ಕಾಶಿ ವಿಶ್ವನಾಥ ದೇವಸ್ಥಾನದ ವಿಷಯದ ಆಲಿಕೆ ಅಕ್ಟೋಬರ್ ೬ ರಂದು ನಡೆಯಲಿದೆ

ವಾರಣಾಸಿ (ಉತ್ತರ ಪ್ರದೇಶ) – ಇಲ್ಲಿಯ ಜಿಲ್ಲಾ ನ್ಯಾಯಾಲಯದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನ ಹಾಗೂ ಜ್ಞಾನವಾಪಿ ಮಸೀದಿ ವಿವಾದದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನ್ನಿ ವಕ್ಫ ಬೋರ್ಡ್‌ನಿಂದ ಸಲ್ಲಿಸಿದ ಅರ್ಜಿಯ ಬಗ್ಗೆ ಅಕ್ಟೋಬರ್ ೩ ರಂದು ಆಗಬೇಕಿದ್ದ ಆಲಿಕೆಯು ನ್ಯಾಯಾಧೀಶರು ರಜೆಯಲ್ಲಿದ್ದ ಕಾರಣ ಅಕ್ಟೋಬರ್ ೬ ರಂದು ನಡೆಯಲಿದೆ.

೧. ಈ ಬಗ್ಗೆ ಕಾಶಿ ವಿಶ್ವನಾಥ ದೇವಸ್ಥಾನದ ನ್ಯಾಯವಾದಿ ವಿಜಯ ಶಂಕರ ರಸ್ತೋಗಿ ಇವರು, ಸೆಪ್ಟೆಂಬರ್ ೧೮ ರಂದು ಸುನ್ನಿ ವಕ್ಫ ಬೋರ್ಡ್‌ನಿಂದ ಅರ್ಜಿಯನ್ನು ಸಲ್ಲಿಸಲಾಗಿದೆ ತಿಳಿಸಿದ್ದಾರೆ. ಈ ಅರ್ಜಿಯನ್ನು ೩ ತಿಂಗಳ ಒಳಗೆ ಸಲ್ಲಿಸಬೇಕೆಂಬ ಸಮಯಮಿತಿ ಇದ್ದರೂ ಬೋರ್ಡ್ ತಡವಾಗಿ ಅರ್ಜಿಯನ್ನು ಸಲ್ಲಿಸಿದೆ. ಈ ಮೂಲಕ ಪ್ರಕರಣದ ಆಲಿಕೆಯನ್ನು ಲಕ್ಷ್ಮಣಪುರಿಯ ಟ್ರಿಬ್ಯುನಲ್ ನ್ಯಾಯಾಲಯದಲ್ಲಿ (ವಿಶೇಷ ರೀತಿಯ ದೂರುಗಳ ಕಾರ್ಯಕಲಾಪಗಳನ್ನು ನಡೆಸಿಕೊಡುವ ನ್ಯಾಯಾಲಯ) ನಡೆಸಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆ. ಅದನ್ನು ನಾವು ವಿರೋಧಿಸಿದ್ದೇವೆ ಎಂದು ಹೇಳಿದ್ದಾರೆ.

೨. ಮೂಲ ವಿವಾದವು ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಅಂಜುಮಾನ್ ಇಂತಜಾಮಿಯಾ ಇವರಲ್ಲಿ ನಡೆಯುತ್ತಿದೆ. ಸುನ್ನಿ ಮಂಡಳಿಯು ಮೂರನೇ ವ್ಯಕ್ತಿಯಾಗಿ ಭಾಗವಹಿಸಲು ಬೇಡಿಕೆ ಸಲ್ಲಿಸಿತ್ತು, ದೇವಸ್ಥಾನದ ಆವರಣದಲ್ಲಿ ಪುರಾತತ್ವ ಇಲಾಖೆಯಿಂದ ಸಮೀಕ್ಷೆ ನಡೆಸಬೇಕೆಂದು ಬೇಡಿಕೆ ಸಲ್ಲಿಸಲಾಗಿದೆ.