ವಿವಿಧ ವಿಷಯಗಳ ಬಗ್ಗೆ ಆರಂಭವಾದ ‘ಆನ್‌ಲೈನ್ ಸತ್ಸಂಗಗಳು

‘ಆನ್‌ಲೈನ್ ಸತ್ಸಂಗದ ಮಾಧ್ಯಮದಿಂದ ಸಾಕ್ಷಾತ್ ಸಂತರ ಸಾನ್ನಿಧ್ಯದಲ್ಲಿ ಎಲ್ಲ ಜಿಜ್ಞಾಸುಗಳಿಗೆ ನಾಮಜಪ ಮಾಡಲು ಸಾಧ್ಯವಾಗಬೇಕು ಮತ್ತು ಸಂತರ ಮಾರ್ಗದರ್ಶನ ದೊರಕಬೇಕು, ಈ ದೃಷ್ಟಿಯಿಂದ ಸತ್ಸಂಗಗಗಳನ್ನು ಆಯೋಜಿಸಲಾಯಿತು ಮತ್ತು ‘ಆನ್‌ಲೈನ್ ಸತ್ಸಂಗಗಳು ಪ್ರಾರಂಭವಾದವು. ಇದರಲ್ಲಿ ನಾಮಜಪದ ಮಹತ್ವ, ಭಾವವೃದ್ಧಿ, ಹಿಂದೂ ಧರ್ಮಶಿಕ್ಷಣ ಮತ್ತು ಆಪತ್ಕಾಲ, ಅಲ್ಲದೇ ಭಾವಿ ಪೀಳಿಗೆ ನಿರ್ಮಾಣ ಮಾಡಲು ಚಿಕ್ಕಮಕ್ಕಳಿಗೆ ಪ್ರೇರಣಾದಾಯಕವಾದ ಮಾರ್ಗದರ್ಶನ ಈ ವಿಷಯಗಳ ಮೇಲೆ ‘ಆನ್‌ಲೈನ್ ಸತ್ಸಂಗಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಈ ಸತ್ಸಂಗದಲ್ಲಿ ವಿವಿಧ ವಿಷಯಗಳನ್ನು ತೆಗೆದುಕೊಂಡು ಆ ವಿಷಯಗಳ ಮೇಲೆ ವಿಶ್ಲೇಷಣೆ ನಡೆಸಲಾಯಿತು.

ಅ. ನಾಮಜಪದ ಮಹತ್ವವನ್ನು ಸಮಾಜದ ಮನಸ್ಸಿನಲ್ಲಿ ಬಿಂಬಿಸುವ ‘ನಾಮಜಪ ಸತ್ಸಂಗ !

ಸಮಾಜದ ಮನಸ್ಸಿನಲ್ಲಿ ನಾಮಜಪದ ಸಂಸ್ಕಾರವಾಗಬೇಕು ಮತ್ತು ‘ಆಪತ್ಕಾಲದಲ್ಲಿ ನಾಮಜಪವೇ ನಮ್ಮನ್ನು ರಕ್ಷಿಸಲಿದೆ, ಎನ್ನುವುದು ಸಮಾಜದ ಮನಸ್ಸಿನ ಮೇಲೆ ಬಿಂಬಿಸುವ ಹಿಂದಿ ಭಾಷೆಯ ನಾಮಜಪ ಸತ್ಸಂಗ ! ಸಂತರ ಸಾನ್ನಿಧ್ಯದಲ್ಲಿ ಅವರ ಮಾರ್ಗದರ್ಶನವನ್ನು ಕೇಳುವ ಮತ್ತು ನಾಮಜಪ ಮಾಡುವ ಅಮೂಲ್ಯ ಅವಕಾಶ ದೊರೆತಿದ್ದರಿಂದ ಮೊದಲ ಸತ್ಸಂಗದಿಂದಲೇ ವೀಕ್ಷಕರಿಂದ ಪ್ರಚಂಡ ಸ್ಪಂದನ ದೊರೆಯಿತು. ಈ ಸತ್ಸಂಗದಲ್ಲಿ ನಾಮಜಪದ ಮಹತ್ವದೊಂದಿಗೆ ಸಂದೇಹ ನಿವಾರಣೆಯನ್ನು ಸಹ ಮಾಡಲಾಗುತ್ತಿದೆ. ಸಂತರ ಮಧುರ ವಾಣಿಯಿಂದಾಗಿ ಈ ಸತ್ಸಂಗವು ಅಲ್ಪಾವಧಿಯಲ್ಲಿಯೇ ಸಮಾಜ ಮನಸ್ಸಿನ ಆಸಕ್ತಿಯ ವಿಷಯವಾಗಿದೆ. ಇಂದು ಪ್ರತಿದಿನ ೩೫ ಸಾವಿರಕ್ಕಿಂತ ಅಧಿಕ ಜನರು ಈ ಸತ್ಸಂಗದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.

