ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

‘ರಾಮ ರಾಜ್ಯವು ಕೇವಲ ಹಿಂದೂ ರಾಷ್ಟ್ರದಲ್ಲಿ ಮಾತ್ರ ಇರುವುದು !’

‘ವೈಯಕ್ತಿಕ ಪ್ರೀತಿಗಿಂತ ದೇಶಪ್ರೇಮ ಮತ್ತು ಧರ್ಮಪ್ರೇಮವನ್ನು ಮಾಡಿ ನೋಡಿರಿ. ಅದರಲ್ಲಿ ಹೆಚ್ಚು ಆನಂದವಿದೆ !

‘ಭಾರತವು ೯೦೦ ವರ್ಷಗಳಿಂದ ಪಾರತಂತ್ರ್ಯದಲ್ಲಿದ್ದರಿಂದ, ಹಿಂದೂಗಳು ಅನೇಕ ತಲೆಮಾರುಗಳು ಕಾಲ ಗುಲಾಮಗಿರಿಯಲ್ಲಿ ಜೀವಿಸಿದರು. ಮನಸ್ಸಿನಲ್ಲಿಯ ಗುಲಾಮಗಿರಿಯ ವಿಷವನ್ನು ನಿರ್ಮೂಲನೆ ಮಾಡಲು ಹಿಂದೂ ರಾಷ್ಟ್ರವನ್ನು (ಈಶ್ವರೀ ರಾಜ್ಯ) ಸ್ಥಾಪಿಸಲು ಹಗಲುರಾತ್ರಿ ಪ್ರಯತ್ನ ಮಾಡುವುದು ಈಗ ಅಗತ್ಯವಾಗಿದೆ. ಹಾಗೆ ಮಾಡಿದರೆ ಮಾತ್ರ ೪-೫ ತಲೆಮಾರುಗಳಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಹಿಂದೂಗಳಲ್ಲಿ ಅಭಿಮಾನ ಜಾಗೃತವಾಗುವುದು.

ವಿಜ್ಞಾನದ ಅಹಂಕಾರ ಇರುವವರೇ, ಅಧ್ಯಾತ್ಮದ ತುಲನೆಯಲ್ಲಿ ವಿಜ್ಞಾನವು ಎಷ್ಟು ತುಚ್ಛವಾಗಿದೆ ಎಂಬುದನ್ನು ಗಮನದಲ್ಲಿಡಿ !

‘ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಇತಿಹಾಸ, ಭೂಗೋಲ ಮುಂತಾದ ಎಲ್ಲ ವಿಷಯಗಳು ಆಯಾ ವಿಷಯದ ಮಾಹಿತಿಯನ್ನು ಮಾತ್ರ ಹೇಳಬಲ್ಲವು. ಆದರೆ, ಅಧ್ಯಾತ್ಮವು ನಿಮಗೆ ಜಗತ್ತಿನ ಬಗ್ಗೆ ಎಲ್ಲ ವಿಷಯಗಳ ಮಾಹಿತಿಯನ್ನು ಹೇಳಬಲ್ಲದು. – (ಪರಾತ್ಪರ ಗುರು) ಡಾ. ಆಠವಲೆ.