‘ಐ ಕಾಂಟ್ ಬ್ರೀಥ್’

ಕೊರೊನಾದಿಂದ ಅತಿ ಹೆಚ್ಚು ಸಾಂಕ್ರಾಮಿಕವಾಗಿ ಪೀಡಿತವಾಗಿರುವ ಅಮೇರಿಕಾ ದೇಶವು ಸದ್ಯ ಒಂದು ಬೇರೆಯೇ ಕಾರಣದಿಂದ ಹೊತ್ತಿ ಉರಿಯುತ್ತಿದೆ. ಮಿನ್ನಿಯಾಪೋಲಿಸ್ ಪೋಲಿಸರ ಥಳಿತದಿಂದ ೪೬ ವರ್ಷದ ಕಪ್ಪುವರ್ಣೀಯ ಜಾರ್ಜ ಪ್ಲಾಯ್ಡ್ ಮೃತಪಟ್ಟಿದ್ದರಿಂದ, ಸಂಪೂರ್ಣ ಅಮೇರಿಕಾ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಪೊಲೀಸ್ ತಪಾಸಣೆಯ ಸಮಯದಲ್ಲಿ ಜಾರ್ಜ್‌ನನ್ನು ಚತುಷ್ಕಕ್ರ ವಾಹನದಿಂದ ಕೆಳಗೆ ಇಳಿಯುವಂತೆ ಹೇಳಿದರು. ಆಗ ಜಾರ್ಜ್ ಮತ್ತು ಪೊಲೀಸರಲ್ಲಿ ವಾಗ್ವಾದ ನಡೆಯಿತು. ಪೊಲೀಸರು ಜಾರ್ಜ್‌ನನ್ನು ಕೆಳಗೆ ಬೀಳಿಸಿದರು ಮತ್ತು ಒಬ್ಬ ಪೊಲೀಸನು ಅವನ ಕುತ್ತಿಗೆಯ ಮೇಲೆ ಮಂಡಿಯೂರಿ ಕುಳಿತನು. ಆ ಸಮಯದಲ್ಲಿ ಜಾರ್ಜನು ಪೊಲೀಸರಿಗೆ ‘ಐ ಕಾಂಟ್ ಬ್ರೀಥ್ (ನನಗೆ ಉಸಿರಾಡಲು ಆಗುತ್ತಿಲ್ಲ) ಎಂದು ದೈನ್ಯತೆಯಿಂದ ವಿನಂತಿಸಿದನು. ಆದರೆ ಆ ನಿರ್ದಯಿ ಪೊಲೀಸನಿಗೆ ಏನೂ ಅನಿಸಲಿಲ್ಲ. ಬದಲಾಗಿ ಅವನ ಜಾರ್ಜನ ಕುತ್ತಿಗೆಯ ಮೇಲೆ ಮತ್ತಷ್ಟು ಅಧಿಕ ಒತ್ತಡವನ್ನು ಹಾಕಿದನು. ೬ ನಿಮಿಷದವರೆಗೆ ಇಂತಹ ಅವಸ್ಥೆಯಲ್ಲಿ ಇದ್ದ ಬಳಿಕ ಜಾರ್ಜ ಮೃತಪಟ್ಟನು. ಪೊಲೀಸ್ ಕಸ್ಟಡಿಯಲ್ಲಿ ಯಾವ ರೀತಿಯಾಗುತ್ತದೆಯೋ, ಅದು ಅಮೇರಿಕದಲ್ಲಿ ರಸ್ತೆಯಲ್ಲಿ ಘಟಿಸಿದ್ದರಿಂದ ಪೊಲೀಸರು ಮತ್ತು ಆ ಮೂಲಕ ಅಮೇರಿಕದ ಮಾನವಾಧಿಕಾರ ಸಂಘದ ಮಾನ ಹರಾಜಾಯಿತು. ಜಾರ್ಜ ಕಪ್ಪುವರ್ಣೀಯನಾಗಿದ್ದನು ಮತ್ತು ಅವನ ಹತ್ಯೆಗೆ ಅದೇ ದೊಡ್ಡ ಕಾರಣವಾಯಿತು.

