೨೯ ಮತ್ತು ೩೦ ಆಗಸ್ಟ್‌ನ ರಾತ್ರಿ ಪೆಂಗಾಂಗ್ ತ್ಸೋ ಕಾಲುವೆಯ ದಕ್ಷಿಣ ಭಾಗದಲ್ಲಿ ಭಾರತೀಯ ಸರಹದ್ದಿನೊಳಗೆ ನುಗ್ಗಿದ ಚೀನಾ ಸೈನಿಕರನ್ನು ಭಾರತೀಯ ಸೈನ್ಯವು ತಡೆಯಿತು ಮತ್ತು ಕೆಲವರನ್ನು ಬಂಧಿಸಿತು. ಭಾರತೀಯ ಸೈನ್ಯವು ಪ್ರಥಮ ಬಾರಿಗೆ ‘ಪ್ರೊ ಎಕ್ಟೀವ್ ಆಪರೇಷನ್ ಮಾಡಿ, ಆಕ್ರಮಣಕಾರಿ ಕ್ರಮವನ್ನು ಕೈಗೊಂಡಿತು. ಇದು ಹೇಗೆ ಮತ್ತು ಏಕೆ ನಡೆಯಿತು? ಭವಿಷ್ಯದಲ್ಲಿ ಇದರ ಪರಿಣಾಮ ಏನಾಗಬಹುದು? ಈ ವಿಷಯ ಕುರಿತು ಇಂದಿನ ಲೇಖನದಲ್ಲಿ ನೋಡುವವರಿದ್ದೇವೆ.
೧. ೨೯-೩೦ ಆಗಸ್ಟ್‌ನ ಸಂಘರ್ಷದ ಮೊದಲು ಲಡಾಖ್‌ನ ಸ್ಥಿತಿ ಮತ್ತು ಭಾರತಕ್ಕೆ ೧೩೦ ದೇಶಗಳ ಬೆಂಬಲ
ಚೀನಾವು ಮೇ ೫ ರಂದು ಲಡಾಖ್‌ನ ಪೆಂಗಾಂಗ್ ತ್ಸೋ ಕಾಲುವೆ, ಗಲವಾನ್‌ನ ಕ್ಷೇತ್ರ, ಡೆಸ್ಪಾನ್ ಮತ್ತು ಹಾಟ್‌ಸ್ಪ್ರಿಂಗ್ ಈ ೪ ಪ್ರದೇಶಗಳಲ್ಲಿ ಅತಿಕ್ರಮಣ ಮಾಡಿತು. ತದನಂತರ ಚೀನಾ ಮತ್ತು ಭಾರತದ ನಡುವೆ ಸೈನ್ಯದ ಸ್ತರದಲ್ಲಿ ಬಹಳಷ್ಟು ಚರ್ಚೆಗಳಾದವು. ಆದರೆ ಚೀನಾ ಮಾತ್ರ ಮಾತುಗಳನ್ನು ಬದಲಾಯಿಸುವುದನ್ನೇ ಮಾಡಿತು. ೧೫ ಮತ್ತು ೧೬ ಜೂನ್ ರಾತ್ರಿ ಭಾರತ ಮತ್ತು ಚೀನಾದ ನಡುವೆ ಸಂಘರ್ಷವಾಯಿತು. ಅದಕ್ಕೆ ‘ಗಲವಾನಿನ್ ಯುದ್ಧ ಎಂದು ಹೇಳಲಾಗುತ್ತದೆ. ಈ ಯುದ್ಧದಲ್ಲಿ ಕರ್ನಲ್ ಬಾಬೂ ಇವರ ಸಹಿತ ಇತರ ೧೯ ಜನ ಭಾರತೀಯ ಸೈನಿಕರು ಪ್ರಾಣಾರ್ಪಣೆ ಮಾಡಿದರು. ಚೀನಾದ ಸುಮಾರು ೪೪ ಜನ ಸೈನಿಕರು ಮರಣ ಹೊಂದಿದರು ಮತ್ತು ನೂರಾರು ಸೈನಿಕರು ಗಾಯಗೊಂಡರು. ತದನಂತರ ಭಾರತವು ಚೀನಾದ ಮೇಲೆ ವಿವಿಧ ಮಾಧ್ಯಮಗಳ ಮೂಲಕ ಒತ್ತಡವನ್ನು ಹೇರಲು ಪ್ರಯತ್ನಿಸಿತು. ೧೩೦ ದೇಶಗಳು ಭಾರತದ ಬೆಂಬಲವಾಗಿ ನಿಂತವು. ಚೀನಾದ ಮೇಲೆ ಒತ್ತಡ ಹೆಚ್ಚಾದಂತೆ ಚೀನಾದ ಸೈನ್ಯವು ಅಲ್ಲಿಂದ ಹಿಂದಕ್ಕೆ ಸರಿಯಬಹುದು ಎಂದೆನಿಸಿತ್ತು; ಆದರೆ ಅದು ಹಿಂದಕ್ಕೆ ಸರಿಯಲಿಲ್ಲ. ಚೀನಾದ ಚಲನವಲನವನ್ನು ನೋಡಿದರೆ, ಅವರಿಗೆ ಮರಳಿ ಹೋಗುವ ಇಚ್ಛೆಯೇ ಇಲ್ಲದಿರುವುದು ಸ್ಪಷ್ಟವಾಯಿತು. ಆದ್ದರಿಂದ ಭಾರತವೂ ಸೈನ್ಯಬಲವನ್ನು ಹೆಚ್ಚಿಸಿತು. ಆದರೆ ಈ ಹಿಂದೆ ಆಗಿರುವ ಕರಾರಿನಂತೆ ಈ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವಂತಿಲ್ಲ.
೨. ಸೇನಾ ಮುಖ್ಯಸ್ಥ ವಿಪಿನ್ ರಾವತ್‌ರಿಂದ ಚೀನಾಕ್ಕೆ ಬೆದರಿಕೆ
ಇತ್ತೀಚೆಗೆ ಒಂದು ಮಹತ್ವದ ಘಟನೆ ನಡೆಯಿತು. ಭಾರತೀಯ ಸೇನಾ ಮುಖ್ಯಸ್ಥ ಜನರಲ್ ವಿಪಿನ್ ರಾವತ್ ಇವರು ನಾವು ಚೀನಾ ದೊಂದಿಗೆ ಸೈನ್ಯ ಸ್ತರದಲ್ಲಿ ವಿವಿಧ ಪದ್ಧತಿಯಿಂದ ಚರ್ಚೆಯನ್ನು ಮಾಡುತ್ತಿದ್ದೇವೆ; ಆದರೆ ಚೀನಾ ಹಿಂದಕ್ಕೆ ಸರಿಯದಿದ್ದರೆ, ನಮ್ಮಲ್ಲಿ ಸೈನ್ಯ ಬಲವನ್ನು ಉಪಯೋಗಿಸುವ ಪರ್ಯಾಯವೂ ಇದೆ ಮತ್ತು ನಾವು ಅದನ್ನು ಉಪಯೋಗಿಸಬಹುದು ಎಂದು ಹೇಳಿದರು. ರಾವತ್ರವರ ಹೇಳಿಕೆಯ ಬಳಿಕ ಪ್ರಸಾರ ಮಾಧ್ಯಮಗಳಲ್ಲಿನ ಕೆಲವು ತಥಾ ಕಥಿತ ತಜ್ಞರು ನಾವು ಚೀನಾಕ್ಕೆ ಬೆದರಿಕೆಯನ್ನೊಡ್ಡಿ ಬಹಳ ದೊಡ್ಡ ತಪ್ಪನ್ನು ಮಾಡಿದ್ದೇವೆ ಎಂದು ಹೇಳಲು ಪ್ರಯತ್ನಿಸಿದರು. ವರ್ಷ ೨೦೧೪ರ ಮೊದಲು ನಾವು ಚೀನಾಕ್ಕೆ ಅಪೇಕ್ಷಿತವಿರುವಂತೆ ನಡೆದು ಕೊಳ್ಳುತ್ತಿದ್ದೆವು, ಈಗಲೂ ಅದೇ ರೀತಿಯಾಗಬೇಕು ಎಂಬುದು ಈ ತಜ್ಞರ ಅಪೇಕ್ಷೆಯಾಗಿದೆ. ಅನೇಕ ಬಾರಿ ಚರ್ಚೆಗಳಾದರೂ ಚೀನಾ ಹಿಂದಕ್ಕೆ ಸರಿಯಲು ಸಿದ್ಧವಾಗಲಿಲ್ಲ. ತದನಂತರ ಜನರಲ್ ರಾವತರು ಈ ಹೇಳಿಕೆಯನ್ನು ನೀಡಿದರು.
