ಸದ್ಯದ ಸಾರಿಗೆ ಸಾಗಾಟದ ನಿರ್ಬಂಧದಿಂದ ದೇಶವು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಇದರ ನಿವಾರಣೆಗಾಗಿ ಅನೇಕ ಜನಪ್ರತಿನಿಧಿಗಳು, ಪ್ರಗತಿಪರರು ಹಿಂದೂ ಮಂದಿರಗಳ ನಿಧಿಯನ್ನು ಉಪಯೋಗಿಸಬೇಕು ಎಂಬ ಹಿಂದೂ ದ್ವೇಷಿ ಸಲಹೆಗಳನ್ನು ನೀಡುತ್ತಿದ್ದಾರೆ. ಸ್ವಾತಂತ್ರ್ಯದ ನಂತರದ ೭೨ ವರ್ಷಗಳ ಸರಕಾರಗಳು ಕೇವಲ ಹಿಂದೂಗಳ ಅನೇಕ ಮಂದಿರಗಳನ್ನು ಸರಕಾರೀಕರಣ ಮಾಡಿ ಮಂದಿರಗಳ ಸಂಪತ್ತನ್ನು ತನ್ನ ವಂಶಜರ ಸಂಪತ್ತೆಂದು ಪರಿಗಣಿಸಿ ಅದನ್ನು ಕಥಿತ ವಿಕಾಸ ಕಾರ್ಯ, ದಾನ, ಇತರ ಪಂಥೀಯರಿಗೆ ಸಹಾಯ, ಇತ್ಯಾದಿ ಅಧಾರ್ಮಿಕ ವಿಷಯಗಳಿಗಾಗಿ ಖರ್ಚುಮಾಡಿವೆ. ವಾಸ್ತವದಲ್ಲಿ, ಹಿಂದೂ ಮಂದಿರಗಳ ನಿಧಿಯನ್ನು ಕೇವಲ ಹಿಂದೂ ಧರ್ಮಕಾರ್ಯಕ್ಕಾಗಿಯೇ ಖರ್ಚು ಮಾಡಬೇಕು. ಜಾತ್ಯತೀತ ದೇಶದಲ್ಲಿ ಕೇವಲ ಹಿಂದೂಗಳ ಮಂದಿರಗಳನ್ನೇ ಏಕೆ ಸರಕಾರೀಕರಣ ಮಾಡಲಾಗುತ್ತದೆ ? ಇತರ ಪಂಥೀಯರ ಶ್ರದ್ಧಾಸ್ಥಾನಗಳ ಸರಕಾರೀಕರಣ ಏಕಿಲ್ಲ ?, ಎನ್ನುವ ಪ್ರಶ್ನೆಗೆ ಇದುವರೆಗಿನ ಎಲ್ಲ ಸರಕಾರಗಳು ಜಾಣ ಮೌನಧಾರಣೆ ಮಾಡುತ್ತಾ ಬಂದಿವೆ. ‘ಎಲ್ಲ ಕ್ಷೇತ್ರಗಳ ಖಾಸಗೀಕರಣವಾಗುತ್ತಿರುವಾಗ ಕೇವಲ ಮಂದಿರಗಳನ್ನು ಮಾತ್ರ ಏಕೆ ಸರಕಾರೀಕರಣ ಮಾಡಲಾಗುತ್ತದೆ ?, ಈ ಪ್ರಶ್ನೆ ಸಹ ಅವರಿಗೆ ಅಡಚಣೆಯದ್ದಾಗಿದೆ. ಇದು ಧಾರ್ಮಿಕ ಭೇದಭಾವಲ್ಲವೆ ?, ತಮ್ಮ ಇಚ್ಛೆಗನುಸಾರ ಯಾವುದೇ ಕಾರಣಕ್ಕಾಗಿ ಮಂದಿರಗಳ ಸಂಪತ್ತನ್ನು ಉಪಯೋಗಿಸುವ ಹಿಂದೂದ್ವೇಷಿ ಸಲಹೆಯನ್ನು ನೀಡುವ ಜನಪ್ರತಿನಿಧಿಗಳು, ಪ್ರಗತಿಪರರು ಮುಂತಾದವರು ಯಾವತ್ತಾದರೂ ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತಂದು ಅದನ್ನು ಉಪಯೋಗಿಸಿ ಎಂಬ ಸಲಹೆಯನ್ನು ಏಕೆ ಕೊಡುವುದಿಲ್ಲ ? ವಾಸ್ತವದಲ್ಲಿ, ಭ್ರಷ್ಟಾಚಾರವಿಲ್ಲದ ಸರಕಾರೀ ವಿಭಾಗವೇ ಇಲ್ಲ. ಆದ್ದರಿಂದ ಸರಕಾರೀಕರಣವಾಗಿರುವ ಮಂದಿರಗಳು ಅದರಿಂದ ಹೇಗೆ ತಪ್ಪಿಸಿಕೊಳ್ಳುವವು? ಇದೆಲ್ಲವೂ ಧರ್ಮಹಾನಿಯೇ ಆಗಿದೆ. ಮಂದಿರಗಳು ಚೈತನ್ಯದ ಸ್ರೋತವಾಗಿವೆ, ಆದ್ದರಿಂದ ಅವುಗಳು ಭಕ್ತರ ವಶದಲ್ಲಿರಬೇಕು. ಅದಕ್ಕಾಗಿ ಹಿಂದೂಗಳು ಕಾನೂನು ಮಾರ್ಗದಲ್ಲಿ ಪ್ರಯತ್ನಿಸಬೇಕು. ದೇಶ ಸ್ವತಂತ್ರವಾಗುವ ಮೊದಲು ಆಂಗ್ಲರು ಮತ್ತು