ಹಾಥರಸ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದಲ್ಲಿ ಕೋಮು ಗಲಭೆಗಳನ್ನು ಪ್ರಚೋದಿಸುವ ಸಂಚು ! – ತನಿಖಾ ಸಂಸ್ಥೆಗಳಿಂದ ಸರಕಾರಕ್ಕೆ ವರದಿಗಳನ್ನು ಸಲ್ಲಿಕೆ

ರಾಜ್ಯದ ಹಾಥರಸದಲ್ಲಿ ೧೯ ವರ್ಷದ ಯುವತಿಯ ಮೇಲೆ ತಥಾಕಥಿತ ಅತ್ಯಾಚಾರ ಹಾಗೂ ಥಳಿಸಿದ ನಂತರ ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದ ಪ್ರಕರಣದಿಂದ ರಾಜ್ಯದಲ್ಲಿ ಕೋಮು ಗಲಭೆಗಳನ್ನು ಭುಗಿಲೆಬ್ಬಿಸುವ ಸಂಚು ರೂಪಿಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಮಸೀದಿಗಾಗಿ ೨೧ ಸಾವಿರ ರೂಪಾಯಿಗಳ ಮೊದಲ ದೇಣಿಗೆ ನೀಡಿದ ಹಿಂದೂ ವ್ಯಕ್ತಿ

ಮಸೀದಿಯನ್ನು ಕಟ್ಟಲು ಲಖನೌ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ರೋಹಿತ ಶ್ರೀವಾಸ್ತವ ಅವರು ೨೧ ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಜಮೀನಿನಲ್ಲಿ ಮಸೀದಿಯ ಜೊತೆಗೆ ಆಸ್ಪತ್ರೆ, ಸಾರ್ವಜನಿಕ ಪಾಕಶಾಲೆ, ಗ್ರಂಥಾಲಯ, ವಸ್ತು ಸಂಗ್ರಹಾಲಯ ಇತ್ಯಾದಿಗಳನ್ನು ನಿರ್ಮಿಸಲಾಗುವುದು.

ಬಂಗಾಲದ ಭಾಜಪ ನಾಯಕನ ಕೊಲೆ ಪ್ರಕರಣದಲ್ಲಿ ಇಬ್ಬರು ಮತಾಂಧರ ಬಂಧನ

ರಾಜ್ಯದ ೨೪ ಪರಗಣಾದಲ್ಲಿಯ ಟಿಟಗಡ್ ಪೊಲೀಸ್ ಠಾಣೆಯ ಎದುರು ಭಾಜಪದ ನಾಯಕ ಮನೀಶ್ ಶುಕ್ಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಖುರ್ರ್ರಮ್ ಮತ್ತು ಗುಲಾಬ್ ಶೇಖ್ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸೀತಾಮಢಿ (ಬಿಹಾರ)ಯಲ್ಲಿ ಪೊಲೀಸರು ಪೂಜೆಯ ಆಯೋಜನೆ ತಡೆದು ದೇವತೆಗಳ ವಿಗ್ರಹಗಳನ್ನು ನೀರಿನಲ್ಲಿ ಎಸೆದಿದ್ದಾರೆ ಎಂದು ಗ್ರಾಮಸ್ಥರ ಆರೋಪ

ಇಲ್ಲಿನ ಮೇಘಪುರ ಗ್ರಾಮದಲ್ಲಿ ಗ್ರಾಮಸ್ಥರೊಂದಿಗಿನ ಮಾತಿನ ಚಕಮಕಿಯ ನಂತರ ಪೊಲೀಸರು ದೇವಸ್ಥಾನದಲ್ಲಿನ ಶ್ರೀ ದುರ್ಗಾದೇವಿಯ ವಿಗ್ರಹವನ್ನು ನೀರಿನಲ್ಲಿ ಎಸೆದರು. ಅದೇರೀತಿ ಪೊಲೀಸರು ೫೫ ಸಾವಿರ ರೂಪಾಯಿ ಹಾಗೂ ೧ ಲಕ್ಷ ಮೌಲ್ಯದ ಆಭರಣಗಳನ್ನು ತೆಗೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಕ್ಷಾಬಂಧನವು ಹಿಂದೂಗಳ ಹಬ್ಬವಾಗಿದ್ದರಿಂದ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅದನ್ನು ನಿಷೇಧಿಸಿದ ಕೇರಳದ ಮತಾಂಧ ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ. ರಮಲಾ ಬಿವಿ !

ಕೇರಳ ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ. ರಮಲಾ ಬಿವಿಯವರು ರಕ್ಷಾಬಂಧನ ಹಿಂದೂ ಹಬ್ಬವಾಗಿದ್ದರಿಂದ ಆಚರಿಸಬಾರದು’ ಎಂದು ರಾಜ್ಯ ವೈದ್ಯಕೀಯ ಕಾಲೇಜುಗಳಲ್ಲಿ ಆದೇಶ ಹೊರಡಿಸಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡುವಾಗ ‘ನಾನು ಮಾಡುತ್ತೇನೆ’, ಎಂಬ ಅಹಂ ಇಟ್ಟುಕೊಳ್ಳುವ ಆವಶ್ಯಕತೆ ಇಲ್ಲ; ಏಕೆಂದರೆ ಕಾಲ ಮಹಾತ್ಮೆಗನುಸಾರ ಆ ಕಾರ್ಯವು ಖಂಡಿತವಾಗಿಯೂ ಆಗಲಿದೆ; ಆದರೆ ಈ ಕಾರ್ಯದಲ್ಲಿ ತನು-ಮನ-ಧನ ಇವುಗಳನ್ನು ನಿಸ್ವಾರ್ಥವಾಗಿ ತ್ಯಾಗ ಮಾಡಿ ಅದರಲ್ಲಿ ಪಾಲ್ಗೊಳ್ಳುವವರ ಸಾಧನೆಯಾಗಿ ಅವರು ಜನನ ಮತ್ತು ಮರಣದ ಚಕ್ರದಿಂದ ಮುಕ್ತರಾಗುವರು

ಸನಾತನ ಪ್ರಭಾತ ಇನ್ನು ‘ಟೆಲಿಗ್ರಾಮ್ನಲ್ಲಿಯೂ ಲಭ್ಯ !