೩. ಶಸ್ತ್ರಾಸ್ತ್ರಗಳಿಲ್ಲದೇ ಭಾರತೀಯ ಸೈನಿಕರು ರಾತ್ರಿಯ ಸಮಯದಲ್ಲಿ ತೋರಿಸಿದ ಅತುಲನೀಯ ಶೌರ್ಯ !
ಪೆಂಗಾಂಗ್ ತ್ಸೊ ಕಾಲುವೆಯು ಸುಮಾರು ೧೩೦ ರಿಂದ ೧೪೦ ಕಿಲೋಮೀಟರಗಳಷ್ಟು ಉದ್ದವಾಗಿದ್ದು ೩-೪ ಕಿಲೋಮೀಟರ ಅಗಲವಿದೆ. ಪೆಂಗಾಂಗ್ ಕಾಲುವೆಯ ಉತ್ತರ ದಡದಲ್ಲಿನ ಫಿಂಗರ್ ೪ ರವರೆಗೆ ಭಾರತದ ಕ್ಷೇತ್ರವಿದೆ. ನಿಜ ಹೇಳಬೇಕೆಂದರೆ ಅದು ‘ನೊ ಮ್ಯಾನ್ ಲ್ಯಾಂಡ್ ಆಗಿದೆ. ಈ ಪ್ರದೇಶದಲ್ಲಿ ಎರಡೂವರೆ ಕಿಲೋಮೀಟರವರೆಗೆ ಚೀನಿಯರು ಒಳಗೆ ಬಂದಿದ್ದಾರೆ. ಭಾರತೀಯ ಸೈನಿಕರು ಅವರನ್ನು ಅಲ್ಲಿಂದ ಹಿಂದಕ್ಕೆ ಸರಿಸಲು ಪ್ರಯತ್ನಿಸುತ್ತಿದ್ದಾರೆ.
ಈ ಸ್ಥಳದಲ್ಲಿ ನಿಯಂತ್ರಣ ರೇಖೆ (ಡಿಫೆನ್ಸಿವ್ ಲೈನ್) ಇಲ್ಲ. ಯಾವ ರೀತಿ ಭಾರತ-ಪಾಕಿಸ್ತಾನದ ಗಡಿಯಲ್ಲಿ ರಕ್ಷಣಾತ್ಮಕ ವ್ಯವಸ್ಥೆಯಿದೆಯೋ, ಅಂತಹ ವ್ಯವಸ್ಥೆ ಈ ಸ್ಥಳದಲ್ಲಿ ಇಲ್ಲ. ಹಿಂದೆ ಒಂದು ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು, ಅದರನ್ವಯ ಅಲ್ಲಿ ಸಂರಕ್ಷಣಾತ್ಮಕ ವ್ಯವಸ್ಥೆಯನ್ನು ಅಳವಡಿಸಿಲ್ಲ. ಪೆಂಗಾಂಗ್ ತ್ಸೊ ಕಾಲುವೆಯ ದಕ್ಷಿಣ ಭಾಗದಲ್ಲಿ ಆಗಸ್ಟ್ ೨೯-೩೦ ರ ರಾತ್ರಿ ಚೀನಿ ಸೈನಿಕರು ನಮ್ಮ ದಿಕ್ಕಿನಲ್ಲಿ ಬರುತ್ತಿರುವುದನ್ನು ಭಾರತೀಯ ಸೈನಿಕರು ನೋಡಿದರು. ಎರಡೂ ಕಡೆಗಳ ಸೈನಿಕರಲ್ಲಿ ಹೊಡೆದಾಟ ಪ್ರಾರಂಭವಾಯಿತು. ಭಾರತೀಯ ಸೈನಿಕರು ಅವರನ್ನು ಚೆನ್ನಾಗಿ ಥಳಿಸಿದರು. ೪೦೦-೫೦೦ ಚೀನಾ ಸೈನಿಕರು ಬಂದಿದ್ದರು. ಬಹುತೇಕ ೩೦-೪೦ ಸೈನಿಕರು ಭಾರತದ ವಶದಲ್ಲಿದ್ದು ಉಳಿದವರು ಮರಳಿ ಹೋಗಿದ್ದಾರೆ. ಈ ಯುದ್ಧದಲ್ಲಿ ದೊಡ್ಡ ಪ್ರಮಾಣದಲ್ಲಿ ‘ಬಾಕ್ಸಿಂಗ್ ಮತ್ತು ಕುಸ್ತಿಯನ್ನು ಉಪಯೋಗಿಸಲಾಯಿತು. ಇದರ ಇತಿಹಾಸವನ್ನು ಬರೆದಾಗ ಸತ್ಯ ವಿಷಯ ಬಹಿರಂಗವಾಗುವುದು. ಇಲ್ಲಿ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಲು ಬರುವುದಿಲ್ಲ ಆದುದರಿಂದ ಇದು ಪಾಷಾಣಯುಗದ ಯುದ್ಧವಾಗಿತ್ತು. ಈ ಯುದ್ಧದಲ್ಲಿ ಧೈರ್ಯ, ಶೌರ್ಯ, ಜಾಗರೂಕತೆ, ವೇಗ ಮತ್ತು ಉತ್ಸಾಹ ಇವುಗಳ ಪರೀಕ್ಷೆ ಆಯಿತು. ಈ ಯುದ್ಧ ಸುಲಭವಾಗಿರಲಿಲ್ಲ.
೪. ಪೆಂಗಾಂಗ್ ತ್ಸೊ ಕಾಲುವೆಯ ಯುದ್ಧದ ಬಳಿಕ ಚೀನಾಕ್ಕೆ ಆಘಾತವಾಯಿತು
ಭಾರತೀಯ ಸೈನ್ಯ ಚೀನಾ ಸೈನಿಕರನ್ನು ಸೆರೆ ಹಿಡಿದಿರುವುದು ಚೀನಾಕ್ಕೆ ಮತ್ತೊಂದು ದೊಡ್ಡ ಆಘಾತವಾಗಿದೆ. ಯಾವ ರೀತಿ ‘ಬಾಕ್ಸಿಂಗ್ನಲ್ಲಿ ಸುತ್ತುಗಳಿರುತ್ತವೆಯೋ, ಅದೇ ರೀತಿ ಮೊದಲ ಸುತ್ತಿನಲ್ಲಿ ಭಾರತವು ಗಲವಾನ್‌ನಲ್ಲಿ ಗೆಲುವು ಸಾಧಿಸಿತು ಮತ್ತು ಎರಡನೇ ಸುತ್ತಿನಲ್ಲಿ ಪೆಂಗಾಂಗ್ ತ್ಸೊ ಸರೋವರದ ದಕ್ಷಿಣದಲ್ಲಿ ಗೆದ್ದಿತು. ತದನಂತರದ ಚೀನಾದ ‘ಟ್ವಿಟರ್ ಮತ್ತು ‘ಗ್ಲೋಬಲ್ ಟೈಮ್ಸ್ ನ ಪ್ರತಿಕ್ರಿಯೆಗಳು ಅತ್ಯಂತ ರೋಚಕವಾಗಿವೆ. ಈ ಪ್ರತಿಕ್ರಿಯೆಗಳಲ್ಲಿ ಎರಡೂ ಬದಿಗಳ ಸೈನ್ಯಗಳು ಪರಸ್ಪರರಿಂದ ದೂರವಿರಬೇಕು. ಅವರು ಹತ್ತಿರ ಬಂದರೆ ಅವರಲ್ಲಿ ಹೊಡೆದಾಟವಾಗುತ್ತದೆ ಮತ್ತು ವಿಷಯ ಗಂಭೀರವಾಗುತ್ತದೆ ಎನ್ನುವ ಒಳಾರ್ಥವಿದೆ. ಒಟ್ಟಾರೆ ಸ್ವಲ್ಪದರಲ್ಲಿ ಅವರು ಹೆದರಿದ್ದಾರೆ. ಮುಂದುವರಿದು ಅವರು ‘ನಾವು ಅಂತರರಾಷ್ಟ್ರೀಯ ನಿಯಮಗಳನ್ನು ಯಾವತ್ತೂ ಉಲ್ಲಂಘಿಸುವುದಿಲ್ಲ. ಭಾರತವೂ ಈ ನಿಯಮವನ್ನು ಮುರಿಯಬಾರದು ಎಂದು ನಮಗನಿಸುತ್ತದೆ ಎಂದೂ ಹೇಳಿದ್ದಾರೆ. ಇದರರ್ಥ ಖಂಡಿತವಾಗಿಯೂ ಅವರಿಗೆ ಆಘಾತವಾಗಿದೆ. ಜೂನ್ ೧೫-೧೬ ರ ಬಳಿಕ ಚೀನಾ ದೊಡ್ಡ ಪ್ರಮಾಣದಲ್ಲಿ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದೆ ಎಂಬ ಮಾಹಿತಿಯನ್ನು ಕಳುಹಿಸಿತ್ತು. ಇದು ಅವರ ಮಾನಸಿಕ ಯುದ್ಧವಾಗಿತ್ತು. ಸದ್ಯ ಚೀನಾದ ಗಡಿರೇಖೆಯ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಭಾರತೀಯ ಸೇನೆಯನ್ನು ನಿಯೋಜಿಸಲಾಗಿದೆ. ಭಾರತೀಯರು ಭಾರತೀಯ ಸೈನ್ಯದ ಹಿಂದೆ ದೃಢವಾಗಿರಬೇಕು ಭಾರತವು ಚೀನಾವನ್ನು ವಿರೋಧಿಸಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಈ ಯುದ್ಧ ಬಹಳ ಕಾಲದವರೆಗೆ ನಡೆಯಲಿದೆ. ಆದುದರಿಂದ ಚೀನಾದ ಸವಾಲನ್ನು ನಾವು ಅನೇಕ ತಿಂಗಳು ಅಥವಾ ಅನೇಕ ವರ್ಷಗಳ ವರೆಗೆ ಸಹಿಸಿಕೊಳ್ಳಬೇಕಾಗಬಹುದು. ಇದಕ್ಕಾಗಿ ೧೩೦ ಕೋಟಿ ಜನತೆ ಹಾಗೂ ಎಲ್ಲ ಪಕ್ಷ, ಸಂಸ್ಥೆ ಮತ್ತು ಸಂಘಟನೆಗಳು ಒಟ್ಟಾಗಿ ಭಾರತೀಯ ಸೈನ್ಯದ ಹಿಂದೆ ದೃಢವಾಗಿ ನಿಲ್ಲಬೇಕು. – (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ.
ಪಾಕ್ ಮತ್ತು ಚೀನಾದ ಗಡಿಯಲ್ಲಿ ಭಾರತೀಯ ಸೈನ್ಯ, ಇತರ ದೇಶಗಳ ಗಡಿಯಲ್ಲಿ ಕೇಂದ್ರ ಮೀಸಲು ಪಡೆ !