ಸ್ವಾತಂತ್ರ್ಯದ ನಂತರ ೧೯೫೧ ರಿಂದ ಮಂದಿರ ಸರಕಾರೀಕರಣ ಕಾನೂನು ಆದ ನಂತರ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ದೇವರ ನಿಧಿಯನ್ನು ಹೇಗೆ ಕೊಳ್ಳೆ ಹೊಡೆಯಲಾಯಿತು, ಎಂಬುದರ ವಾಸ್ತವವನ್ನು ಮಂಡಿಸುವ ಈ ಲೇಖನವನ್ನು ನಮ್ಮ ವಾಚಕರಿಗಾಗಿ ೨ ಭಾಗಗಳಲ್ಲಿ ಪ್ರಕಾಶಿಸುತ್ತಿದ್ದೇವೆ. (ಭಾಗ ೧)
೧. ದೇವಸ್ಥಾನ ಸರಕಾರಿಕರಣ ಕಾನೂನಿನಿಂದ ಆಗುತ್ತಿರುವ ವಿಶ್ವದ ವಾರಸ್ಸು ಸ್ಥಾನದಲ್ಲಿರುವ ದೇವಸ್ಥಾನಗಳ ಸಾಮೂಹಿಕ ಹತ್ಯಾಕಾಂಡ
ತಂಜಾವೂರು (ತಮಿಳುನಾಡು) ಇಲ್ಲಿ ರಾಜ ರಾಜೇಂದ್ರ ಚೋಳ ಇವರು ನಿರ್ಮಿಸಿದ ೧ ಸಾವಿರ ವರ್ಷಗಳಷ್ಟು ಪುರಾತನವಾದ ಒಂದು ದೇವಸ್ಥಾನವನ್ನು ಎಪ್ರಿಲ್ ೨೦೧೬ ರಲ್ಲಿ ಸರಕಾರ ಕೆಡವಿತು. ‘ದೇವಸ್ಥಾನವನ್ನು ನವೀಕರಣ ಮತ್ತು ವಿಸ್ತಾರ ಮಾಡಿ ಪುನಃ ನಿರ್ಮಿಸಲಾಗುವುದು, ಎಂದು ರಾಜ್ಯ ಸರಕಾರ ಆಶ್ವಾಸನೆಯನ್ನು ನೀಡಿತ್ತು. ಇಂತಹ ದೇವಸ್ಥಾನವನ್ನು ಪುನಃ ನಿರ್ಮಿಸಲು ಅಸಾಧ್ಯ, ಎಂಬುದು ಎಲ್ಲರಿಗೂ ತಿಳಿದಿದೆ. ಆಂಧ್ರಪ್ರದೇಶದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಕೃಷ್ಣದೇವರಾಯರು ಕಟ್ಟಿಸಿದ ೫೦೦ ವರ್ಷಗಳಷ್ಟು ಪುರಾತನ ಶ್ರೀ ಕಾಳಾಹಸ್ತಿ ದೇವಸ್ಥಾನವನ್ನು ಮೇ ೨೦೧೦ ರಲ್ಲಿ ಸದ್ದಿಲ್ಲದೆ ಧ್ವಂಸ ಮಾಡಲಾಯಿತು; ಏಕೆಂದರೆ ಅನೇಕ ವರ್ಷಗಳಿಂದ ಈ ದೇವಸ್ಥಾನದ ನಿರ್ವಹಣೆಯಲ್ಲಿ ದುರ್ಲಕ್ಷ್ಯವಾಗುತ್ತಿತ್ತು. ಆಗಸ್ಟ್ ೨೦೧೭ ರಲ್ಲಿ ‘ಯುನೆಸ್ಕೋ (ಸಂಯುಕ್ತ ರಾಷ್ಟ್ರ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ‘ರಾಜ್ಯದ ಸುಮಾರು ೩೬ ಸಾವಿರ ದೇವಸ್ಥಾನಗಳಿಗೆ ಪುರಾತತ್ವ ವಿಶೇಷಜ್ಞರ ಮತ್ತು ಕುಶಲ ಅಭಿಯಂತರ ಉಸ್ತುವಾರಿಯ ಅವಶ್ಯಕತೆಯಿದೆ, ಎಂದು ಎಚ್ಚರಿಕೆ ನೀಡುವ ವರದಿಯನ್ನು ತಮಿಳುನಾಡು ಸರಕಾರಕ್ಕೆನೀಡಿತ್ತು. ಈ ವರದಿಯಲ್ಲಿ ‘ಯುನೆಸ್ಕೊ ಮುಂದಿನಂತೆ ಹೇಳಿತ್ತು, ‘ಇಂತಹ ದುರ್ಲಭ ದೇವಸ್ಥಾನಗಳಲ್ಲಿನ ಶಿಲ್ಪಕಲೆ ಮತ್ತು ವಾಸ್ತು ರಚನೆಯನ್ನು ನೋಡುವಾಗ ಈ ರೀತಿಯಲ್ಲಿ ಪ್ರಾಚೀನ ದೇವಸ್ಥಾನಗಳ ಸಾಮೂಹಿಕ ಹತ್ಯಾಕಾಂಡವೇ ಆಗುತ್ತಿದೆ; ಆದರೆ ತಮಿಳುನಾಡು ಸರಕಾರವು ‘ಯುನೆಸ್ಕೋದ ಈ ವರದಿಯನ್ನು ಸಂಪೂರ್ಣ ದುರ್ಲಕ್ಷ ಮಾಡಿತು.
ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿನ ಅನೇಕ ವಿಶಾಲವಾದ ದೇವಸ್ಥಾನಗಳು ವಿಶ್ವದ ವಾರಸ್ಸುದಾರದ ಸ್ಥಾನದಲ್ಲಿದ್ದು ಅವುಗಳು ಸಂಸ್ಕೃತಿಯನ್ನು ಮುನ್ನಡೆಸುವ ಸಾಧನವಾಗಿವೆ. ತಮಿಳುನಾಡಿನಲ್ಲಿ ಕನಿಷ್ಠ ೨ ಡಜನ್ ದೇವಸ್ಥಾನಗಳು ೧ ಸಾವಿರ ವರ್ಷಗಳಷ್ಟು ಹಳೆಯದಾಗಿದ್ದರೂ ಈಗಲೂ ಅವುಗಳು ಒಳ್ಳೆಯ ಸ್ಥಿತಿಯಲ್ಲಿವೆ. ಈ ದೇವಸ್ಥಾನಗಳಿಗೆ ರಕ್ಷಣೆ ಮತ್ತು ಉಸ್ತುವಾರಿಯ ಅವಶ್ಯಕತೆಯಿದೆ; ಆದರೆ ಸರಕಾರವು ಇದನ್ನು ದುರ್ಲಕ್ಷ ಮಾಡುತ್ತಿದೆ. ಅದರ ಮೂಲ ಕಾರಣ ವೆಂದರೆ, ‘ಹಿಂದೂ ಧಾರ್ಮಿಕ ದೇವಸ್ಥಾನಗಳು ಮತ್ತು ಹಿಂದೂ ಧಾರ್ಮಿಕದತ್ತಿ ಸಂಸ್ಥೆ ಸರಕಾರೀಕರಣ ಕಾನೂನು ೧೯೫೧ ! (ರಿಲಿಜಸ್ ಎಂಡ್ ಚಾರಿಟೇಬಲ್ ಎಂಡೋಮೆಂಟ್ ಏಕ್ಟ್ ೧೯೫೧ (ಎಚ್.ಆರ್.ಸಿ.ಇ.)
೨. ದೇವಸ್ಥಾನಗಳನ್ನು ನಿಯಂತ್ರಣದಲ್ಲಿರಿಸಲು ಸೀಮಾತೀತ ಅಧಿಕಾರವನ್ನು ನೀಡುವ ಮಂದಿರ ಸರಕಾರೀಕರಣ ಕಾನೂನು
ಈ ಕಾನೂನಿನಿಂದಾಗಿ ರಾಜ್ಯ ಸರಕಾರಗಳಿಗೆ ದೇವಸ್ಥಾನಗಳನ್ನು ಸಂಪೂರ್ಣ ನಿಯಂತ್ರಣದಲ್ಲಿರಿಸುವ ಅಧಿಕಾರ ಸಿಕ್ಕಿದೆ. ಸರಕಾರಕ್ಕೆ ದೇವಸ್ಥಾನಗಳ ಮೇಲೆ ಸಂಪೂರ್ಣ ನಿಯಂತ್ರಣವಿರುವುದರಿಂದ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಹಣ, ಅವುಗಳ ಭೂಮಿ ಮತ್ತು ಇತರ ಸಾಮಾಗ್ರಿಗಳ ವಿಷಯದಲ್ಲಿ ಸರಕಾರ ಮಾತ್ರ ನಿರ್ಣಯ ತೆಗೆದುಕೊಳ್ಳಲು ಸಾಧ್ಯ. ಆ ವಿಷಯದಲ್ಲಿ ಶಂಕರಾಚಾರ್ಯರು ಅಥವಾ ಹಿಂದೂ ಸಂಘಟನೆಗಳು ಯಾವುದೇ ನಿರ್ಣಯ ತೆಗೆದುಕೊಳ್ಳುವ ಹಾಗಿಲ್ಲ ! ಆದ್ದರಿಂದ ಸ್ವಾಭಾವಿಕವಾಗಿಯೇ ದೇವಸ್ಥಾನಗಳಿಗೆ ಬರುವ ದೊಡ್ಡ ಪ್ರಮಾಣದ ಆದಾಯದಲ್ಲಿ ರಾಜಕೀಯ ನೇತಾರರು, ಜಾತ್ಯತೀತರು, ಸರಕಾರೇತರ ಸಂಸ್ಥೆಗಳು ಮತ್ತು ಹಿಂದೂ ವಿರೋಧಿ ಸ್ವಾರ್ಥಿ ತತ್ತ್ವಗಳ ದೊಡ್ಡ ಪಾಲುದಾರಿಕೆ ಇರುತ್ತದೆ. ದೇವಸ್ಥಾನಗಳನ್ನು ಸರಕಾರ ನಿಯಂತ್ರಣ ಮಾಡುವುದೆಂದರೆ, ಇದು ಕೋಳಿಯ ಗೂಡನ್ನು ರಕ್ಷಿಸಲು ನರಿಯನ್ನು ನೇಮಕ ಮಾಡಿದಂತೆ ಆಗಿದೆ. ಈ ‘ಎಚ್.