ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ರಾಜಕಾರಣಿ, ಬುದ್ಧಿಜೀವಿ ಅಥವಾ ವಿಜ್ಞಾನಿಗಳಿಂದಾಗಿ ವಿದೇಶಿಗರು ಭಾರತಕ್ಕೆ ಬರುವುದಿಲ್ಲ ಅವರು ಸಂತರಿಂದ ಹಾಗೆಯೇ ಅಧ್ಯಾತ್ಮ ಮತ್ತು ಸಾಧನೆಯನ್ನು ಕಲಿಯಲು ಬರುತ್ತಾರೆ, ಹಾಗಿದ್ದರೂ ಹಿಂದೂಗಳಿಗೆ ಸಂತರು ಮತ್ತು ಅಧ್ಯಾತ್ಮದ ಮೌಲ್ಯ ಇನ್ನೂ ತಿಳಿದಿಲ್ಲ.

ಹಿಂದೂ (ಈಶ್ವರಿ) ರಾಜ್ಯದಲ್ಲಿ ಶಿಕ್ಷಣ ಪದ್ಧತಿಯಲ್ಲಿ ಪ್ರತಿಯೊಂದು ವಿಷಯದ ಅಭ್ಯಾಸದೊಂದಿಗೆ ‘ಈಶ್ವರಪ್ರಾಪ್ತಿ ಹೇಗೆ ಮಾಡಿಕೊಳ್ಳುವುದು ಎಂಬುದನ್ನು ಕಲಿಸಲಾಗುವುದು

ಹಿಂದೂ (ಈಶ್ವರಿ) ರಾಜ್ಯದ ಶಿಕ್ಷಣಪದ್ಧತಿ ಹೇಗಿರಬಹುದು ?, ಎಂಬ ಪ್ರಶ್ನೆಯು ಕೆಲವರು ಕೇಳುತ್ತಾರೆ ಅದರ ಉತ್ತರ ನಾಲಂದ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ ಯಾವ ರೀತಿ ೧೪ ವಿದ್ಯೆ ಮತ್ತು ೬೪ ಕಲೆಯನ್ನು ಕಲಿಸಲಾಗುತ್ತಿತ್ತು ಅದರಂತೆ ಶಿಕ್ಷಣವನ್ನು ನೀಡಲಾಗುವುದು.

ನಮ್ಮ ಪೀಳಿಗೆಯು ೧೯೭೦ ರವರೆಗೆ ಸಾತ್ತ್ವಿಕತೆಯನ್ನು ಅನುಭವಿಸಿತು ಆದರೆ ಮುಂದಿನ ಪೀಳಿಗೆಯು ೨೦೧೮ ರವರೆಗೆ ಅಲ್ಪ ಪ್ರಮಾಣದಲ್ಲಿ ಅನುಭವಿಸಿತು ಮತ್ತು ೨೦೨೩ ರವರೆಗೆ ಅನುಭವಿಸಲಾರರು.

ಎಲ್ಲಿ ತಮ್ಮ ಕುಟುಂಬ ಅಥವಾ ಜಾತಿಬಾಂಧವರ ಹಿತವನ್ನು ಬಯಸುವ ಸಂಕುಚಿತ ವೃತ್ತಿಯ ಮಾನವನು ಮತ್ತು ಎಲ್ಲಿ ಅನಂತ ಕೋಟಿ ಬ್ರಹ್ಮಾಂಡದ ಪ್ರಾಣಿಮಾತ್ರರ ಹಿತವನ್ನು ಕಾಪಾಡುವ ಈಶ್ವರ.

ಧರ್ಮಶಿಕ್ಷಣದಿಂದಾಗಿ ಧರ್ಮಕ್ಕಾಗಿ ತ್ಯಾಗ ಮಾಡಲು ಲಕ್ಷಗಟ್ಟಲೆ ಮುಸಲ್ಮಾನರು ಸಿದ್ಧರಿರುತ್ತಾರೆ, ಆದರೆ ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದ್ದರಿಂದ ಅವರು ಬುದ್ಧಿಜೀವಿಗಳಾಗಿ ಧರ್ಮವನ್ನೇ ಸುಳ್ಳೆಂದು ನಿರ್ಧರಿಸುತ್ತಾರೆ.

ದೇವರ ಕೃಪೆಯನ್ನು ಅನುಭವಿಸಿದ ನಂತರ ಸಮಾಜದಲ್ಲಿ ಯಾರಾದರೂ ಹೊಗಳಿದರೆ ಅದರ ಬೆಲೆ ಶೂನ್ಯವೆನಿಸುತ್ತದೆ.

– (ಪರಾತ್ಪರ ಗುರು ಡಾ. ಆಠವಲೆ)