ಸನಾತನ ಪ್ರಭಾತ ನಿಯತಕಾಲಿಕೆಗಳಲ್ಲಿನ ರಾಷ್ಟ್ರ ಧರ್ಮಜಾಗೃತಿಯ ವಿಷಯಗಳು, ಸಮಾಜದಲ್ಲಿ ಎಲ್ಲೆಡೆ ಅದಷ್ಟು ಹೆಚ್ಚು ಜನರಿಗೆ ಪಿಡಿಎಫ್ ಮೂಲಕ ತಲುಪಿಸಲು ‘ಸೋಶಿಯಲ್ ಮೀಡಿಯಾದ ವಿವಿಧ ಮಾಧ್ಯಮಗಳನ್ನು ಉಪಯೋಗಿಸಲಾಗುತ್ತದೆ. ವಾಟ್ಸ್ ಆಪ್, ಫೇಸ್‌ಬುಕ್ ಹಾಗೂ ಟ್ವೀಟರ್ ನಂತರ ಈಗ ‘ಟೆಲಿಗ್ರಾಮ್ ಈ ಸೋಶಿಯಲ್ ಮೀಡಿಯಾದಲ್ಲಿಯೂ ಸನಾತನ ಪ್ರಭಾತ ನಿಯತಕಾಲಿಕೆಗಳ ‘ಟೆಲಿಗ್ರಾಮ್ ಚಾನೆಲ್ ಗಳನ್ನು ಆರಂಭಿಸಲಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಭಾರತವು ೯೦೦ ವರ್ಷಗಳಿಂದ ಪಾರತಂತ್ರ್ಯದಲ್ಲಿದ್ದರಿಂದ, ಹಿಂದೂಗಳು ಅನೇಕ ತಲೆಮಾರುಗಳು ಕಾಲ ಗುಲಾಮಗಿರಿಯಲ್ಲಿ ಜೀವಿಸಿದರು. ಮನಸ್ಸಿನಲ್ಲಿಯ ಗುಲಾಮಗಿರಿಯ ವಿಷವನ್ನು ನಿರ್ಮೂಲನೆ ಮಾಡಲು ಹಿಂದೂ ರಾಷ್ಟ್ರವನ್ನು (ಈಶ್ವರೀ ರಾಜ್ಯ) ಸ್ಥಾಪಿಸಲು ಹಗಲುರಾತ್ರಿ ಪ್ರಯತ್ನ ಮಾಡುವುದು ಈಗ ಅಗತ್ಯವಾಗಿದೆ.

ಭಾರತೀಯ ಸೈನ್ಯದ ಲಡಾಖನಲ್ಲಿನ ‘ಪ್ರೊ ಎಕ್ಟೀವ್ ಆಪರೇಷನ್ !

ಚೀನಾವು ಮೇ ೫ ರಂದು ಲಡಾಖ್‌ನ ಪೆಂಗಾಂಗ್ ತ್ಸೋ ಕಾಲುವೆ, ಗಲವಾನ್‌ನ ಕ್ಷೇತ್ರ, ಡೆಸ್ಪಾನ್ ಮತ್ತು ಹಾಟ್‌ಸ್ಪ್ರಿಂಗ್ ಈ ೪ ಪ್ರದೇಶಗಳಲ್ಲಿ ಅತಿಕ್ರಮಣ ಮಾಡಿತು. ತದನಂತರ ಚೀನಾ ಮತ್ತು ಭಾರತದ ನಡುವೆ ಸೈನ್ಯದ ಸ್ತರದಲ್ಲಿ ಬಹಳಷ್ಟು ಚರ್ಚೆಗಳಾದವು. ಆದರೆ ಚೀನಾ ಮಾತ್ರ ಮಾತುಗಳನ್ನು ಬದಲಾಯಿಸುವುದನ್ನೇ ಮಾಡಿತು.

ಕಾಶಿ ವಿಶ್ವನಾಥ ದೇವಸ್ಥಾನದ ವಿಷಯದ ಆಲಿಕೆ ಅಕ್ಟೋಬರ್ ೬ ರಂದು ನಡೆಯಲಿದೆ

ಇಲ್ಲಿಯ ಜಿಲ್ಲಾ ನ್ಯಾಯಾಲಯದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನ ಹಾಗೂ ಜ್ಞಾನವಾಪಿ ಮಸೀದಿ ವಿವಾದದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನ್ನಿ ವಕ್ಫ ಬೋರ್ಡ್‌ನಿಂದ ಸಲ್ಲಿಸಿದ ಅರ್ಜಿಯ ಬಗ್ಗೆ ಅಕ್ಟೋಬರ್ ೩ ರಂದು ಆಗಬೇಕಿದ್ದ ಆಲಿಕೆಯು ನ್ಯಾಯಾಧೀಶರು ರಜೆಯಲ್ಲಿದ್ದ ಕಾರಣ ಅಕ್ಟೋಬರ್ ೬ ರಂದು ನಡೆಯಲಿದೆ.