ರಕ್ಷಾಬಂಧನವು ಹಿಂದೂಗಳ ಹಬ್ಬವಾಗಿದ್ದರಿಂದ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅದನ್ನು ನಿಷೇಧಿಸಿದ ಕೇರಳದ ಮತಾಂಧ ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ. ರಮಲಾ ಬಿವಿ !

  • ರಕ್ಷಾಬಂಧನ ಹಿಂದೂಗಳ ಹಬ್ಬವಾಗಿರದಿದ್ದರೆ ರಾಮಲಾ ಬಿವಿಯವರು ಇದರ ಮೇಲೆ ನಿಷೇಧ ಹೇರುತ್ತಿದ್ದರೇ ?

  • ದೇಶದಲ್ಲಿ ಎಲ್ಲರೂ ರಕ್ಷಾಬಂಧನವನ್ನು ಆಚರಿಸುತ್ತಿರುವಾಗ ಹಾಗೂ ಬೇರೆಲ್ಲಿಯೂ ಇದರ ಮೇಲೆ ಯಾವುದೇ ನಿಷೇಧವಿಲ್ಲದಿರುವಾಗ, ಅದೇರೀತಿ ಕೇರಳದಲ್ಲಿ ಬೇರೆಲ್ಲಿಯೂ ಅಂತಹ ನಿಷೇಧವಿಲ್ಲದಿದ್ದರೂ, ರಾಮಲಾ ಬಿವಿ ಮಾತ್ರ ಇಂತಹ ನಿಷೇಧವನ್ನು ವಿಧಿಸುತ್ತಿದ್ದಾರೆ, ಇದರಿಂದ ಅವರ ಹಿಂದೂದ್ವೇಷಿ ಮಾನಸಿಕತೆ ಸ್ಪಷ್ಟವಾಗುತ್ತದೆ ! ಈ ಬಗ್ಗೆ ಕಪಟ ಜಾತ್ಯತೀತವಾದಿಗಳು ಮಾತನಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಕೊಚ್ಚಿ (ಕೇರಳ) – ಕೇರಳ ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ. ರಮಲಾ ಬಿವಿಯವರು ರಕ್ಷಾಬಂಧನ ಹಿಂದೂ ಹಬ್ಬವಾಗಿದ್ದರಿಂದ ಆಚರಿಸಬಾರದು’ ಎಂದು ರಾಜ್ಯ ವೈದ್ಯಕೀಯ ಕಾಲೇಜುಗಳಲ್ಲಿ ಆದೇಶ ಹೊರಡಿಸಿದ್ದಾರೆ. ಈ ಆದೇಶದಲ್ಲಿ, ‘ಅಧಿಕಾರಿಗಳ ಅನುಮತಿಯನ್ನು ಪಡೆಯದೇ ಕಳೆದ ಕೆಲವು ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ರಕ್ಷಾಬಂಧನ ಕಾರ್ಯಕ್ರಮ ಆಯೋಜಿಸುತ್ತಿದೆ. ವೈದ್ಯಕೀಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಮತ್ತು ಇಂತಹ ಘಟನೆಗಳು ಪುನಃ ಸಂಭವಿಸದಂತೆ ತಡೆಯಲು ಮೇಲಿನ ಆದೇಶ ಹೊರಡಿಸುತ್ತಿದೆ’ ಎಂದು ಹೇಳಿದ್ದಾರೆ.

೧. ಅಕ್ಟೋಬರ್ ೧ ರಂದು ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಎಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸಲು ಇಲಾಖೆಯ ಪೂರ್ವಾನುಮತಿಯು ಅಗತ್ಯವಿದೆ, ಎಂದು ಹೇಳುತ್ತಾ ರಾಜ್ಯದ ಎಲ್ಲ ವೈದ್ಯಕೀಯ, ನರ್ಸಿಂಗ್ ಮತ್ತು ದಂತ ವೈದ್ಯಕೀಯ ವಿದ್ಯಾಲಯಗಳಿಗೆ ಈ ಆದೇಶ ಅನ್ವಯಿಸುತ್ತದೆ.

೨. ಈ ಆದೇಶದ ಬಗ್ಗೆ ಕೇಳಿದಾಗ, ಡಾ. ರಮಲಾ ಬಿವಿಯವರು, ‘ರಕ್ಷಾಬಂಧನವು ಹಿಂದೂಗಳ ಹಬ್ಬವಾಗಿದೆ; ಆದ್ದರಿಂದ ಇದನ್ನು ವೈದ್ಯಕೀಯ ಕಾಲೇಜುಗಳಲ್ಲಿ ಆಚರಿಸಲು ಅನುಮತಿ ನೀಡಲಾಗುವುದಿಲ್ಲ.’ ಭಾರತದ ರಾಷ್ಟ್ರಪತಿ ಮತ್ತು ಪ್ರಧಾನಿ ಸೇರಿದಂತೆ ಸಮಾಜದ ಎಲ್ಲ ವರ್ಗದವರು ರಕ್ಷಾಬಂಧನವನ್ನು ಆಚರಿಸುತ್ತಾರೆ ಎಂದು ಸೂಚಿಸಿದಾಗ, ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.