ಭಾವೀ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡುವ ಬಗ್ಗೆ ಅಖಿಲ ಮನುಕುಲಕ್ಕೆ ಮಾರ್ಗದರ್ಶನ ಮಾಡುವ ಏಕೈಕರೆಂದರೆ ಪರಾತ್ಪರ ಗುರು ಡಾ. ಆಠವಲೆ !

ನೆರೆಹಾವಳಿಯ ಪ್ರಸಂಗದಲ್ಲಿ ಸರಕಾರದಿಂದ ಮುನ್ಸೂಚನೆ ದೊರಕಿದ ಬಳಿಕ ಕೆಲವು ನಿಮಿಷಗಳಲ್ಲಿಯೇ ಮನೆಯಿಂದ ತಕ್ಷಣ ಹೊರಬರ ಬೇಕಾದಲ್ಲಿ ಪೂರ್ವತಯಾರಿಯೆಂದು ಒಂದು ಸಣ್ಣ ಪೆಟ್ಟಿಗೆಯಲ್ಲಿ (‘ಬ್ರೀಫಕೇಸ್‌ನಲ್ಲಿ) ಮಹತ್ವದ ಕಾಗದಪತ್ರಗಳನ್ನು (ಉದಾ. ರೇಶನ್‌ಕಾರ್ಡ್, ಆಧಾರಕಾರ್ಡ, ಬ್ಯಾಂಕ್ ಪಾಸ್‌ಬುಕ್) ಮತ್ತು ಇತರ ಆವಶ್ಯಕ ಸಾಮಗ್ರಿಗಳನ್ನು ಕ್ರೋಢೀಕರಿಸಿ ಇಟ್ಟುಕೊಳ್ಳಬೇಕು !

ಇದು ‘ಭೂಷಣ ಪ್ರಾಯವಲ್ಲ !

ಸಾಮ್ಯವಾದಿಗಳು ಭಾರತದ ಇತಿಹಾಸವನ್ನು ತಿರುಚಿದರು ಅಲ್ಲದೇ ಪುಸ್ತಕಗಳಿಗೆ ‘ಹಸಿರು ಮತ್ತು ‘ಕೆಂಪು ಬಣ್ಣವನ್ನು ಲೇಪಿಸಿ ಅದನ್ನು ವಿದ್ಯಾರ್ಥಿಗಳ ಹಣೆಗೆ ಮೆತ್ತಿದರು. ಅದರ ಪರಿಣಾಮವಾಗಿ ಹೊರಬರುವ ವಿದ್ಯಾರ್ಥಿಗಳು ಇಲ್ಲಿಯ ಸಂಸ್ಕೃತಿಯ ಅವಹೇಳನ ಮಾಡುವವರು, ಕಟುವಾಗಿ ತಿರಸ್ಕಾರವನ್ನು ಮಾಡುವವರಾದರು.

ಕರೋನಾದಿಂದ ಅಮೇರಿಕಾದಲ್ಲಿ ಸೈಕಲ್ ಖರೀದಿಯಲ್ಲಿ ಭಾರಿ ಹೆಚ್ಚಳ

ಕರೋನಾ ಹರಡುವುದನ್ನು ತಡೆಯಲು ಸಂಚಾರ ನಿಷೇಧ ಹೇರಿರುವುದರಿಂದ ಅಮೇರಿಕಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೈಕಲ್ ಖರೀದಿಸುತ್ತಿದ್ದಾರೆ. ತನ್ನನ್ನು ಆರೋಗ್ಯವಾಗಿರಿಸಿಕೊಳ್ಳುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಇದರ ಹಿಂದಿನ ಉದ್ದೇಶ ಎಂದು ಹೇಳಲಾಗುತ್ತದೆ.

ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಅಮುಲ್ಯ ಲಿಯೋನಾ ಅವರ ಜಾಮೀನು ಅರ್ಜಿಗೆ ಪೊಲೀಸರಿಂದ ವಿರೋಧ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ರ್ಯಾಲಿಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ 19 ವರ್ಷದ ವಿದ್ಯಾರ್ಥಿನಿ ಅಮುಲ್ಯ ಲಿಯೋನಾ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಪೊಲೀಸರು ವಿರೋಧಿಸಿದ್ದಾರೆ. ಅಮುಲ್ಯ ಪ್ರಭಾವಿ ವ್ಯಕ್ತಿಯಾಗಿದ್ದಾರೆ.

ನೇಪಾಳ ಮತ್ತು ಭಾರತದ ನಡುವಿನ ಗಡಿವಿವಾದ ಅವರ ಆಂತರಿಕ ಪ್ರಶ್ನೆ! – ಚೀನಾ

ಕಲಾಪಾನಿ ವಿಷಯವು ಭಾರತ ಮತ್ತು ನೇಪಾಳ ನಡುವಿನ ಆಂತರಿಕ ವಿವಾದವಾಗಿದೆ. ಸ್ನೇಹಪರ ಮಾತುಕತೆಯ ಮೂಲಕ ಉಭಯ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತವೆ ಎಂದು ನಾವು ಭಾವಿಸುತ್ತೇವೆ. ಪರಿಸ್ಥಿತಿ ಹದಗೆಡದಂತೆ ಅವರು ಯಾವುದೇ ರೀತಿಯ ಏಕಪಕ್ಷೀಯ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ.

‘ಅಶ್ವಗಂಧ’ದಿಂದ ನಿರ್ಮಿಸಿದ ಔಷಧಿಯು ಕೊರೋನಾ ಪೀಡಿತ ರೋಗಿಗಳನ್ನು ಗುಣಮುಖ ಮಾಡಬಹುದು ! – ಐಐಟಿ ದೆಹಲಿಯ ತೀರ್ಮಾನ

ಐಐಟಿ ದೆಹಲಿಯ ‘ಬಯೋಕೆಮಿಕಲ್’ ಇಂಜಿನಿಯರಿಂಗ್‌ನ ಪ್ರಾ. ಡಿ. ಸುಂದರ ಇವರು ಮಾಡಿದಂತಹ ಶೋಧನೆಗನುಸಾರ ‘ಅಶ್ವಗಂಧ’ದಿಂದ ತಯಾರಿಸಿದ ನೈಸರ್ಗಿಕ ಔಷಧಿಯು ಕೊರೋನಾ ಪೀಡಿತ ರೋಗಿಗಳನ್ನು ಗುಣಮುಖ ಮಾಡಬಹುದು. ಅಶ್ವಗಂಧದ ಒಂದು ರಾಸಾಯನಿಕ ಪದಾರ್ಥವು ಕೊರೋನಾದ ಜೀವಕೋಶವನ್ನು ಹೆಚ್ಚಾಗಿಸುವುದನ್ನು ತಡೆಗಟ್ಟಲು ಪರಿಣಾಮಕಾರಿಯಾಗಬಹುದು.

ಹೊಸೂರು (ಬೆಳಗಾವಿ) ಗ್ರಾಮದ ಮೂರು ಸಾವಿರ ಮಠದ ಗಂಗಾಧರ ಸ್ವಾಮೀಜಿಯವರ ಕೊಲೆಗೆ ಯತ್ನ

ಹೊಸೂರಿನ (ತಾಲ್ಲೂಕು ಬೈಲಹೋಂಗಲ) ಗ್ರಾಮದ ಮೂರು ಸಾವಿರ ಮಠದ ಗಂಗಾಧರ ಸ್ವಾಮೀಜಿಯವರ ಮೇಲೆ ಮೇ 20 ರಂದು ತಡರಾತ್ರಿ ಮಾರಣಾಂತಿಕ ಹಲ್ಲೆಯಾಗಿದೆ. ಅಜ್ಞಾತ ವ್ಯಕ್ತಿಯೊಬ್ಬ ತಡರಾತ್ರಿ ಕಳ್ಳತನ ಮಾಡುವ ಉದ್ದೇಶದಿಂದ ಮಠಕ್ಕೆ ಪ್ರವೇಶಿಸಿ ಸ್ವಾಮೀಜಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ವಿಶ್ವ ಆರೋಗ್ಯ ಸಂಘಟನೆಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ ಇವರ ನೇಮಕ

ಕೇಂದ್ರೀಯ ಆರೋಗ್ಯಮಂತ್ರಿ ಡಾ. ಹರ್ಷವರ್ಧನ ಇವರನ್ನು ವಿಶ್ವ ಆರೋಗ್ಯ ಸಂಘಟನೆಯ ೩೪ ಸದಸ್ಯರ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಪದವಿಗೆ ಆಯ್ಕೆ ಮಾಡಲಾಗಿದೆ. ಅವರು ಮೇ ೨೨ ರಂದು ಉಸ್ತುವಾರಿಯನ್ನು ವಹಿಸಲಿದ್ದಾರೆ. ಪ್ರಾದೇಶಿಕ ಸಮೂಹದ ಕಾರ್ಯಕಾರಿ ಮಂಡಳಿಯ ಅಧಿಕಾರವನ್ನು ಒಂದು ವರ್ಷಕ್ಕಾಗಿ ‘ರೊಟೇಶನ್’ (ಸರದಿ) ಪದ್ದತಿಯಲ್ಲಿ ನೀಡುತ್ತಾರೆ. ಭಾರತಕ್ಕೆ ನೀಡುವ ನಿರ್ಧಾರವನ್ನು ಕೈಗೊಂಡಿದ್ದಾರೆ.

‘ಆನ್‌ಲೈನ್ ಜಿಹಾದ್ : ಸದ್ಯದ ಪರಿಸ್ಥಿತಿ ಮತ್ತು ಉಪಾಯ

ಒಬ್ಬ ಯುವಕನು ‘ಆನ್‌ಲೈನ್ ಜಿಹಾದ್ನಲ್ಲಿ ಸಿಲುಕಿದರೆ ಕೂಡಲೇ ಅವನ ಮೇಲೆ ಕಣ್ಣಿಡಲಾಗುತ್ತದೆ. ದುರ್ಭಾಗ್ಯವೆಂದರೆ ಅವರ ಸಂಖ್ಯೆ ಸಾವಿರಗಟ್ಟಲೇ ಇರುವುದರಿಂದ ಅವರ ಮೇಲೆ ಗಮನವಿರಿಸುವುದು ಕಠಿಣವಾಗಿದೆ. ಇಂತಹ ಸಮಯದಲ್ಲಿ ಅವರ ಕುಟುಂಬದವರು ಮತ್ತು ಸಂಬಂಧಿಕರು ಅವರ ಮೇಲೆ ಗಮನ ಇಡುವುದರ ಆವಶ್ಯಕತೆಯಿದೆ; ಏಕೆಂದರೆ, ೨೪ ಗಂಟೆಗಳ ಯಾವುದೇ ಯುವಕನ ಮೇಲೆ ಗುಪ್ತಚರರು ಗಮನವಿಡಲು ಸಾಧ್ಯವಿಲ್ಲ.