ಆರ್.ಸಿ.ಇ. ಕಾನೂನಿನ ಮೂಲಕ ರಾಜ್ಯ ಸರಕಾರಕ್ಕೆ ದೇವಸ್ಥಾನಗಳಲ್ಲಿನ ವ್ಯವಹಾರವನ್ನು ನಿಯಂತ್ರಿಸಲು ನ್ಯಾಸ ಅಥವಾ ಸ್ವತಂತ್ರ ಸಮಿತಿಗಳನ್ನು ಮಾಡುವ ಅಧಿಕಾರವಿದೆ. ಆದ್ದರಿಂದ ಸ್ವಾಭಾವಿಕವಾಗಿ ಈ ನ್ಯಾಸಗಳ ನಿರ್ದಿಷ್ಟ ಹುದ್ದೆಗಳಲ್ಲಿ ಸರಕಾರದ ಮಂತ್ರಿಗಳು, ಸರಕಾರಿ ಅಧಿಕಾರಿ ಅಥವಾ ರಾಜಕೀಯ ನೇತಾರರ ಹಿಂಬಾಲಕರೇ ತುಂಬಿಕೊಂಡಿರುತ್ತಾರೆ. ಅವರಿಗೆ ಧರ್ಮ, ಧಾರ್ಮಿಕ ಪದ್ಧತಿ, ದೇವಸ್ಥಾನದ ಪಾವಿತ್ರ್ಯದ ಜೋಪಾಸನೆಯಂತಹ ವಿಷಯಗಳ ಬಗ್ಗೆ ಏನೂ ಆಸಕ್ತಿಯಿರುವುದಿಲ್ಲ. ಅವರಿಗೆ ಕೇವಲ ನ್ಯಾಸದ ಮೂಲಕ ಸಿಗುವ ಸನ್ಮಾನ ಮತ್ತು ಸೌಲಭ್ಯಗಳೊಂದಿಗೆ ಮಾತ್ರ ಸಂಬಂಧವಿರುತ್ತದೆ. ಸರ್ವೋಚ್ಚ ನ್ಯಾಯಾಲಯದ ಒಂದು ನಿರ್ಣಯಕ್ಕನುಸಾರ ರಾಜ್ಯ ಸರಕಾರವು ನ್ಯಾಸ ಅಥವಾ ಸರಕಾರ ಸ್ಥಾಪಿಸಿದ ಸಮಿತಿಗಳಿಗೆ ಯಾರನ್ನು ಬೇಕಾದರೂ ನೇಮಕ ಮಾಡಬಹುದು. ಅಂದರೆ ದೇವಸ್ಥಾನ ವ್ಯವಸ್ಥಾಪನೆಯ ಇಂತಹ ನ್ಯಾಸಕ್ಕೆ ಎಡಪಂಥೀಯ, ತಥಾಕಥಿತ ಜಾತ್ಯತೀತವಾದಿ, ನಾಸ್ತಿಕರನ್ನು ಸಹ ನೇಮಿಸಬಹುದು. ಇಷ್ಟು ಮಾತ್ರವಲ್ಲ, ಮುಸಲ್ಮಾನ ವ್ಯಕ್ತಿಯು ಸಹ ನ್ಯಾಸದ ಪದಾಧಿಕಾರಿಯಾಗಬಹುದು. ಯಾವುದೇ ಹಿಂದೂ ಸಂಘಟನೆ ಅಥವಾ ಧಾರ್ಮಿಕ ಗುರುಗಳಿಗೆ ಈ ವಿಷಯದಲ್ಲಿ ಮಾತನಾಡಲು ಅಧಿಕಾರವಿಲ್ಲ.
೩. ತಮಿಳುನಾಡು ವಿಧಾನಸಭೆಯಲ್ಲಿ ಮಂದಿರ ಸರಕಾರೀಕರಣ ಕಾನೂನನ್ನು ಸಾದರಪಡಿಸುವಾಗ ವಿರೋಧಿಸದ ಹಿಂದೂಗಳು
೧೯೫೧ ರಲ್ಲಿ ತಮಿಳುನಾಡಿನಲ್ಲಿ ಈ ಕಾನೂನನ್ನು ಅನ್ವಯಗೊಳಿಸುವಾಗ ವಿಧಾನ ಸಭೆಯಲ್ಲಿ ಅಂದಿನ ಮಂತ್ರಿ ಓ.ಪಿ. ರಾಮಸ್ವಾಮಿ ರೆಡ್ಡಿಯಾರ ಇವರು ಒಂದು ಅತ್ಯಂತ ಉಚ್ಚ ಆದರ್ಶಯುಕ್ತ ವಾಕ್ಯವನ್ನು ಹೇಳಿದ್ದರು, “ಈ ಕಾನೂನನ್ನು ಸಾದರಪಡಿಸುವಾಗ ನಾನು ಸ್ಪಷ್ಟಪಡಿಸಲು ಇಚ್ಛಿಸುವುದೇನೆಂದರೆ, ನನ್ನ ಮನಸ್ಸಿನಲ್ಲಿ ಧಾರ್ಮಿಕ ಶ್ರದ್ಧೆಯ ಬಗ್ಗೆ ಮನಃ ಪೂರ್ವಕ ಗೌರವವಿದೆ. ಹಿಂದೂ ದೇವಸ್ಥಾನ ಮತ್ತು ಮಠಗಳ ವ್ಯವಸ್ಥಾಪನೆ ಮಾಡುವುದು ಆವಶ್ಯಕವಾಗಿದೆ. ಅದರಿಂದ ಅವುಗಳನ್ನು ಒಳ್ಳೆಯ ರೀತಿಯಲ್ಲಿ ಪುನರ್ಸ್ಥಾಪನೆ ಮಾಡಬಹುದು. ಸಮಾಜ, ಹಿಂದೂ ಮತ್ತು ಧಾರ್ಮಿಕ ಪುನರುತ್ಥಾನಕ್ಕಾಗಿ ಇದರ ಅವಶ್ಯಕತೆಯಿದೆ. ಆಗ ಹಿಂದೂಗಳು ಸಂಘಟಿತರಾಗಿ, ದೇವಸ್ಥಾನ ಮತ್ತು ಮಠಗಳನ್ನು ಮಾತ್ರ ಸರಕಾರ ಏಕೆ ವಶಪಡಿಸಿಕೊಳ್ಳುತ್ತಿದೆ ? ಮಸೀದಿ, ಮದರಸಾ, ವಕ್ಫ್ ಬೋರ್ಡ್, ಚರ್ಚ್, ಮಿಶನರಿ ನ್ಯಾಸ, ಸ್ಮಶಾನ (ಕಬ್ರಸ್ತಾನ), ಆರೋಗ್ಯಕೇಂದ್ರಗಳು ಇತ್ಯಾದಿಗಳ ಮೇಲೆ ಕೂಡ ಸರಕಾರ ನಿಯಂತ್ರಣವನ್ನು ಏಕೆ ತರುವುದಿಲ್ಲ ? ಎಂದು ವಿರೋಧಿಸ ಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಕೇರಳದಲ್ಲಿ ಹಿಂದೂ ಧರ್ಮವಿರೋಧಿ ಎಡ ಪಂಥೀಯರು, ತಮಿಳುನಾಡಿನಲ್ಲಿ ರಾಮನ ಅಸ್ತಿತ್ವವನ್ನು ನಿರಾಕರಿಸುವ ಹಾಗೂ ತಮ್ಮನ್ನು ನಾಸ್ತಿಕರೆಂದು ಹೇಳಿಕೊಳ್ಳುವ ದ್ರಾವಿಡ ಪಕ್ಷ ಮತ್ತು ಆಂಧ್ರಪ್ರದೇಶದ ರಾಜಶೇಖರ ರೆಡ್ಡಿಯವರಂತಹ ‘ಕ್ರಿಪ್ಟೋ ಕ್ರೈಸ್ತ (ಅವರು ತಿರುಪತಿ ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಾಣ ಮಾಡಬೇಕೆಂದು ಒತ್ತಡ ಹೇರಿದ್ದರು) ಇವರ ವಶದಲ್ಲಿ ಸಾವಿರಾರು ದೇವಸ್ಥಾನಗಳ ಆರ್ಥಿಕ ವ್ಯವಹಾರದ ಹೊಣೆಯಿದೆ. ಈ ರಾಜ್ಯಗಳಲ್ಲಿ ಈ ಜನರು ಕಳೆದ ೬೦ ವರ್ಷಗಳಲ್ಲಿ ದೇವಸ್ಥಾನಗಳ ಎಷ್ಟು ಸಂಪತ್ತನ್ನು ಕಬಳಿಸಿ ಹಂಚಿ ಕೊಂಡಿರಬಹುದು, ಎಂಬುದನ್ನು ಈಗ ನೀವೇ ವಿಚಾರ ಮಾಡಬಹುದು.
೪. ಶ್ರೀಮಂತ ದೇವಸ್ಥಾನಗಳ ಸಂಪತ್ತನ್ನು ಕೊಳ್ಳೆ ಹೊಡೆಯುವ ರಾಜ್ಯ ಸರಕಾರಗಳು
೧೯೫೧ ರಲ್ಲಿ ತಮಿಳುನಾಡು ಸರಕಾರದ ಈ ಕಪ್ಪು ಕಾನೂನಿನ ಮಸೂದೆ ಬಂದನಂತರ ಅನೇಕ ರಾಜ್ಯಗಳು ತಕ್ಷಣ ತಮ್ಮ ತಮ್ಮ ವಿಧಾನಸಭೆಯಲ್ಲಿ ಈ ಕಾನೂನಿನ ಸಮಾನವಾದ ಕಾನೂನನ್ನು ಮಾಡಿದವು ಹಾಗೂ ದೇವಸ್ಥಾನಗಳ ಸಂಪತ್ತು ಮತ್ತು ದಾನದಲ್ಲಿ ಬರುವ ಕೋಟಿಗಟ್ಟಲೆ ರೂಪಾಯಿಗಳ ಮೇಲೆ ಹಿಡಿತ ಸಾಧಿಸುವ ಕಾರ್ಯವನ್ನು