ಭಾರತೀಯ ಸೈನ್ಯ ಪಾಕಿಸ್ತಾನ ಮತ್ತು ಚೀನಾ ದೇಶಗಳ ವಿರುದ್ಧ ನಿಯೋಜನೆಗೊಂಡಿದೆ. ಇತರ ದೇಶಗಳ ಗಡಿಯಲ್ಲಿ ಭಾರತದ ಕೇಂದ್ರೀಯ ರಕ್ಷಣಾ ಬಲವನ್ನು ನಿಯೋಜಿಸಲಾಗಿದೆ. ಬಾಂಗ್ಲಾದೇಶದ ಗಡಿಯಲ್ಲಿ ಗಡಿ ಮೀಸಲು ಪಡೆಯ ಕಾವಲಿದೆ. ಅವರಿಗೆ ಕೇವಲ ‘ಕಾವಲು ಕಾಯಲಿಕ್ಕಿರುತ್ತದೆ. ನೇಪಾಳ ಮತ್ತು ಭೂತಾನ ದೇಶಗಳ ಗಡಿಯಲ್ಲಿ ಗಡಿ ರಕ್ಷಣಾದಳವು ಕಾವಲಿಗಿದೆ. ಅಲ್ಲಿಯ ಸಮುದ್ರದ ರಕ್ಷಣೆಗಾಗಿ ‘ಇಂಡಿಯನ್ ಕೋಸ್ಟ್ ಗಾರ್ಡ್ ಇದೆ. ಅದು ಸೈನ್ಯದ ಭಾಗವಾಗಿದ್ದರೂ, ಯುದ್ಧದಲ್ಲಿ ಅವರ ಪಾತ್ರ ಅಲ್ಪವಿರುತ್ತದೆ. ಪಾಕಿಸ್ತಾನ ಮತ್ತು ಚೀನಾದ ‘ಎಲ್.ಓ.ಸಿ. (ನಿಯಂತ್ರಣ ರೇಖೆ) ಮತ್ತು ಎಲ್.ಎ.ಸಿ (ವಾಸ್ತವಿಕ ನಿಯಂತ್ರಣ ರೇಖೆ) ಇವುಗಳಲ್ಲಿ ಭಾರತೀಯ ಸೈನ್ಯ ನಿಯೋಜನೆಗೊಂಡಿದೆ.
ಚೀನಾದ ಸೈನ್ಯಕ್ಕಿಂತ ಎರಡು ಹೆಜ್ಜೆ ಮುಂದಿರುವ ಭಾರತೀಯ ಸೈನ್ಯದ ‘ಪ್ರೊ ಎಕ್ಟೀವ್ ಆಪರೇಷನ್ ಯಶಸ್ವಿಯಾಗಿದೆ !
