ಅರ್ಪಣೆದಾರರೇ, ಗುರುಪೂರ್ಣಿಮೆಯ ನಿಮಿತ್ತ ಧರ್ಮಕಾರ್ಯಕ್ಕಾಗಿ ಧನವನ್ನು ಅರ್ಪಿಸಿ ಗುರುತತ್ತ್ವದ ಲಾಭವನ್ನು ಪಡೆದುಕೊಳ್ಳಿ !

‘ಜುಲೈ ೫ ರಂದು ಗುರುಪೂರ್ಣಿಮೆ ಇದೆ. ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಈ ದಿನವು ಶಿಷ್ಯನಿಗಾಗಿ ಅವಿಸ್ಮರಣೀಯವಾಗಿರುತ್ತದೆ. ಈ ದಿನದಂದು, ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನವು ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಿರುತ್ತದೆ. ಆದ್ದರಿಂದ, ಗುರುಪೂರ್ಣಿಮೆಯ ನಿಮಿತ್ತ, ಗುರುಸೇವೆ ಮತ್ತು ಧನದ ತ್ಯಾಗವನ್ನು ಮಾಡುವವರಿಗೆ ಗುರುತತ್ತ್ವದ ಲಾಭವು ಸಾವಿರ ಪಟ್ಟುಗಳಲ್ಲಿ ಹೆಚ್ಚಾಗುತ್ತದೆ.

೧. ಶಿಷ್ಯನ ಜೀವನದಲ್ಲಿ ಗುರುಗಳ ಮಹತ್ವ !

ಪೃಥ್ವಿಯ ಮೇಲೆ ನಿರ್ಗುಣ ಪರಮೇಶ್ವರನ ಕಾರ್ಯನಿರತವಾಗಿರುವ ಸಗುಣ ರೂಪವೆಂದರೆ ಗುರು ! ಗುರುಗಳು ಶಿಷ್ಯನಿಗೆ ಜ್ಞಾನವನ್ನು ನೀಡಿ ಅವನ ಪಾರಮಾರ್ಥಿಕ ಉನ್ನತಿಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾರೆ. ಆದ್ದರಿಂದ, ಶಿಷ್ಯನಿಗೆ ಗುರುಗಳ ಹೊರತು ಬೇರೆ ಮಾರ್ಗವಿರುವುದಿಲ್ಲ. ಶಿಷ್ಯನು ಗುರುಗಳಿಗೆ ಸರ್ವಸ್ವವನ್ನು ಅರ್ಪಿಸಿ ಅವರ ಸೇವೆಯನ್ನು ಮಾಡುವುದೇ ನಿಜವಾದ ಗುರುದಕ್ಷಿಣೆಯಾಗಿರುತ್ತದೆ. ಇದರಿಂದ, ಶಿಷ್ಯನ ಮೇಲೆ ಗುರುಕೃಪೆಯ ಪ್ರವಾಹವು ಅಖಂಡವಾಗಿರುತ್ತದೆ.

೨. ಗುರುಪೂರ್ಣಿಮೆಯ ನಿಮಿತ್ತ ಗುರುಕಾರ್ಯಕ್ಕಾಗಿ, ಅಂದರೆ ಧರ್ಮಕಾರ್ಯಕ್ಕಾಗಿ ಧನವನ್ನು ಅರ್ಪಿಸಿ !

ಈ ಗುರುಪೂರ್ಣಿಮೆಯ ನಿಮಿತ್ತ ತನು, ಮನ, ಮತ್ತು ಧನ ಇವುಗಳನ್ನು ಹೆಚ್ಚೆಚ್ಚು ತ್ಯಾಗ ಮಾಡಿ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸುವ ಅವಕಾಶವು ಎಲ್ಲರಿಗೂ ಲಭಿಸಿದೆ. ಆದ್ದರಿಂದ, ಜಿಜ್ಞಾಸು, ಹಾಗೆಯೇ ಹಿತಚಿಂತಕರು, ಧರ್ಮಪ್ರಸಾರದ ಕಾರ್ಯ ಮಾಡುವುದು ಮತ್ತು ಅದಕ್ಕಾಗಿ ಧನವನ್ನು ಅರ್ಪಿಸುವುದು, ಇವುಗಳ ಮೂಲಕ ಗುರುಪೂರ್ಣಿಮೆಯ ಆಧ್ಯಾತ್ಮಿಕ ಸ್ತರದಲ್ಲಿ ಲಾಭ ಮಾಡಿಕೊಳ್ಳಬೇಕು.

ಪ್ರಸ್ತುತ ಧರ್ಮಗ್ಲಾನಿಯ ಕಾಲವಿರುವುದರಿಂದ, ‘ಧರ್ಮಪ್ರಸಾರದ ಕಾರ್ಯ ಮಾಡುವುದು’, ಅತ್ಯುತ್ತಮ ಅರ್ಪಣೆಯಾಗಿದೆ. ಆದ್ದರಿಂದ, ಧರ್ಮ ಪ್ರಸಾರದ ಕಾರ್ಯ ಮಾಡುವ ಸಂತರು, ಸಂಸ್ಥೆಗಳು ಅಥವಾ ಸಂಘಟನೆಗಳ ಕಾರ್ಯಕ್ಕೆ ಧನದ ದಾನವನ್ನು ಮಾಡುವುದು ಕಾಲಾನುಸಾರ ಅವಶ್ಯಕವಿದೆ. ಕಳೆದ ಅನೇಕ ವರ್ಷಗಳಿಂದ ಸನಾತನ ಸಂಸ್ಥೆಯು ಈ ಕಾರ್ಯವನ್ನು ಅತ್ಯಂತ ನಿಸ್ವಾರ್ಥವಾಗಿ ಮಾಡುತ್ತಿದೆ. ಆದ್ದರಿಂದ, ಅರ್ಪಣೆದಾರರು ಸನಾತನ ಸಂಸ್ಥೆಗೆ ಮಾಡಿದ ಅರ್ಪಣೆಯ ವಿನಿಯೋಗವು ಖಂಡಿತವಾಗಿಯೂ ಧರ್ಮಕಾರ್ಯಕ್ಕಾಗಿಯೇ ಆಗಲಿದೆ.

ಅರ್ಪಣೆ ನೀಡಲು ಬಯಸುವವರು, ಸೌ. ಭಾಗ್ಯಶ್ರೀ ಸಾವಂತ ಇವರನ್ನು 7058885610 ಈ ಕ್ರಮಾಂಕಕ್ಕೆ ಅಥವಾ [email protected] ಈ ಗಣಕೀಯ ವಿಳಾಸಕ್ಕೆ ಸಂಪರ್ಕಿಸಬೇಕು.

ಗುರುಪೂರ್ಣಿಗಾಗಿ ಮನೆಯಲ್ಲಿಯೇ ಕುಳಿತು ‘ಆನ್‌ಲೈನ್’ ಅರ್ಪಣೆ ಮಾಡುವ ಸೌಲಭ್ಯವೂ ಲಭ್ಯವಿದೆ. ಅದಕ್ಕಾಗಿ https://www.sanatan.org/en/donate ಈ ಲಿಂಕ್‌ಗೆ ಭೇಟಿ ನೀಡಿ !

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ತರು, ಸನಾತನ ಸಂಸ್ಥೆ. (೪.೬.೨೦೨೦)