ಆರಂಭಿಸಿದುವು. ಪ್ರಖ್ಯಾತ ಹಾಗೂ ಶ್ರೀಮಂತ ದೇವಸ್ಥಾನಗಳಿಂದ (ಆಂಧ್ರಪ್ರದೇಶದಲ್ಲಿನ ಶ್ರೀ ತಿರುಪತಿ ಬಾಲಾಜಿ ಮಂದಿರ, ಶ್ರೀ ಗುರುವಾಯೂರು ಮಂದಿರ, ಮುಂಬಯಿಯ ಶ್ರೀ ಸಿದ್ಧಿವಿನಾಯಕ ಮಂದಿರ) ಸಂಬಂಧಪಟ್ಟ ರಾಜ್ಯ ಸರಕಾರಗಳು ‘ಜನರ ಉದ್ಧಾರ ಮತ್ತು ವಿಕಾಸ ಕಾರ್ಯದ ಹೆಸರಿನಲ್ಲಿ ಹಣವನ್ನು ಕಸಿದುಕೊಳ್ಳುತ್ತಿವೆ. ಅದು ಕೊನೆಗೆ ಆ ನೇತಾರರು ಮತ್ತು ಸರಕಾರಿ ಅಧಿಕಾರಿಗಳ ಜೇಬನ್ನು ಸೇರುತ್ತದೆ. ಇಂತಹ ‘ಹೋಲ್‌ಸೇಲ್ ಲೂಟಿ ಹಲವಾರು ವರ್ಷಗಳಿಂದ ನಡೆಯುತ್ತಾ ಇದೆ. ಧರ್ಮಾ ಚಾರ್ಯರು, ಹಿಂದೂ ಸಂಘಟನೆಗಳು ಅಥವಾ ಪ್ರವಚನಕಾರರು ಇದರ ವಿರುದ್ಧ ಧ್ವನಿ ಎತ್ತುವುದಿಲ್ಲ. ತಮಿಳುನಾಡಿನ ಎಚ್.ಆರ್.ಸಿ.ಇ. ವಿಭಾಗವು ಸದ್ಯ ಹಿಂದೂಗಳ ದೇವಸ್ಥಾನಗಳ ೪ ಲಕ್ಷ ಎಕ್ರೆ ಕೃಷಿ ಭೂಮಿ, ೨ ಕೋಟಿ ಚೌರಸ ಅಡಿಗಳಷ್ಟು ನಿವಾಸಿ-ವ್ಯವಸಾಯಿಕ ಕಟ್ಟಡಗಳು ಮತ್ತು ೨೯ ಕೋಟಿ ಚದರ ಅಡಿಗಳಷ್ಟು ನಗರಗಳಲ್ಲಿನ ಭೂಮಿಯನ್ನು ನಿಯಂತ್ರಿಸುತ್ತಿದೆ. ಇದರಿಂದ ಸರಕಾರಕ್ಕೆ ಪ್ರತಿವರ್ಷ ೩೬ ಕೋಟಿ ರೂಪಾಯಿಗಳಷ್ಟು ಉತ್ಪನ್ನ ಬರುತ್ತದೆ, ಎಂದು ಹೇಳಲಾಗುತ್ತದೆ. ಇಷ್ಟು ದೊಡ್ಡ ಭೂಮಿಯಿಂದ ಅದಕ್ಕೂ ಹೆಚ್ಚು ಉತ್ಪನ್ನ ಬರಬಹುದು, ಎನ್ನುವುದು ಒಬ್ಬ ಸಾಮಾನ್ಯ ವ್ಯಕ್ತಿಗೂ ತಿಳಿಯಬಲ್ಲದು; ಆದರೆ ತಥಾಕಥಿತ ವ್ಯವಸ್ಥಾಪನೆಯ ಹೆಸರಿನಲ್ಲಿ ಹಿಂದೂ ವಿರೋಧಿ ತಂಡಗಳು ಲಾಭ ಪಡೆಯುತ್ತಿರುವುದರಿಂದ ೧ ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯ ಪಡೆಯಲು ಸಾಧ್ಯವಿರುವಾಗ ಕೂಡ ಅದು ಕೇವಲ ೩೬ ಕೋಟಿ ರೂಪಾಯಿಗಳಷ್ಟೆ ಕಾಣಿಸುತ್ತದೆ. ಈ ೩೬ ಕೋಟಿ ರೂಪಾಯಿಗಳಿಂದ ಎಷ್ಟು ಮೊತ್ತವನ್ನು ದೇವಸ್ಥಾನಗಳ ನಿರ್ವಹಣೆಗಾಗಿ ಮತ್ತು ಹೊಸ ನಿರ್ಮಾಣ ಕಾರ್ಯಕ್ಕಾಗಿ ಖರ್ಚಾಗುತ್ತದೆ ಹಾಗೂ ಎಷ್ಟು ಮೊತ್ತ ಅನಾವಶ್ಯಕ ಖರ್ಚಾಗುತ್ತದೆ, ಎಂಬ ಬಗ್ಗೆ ಮಾಹಿತಿಯ ಹಕ್ಕು ಅಧಿಕಾರದ ಮಾಹಿತಿಯಿಂದ ತಿಳಿದುಕೊಳ್ಳಬಹುದು.
೫. ಸರಕಾರಿಕರಣ ಆಗಿರುವ ದೇವಸ್ಥಾನಗಳ ನ್ಯಾಸದಲ್ಲಿ ಹಿಂದೂ ಪ್ರತಿನಿಧಿಗಳು ಇಲ್ಲದ ಕಾರಣ ದೊಡ್ಡ ಪ್ರಮಾಣದಲ್ಲಿ ಆಗುವ ಹಾನಿ
ದೇವಸ್ಥಾನಗಳ ಸಂಪತ್ತಿನ ಮೇಲೆ ಉದ್ದೇಶ ಪೂರ್ವಕ ಆರ್ಥಿಕ ನಿಯಂತ್ರಣವನ್ನು ಹೇರಲಾಗಿದೆ, ಅದರಿಂದ ದೇವಸ್ಥಾನಗಳ ಉಸ್ತುವಾರಿ ಅತ್ಯಲ್ಪ (ನಗಣ್ಯ ಪ್ರಮಾಣದಲ್ಲಿ) ಖರ್ಚು ಮಾಡಿ ದಾನ ಪೆಟ್ಟಿಗೆಯಲ್ಲಿ ಬರುವ ಹಿಂದೂಗಳ ಹಣವನ್ನು ಇನ್ನಿತರ ಖರ್ಚುಗಳ ಹೆಸರಿನಲ್ಲಿ ತಮ್ಮ ಕಿಸೆಗೆ ಹಾಕಿಕೊಳ್ಳಬಹುದು. ಮೊದಲೇ ಹೇಳಿದಂತೆ ದೇವಸ್ಥಾನದ ನ್ಯಾಸದಲ್ಲಿ ಅಥವಾ ಬೋರ್ಡ್‌ನಲ್ಲಿ ಹಿಂದೂಗಳ ಪ್ರತಿನಿಧಿ ಅಥವಾ ಅನುಭವಸ್ಥರು ಇರುವುದಿಲ್ಲ. ಇದರಿಂದಾಗಿ ಅಲ್ಲಿ ದೇವಸ್ಥಾನದ ದುರಸ್ತಿ ಹಾಗೂ ನಿರ್ಮಾಣ ಕಾರ್ಯದ ಯೋಜನೆಯ ಅವಧಿಯಲ್ಲಿ ಸ್ವೇಚ್ಛೆಯಿಂದ ವರ್ತಿಸಿ ಅಡ್ಡಾದಿಡ್ಡಿ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತದೆ. ಈ ತಥಾಕಥಿತ ದುರಸ್ತಿ ಕಾರ್ಯದ ಸಮಯದಲ್ಲಿ ಆ ದೇವಸ್ಥಾನದ ಸಂಸ್ಕೃತಿ, ಇತಿಹಾಸ ಅಥವಾ ಪುರಾತನ ವಾಸ್ತುಗಳ ಜೋಪಾಸನೆ ಅಥವಾ ಮಂದಿರ ಪುನರುತ್ಥಾನದ ಕೃತಿಯನ್ನು ಮಾಡಲು ಈ ಆಡಳಿತಮಂಡಳಿಯಲ್ಲಿ ಯಾವುದೇ ಯೋಜನೆ ಅಥವಾ ಇಚ್ಛಾಶಕ್ತಿ ಇರುವುದಿಲ್ಲ. ಅದರ ಪರಿಣಾಮದಿಂದ ತಮಿಳುನಾಡಿನ ಅನೇಕ ದೇವಸ್ಥಾನಗಳ ಅಮೂಲ್ಯವಾದ ಭಿತ್ತಿಚಿತ್ರಗಳು (ವಾಲ್‌ಪೈಂಟಿಂಗ್ಸ್) ಹಾಳಾಗಿದೆ. ಅನೇಕ ಪ್ರಾಚೀನ, ಮಹತ್ವದ ಮತ್ತು ಉನ್ನತ ಮಟ್ಟದ ಮೂರ್ತಿಕಲೆ ಇರುವ ಮಂಟಪಗಳು ಧ್ವಂಸವಾಗಿವೆ ಅಥವಾ ಆ ಕಲ್ಲುಗಳ ಮೇಲೆ ಬಿಳಿ ‘ಆಯಿಲ್‌ಪೈಂಟ್ ಚೆಲ್ಲಲಾಗಿದೆ. ನಿರ್ಮಾಣ ಕಾರ್ಯದ ಸಮಯದಲ್ಲಿ ಅನೇಕ ಮಹತ್ವದ ಮೂರ್ತಿಗಳು ರಾತ್ರಿ ಬೆಳಗಾಗುವುದರೊಳಗೆ ಅದೃಶ್ಯವಾಗಿವೆ. ಮೂರ್ತಿ ಕಳ್ಳಸಾಗಾಣಿಕೆದಾರರ ಮೂಲಕ ಅವುಗಳನ್ನು ವಿದೇಶಕ್ಕೆ ಕಳುಹಿಸಿ ಕೋಟಿಗಟ್ಟಲೆ ರೂಪಾಯಿಗಳನ್ನು ಲೂಟಿ ಮಾಡಲಾಗಿದೆಯೆಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಈ ವಿಷಯವು ಜನರಿಗೆ ಅರಿವಾದಾಗ ಅದರ ವಿರುದ್ಧ ಧ್ವನಿ ಎತ್ತಲು ಆರಂಭವಾಯಿತು; ಆದರೆ ವರ್ತಮಾನ ಪತ್ರಿಕೆಗಳಿಗೆ ಇದರ ಮಾಹಿತಿ ಸಿಗುವಾಗ ಹಿಂದೂಗಳ ಈ ದೇವಸ್ಥಾನಗಳಿಗೆ ದೊಡ್ಡ ಹಾನಿ ಯಾಗಿ ಹೋಗಿರುತ್ತದೆ. ಏಕೆಂದರೆ, ದೇವಸ್ಥಾನದ ವ್ಯವಸ್ಥಾಪನೆಯಲ್ಲಿರುವ ನೇತಾರರು ಅಥವಾ ಅಧಿಕಾರಿಗಳಿಗೆ ಭಾರತೀಯ ಹಾಗೂ ಹಿಂದೂ ಸಂಸ್ಕೃತಿಯೊಂದಿಗೆ ಯಾವುದೇ ಅವಿನಾಭಾವ ಸಂಬಂಧವಿಲ್ಲ ಮತ್ತು ವಾಸ್ತುಕಲೆ ಅಥವಾ ಪುರಾತನ ವಾಸ್ತುಗಳ ರಕ್ಷಣೆಯ ಮಹತ್ವವೂ ಬೇಕಿಲ್ಲ !