ಕೆಲವು ಜನರು ಹೇಳುವುದೇನೆಂದರೆ, ವರ್ಷ ೧೯೬೨ ರ ಯುದ್ಧ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಗಿತ್ತು ಮತ್ತು ನವೆಂಬರ್‌ನಲ್ಲಿ ಮುಗಿದಿತ್ತು, ಏಕೆಂದರೆ ತದನಂತರ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಮಪಾತವಾಗುತ್ತದೆ. ಆದುದರಿಂದ ನಮಗೆ ಕ್ರಮಕೈಗೊಳ್ಳಲು ಸಾಧ್ಯವಾಗಲಿಲ್ಲ. ಚೀನಾ ಭಾರತದ ವಿರುದ್ಧ ಅಕ್ಟೋಬರ್‌ನಲ್ಲಿ ಕ್ರಮಕೈಗೊಂಡು ಕೆಲವು ಪ್ರದೇಶವನ್ನು ವಶಕ್ಕೆ ಪಡೆದರೆ ಮತ್ತು ವಾತಾವರಣದ ಕಾರಣದಿಂದ ನಮಗೆ ಅದನ್ನು ಬಿಡಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಅದು ಅವರ ವಶದಲ್ಲಿಯೇ ಉಳಿಯಬಹುದು. ಆದುದರಿಂದ ನಾವು ಮೊದಲೇ ಕ್ರಮವನ್ನು (ಪ್ರೋ ಆಕ್ಟೀವ್ ಆಪರೇಶನ್) ತೆಗೆದುಕೊಂಡಿದ್ದೇವೆ. ಈ ಆಂದೋಲನದಲ್ಲಿ ಎಸ್.ಎಫ್.ಎಫ್. (ಸ್ಪೆಶಲ್ ಫ್ರಂಟಿಯರ್ ಫೋರ್ಸ, ಅಂದರೆ ಕಮಾಂಡೊ ಫೋರ್ಸ) ವನ್ನು ಉಪಯೋಗಿಸಲಾಯಿತು. ಇದರಲ್ಲಿನ ಎಲ್ಲ ಸೈನಿಕರು ಟಿಬೇಟಿಯನ್ ಆಗಿದ್ದಾರೆ.
ಚೀನಾ ಟಿಬೇಟಿನ ಮೇಲೆ ಆಕ್ರಮಣ ಮಾಡಿದಾಗ ಅಲ್ಲಿಂದ ೧೯೫೯ ನೇ ಇಸವಿಯ ಒಳಗೆ ೩-೪ ಲಕ್ಷ ಟಿಬೇಟಿಯನ್ ನಾಗರಿಕರು ಭಾರತಕ್ಕೆ ಓಡಿ ಬಂದಿದ್ದರು. ಅವರು ಕಡಿಮೆ ಪ್ರಾಣವಾಯುವಿರುವಲ್ಲಿನಲ್ಲಿ ಇರಬಲ್ಲರು. ಅವರು ಭಯೋತ್ಪಾದನೆಯ ವಿರುದ್ಧ ಒಳ್ಳೆಯ ಕೆಲಸವನ್ನು ಮಾಡಿರುವ ಅನುಭವವನ್ನು ಹೊಂದಿದ್ದಾರೆ. ಚೀನಾದ ಸೈನಿಕರಿಗೆ ಈ ವಾತಾವರಣದಲ್ಲಿ ಇರುವ ರೂಢಿಯಿಲ್ಲ. ಆದುದರಿಂದ ಅವರ ಎಲ್ಲ ಸೈನಿಕರೂ ಬೆನ್ನಿಗೆ ಆಕ್ಸಿಜನ್ ಸಿಲೆಂಡರ್ ಕಟ್ಟಿಕೊಂಡು ಬರುತ್ತಾರೆ. ‘ಈ ಭಾಗದಲ್ಲಿ ಯುದ್ಧ ಮಾಡಲು ಟಿಬೇಟಿನ ಜನರು ಚೀನಾದ ಸೈನ್ಯದಲ್ಲಿ ಶಾಮೀಲಾಗಬೇಕು ಎಂದು ಚೀನಾಗೆ ಅನಿಸುತ್ತದೆ; ಆದರೆ ಅವರು ಭರ್ತಿಯಾಗಲು ಸಿದ್ಧರಿಲ್ಲ. ಅದು ಒಬ್ಬ ಟಿಬೇಟಿಯನ್‌ನಿಗೆ ಮೇಜರ ಜನರಲ್ ಹುದ್ದೆಯನ್ನು ಕೊಟ್ಟಿರುವುದು ತಿಳಿದಿದೆ. ಈ ಅಧಿಕಾರಿಯ ಮಾಧ್ಯಮದಿಂದ ಕೆಲವು ಟಿಬೇಟಿಯನ್ ಯುವಕರನ್ನು ಸೈನ್ಯದಲ್ಲಿ ಸೇರಿಸಿಕೊಳ್ಳಲು ಚೀನಾದ ಪ್ರಯತ್ನ ನಡೆದಿದೆ.