ಆ. ಧರ್ಮದ ನಿಜವಾದ ಅರ್ಥವನ್ನು ಬಿಡಿಸಿ ಹೇಳುವ ‘ಧರ್ಮಸಂವಾದ ಸತ್ಸಂಗ !

ಹಿಂದೂಗಳಿಗೆ, ಹಾಗೆಯೇ ಇತರರಿಗೂ ಹಿಂದೂ ಧರ್ಮದ ಮಾಹಿತಿ ದೊರೆಯಬೇಕು ಮತ್ತು ಅವರಲ್ಲಿ ಧರ್ಮದ ವಿಷಯದಲ್ಲಿ ಜಾಗೃತಿ ನಿರ್ಮಾಣವಾಗಬೇಕು, ಈ ಉದ್ದೇಶದಿಂದ ಈ ಸತ್ಸಂಗವನ್ನು ಪ್ರಾರಂಭಿಸಲಾಯಿತು. ಆಪತ್ಕಾಲದಲ್ಲಿ ಸಾಧನೆಯ ಮಹತ್ವ, ಅಲ್ಲದೇ ರಾಮನವಮಿಯ ದಿನದಂದು ಪ್ರಭು ಶ್ರೀರಾಮನ ವೈಶಿಷ್ಟ್ಯ, ಶ್ರೀರಾಮನ ಕುರಿತಾದ ಆಕ್ಷೇಪಗಳು ಮತ್ತು ಅವುಗಳ ಖಂಡನೆ ಇವುಗಳ ಹಿನ್ನೆಲೆಯಲ್ಲಿ ಸಂದೇಹ ನಿವಾರಣೆಯನ್ನು ಈ ಸತ್ಸಂಗದಲ್ಲಿ ಮಾಡಲಾಯಿತು. ಧರ್ಮಶಿಕ್ಷಣ ಮತ್ತು ಧರ್ಮದ ನಿಜವಾದ ಅರ್ಥ ಈ ಸತ್ಸಂಗದ ಮಾಧ್ಯಮದಿಂದ ಅರ್ಥವಾಗ ತೊಡಗಿದ್ದರಿಂದ ಜನರಿಂದ ಬರುವ ಸ್ಪಂದನ ಹೆಚ್ಚಳವಾಯಿತು. ಅವರ ಪ್ರಶ್ನೆಗಳಿಗೆ ಸದ್ಗುರುಗಳ ಮಾಧ್ಯಮದಿಂದ ಉತ್ತರಗಳು ಸರಳ ಮತ್ತು ಸುಲಭ ಭಾಷೆಯಲ್ಲಿ ದೊರಕಿದ್ದರಿಂದ ಪ್ರಶ್ನೆ ಕೇಳುವ ಪ್ರಮಾಣವೂ ಹೆಚ್ಚುತ್ತಿದೆ.

ಇ. ಸರ್ವಧರ್ಮಗಳ ಮಕ್ಕಳಲ್ಲಿ ರಾಷ್ಟ್ರ ಮತ್ತು ಧರ್ಮದ ವಿಷಯದಲ್ಲಿ ಅಭಿಮಾನ ಮೂಡಿಸುವ ‘ಬಾಲಸಂಸ್ಕಾರ ವರ್ಗ !