ಅಮೇರಿಕದಲ್ಲಿ ಬಹಳ ಕಾಲದಿಂದಲೂ ವರ್ಣದ್ವೇಷವನ್ನು ಪೋಷಿಸುವ ಪರಂಪರೆಯಿದೆ. ವರ್ಣದ್ವೇಷ ಕೊನೆಗೊಂಡು ೧೫೫ ವರ್ಷಗಳಾಗಿವೆಯೆಂದು ಎದೆತಟ್ಟಿ ಹೇಳುತ್ತಿದ್ದರೂ, ವಸ್ತುಸ್ಥಿತಿ ಏನಿದೆ, ಎನ್ನುವುದನ್ನು ಜಾರ್ಜ ಪ್ರಕರಣದಿಂದ ಇಡೀ ವಿಶ್ವ ಕಂಡಿದೆ. ಅಮೇರಿಕದಲ್ಲಿ ಯಾವುದೋ ಮುಖಂಡನು ಎದ್ದು ನಿಂತು, ಈ ದ್ವೇಷಕ್ಕೆ ನಿರಂತರವಾಗಿ ನೀರು-ಗೊಬ್ಬರ ಹಾಕಿ ‘ರಾಷ್ಟ್ರೀಯ ಅಸ್ಮಿತೆಯನ್ನು ಕಾಪಾಡುತ್ತಿರುವುದಾಗಿ ಹೇಳುತ್ತಾನೆ. ಈ ಕಾರಣದಿಂದಲೇ ಒಂದೂವರೆ ಶತಕದ ಬಳಿಕವೂ ಈ ವಿವಾದ ತಣ್ಣಗಾಗಿಲ್ಲ. ಬಿಳಿಯರ ವಿರುದ್ಧ ಕಪ್ಪು ಈ ಜೀವ ತೆಗೆಯುವ ಸಂಘರ್ಷದಿಂದ ಅಮೇರಿಕದಲ್ಲಿ ಇಲ್ಲಿಯವರೆಗೆ ಸಾವಿರಾರು ಜನರು ಬಲಿಯಾಗಿದ್ದಾರೆ. ಇಂದು ಅಮೇರಿಕ ತನ್ನನ್ನು ಎಷ್ಟೇ ಪ್ರಗತಿಹೊಂದಿದ, ಆಧುನಿಕ ಮತ್ತು ಪ್ರಗತಿಪರ ಎಂದು ಹೇಳಿಕೊಳ್ಳುತ್ತಿದ್ದರೂ, ಅವರಲ್ಲಿ ವೈಚಾರಿಕ ದಾರಿದ್ರ್ಯ, ಕ್ರೂರತೆ ಹಾಗೂ ದ್ವೇಷ ಎಷ್ಟು ತುಂಬಿದೆಯೆನ್ನುವುದು ಜಾರ್ಜನ ಹತ್ಯೆಯ ನಿಮಿತ್ತದಿಂದ ಮತ್ತೊಮ್ಮೆ ಸಿದ್ಧವಾಗಿದೆ. ಜಾರ್ಜನ ಹತ್ಯೆಯಾದ ಬಳಿಕ ಈ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಎಲ್ಲ ರೀತಿಯಿಂದಲೂ ಪ್ರಯತ್ನಿಸಿದರು; ಆದರೆ ಪೊಲೀಸರ ದುರ್ದೈವದಿಂದ ಒಬ್ಬನು ಈ ಪ್ರಕರಣದ ಒಂದು ‘ವಿಡಿಯೋ ತಯಾರಿಸಿ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟನು. ಇದೇ ಅಮೇರಿಕ ಹೊತ್ತಿ ಉರಿಯಲು ಕಾರಣವಾಯಿತು. ಇದರಿಂದ ಅಮೇರಿಕದ ೪೦ ನಗರಗಳಲ್ಲಿ ಸಂಚಾರ ನಿಷೇಧ ವಿಧಿಸಲಾಗಿದೆ. ಆಂದೋಲನದ ಬಿಸಿಯು ‘ವೈಟ್ ಹೌಸ್ ಬಾಗಿಲನ್ನು ತಟ್ಟಿತು. ಆಗ ಸರಕಾರ ದಡಬಡಿಸಿ ಎಚ್ಚರವಾಯಿತು. ಸುರಕ್ಷತೆಯ ದೃಷ್ಟಿಯಿಂದ ಟ್ರಂಪ್ ಇವರ ರಕ್ಷಕರಿಗೆ ಅವರನ್ನು ಸುರಕ್ಷಿತ ಸ್ಥಳಕ್ಕೆ (ಬಂಕರ್‌ಗೆ) ಕಳುಹಿಸಬೇಕಾಯಿತು. ಸ್ವಲ್ಪದರಲ್ಲಿ ಜಗತ್ತಿನ ಮಹಾನ್ ಶಕ್ತಿ ಕುರ್ಚಿಯನ್ನು ಅಲುಗಾಡಿಸುವಂತಹ ಆಂದೋಲನವಾಗಿತ್ತು. ಅದರ ಗಂಭೀರತೆಯು ಆ ಕಾರಣದಿಂದಾಗಿಯೇ ಅಧಿಕವಿದೆ.

ದುರ್ದೈವಿ ಯೋಗಾಯೋಗ!

ಅಮೇರಿಕದಲ್ಲಿ ೨೦೧೪ ನೇ ಇಸವಿಯಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ೧೭ ಜುಲೈ ೨೦೧೪ ರಂದು ನ್ಯೂಯಾರ್ಕ ಪೊಲೀಸರು ಎರಿಕ್ ಗಾರ್ನರ್ ಈ ಕಪ್ಪುವರ್ಣೀಯ ವ್ಯಕ್ತಿಯನ್ನು ಇದೇ  ರೀತಿ ಕುತ್ತಿಗೆಯನ್ನು ಹಿಸುಕಿ ಹತ್ಯೆ ಮಾಡಿದ್ದನು. ಪೊಲೀಸರು ಕುತ್ತಿಗೆಯನ್ನು ಹಿಸುಕಿದ್ದರಿಂದ ಉಸಿರುಗಟ್ಟಿ ಎರಿಕ್ ಕೂಡ ಪೊಲೀಸರಿಗೆ ‘ಐ ಕಾಂಟ್ ಬ್ರೀಥ್ ಎಂದು ಮೇಲಿಂದ ಮೇಲೆ ವಿನಂತಿಸಿದ್ದನು ಮತ್ತು ಅದರಿಂದಲೇ ಆತ ಮೃತಪಟ್ಟನು. ಜಾರ್ಜ ಮತ್ತು ಎರಿಕ್ ಇವರ ‘ಐ ಕಾಂಟ್ ಬ್ರೀಥ್ ದುರ್ದೈವಿ ಯೋಗಾಯೋಗ ಮನಸ್ಸನ್ನು ಕಲಕುತ್ತದೆ. ಇದರಿಂದ ‘ಭಾರತದಲ್ಲಿ ಮಾನವಾಧಿಕಾರದ ಉಲ್ಲಂಘನೆಯಾಗುತ್ತಿದೆ, ಎಂದು ಕೂಗುವ ಅಮೇರಿಕಾದಲ್ಲಿ ಕಪ್ಪುವರ್ಣೀಯರಿಗೆ ಮುಕ್ತವಾಗಿ ಉಸಿರಾಡುವ ಮಾನವನ ಮೂಲಭೂತ ಅಧಿಕಾರವೂ ಇಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ. ಅಮೇರಿಕದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಇವರಿಂದ ಬರಾಕ್ ಒಬಾಮಾವರೆಗೆ ಅನೇಕ ಮುಖಂಡರು ಆಗಿ ಹೋದರು; ಆದರೆ ಬಿಳಿಯರ ಕ್ರೂರ ಕೃತ್ಯ ಮತ್ತು ಕಪ್ಪುವರ್ಣೀಯರ ನಿಜವಾಗಿ ಆಗುತ್ತಿರುವ ಕತ್ತು ಹಿಸುಕುವಿಕೆಯನ್ನು ಯಾರಿಗೂ ತಡೆಯಲು ಸಾಧ್ಯವಾಗಲಿಲ್ಲ. ಇದು ವಸ್ತುಸ್ಥಿತಿಯಾಗಿದೆ. ಅಮೇರಿಕದಲ್ಲಿಯಷ್ಟೇ ಅಲ್ಲ, ಆಸ್ಟ್ರೇಲಿಯಾ ನಾಗರಿಕರಲ್ಲಿಯೂ ವರ್ಣದ್ವೇಷ ತುಂಬಿ ತುಳುಕುತ್ತಿದೆ. ಈ ಹಿಂದೆಯೂ ಇಂತಹ ಮನ ಕಲಕುವ ವರ್ಣದ್ವೇಷವು ಅಲ್ಲಿಯ ಅನೇಕ ಮುಗ್ಧ ಭಾರತೀಯರ ಜೀವವನ್ನು ತೆಗೆದಿದೆ. ವರ್ಣದ್ವೇಷಿ ಮಾನಸಿಕತೆಯನ್ನು ಪೋಷಿಸುವ ಪ್ರಗತಿಪರ ರಾಷ್ಟ್ರಗಳ ಪ್ರಗತಿ ಇದೇನಾ ? ಅಮೇರಿಕ ತನ್ನನ್ನು ಮಾನವಾಧಿಕಾರದ ಎಲ್ಲಕ್ಕಿಂತ ದೊಡ್ಡ ಗುತ್ತಿಗೆದಾರನೆಂದು ತಿಳಿಯುತ್ತದೆ. ಅಲ್ಲಿಯ ಕೇವಲ ನಾಟಕೀಯ ಕ್ಷುಲ್ಲಕ ಮಾನವಾಧಿಕಾರ ಸಂಘಟನೆ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವಾಗುತ್ತಿರುವ ಬಗ್ಗೆ ವರದಿಯನ್ನು ತಪ್ಪದೇ ನೀಡುತ್ತಿರುತ್ತದೆ. ಈ ಸಂಘಟನೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳ ಮೇಲಾಗುವ ಅಮಾನವೀಯ ಅತ್ಯಾಚಾರಗಳನ್ನು ಮಾತ್ರ ನಿರ್ಲಕ್ಷಿಸುತ್ತದೆ. ಇದು ಕೂಡ ಪುನಃ ಕತ್ತು ಹಿಸುಕುವಂತಹದ್ದೇ ಆಗಿದೆ ! ಇದೇ ಸಂಘಟನೆ ಭಾರತಕ್ಕೆ ಅಸಹಿಷ್ಣುವೆಂದು ಪಟ್ಟ ಕಟ್ಟುತ್ತದೆ. ಇಂತಹವರು ಮೊದಲು ತಮ್ಮ ಮನೆಯಲ್ಲಿ ಏನು ಉರಿಯುತ್ತಿದೆಯೆಂದು ನೋಡಬೇಕು. ಭಾರತದಲ್ಲಿ ಅಸಹಿಷ್ಣುತೆಯಿದ್ದರೆ, ಅಮೇರಿಕದಲ್ಲಿ ಪೊಲೀಸರಿಂದ ನಡೆಸಲಾಗುವ ಕಪ್ಪುವರ್ಣೀಯ ಹತ್ಯೆಯು ಸಹಿಷ್ಣುವಿಕೆ ಯಾವ ವ್ಯಾಖ್ಯೆಯಲ್ಲಿ ಬರುತ್ತದೆ ?

ಕಪ್ಪುವರ್ಣೀಯರ ಮೇಲಿನ ಅನ್ಯಾಯದ ನಿಮಿತ್ತದಿಂದ ಅಷ್ಟಾವಕ್ರ ಹೆಸರಿನ ಒಬ್ಬ ಋಷಿಯ ಪುರಾಣದ ಒಂದು ವಿಷಯವನ್ನು ಹೇಳಬೇಕೆನಿಸುತ್ತದೆ. ಅಷ್ಟಾವಕ್ರ ಋಷಿಯ ದೇಹದಲ್ಲಿ ೮ ವಕ್ರಗಳಿದ್ದ ಕಾರಣ ಅವನ್ನು ಅಷ್ಟಾವಕ್ರನೆಂದು ಕರೆಯಲಾಗುತ್ತಿತ್ತು. ತನ್ನ ರೂಪದ ಬಗ್ಗೆ ಗರ್ವ ಹೊಂದಿದ್ದ ಒಬ್ಬ ರಾಜಕುಮಾರ ಋಷಿಗಳ ದೇಹದ ವಕ್ರತೆಯನ್ನು ನೋಡಿ ಯಾವಾಗಲೂ ನಗುತ್ತಿದ್ದನು. ಆದರೂ ಋಷಿಯು ಅವನಿಗೆ ಯಾವತ್ತೂ ಏನೂ ಮಾತನಾಡಲಿಲ್ಲ. ಹೀಗೆಯೇ ದಿನಗಳು ಕಳೆದವು. ಋಷಿಯು ಅವನಿಗೆ ಮೇಲಿಂದ ಮೇಲೆ ತಿಳಿಸಿ ಹೇಳುತ್ತಿದ್ದನು; ಆದರೆ ರಾಜಕುಮಾರನು ನಗುವುದನ್ನು ನಿಲ್ಲಿಸಲಿಲ್ಲ. ಕೊನೆಗೆ ಋಷಿಯು ಅವನಿಗೆ ‘ನೀನು ಮುಂದಿನ ಜನ್ಮದಲ್ಲಿ ಹಾವು ಆಗುವೆ ಎಂದು ಶಾಪ ನೀಡಿದನು. ತದನಂತರ ರಾಜಕುಮಾರಿಗೆ ಪಶ್ಚಾತ್ತಾಪವಾಯಿತು ಮತ್ತು ಅವನು ಋಷಿಯವರಲ್ಲಿ ಕ್ಷಮೆ ಕೋರಿದನು. ತದನಂತರ ಅವನಿಗೆ ಋಷಿಯು ‘ದ್ವಾಪರಯುಗದಲ್ಲಿ ಕೃಷ್ಣಾವತಾರವಾದ ಬಳಿಕ ನಿನ್ನ ಉದ್ಧಾರವಾಗುವುದು ಎಂದು ಉಃಶಾಪವನ್ನು ನೀಡಿದನು. ತಾತ್ಪರ್ಯ ಒಬ್ಬರ ವ್ಯಂಗ್ಯದ ಕಾರಣದಿಂದ ಕೇವಲ ನಗುವ ಕೃತ್ಯಕ್ಕೆ ಇಷ್ಟು ದೊಡ್ಡ ಶಿಕ್ಷೆಯಿದ್ದರೆ, ಬಣ್ಣದಿಂದ ಕಪ್ಪಾಗಿದ್ದಾರೆಂದು ಅವರ ಹತ್ಯೆಯನ್ನು ಮಾಡುವ ಕೃತಿಗೆ ಎಷ್ಟು ದೊಡ್ಡ ಶಿಕ್ಷೆಯಿರಬೇಕು ?

ನಿಸರ್ಗದಿಂದ ಶಿಕ್ಷೆ!

ಇಂದು ಜಗತ್ತು ಕೊರೋನಾ ಪಿಡುಗಿನಿಂದ ತತ್ತರಿಸಿದೆ. ಕೊರೋನಾದ ಲಕ್ಷಣಗಳಲ್ಲಿ ಉಸಿರಡಲು ತೊಂದರೆಯಾಗುವುದು ಸಹ ಒಂದು ಪ್ರಮುಖ ಲಕ್ಷಣವಾಗಿದೆ. ಇದೂ ಕೂಡ ಒಂದು ರೀತಿಯಲ್ಲಿ ‘ಐ ಕಾಂಟ್ ಬ್ರೀಥ್ ಎಂದೇ ಹೇಳಬೇಕಾಗುವುದು ಮತ್ತು ಕಪ್ಪು ವರ್ಣೀಯರ ಕತ್ತು ಹಿಸುಕುವ ಅಮೇರಿಕವನ್ನು ಅದೇ(ಕೊರೋನಾ) ಕುತ್ತಿಗೆ ಹಿಸುಕಿದೆ. ಇದು ಕೂಡ ಒಂದು ಯೋಗಾಯೋಗವೇ ಆಗಿದೆ. ಒಂದು ರೀತಿಯಲ್ಲಿ ನಿಸರ್ಗವೇ ಇದರ ಶಿಕ್ಷೆಯನ್ನು ಅಮೇರಿಕಗೆ ನೀಡುತ್ತಿದೆ. ಇದೇ ರೀತಿ ಇಂದು ಅಮೇರಿಕವು ಜಾರ್ಜ ಮತ್ತು ಎರಿಕ್ ಅಂತಿಮ ಕ್ಷಣದಲ್ಲಿ ವಿನಂತಿಸಿದ ‘ಐ ಕಾಂಟ್ ಬ್ರೀಥ್ ಶಬ್ದಗಳನ್ನು  ದೈನ್ಯದಿಂದ ವಿನಂತಿಸುತ್ತಿದೆ.