ್ಟಿಕ ಗೋಣಿಚೀಲಗಳು, ಚೀಲಗಳು, ಡಬ್ಬಿ ಅಥವಾ ಪಿಪಾಯಿ ಇತ್ಯಾದಿ ಪರ್ಯಾಯ ವಸ್ತುಗಳನ್ನು ಉಪಯೋಗಿಸುವುದು ಬಹಳ ಒಳ್ಳೆಯದು. ಈ ಪರ್ಯಾಯ ವಸ್ತುಗಳಿಂದ ಹೆಚ್ಚಿನ ನೀರು ಹರಿದು ಹೋಗಲು ಅದರ ಬುಡದಿಂದ ಅರ್ಧ ಇಂಚು ಎತ್ತರದ ಮೇಲೆ ೨-೩ ತೂತುಗಳನ್ನು ಮಾಡಬೇಕು. ಬುಡದಲ್ಲಿ ತೂತುಗಳನ್ನು ಮಾಡಿದರೆ ಗಿಡಗಳ ಬೇರುಗಳು ನೆಲದಲ್ಲಿ ಹೋಗುವ ಸಾಧ್ಯತೆ ಅಧಿಕವಿರುತ್ತದೆ, ಆದ್ದರಿಂದ ಬುಡದಲ್ಲಿ ತೂತುಗಳನ್ನು ಮಾಡಬಾರದು. – ಶ್ರೀ. ಮಾಧವ ರಾಮಚಂದ್ರ ಪರಾಡಕರ, ಡಿಚೋಲಿ, ಗೋವಾ (೨೮.೫.೨೦೨೦)

ಮಧ್ಯಮ ಮತ್ತು ದೊಡ್ಡ ಭೂ ಮಾಲೀಕರು ಸಮಾಜ ಹಿತಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಔಷಧಿಗಳ ವನಸ್ಪತಿಗಳನ್ನು ನೆಡುವುದು ಅವರ ಸಮಷ್ಟಿ ಸಾಧನೆಯೇ ಆಗಿದೆ !

ಯಾವ ವ್ಯಕ್ತಿಗಳ ಬಳಿ ಮಧ್ಯಮ (೩-೪ ಎಕರೆ) ಅಥವಾ ದೊಡ್ಡ ಪ್ರಮಾಣದಲ್ಲಿ ಗಿಡ ನೆಡಲು ಯೋಗ್ಯವಾಗಿರುವ ಭೂಮಿ ಇದೆಯೋ, ಅಂತಹ ವ್ಯಕ್ತಿಗಳು ಕೇವಲ ತಮ್ಮ ಕುಟುಂಬದವರ ವಿಚಾರವನ್ನಷ್ಟೇ ಮಾಡದೇ, ಸಮಾಜ ಬಾಂಧವರ ವಿಚಾರವನ್ನು ಮಾಡಿ ದೊಡ್ಡ ಪ್ರಮಾಣದಲ್ಲಿ ಔಷಧಿ ವನಸ್ಪತಿಗಳನ್ನು ಬೆಳೆಸಬೇಕು. ಮುಂಬರುವ ಆಪತ್ಕಾಲದಲ್ಲಿ ಈ ವನಸ್ಪತಿಗಳಿಂದ ಅನೇಕ ಜನರಿಗೆ ಆಯುರ್ವೇದೀಯ ಔಷಧಿಗಳು ದೊರಕಿ, ಅವರ ಆರೋಗ್ಯ ರಕ್ಷಣೆಯಾಗುವುದು. ಈ ನಿಃಸ್ವಾರ್ಥಿ ಸಮಾಜಸೇವೆಯ ಮಾಧ್ಯಮದಿಂದ ಇಂತಹ ವ್ಯಕ್ತಿಗಳ ಸಮಷ್ಟಿ ಸಾಧನೆಯಾಗುವುದು.

ಔಷಧಿ ವನಸ್ಪತಿಗಳನ್ನು ನೆಡುವುದನ್ನು ಸಾಧನೆಯೆಂದು ಮಾಡುವುದರ ಮಹತ್ವ

ಮನುಷ್ಯನು ಎಂತಹ ವಾತಾವರಣದಲ್ಲಿ ಬೆಳೆಯುತ್ತಾನೆಯೋ, ಅದರಂತೆ ಅವನ ಸ್ವಭಾವವಿರುತ್ತದೆ. ಯಾವ ರೀತಿ ಅಕ್ಕಪಕ್ಕದ ವಾತಾವರಣವೂ ಮನುಷ್ಯನಲ್ಲಿರುವ ಗುಣದೋಷಗಳಿಗೆ ಕಾರಣವಾಗಿರುತ್ತದೆಯೋ, ಅದೇ ರೀತಿ ವನಸ್ಪತಿಯ ಸಂದರ್ಭದಲ್ಲಿಯೂ ಇರುತ್ತದೆ. ಔಷಧಿಯ ವನಸ್ಪತಿಗಳ ಸುತ್ತಲಿನ ವಾತಾವರಣ ಎಷ್ಟು ಸಾತ್ತ್ವಿಕವಾಗಿರುತ್ತದೆಯೋ, ಅಷ್ಟೇ ಹೆಚ್ಚು ಅವುಗಳು ಸಾತ್ತ್ವಿಕವಾಗಿರುತ್ತವೆ. ಎಷ್ಟು ಸತ್ತ್ವಗುಣ ಹೆಚ್ಚಿರುತ್ತದೆಯೋ, ಅಷ್ಟೇ ವನಸ್ಪತಿಯಲ್ಲಿರುವ ಔಷಧಿ ಗುಣಗಳೂ ಹೆಚ್ಚುತ್ತವೆ. ಸಾಧನೆಯಿಂದ ಸತ್ತ್ಚಗುಣ ಹೆಚ್ಚಾಗುತ್ತದೆ. ಔಷಧಿ ವನಸ್ಪತಿಯನ್ನು ನೆಡುವುದು ಕೇವಲ ಹಣಗಳಿಸುವ ಮಾರ್ಗವೆಂದಲ್ಲ, ಈಶ್ವರಪ್ರಾಪ್ತಿಯ ಸಾಧನೆಯೆಂದು ಮಾಡಿದರೆ ವನಸ್ಪತಿಗಳು ಸಾತ್ತ್ವಿಕವಾಗಲು ಸಹಾಯಕವಾಗುತ್ತದೆ.