ಎಲ್ಲ ಧರ್ಮದ ಮಕ್ಕಳಲ್ಲಿ ಒಳ್ಳೆಯ ಪರಿಪಾಠಗಳಾಗಬೇಕು, ಅವರಲ್ಲಿ ಒಳ್ಳೆಯ ಸಂಸ್ಕಾರಗಳಾಗಬೇಕು, ಹಾಗೆಯೇ ಅವರಲ್ಲಿ ರಾಷ್ಟ್ರ ಮತ್ತು ಧರ್ಮ ಪ್ರೇಮಿ ವ್ಯಕ್ತಿಗಳ ಆದರ್ಶವು ನಿರ್ಮಾಣವಾಗಬೇಕು, ಈ ಉದ್ದೇಶದಿಂದ ಬಾಲಸಂಸ್ಕಾರವರ್ಗವನ್ನು ಪ್ರಾರಂಭಿಸಲಾಯಿತು. ಪ್ರೇರಣಾದಾಯಕ ಮತ್ತು ಚಿಕ್ಕ ಮಕ್ಕಳಲ್ಲಿ ರಾಷ್ಟ್ರ ಮತ್ತು ಧರ್ಮದ ವಿಷಯದಲ್ಲಿ ಅಭಿಮಾನ ಮೂಡಿಸುವ ಕಥೆಗಳಿಂದ ಬಾಲಸಂಸ್ಕಾರ ವರ್ಗದ ಉಪಸ್ಥಿತಿ ಹೆಚ್ಚಾಗತೊಡಗಿತು ಮತ್ತು ಅಲ್ಪಾವಧಿಯಲ್ಲಿ ಬಾಲಸಂಸ್ಕಾರವರ್ಗ ಎಲ್ಲರ ಇಷ್ಟದ ವಿಷಯವಾಯಿತು. ಇಂದು ನಿಯಮಿತವಾಗಿ ಎಲ್ಲ ಧರ್ಮದ ಚಿಕ್ಕ ಮಕ್ಕಳು ಉತ್ಸಾಹದಿಂದ ಸಂಸ್ಕಾರವರ್ಗದಲ್ಲಿ ಸಹಭಾಗಿಗಳಾಗುತ್ತಾರೆ ಮತ್ತು ‘ಕಮೆಂಟ್ಸ್ ಮಾಧ್ಯಮದಿಂದ ಸ್ಪಂದಿಸುತ್ತಾರೆ.

ಈ. ಭಕ್ತಿಭಾವ ಹೆಚ್ಚಿಸುವ ‘ಭಾವಸತ್ಸಂಗ !

ಈಶ್ವರನ ಕುರಿತು ಭಕ್ತಿಯನ್ನು ಹೆಚ್ಚಿಸುವ ಈ ಭಾವಸತ್ಸಂಗವನ್ನು ಎಲ್ಲರೂ ಇಷ್ಟಪಟ್ಟು ನೋಡುತ್ತಾರೆ. ಅಲ್ಲದೇ ಈ ವಿಷಯದಲ್ಲಿ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಚಿಕ್ಕ ಚಿಕ್ಕ ಕೃತಿಯಿಂದ ಭಾವಜಾಗೃತಿಗಾಗಿ ಹೇಗೆ ಪ್ರಯತ್ನಿಸಬೇಕು ? ಎನ್ನುವ ಮಾರ್ಗದರ್ಶನ ಈ ಸತ್ಸಂಗದಿಂದ ಸಿಗುತ್ತಿರುವುದರಿಂದ ಸಮಾಜದ ಎಲ್ಲ ಸ್ತರಗಳಿಂದ ಈ ಸತ್ಸಂಗಕ್ಕೆ ಒಳ್ಳೆಯ ಪ್ರತಿಸ್ಪಂದನ ಲಭಿಸುತ್ತಿದೆ.