೬. ಆಂಗ್ಲರು ಆರಂಭಿಸಿದ ದೇವಸ್ಥಾನಗಳ ಸಂಪತ್ತಿನ ‘ಹೋಲ್‌ಸೇಲ್ ಲೂಟ್ ಭಾರತೀಯ ಜನಪ್ರತಿನಿಧಿಗಳಿಂದಲೂ ಮುಂದುವರಿದಿದೆ !
ಭಾರತದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ದೇವಸ್ಥಾನಗಳ ಸಂಪತ್ತನ್ನು ಸಂಘಟಿತರಾಗಿ ಮತ್ತು ‘ಹೋಲ್‌ಸೇಲ್ ಲೂಟಿ ಮಾಡಲು ಆಂಗ್ಲರಿಂದ ಕಲಿತಿದ್ದಾರೆ. ತಮಿಳುನಾಡಿನಲ್ಲಿರುವ ಚೆಂಗಲಪಟ್ಟ್‌ನಲ್ಲಿ ಮೊದಲ ಜಿಲ್ಲಾಧಿಕಾರಿಯು ೧೭೯೯ ರಲ್ಲಿ ಮಂಡಿಸಿದ ಸಂಪತ್ತಿನ ವರದಿಯಲ್ಲಿ, ಅವರು ಹೇಗೆ ದೇವಸ್ಥಾನಗಳ ಆದಾಯ ಮತ್ತು ವ್ಯವಸ್ಥಾಪನೆಯನ್ನು ತನ್ನ ವಶಕ್ಕೆ ತೆಗೆದುಕೊಂಡರು ಎಂಬ ಉಲ್ಲೇಖ ಮಾಡಿದ್ದಾರೆ. ಅನಂತರ ಎರಡು ವರ್ಷದೊಳಗೆ ಅಂದರೆ ೧೮೦೧ ರಲ್ಲಿ ಇದು ಆಂಗ್ಲ ಸರಕಾರದ ಪರಂಪರೆಯೆ ಆಯಿತು ಹಾಗೂ ಅವರು ವಿವಿಧ ದೇವಸ್ಥಾನಗಳೊಂದಿಗೆ ಶಾಶ್ವತವಾದ ಒಂದು ಒಪ್ಪಂದವನ್ನು ಮಾಡಿಕೊಂಡು ‘ಫಿಕ್ಸ್‌ಡ್ ಮನಿ ಅಲಾವೆನ್ಸ್ (ಒಂದು ನಿರ್ಧಿಷ್ಟ ಮೊತ್ತದ ಭತ್ತೆ) ಯೋಜನೆಯನ್ನು ಮಾಡಿದರು. ತಮಿಳುನಾಡಿನ ಉತ್ತರ ಆರ್ಕೋಟ್ ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿ ೧೮೩೧ ರಲ್ಲಿ ‘ಏಶಿಯಾಟಿಕ್ ಸೊಸೈಟಿ ಜನರಲ್ನಲ್ಲಿ ತಿರುಪತಿ ದೇವಸ್ಥಾನದ ಆದಾಯವನ್ನು ಹೇಗೆ ವಶಪಡಿಸಿ ಕೊಳ್ಳಬಹುದು, ಎಂಬ ವಿಷಯದಲ್ಲಿ ಬರೆದಿದ್ದಾರೆ.
ಅಧಾರ : www.desicnn.com ಜಾಲತಾಣ
(ಸರಕಾರಿಕರಣವಾದ ದೇವಸ್ಥಾನಗಳ ಲೂಟಿ ಯನ್ನು ತಡೆಗಟ್ಟಲು ದೇವಸ್ಥಾನಗಳನ್ನು ಭಕ್ತರ ವಶಕ್ಕೆ ಒಪ್ಪಿಸುವುದು ಎಷ್ಟು ಅವಶ್ಯಕವಾಗಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಹಿಂದೂ ಜನಜಾಗೃತಿ ಸಮಿತಿ ಸಹಿತ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ದೇವಸ್ಥಾನಗಳ ಸರಕಾರಿಕರಣದ ವಿರುದ್ಧ ವಿವಿಧ ಸ್ತರದಲ್ಲಿ ಅಭಿಯಾನವನ್ನು ಕೂಡ ಹಮ್ಮಿಕೊಳ್ಳುತ್ತಿವೆ. ಹಿಂದೂ ರಾಷ್ಟ್ರದಲ್ಲಿ ಎಲ್ಲ ದೇವಸ್ಥಾನಗಳ ವ್ಯವಸ್ಥಾಪನೆಯು ಭಕ್ತರಲ್ಲಿರುವುದು ! – ಸಂಪಾದಕರು)